Manase maaya, Mundina Nildana

ಹಾಡು: ಮನಸೇ ಮಾಯಾ
ರಚನೆ: ಕಿರಣ್‌ ಕಾವೇರಪ್ಪ
ಸಂಗೀತ: ಮಸಾಲ ಕಾಫಿ
ಗಾಯನ: ಸೂರಜ್‌ ಸಂತೋಷ್‌, ವರುಣ್‌ ಸುನಿಲ್‌
ಚಲನಚಿತ್ರ: ಮುಂದಿನ ನಿಲ್ದಾಣ

ಮನಸೇ ಮಾಯಾ ನದಿಯ ಹಾಗೆ,
ಹರಿವಾ ಧಾರೆ ಅನುರೂಪಿ.
ಮಳೆಬಿಲ್ಲೇರಿ, ನಗುವ ತೇಲಿ,
ಬದುಕೇ ಬಣ್ಣ ಬಹುರೂಪಿ.
ಸೆಳೆವಾ ಈ ಸುಂದರೆ,
ನಲಿವಾ ವಸುಂಧರೆ{೨}
ವರ್ಣಿಸಲು ಈ ಚಂದ್ರಿಕೆ,
ಸೋತಿಹುದೆ ಸ್ವರಮಾಲಿಕೆ
ನಗುವಿನಲೇ ಸುಳಿವಿರದೇ ಅಪಹರಿಸಿದಳೇ
ಮಧುಗುಂಜನ ಈ ಮಂಜಿನ ಹನಿ,
ಮನರಂಜನ ನೀನಾಡುವ ದನಿ{೨}
ಸಾರಂಗಿಯು ರಂಗೇರಿದೆ,
ನವರಂಗಿ ನಲಿವಾಗ
ನವಿಲೂರಿನಾ ನವಿಲೇ ನಿನ್ನ,
ಪ್ರೇರಣೆ ಏನಮ್ಮ
ಮದರಂಗಿಯು ನಿನ ಅಂಗೈಲೆ,
ರಂಗೋಲಿ ಇಡುವಾಗ
ವನಸಿರಿಯ ನಡುವೆ ಅರಳಿದ,
ಏ! ತಾರೆ ನೀನೇನಮ್ಮ
ಆರೋಹದಿ ಮೌನರಾಗ,
ಅನುರಾಗಿಯಾಗೋದೇ ಈಗ
ಮನಸಿನ ಬೀದಿಯಲ್ಲಿ ನೀನೆ, ನೀನೆ
ಮಧುಗುಂಜನ ಈ ಮಂಜಿನ ಹನಿ,
ಮನರಂಜನ ನೀನಾಡುವ ದನಿ{೨}

Any other kannada song lyrics that you would like to see here? Just ask for in the comments section below

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

Song: Enendu hesaridali(ಏನೆಂದು ಹೆಸರಿಡಲಿ), Movie: Anna bond (ಅಣ್ಣ ಬಾಂಡ್‌)

Song: Ello jinugiruva neeru (ಎಲ್ಲೋ ಜಿನುಗಿರುವ ನೀರು‌), Movie: Just maath maathalli(ಜಸ್ಟ್‌ ಮಾತ್‌ ಮಾತಲ್ಲಿ)

Song: Dehavendare O manuja(ದೇಹವೆಂದರೆ ಓ ಮನುಜ), Movie: Janumada jodi ( ಜನುಮದ ಜೋಡಿ)

Song: Onde ondu Aaseyu (ಒಂದೇ ಒಂದು ಆಸೆಯು), Seetharamu (ಸೀತಾರಾಮು)

Song: Sada ninna kannali (ಸದಾ ನಿನ್ನ ಕಣ್ಣಲಿ), Movie: Bachchan (ಬಚ್ಚನ್-2013)

Song: Neenaade naa(ನೀನಾದೆ ನಾ), Movie: Yuvarathnaa (ಯುವರತ್ನ)

Song: Marali manasaagide(ಮರಳಿ ಮನಸಾಗಿದೆ), Movie: Gentleman(ಜೆಂಟಲ್ಮನ್‌)

Song: Soundarya samara (ಸೌಂದರ್ಯ ಸಮರ), Movie: Kaddipudi (ಕಡ್ಡಿಪುಡಿ)

Song: Hesaru poorthi helade, Movie: Paramathma

Song: Onde usirante (ಒಂದೇ ಉಸಿರಂತೆ) Movie: Snehaloka (ಸ್ನೇಹಲೋಕ)