Song: Hesaru poorthi helade, Movie: Paramathma

ಹಾಡು: ಹೆಸರು ಪೂರ್ತಿ
ರಚನೆ: ಯೋಗರಾಜ್‌ ಭಟ್
ಸಂಗೀತ: ವಿ. ಹರಿಕೃಷ್ಣ
ಗಾಯನ: ವಾಣಿ ಹರಿಕೃಷ್ಣ
ಚಲನಚಿತ್ರ: ಪರಮಾತ್ಮ

ಹೆಸರು ಪೂರ್ತಿ ಹೇಳದೇ, ತುಟಿಯ ಕಚ್ಚಿಕೊಳ್ಳಲೇ
ಹರೆಯ ಏನೋ ಹೇಳಿದೆ, ಹಣೆಯ ಚಚ್ಚಿಕೊಳ್ಳಲೇ
ಮನಸು ತುಂಬಾ ಮಾಗಿದೆ, ಕೊಟ್ಟುಬಿಡಲೇ


ನಗುತಿದೆ ನದಿಯಿದು ಯಾಕೆ, ನೋಡುತ ನನ್ನನ್ನು
ಹೃದಯವು ಹೆದರಲೆಬೇಕೆ, ಬಯಸಲು ನಿನ್ನನ್ನು


ಹೆಸರು ಪೂರ್ತಿ ಹೇಳದೇ, ತುಟಿಯ ಕಚ್ಚಿಕೊಳ್ಳಲೇ
ಹರೆಯ ಏನೋ ಹೇಳಿದೆ, ಹಣೆಯ ಚಚ್ಚಿಕೊಳ್ಳಲೇ
ಮನಸು ತುಂಬಾ ಮಾಗಿದೆ, ಕೊಟ್ಟುಬಿಡಲೇ


ಎಳೆಬಿಸಿಲ ಸಂಕೋಚವು, ನೀ ನಗಲು ಮೈತಾಕಿದೆ
ನನ್ನ ಬೆನ್ನು ನಾಚುತಿಹುದು, ನೋಡುತಿರಲು ನೀ, ನನ್ನ ಕಡೆಗೆ


ಬಯಕೆ ಬಂದು ನಿಂತಿದೆ, ಉಗುರು ಕಚ್ಚಿಕೊಳ್ಳಲೇ
ಬೇರೆ ಏನೂ ಕೇಳದೇ, ತುಂಬ ಹಚ್ಚಿಕೊಳ್ಳಲೇ
ಹೇಳದಂತ ಮಾತಿದೆ, ಮುಚ್ಚಿ ಇಡಲೇ


ನಿನ ತುಂಟ ಕಣ್ಣಲ್ಲಿದೆ, ಮಡಚಿಟ್ಟ ಆಕಾಶವು 
ಬಿಡಿಹೂವಿನ ಮೌನವು ನನ್ನೆದೆಯಲೀ ನಾ, ಏನೆನ್ನಲಿ

ತುಂಬ ಮುದ್ದು ಬಂದಿದೆ, ಒಮ್ಮೆ ದೃಷ್ಟಿ ತೆಗೆಯಲೇ
ನನಗೆ ಬುದ್ಧಿ ಎಲ್ಲಿದೆ, ಒಮ್ಮೆ ಕಚ್ಚಿ ನೋಡಲೇ
ನಿನ್ನ ತೋಳು ನನ್ನದೇ, ಇದ್ದುಬಿಡಲೇ


ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

Song: Sada ninna kannali (ಸದಾ ನಿನ್ನ ಕಣ್ಣಲಿ), Movie: Bachchan (ಬಚ್ಚನ್-2013)

Song: Ninninda dooragi iralarenu (ನಿನ್ನಿಂದ ದೂರಾಗಿ ಇರಲಾರೆನು), Movie: Siddartha (ಸಿದ್ದಾರ್ಥ)

Song: Preethi neenillade naanu hegirali (ಪ್ರೀತಿ ನೀನಿಲ್ಲದೆ ನಾನು ಹೇಗಿರಲಿ), Movie: Bhaava baamaida (ಭಾವ ಬಾಮೈದ)

Song: Elliruve (ಎಲ್ಲಿರುವೆ), Movie: Bayaludaari (ಬಯಲುದಾರಿ)

Song: Maathu muride(ಮಾತು ಮುರಿದೆ‌), Movie: Ganda hendathi (ಗಂಡ-ಹೆಂಡತಿ)

Song: Onde ondu Aaseyu (ಒಂದೇ ಒಂದು ಆಸೆಯು), Seetharamu (ಸೀತಾರಾಮು)

Song: Kangalu vandane helide (ಕಂಗಳು ವಂದನೆ ಹೇಳಿದೆ), Movie: Mugiyada kathe (‌ಮುಗುಯದ ಕಥೆ)

Song: Jaaji mallige node (ಜಾಜಿ ಮಲ್ಲಿಗೆ ನೋಡೆ), Movie: Sevanthi sevanthi (ಸೇವಂತಿ ಸೇವಂತಿ)

Song: Prema chandrama (ಪ್ರೇಮ ಚಂದ್ರಮ), Movie: Yajamana (ಯಜಮಾನ)