Song: Kavithe kavithe, Movie: Gaalipata

ಹಾಡು: ಕವಿತೆ, ಕವಿತೆ
ರಚನೆ: ಹೃದಯಶಿವ
ಸಂಗೀತ: ವಿ. ಹರಿಕೃಷ್ಣ
ಗಾಯನ: ವಿಜಯಪ್ರಕಾಶ್‌
ಚಲನಚಿತ್ರ: ಗಾಳಿಪಟ

ಕವಿತೆ, ಕವಿತೆ,
ನೀನೇಕೆ ಪದಗಳಲಿ ಕುಳಿತೆ
ಕವಿತೆ, ಕವಿತೆ,
ನೀನೇಕೆ ರಾಗದಲಿ ಬೆರೆತೆ

ನನ್ನೆದೆಯ ಗೂಡಲ್ಲಿ ಕವಿತೆಗಳ ಸಂತೆ
ಓ ಒಲವೇ, ನೀ ತಂದ ಹಾಡಿಗೆ ನಾ ಸೋತೆ

ಕವಿತೆ, ಕವಿತೆ,
ನೀನೇಕೆ ಪದಗಳಲೇ ಕುಳಿತೆ
ಕವಿತೆ, ಕವಿತೆ,
ನೀನೇಕೆ ರಾಗದಲಿ ಬೆರೆತೆ

ಅವಳು ಬರಲು
ಮನದಲ್ಲಿ ಪದಗಳದೇ ಚಿಲುಮೆ
ಮನದ ಕಡಲ 
ದಡ ದಾಟೊ ಅಲೆಗಳಲೂ ನಲುಮೆ

ಹೊಮ್ಮುತಿದೆ,
ರಾಗದಲಿ ಸ್ವರ ಮೀರೋ ತಿಮಿರು
ಚಿಮ್ಮುತಿದೆ,
ಸುಳ್ಳಾಡುವ ಕವಿಯಾದ ಪೊಗರು

ಅವಳು ಬರಲು
ಮನದಲ್ಲಿ ಪದಗಳದೇ ಚಿಲುಮೆ
ಮನದ ಕಡಲ 
ದಡ ದಾಟೊ ಅಲೆಗಳಲೂ ನಲುಮೆ

ಮುಗಿಲ ಹೆಗಲ,
ಮೇಲೇರಿ ತೇಲುತಿದೆ ಹೃದಯ
ಮಡಿಲ ಹುಡುಕಿ,
ಎದೆಬಾಗಿಲಿಗೆ ಬಂತೋ ಪ್ರಣಯ

ಉನ್ಮಾದ,
ತಾನಾಗಿ ಹಾಡಾಹೋ ಸಮಯ
ಏಕಾಂತ,
ಕಲ್ಲನ್ನು ಮಾಡುವುದೋ ಕವಿಯ

ಮುಗಿಲ ಹೆಗಲ,
ಮೇಲೇರಿ ತೇಲುತಿದೆ ಹೃದಯ
ಮಡಿಲ ಹುಡುಕಿ,
ಎದೆಬಾಗಿಲಿಗೆ ಬಂತೋ ಪ್ರಣಯ

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

Song: Sada ninna kannali (ಸದಾ ನಿನ್ನ ಕಣ್ಣಲಿ), Movie: Bachchan (ಬಚ್ಚನ್-2013)

Song: Elliruve (ಎಲ್ಲಿರುವೆ), Movie: Bayaludaari (ಬಯಲುದಾರಿ)

Song: Preethi neenillade naanu hegirali (ಪ್ರೀತಿ ನೀನಿಲ್ಲದೆ ನಾನು ಹೇಗಿರಲಿ), Movie: Bhaava baamaida (ಭಾವ ಬಾಮೈದ)

Song: Ninninda dooragi iralarenu (ನಿನ್ನಿಂದ ದೂರಾಗಿ ಇರಲಾರೆನು), Movie: Siddartha (ಸಿದ್ದಾರ್ಥ)

Song: Onde ondu Aaseyu (ಒಂದೇ ಒಂದು ಆಸೆಯು), Seetharamu (ಸೀತಾರಾಮು)

Song: Kangalu vandane helide (ಕಂಗಳು ವಂದನೆ ಹೇಳಿದೆ), Movie: Mugiyada kathe (‌ಮುಗುಯದ ಕಥೆ)

Song: Neenu neene illi naanu naane (ನೀನು ನೀನೇ ಇಲ್ಲಿ ನಾನು ನಾನೇ), Movie: Gadibidi ganda (ಗಡಿಬಿಡಿ ಗಂಡ)

Song: Jaaji mallige node (ಜಾಜಿ ಮಲ್ಲಿಗೆ ನೋಡೆ), Movie: Sevanthi sevanthi (ಸೇವಂತಿ ಸೇವಂತಿ)

Song: Kannige kaanuva(ಕಣ್ಣಿಗೆ ಕಾಣುವ ), Movie: Yarivanu(ಯಾರಿವನು)