Song: Munjane manjalli, Movie: Just maath maathalli

ಹಾಡು: ಮುಂಜಾನೆ ಮಂಜಲ್ಲಿ
ರಚನೆ: ರಾಘವೇಂದ್ರ ಕಾಮತ್‌
ಸಂಗೀತ: ರಘು ದೀಕ್ಷಿತ್‌
ಗಾಯನ: ರಘು ದೀಕ್ಷಿತ್‌
ಚಲನಚಿತ್ರ: ಜಸ್ಟ್‌ ಮಾತ್‌ ಮಾತಲ್ಲಿ

ಮುಂಜಾನೆ ಮಂಜಲ್ಲಿ
ಮುಸ್ಸಂಜೆ ತಿಳಿತಂಪಲ್ಲಿ
ಓ ಒಲವೇ ನೀನೆಲ್ಲಿ
ಹುಡುಕಾಟ ನಿನಗಿನ್ನೆಲ್ಲಿ

ನನ್‌ ಎದೆಯೊಳಗೆ ನೀ ಇಳಿದು
ಜಡಮನದ ಮೌನ ಮುರಿದು
ಬಿಸಿ ಉಸಿರನ್ನು ನೀ ಬಗೆದು
ನಿಟ್ಟುಸಿರನ್ನು ನೀ ತೆಗೆದು

ನನ್ನೊಮ್ಮೆ ಆವರಿಸು
ಈ ಬೇಗೆ ನೀ ಹರಿಸು
ಮನದಾಳದ ಉಲ್ಲಾಸ ನೀ

ಕುಂತಲ್ಲು ನೀನೇ, ನಿಂತಲ್ಲು ನೀನೇ
ಎಲ್ಲೆಲ್ಲೂ ನೀನೇ ಸಖಿ
ಕಣ್ಣಲ್ಲು ನೀನೇ, ಕನಸಲ್ಲು ನೀನೇ
ಎಲ್ಲೆಲ್ಲೂ ನೀನೇ ಸಖಿ

ನನ ನೆನ್ನೆಗಳೂ ನೀನೇ, ನಾಳೆಗಳು ನೀನೇ
ಎಂದೆಂದು ನೀನೇ ಸಖಿ
ಆವರಿಸು, ಮೈದುಂಬಿ
ಜಸ್ಟ್‌ ಮಾತ್‌ ಮಾತಲ್ಲಿ

ನನ್ನೆಲ್ಲ ಕನಸನ್ನು, ನಿನದೆಂದು ನೀ ತಿಳಿದಿದ್ದೆ
ನೂರೆಂಟು ನೋವಲ್ಲು, ನೀ ಬಂದು ಜೊತೆಯಿದ್ದೆ

ಕಾರ್ಮೋಡ ಕವಿದ ಮನಕೆ
ಹೊಸಬೆಳಕು ತಂದು ಸುರಿದೆ
ನಿನಗಾಗಿ ನಾನು ನನ್ನ
ಬದುಕೆಲ್ಲ ಮುಡಿಪು ಎಂದೆ

ಈಗೆಲ್ಲಿ, ನೀ ಹೋದೆ
ಕನಿಕರಿಸಿ ನೀ ಬಾರೇ
ಎದೆಗೂಡಿನ ಉಸಿರು ನೀನೇ

ಬಾನಲ್ಲು ನೀನೇ, ಭುವಿಯಲ್ಲು ನೀನೇ
ಎಲ್ಲೆಲ್ಲು ನೀನೇ ಸಖಿ
ನೋವಲ್ಲು ನೀನೇ, ನಗುವಲ್ಲು ನೀನೇ
ಎಲ್ಲೆಲ್ಲು ನೀನೇ ಸಖಿ

ನನ ನೆನ್ನೆಗಳೂ ನೀನೇ, ನಾಳೆಗಳು ನೀನೇ
ಎಂದೆಂದು ನೀನೇ ಸಖಿ
ಆವರಿಸು, ಮೈದುಂಬಿ
ಜಸ್ಟ್‌ ಮಾತ್‌ ಮಾತಲ್ಲಿ


ನೀನಿಲ್ಲದೇ, ಬಾಳೇ ಬರಡು
ನಿನಗಾಗೇ ನನ್ನ ಬದುಕೇ ಮುಡಿಪು
ನೀನಿಲ್ಲದ ಬದುಕೇನಿದು ಕೊಲ್ಲು ನನ್ನ

ತಂಪಲ್ಲು ನೀನೇ, ಬಿಸಿಲಲ್ಲು ನೀನೇ
ಎಲ್ಲೆಲ್ಲು ನೀನೇ ಸಖಿ
ಹಸಿರಲ್ಲು ನೀನೇ, ಉಸಿರಲ್ಲು ನೀನೇ
ಎಲ್ಲೆಲ್ಲು ನೀನೇ ಸಖಿ

ನನ ನೆನ್ನೆಗಳೂ ನೀನೇ, ನಾಳೆಗಳು ನೀನೇ
ಎಂದೆಂದು ನೀನೇ ಸಖಿ
ಆವರಿಸು, ಮೈದುಂಬಿ
ಜಸ್ಟ್‌ ಮಾತ್‌ ಮಾತಲ್ಲಿ

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

Song: Sada ninna kannali (ಸದಾ ನಿನ್ನ ಕಣ್ಣಲಿ), Movie: Bachchan (ಬಚ್ಚನ್-2013)

Song: Elliruve (ಎಲ್ಲಿರುವೆ), Movie: Bayaludaari (ಬಯಲುದಾರಿ)

Song: Ninninda dooragi iralarenu (ನಿನ್ನಿಂದ ದೂರಾಗಿ ಇರಲಾರೆನು), Movie: Siddartha (ಸಿದ್ದಾರ್ಥ)

Song: Preethi neenillade naanu hegirali (ಪ್ರೀತಿ ನೀನಿಲ್ಲದೆ ನಾನು ಹೇಗಿರಲಿ), Movie: Bhaava baamaida (ಭಾವ ಬಾಮೈದ)

Song: Onde ondu Aaseyu (ಒಂದೇ ಒಂದು ಆಸೆಯು), Seetharamu (ಸೀತಾರಾಮು)

Song: Kangalu vandane helide (ಕಂಗಳು ವಂದನೆ ಹೇಳಿದೆ), Movie: Mugiyada kathe (‌ಮುಗುಯದ ಕಥೆ)

Song: Neenu neene illi naanu naane (ನೀನು ನೀನೇ ಇಲ್ಲಿ ನಾನು ನಾನೇ), Movie: Gadibidi ganda (ಗಡಿಬಿಡಿ ಗಂಡ)

Song: Jaaji mallige node (ಜಾಜಿ ಮಲ್ಲಿಗೆ ನೋಡೆ), Movie: Sevanthi sevanthi (ಸೇವಂತಿ ಸೇವಂತಿ)

Song: Kannige kaanuva(ಕಣ್ಣಿಗೆ ಕಾಣುವ ), Movie: Yarivanu(ಯಾರಿವನು)