Song: Nagutha nagutha, Movie: Parashuram

ಹಾಡು: ನಗುತ ನಗುತ
ರಚನೆ: ಚಿ. ಉದಯಶಂಕರ್‌
ಸಂಗೀತ: ಹಂಸಲೇಖ
ಗಾಯನ: ಡಾ. ರಾಜಕುಮಾರ್‌
ಚಲನಚಿತ್ರ: ಪರಶುರಾಮ

ನಗುತ ನಗುತ, ಬಾಳು ನೀನು ನೂರು ವರುಷ
ಎಂದೂ ಹೀಗೇ, ಇರಲಿ ಇರಲಿ ಹರುಷ ಹರುಷ

ಬಾಳಿನ ದೀಪ ನಿನ್ನ ನಗು
ದೇವರ ರೂಪ ನೀನೇ ಮಗು

ನಗುತ ನಗುತ, ಬಾಳು ನೀನು ನೂರು ವರುಷ
ಎಂದೂ ಹೀಗೇ, ಇರಲಿ ಇರಲಿ ಹರುಷ ಹರುಷ

ಉಲ್ಲಾಸದ ಶುಭದಿನಕೆ
ಸಂತೋಷವೇ ಉಡುಗೊರೆಯು

ಹೂವು ನಕ್ಕಾಗ ತಾನೇ,
ಅಂದ ಇರುವುದು,ದುಂಬಿ ಬರುವುದು

ಚಂದ್ರ ನಕ್ಕಾಗ ತಾನೇ
ಬೆಳಕು ಬರುವುದು, ಕಡಲು ಕುಣಿವುದು

ಸೂರ್ಯನಾಡೋ ಜಾರೊ ಆಟ ಬಾನು ನಗಲೆಂದೇ
ಬೀಸೊ ಗಾಳಿ, ತೂಗೊ ಪೈರು ಭೂಮಿ ನಗಲೆಂದೇ
ದೇವೆರು ತಂದ ಸೃಷ್ಠಿಯ ಅಂದ ಎಲ್ಲರು ನಗಲೆಂದೇ

ನಗುತ ನಗುತ, ಬಾಳು ನೀನು ನೂರು ವರುಷ
ಎಂದೂ ಹೀಗೇ, ಇರಲಿ ಇರಲಿ ಹರುಷ ಹರುಷ

ಆಕಾಶದಾಚೆ ಎಲ್ಲೋ ದೇವರಿಲ್ಲವೋ, ಹುಡುಕಬೇಡವೋ
ಆ ಮಾಯಗಾರ ತಾನು, ಹಿರಿಯಲಿಲ್ಲವೋ, ಗುಡಿಯಲಿಲ್ಲವೋ

ಪ್ರೀತಿಯಲ್ಲಿ ಸ್ನೇಹದಲ್ಲಿ ಇರುವನು ಒಂದಾಗಿ
ತಂಪಿನಲ್ಲು ಕಂಪಿನಲ್ಲು ಬರುವನು ಹಿತವಾಗಿ
ಸಂತಸದಲ್ಲಿ ಸಂಭ್ರಮದಲ್ಲಿ ಮಕ್ಕಳ ನಗುವಾಗಿ

ನಗುತ ನಗುತ, ಬಾಳು ನೀನು ನೂರು ವರುಷ
ಎಂದೂ ಹೀಗೇ, ಇರಲಿ ಇರಲಿ ಹರುಷ ಹರುಷ

ಬಾಳಿನ ದೀಪ ನಿನ್ನ ನಗು
ದೇವರ ರೂಪ ನೀನೇ ಮಗು
ನಗುತ ನಗುತ, ಬಾಳು ನೀನು ನೂರು ವರುಷ
ಎಂದೂ ಹೀಗೇ, ಇರಲಿ ಇರಲಿ ಹರುಷ ಹರುಷ

ಉಲ್ಲಾಸದ ಶುಭದಿನಕೆ
ಸಂತೋಷವೇ ಉಡುಗೊರೆಯು(೨)












ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

Song: Sada ninna kannali (ಸದಾ ನಿನ್ನ ಕಣ್ಣಲಿ), Movie: Bachchan (ಬಚ್ಚನ್-2013)

Song: Ninninda dooragi iralarenu (ನಿನ್ನಿಂದ ದೂರಾಗಿ ಇರಲಾರೆನು), Movie: Siddartha (ಸಿದ್ದಾರ್ಥ)

Song: Preethi neenillade naanu hegirali (ಪ್ರೀತಿ ನೀನಿಲ್ಲದೆ ನಾನು ಹೇಗಿರಲಿ), Movie: Bhaava baamaida (ಭಾವ ಬಾಮೈದ)

Song: Elliruve (ಎಲ್ಲಿರುವೆ), Movie: Bayaludaari (ಬಯಲುದಾರಿ)

Song: Maathu muride(ಮಾತು ಮುರಿದೆ‌), Movie: Ganda hendathi (ಗಂಡ-ಹೆಂಡತಿ)

Song: Onde ondu Aaseyu (ಒಂದೇ ಒಂದು ಆಸೆಯು), Seetharamu (ಸೀತಾರಾಮು)

Song: Kangalu vandane helide (ಕಂಗಳು ವಂದನೆ ಹೇಳಿದೆ), Movie: Mugiyada kathe (‌ಮುಗುಯದ ಕಥೆ)

Song: Jaaji mallige node (ಜಾಜಿ ಮಲ್ಲಿಗೆ ನೋಡೆ), Movie: Sevanthi sevanthi (ಸೇವಂತಿ ಸೇವಂತಿ)

Song: Prema chandrama (ಪ್ರೇಮ ಚಂದ್ರಮ), Movie: Yajamana (ಯಜಮಾನ)