Song: Yethake, Movie: Bell Bottom

ಹಾಡು: ಏತಕೆ
ರಚನೆ: ಯೋಗರಾಜ ಭಟ್‌
ಸಂಗೀತ: ಅಜನೀಶ ಲೋಕನಾಥ್‌
ಗಾಯನ: ವಿಜಯ್‌ ಪ್ರಕಾಶ್‌
ಚಲನಚಿತ್ರ: ಬೆಲ್‌ ಬಾಟಮ್‌

ಏತಕೆ, ಬೊಗಸೆ ತುಂಬ ಆಸೆ ನೀಡುವೆ
ಏತಕೆ, ಕನಸಿನಲ್ಲಿ ಮೀಸೆ ತೀಡುವೆ

ಕೇಳು ನನದು, ತುಸು ನೊಂದು ಬೆಂದ ಹರೆಯಾ
ಅದಕೆ ಇಷ್ಟೆಲ್ಲ ಹಾರಾಡುವೆ
ತುಸುವೆ ಕೈಚಾಚು ಸರಿಹೋಗುವೆ

ಏತಕೆ, ಬೊಗಸೆ ತುಂಬ ಆಸೆ ನೀಡುವೆ

ಈ ನಲ್ಮೆಯ, ಬಾಯಿ ಬಿಡಲು
ನನಗೊಂದು ಪದ ಬೇಕಿದೆ
ಏನೆನ್ನಲಿ, ಒಳಗಿಂದೊಳಗೆ
ಅನುರಾಗ ಮಿತಿ ಮೀರಿದೆ

ಕಣ್ಣು ಕಣ್ಣು ಕಲೆತಾಗ ಯಾಮಾರಿಸಿ
ಕಳ್ಳ ಕನಸು ಬಚ್ಚಿಡುವೆ

ನಿನ್ನ ಸೆರಗ ತುದಿಯನ್ನು ಮಾತಾಡಿಸಿ
ನನ್ನ ಮನಸು ಬಿಚ್ಚಿಡುವೆ

ಏತಕೆ, ಬೊಗಸೆ ತುಂಬ ಆಸೆ ನೀಡುವೆ
ಏತಕೆ, ಕನಸಿನಲ್ಲಿ ಮೀಸೆ ತೀಡುವೆ

ನಿನ್ನೊಪ್ಪಿಗೆ, ಇದೆಯಾ ಹೇಳು
ಕಡುಪೋಲಿ ನಾನಾಗಲು
ನಿನ್ನಾಣೆಗೂ, ಕಾಯುತ್ತಿರುವೆ
ನಾ ಬೇಗ ಹಾಳಾಗಲೂ

ಕೆನ್ನೆ ಮೇಲೆ ಗುರುತೊಂದು ಬೇಕಾಗಿದೆ
ನೀಡು ನಿನ್ನ ಸಹಕಾರ

ಖಾಲಿ ತೋಳು ನನಗಂತು ಸಾಕಾಗಿದೆ
ಏನು ಹೇಳು ಪರಿಹಾರ

ಏತಕೆ, ಬೊಗಸೆ ತುಂಬ ಆಸೆ ನೀಡುವೆ
ಏತಕೆ, ಕನಸಿನಲ್ಲಿ ಮೀಸೆ ತೀಡುವೆ

ಕೇಳು ನನದು, ತುಸು ನೊಂದು ಬೆಂದ ಹರೆಯಾ
ಅದಕೆ ಇಷ್ಟೆಲ್ಲ ಹಾರಾಡುವೆ
ತುಸುವೆ ಕೈಚಾಚು ಸರಿಹೋಗುವೆ













ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

Song: Sada ninna kannali (ಸದಾ ನಿನ್ನ ಕಣ್ಣಲಿ), Movie: Bachchan (ಬಚ್ಚನ್-2013)

Song: Ninninda dooragi iralarenu (ನಿನ್ನಿಂದ ದೂರಾಗಿ ಇರಲಾರೆನು), Movie: Siddartha (ಸಿದ್ದಾರ್ಥ)

Song: Preethi neenillade naanu hegirali (ಪ್ರೀತಿ ನೀನಿಲ್ಲದೆ ನಾನು ಹೇಗಿರಲಿ), Movie: Bhaava baamaida (ಭಾವ ಬಾಮೈದ)

Song: Elliruve (ಎಲ್ಲಿರುವೆ), Movie: Bayaludaari (ಬಯಲುದಾರಿ)

Song: Maathu muride(ಮಾತು ಮುರಿದೆ‌), Movie: Ganda hendathi (ಗಂಡ-ಹೆಂಡತಿ)

Song: Onde ondu Aaseyu (ಒಂದೇ ಒಂದು ಆಸೆಯು), Seetharamu (ಸೀತಾರಾಮು)

Song: Kangalu vandane helide (ಕಂಗಳು ವಂದನೆ ಹೇಳಿದೆ), Movie: Mugiyada kathe (‌ಮುಗುಯದ ಕಥೆ)

Song: Jaaji mallige node (ಜಾಜಿ ಮಲ್ಲಿಗೆ ನೋಡೆ), Movie: Sevanthi sevanthi (ಸೇವಂತಿ ಸೇವಂತಿ)

Song: Prema chandrama (ಪ್ರೇಮ ಚಂದ್ರಮ), Movie: Yajamana (ಯಜಮಾನ)