Song: O gulabiye, Movie: Om

ಹಾಡು: ಓ ಗುಲಾಬಿಯೇ
ರಚನೆ: ಹಂಸಲೇಖ
ಸಂಗೀತ: ಹಂಸಲೇಖ
ಗಾಯನ: ಡಾ. ರಾಜಕುಮಾರ್‌
ಚಲನಚಿತ್ರ: ಓಂ

ಓ ಗುಲಾಬಿಯೇ
ಓ ಗುಲಾಬಿಯೇ
ನಿನ್ನಂದ ಚೆಲುವಿಂದ ಸೆಳೆಯೋದೇ ಪ್ರೇಮವೇ, ಓ
ಮುಳ್ಳಿಂದ, ಬಾಳಂದ ಕೆಡಿಸೋದು ನ್ಯಾಯವೇ, ಓ

ಓ ಗುಲಾಬಿಯೇ
ಓ ಗುಲಾಬಿಯೇ

ದ್ವೇ಼ವ ಸಾಧಿಸಿ, ಪ್ರೇಮದ ಅಸ್ತ್ರದಿ
ಸೇಡಿನ ಹಾಡಿಗೆ, ಹಾಡಿನ ಧಾಟಿಗೆ

ವಿನಯದ, ತಾಳವೇ, ಭಾವಕೆ ವಿಷದ ಲೇಪವೇ

ಹೆಣ್ಣು ಒಂದು ಮಾಯೆಯ ರೂಪ ಎಂಬ ಮಾತಿದೆ
ಹೆಣ್ಣು ಕ್ಷಮಿಸೋ ಭೂಮಿಯ ರೂಪವೆಂದು ಹೇಳಿದೆ

ಯಾವುದು, ಯಾವುದು, ನಿನಗೆ ಹೋಲುವುದಾವುದು(೨)

ಓ ಗುಲಾಬಿಯೇ
ಓ ಗುಲಾಬಿಯೇ
ನಿನ್ನಂದ ಚೆಲುವಿಂದ ಸೆಳೆಯೋದೇ ಪ್ರೇಮವೇ, ಓ
ಮುಳ್ಳಿಂದ, ಬಾಳಂದ ಕೆಡಿಸೋದು ನ್ಯಾಯವೇ, ಓ

ಓ ಗುಲಾಬಿಯೇ
ಓ ಗುಲಾಬಿಯೇ

ಮನ್ನಿಸು ಮನ್ನಿಸು, ಎಲ್ಲವ ಮನ್ನಿಸು
ನೊಂದಿರೋ ಕನಸಿಗೆ, ಬೆಂದಿರೋ ಕನಸಿಗೆ
ಮಮತೆಯ ತಿನ್ನಿಸು, ನಿನ್ನಯ ಪ್ರೀತಿಯ ಒಪ್ಪಿಸು

ಒಂದು ಬಾರಿ ಪ್ರೀತಿಸಿ, ಒಲ್ಲೆ ಎಂದು ಹೇಳಿದೆ
ಪ್ರೀತಿ ಮರೆತು ಹೋಗಲು, ಹೆಣ್ಣೆ ನೀನು ಸೋಲುವೆ

ಏನಿದೆ, ಏನಿದೆ, ನಿನ್ನಯ ಮನದೊಳಗೇನಿದೆ(೨)

ಓ ಗುಲಾಬಿಯೇ
ಓ ಗುಲಾಬಿಯೇ
ನಿನ್ನಂದ ಚೆಲುವಿಂದ ಸೆಳೆಯೋದೇ ಪ್ರೇಮವೇ, ಓ
ಮುಳ್ಳಿಂದ, ಬಾಳಂದ ಕೆಡಿಸೋದು ನ್ಯಾಯವೇ, ಓ

ಓ ಗುಲಾಬಿಯೇ
ಓ ಗುಲಾಬಿಯೇ

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

Song: Enendu hesaridali(ಏನೆಂದು ಹೆಸರಿಡಲಿ), Movie: Anna bond (ಅಣ್ಣ ಬಾಂಡ್‌)

Song: Ello jinugiruva neeru (ಎಲ್ಲೋ ಜಿನುಗಿರುವ ನೀರು‌), Movie: Just maath maathalli(ಜಸ್ಟ್‌ ಮಾತ್‌ ಮಾತಲ್ಲಿ)

Song: Dehavendare O manuja(ದೇಹವೆಂದರೆ ಓ ಮನುಜ), Movie: Janumada jodi ( ಜನುಮದ ಜೋಡಿ)

Song: Onde ondu Aaseyu (ಒಂದೇ ಒಂದು ಆಸೆಯು), Seetharamu (ಸೀತಾರಾಮು)

Song: Sada ninna kannali (ಸದಾ ನಿನ್ನ ಕಣ್ಣಲಿ), Movie: Bachchan (ಬಚ್ಚನ್-2013)

Song: Neenaade naa(ನೀನಾದೆ ನಾ), Movie: Yuvarathnaa (ಯುವರತ್ನ)

Song: Marali manasaagide(ಮರಳಿ ಮನಸಾಗಿದೆ), Movie: Gentleman(ಜೆಂಟಲ್ಮನ್‌)

Song: Soundarya samara (ಸೌಂದರ್ಯ ಸಮರ), Movie: Kaddipudi (ಕಡ್ಡಿಪುಡಿ)

Song: Hesaru poorthi helade, Movie: Paramathma

Song: Onde usirante (ಒಂದೇ ಉಸಿರಂತೆ) Movie: Snehaloka (ಸ್ನೇಹಲೋಕ)