Song: Kaagadada doniyalli, Movie: Kirik party

ಹಾಡು: ಕಾಗದದ ದೋಣಿಯಲ್ಲಿ
ರಚನೆ: ಜಯಂತ ಕಾಯ್ಕಿಣಿ
ಸಂಗೀತ: ಅಜನೀಶ್ ಲೋಕನಾಥ್
ಗಾಯನ: ವಾಸುಕಿ ವೈಭವ್
ಚಲನಚಿತ್ರ: ಕಿರಿಕ್ ಪಾರ್ಟಿ

ಕಾಗದದ, ದೋಣಿಯಲ್ಲಿ
ನಾ ಕೂರುವಂತ ಹೊತ್ತಾಯಿತೇ
ಕಾಣಿಸದ, ಹನಿಯೊಂದು
ಕಣ್ಣಲ್ಲೆ ಕೂತು ಮುತ್ತಾಯಿತೇ

ಹಗುರಾದೀತೇನೊ ನನ್ನೆದೆಯ ಭಾರ
ಕಂಡೀತೇನೊ ತಂಪಾದ ತೀರ

ಸಿಕ್ಕೀತೇ ಮುಂದಿನ ದಾರಿ
ನನ್ನೆಲ್ಲ ಕಲ್ಪನೆ ಮೀರಿ
ಇನ್ನೊಂದೇ ವಿಸ್ಮಯ ತೋರಿ

ಹಾದಿಯಲಿ ಹೆಕ್ಕಿದ ನೆನಪಿನ
ಪುಟ್ಟ ಜೋಳಿಗೆ ಬೆನ್ನಲ್ಲಿದೆ

ಆಡದಿರೊ ಸಾವಿರ ಪದಗಳ
ಮೂಕ ಸೇತುವೆ ಕಣ್ಮುಂದಿದೆ

ಈ ಹೆಜ್ಜೆಯ ಗುರುತೆಲ್ಲವ
ಅಳಿಸುತ್ತಿರೊ ಮಳೆಗಾಲವೇ

ನಾ ನಿನ್ನಯ ಮಡಿಲಲ್ಲಿರೋ
ಬರಿಗಾಲಿನ ಮಗುವಾಗುವೆ

ಮನಸಾದೀತೇನೊ ಇನ್ನೂ ಉದಾರ
ಬಂದೀತೇನೊ ನನ್ನ ಬಿಡಾರ

ಸಿಕ್ಕೀತೇ ಮುಂದಿನ ದಾರಿ
ನನ್ನೆಲ್ಲ ಕಲ್ಪನೆ ಮೀರಿ
ಇನ್ನೊಂದೇ ವಿಸ್ಮಯ ತೋರಿ











ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

Song: Enendu hesaridali(ಏನೆಂದು ಹೆಸರಿಡಲಿ), Movie: Anna bond (ಅಣ್ಣ ಬಾಂಡ್‌)

Song: Ninna Danigaagi (ನಿನ್ನ ದನಿಗಾಗಿ), Movie: Savaari 2 (ಸವಾರಿ 2)

SONG:PARAVASHANADENU(ಪರವಶನಾದೆನು), MOVIE:PARAMATHMA(ಪರಮಾತ್ಮ)

Song: Sada ninna kannali (ಸದಾ ನಿನ್ನ ಕಣ್ಣಲಿ), Movie: Bachchan (ಬಚ್ಚನ್-2013)

Song: Ee hasiru siriyali (ಈ ಹಸಿರು ಸಿರಿಯಲಿ), Movie: Nagamandala (ನಾಗಮಂಡಲ)

Song: Nee Amruthadhare (ನೀ ಅಮೃತಧಾರೆ), Movie: Amruthadhare (ಅಮೃತಧಾರೆ)

Song: Ee nanna kannane (ಈ ನನ್ನ ಕಣ್ಣಾಣೆ), Movie: Abhi (ಅಭಿ)

Song: Neeralli sanna aleyondu (ನೀರಲ್ಲಿ ಸಣ್ಣ ಅಲೆಯೊಂದು). Movie: Hudugaru (ಹುಡುಗರು)

Song: Jenina holeyo (ಜೇನಿನ ಹೊಳೆಯೋ), Movie: Chalisuva modagalu (ಚಲಿಸುವ ಮೋಡಗಳು)

Song: Dehavendare O manuja(ದೇಹವೆಂದರೆ ಓ ಮನುಜ), Movie: Janumada jodi ( ಜನುಮದ ಜೋಡಿ)