Song: Ninninda dooragi iralarenu (ನಿನ್ನಿಂದ ದೂರಾಗಿ ಇರಲಾರೆನು), Movie: Siddartha (ಸಿದ್ದಾರ್ಥ)

ಹಾಡು: ನಿನ್ನಿಂದ ದೂರಾಗಿ ಇರಲಾರೆನು

ರಚನೆ: ಜಯಂತ್‌ ಕಾಯ್ಕಿಣಿ

ಸಂಗೀತ: ವಿ.ಹರಿಕೃಷ್ಣ 

ಗಾಯನ: ರಘು ದೀಕ್ಷಿತ್

ಚಲನಚಿತ್ರ:‌ ಸಿದ್ದಾರ್ಥ


ನಿನ್ನಿಂದ ದೂರಾಗಿ ಇರಲಾರೆನು

ಇನ್ನೆಂದೂ ನಿನ್ನನ್ನು ಬಿಡಲಾರೆನು


ಕಣ್ಣಲ್ಲೆ ನೀನು, ಕೂತಿದ್ದ ಮೇಲೆ

ಬೇಕಿಲ್ಲ ಇನ್ನು ಕಣ್ಣಾಮುಚ್ಚಾಲೆ

ನಾ ಕೂಗಲೇ ನಿನ್ನನು


ಅದೇ ನೀನೂ, ಅದೇ ನಾನೂ

ಅತೀ ಆಯ್ತೂ, ಪ್ರೀತಿ ಇನ್ನೂನೂ


ಓ ಹೋ (೩)


ಮುದ್ದಾದ ನಿನ್ನ ಶೈಲಿನೇ ಭಿನ್ನ

ನಿನ್ನೋನು ನಾನು ಎನ್ನೋದೇ ಚೆನ್ನ

ಮೆಚ್ಚೋದೇ ಬೇಡ ಇನ್ಯಾರೂ ನಿನ್ನ, ಹೇ


ನೆನಪಿನ ನಿನ್ನ ಈ ಕೀಲಿಯಿಂದ

ಕನಸಿನ ನನ್ನ ಖಜಾನೆಯೊಂದ

ತೆರೆಯುವ ಯತ್ನ ತುಂಬಾನೇ ಚಂದ


ಕಾಡಿಲ್ಲ, ನಿನ್ನಂತೆ

ಇನ್ಯಾರೂ, ಜ್ವರದಂತೆ


ಬಾ ನನ್ನ, ಸ್ವರದಂತೆ

ಎಂದೆಂದಿಗೂ ನನ್ನ ಜೊತೆ 


ನಿನ್ನಿಂದ ದೂರಾಗಿ ಇರಲಾರೆನು

ಇನ್ನೆಂದೂ ನಿನ್ನನ್ನು ಬಿಡಲಾರೆನು


ಕಣ್ಣಲ್ಲೆ ನೀನು, ಕೂತಿದ್ದ ಮೇಲೆ

ಬೇಕಿಲ್ಲ ಇನ್ನು ಕಣ್ಣಾಮುಚ್ಚಾಲೆ

ನಾ ಕೂಗಲೇ ನಿನ್ನನು


ಅದೇ ನೀನೂ, ಅದೇ ನಾನೂ

ಅತೀ ಆಯ್ತೂ, ಪ್ರೀತಿ ಇನ್ನೂನೂ


ನಿನ್ನಿಂದ ದೂರಾಗಿ ಇರಲಾರೆನು

ಇನ್ನೆಂದೂ ನಿನ್ನನ್ನು ಬಿಡಲಾರೆನು





ಕಾಮೆಂಟ್‌ಗಳು

  1. "ಹಾಡು ಕರ್ನಾಟಕ" ರಿಯಾಲಿಟಿ ಷೋದಲ್ಲಿ ತೀರ್ಪುಗಾರರಾದ ವಿ ಹರಿಕೃಷ್ಷ ಅವರು ಹೇಳಿದ ಪ್ರಕಾರ, ಈ ಹಾಡನ್ನು ಸಿದ್ಧ ಪಡಿಸುವಲ್ಲಿ ವಿಳಂಬ ಆಗಿದ್ದರಿಂದ ನಿರ್ಮಾಪಕಿ ಡಾ. ಪಾರ್ವತಮ್ಮ ರಾಜ್‌ಕುಮಾರ್ ಅವರು ಕೋಪಗೊಂಡು, ಈ ಹಾಡನ್ನು ರದ್ದುಗೊಳಿಸುವ ಬಗ್ಗೆ ಮಾತಾಡಿದ್ದರಂತೆ. ಅಷ್ಟರಲ್ಲಿ ರಘು ದೀಕ್ಷಿತ್ ಲಭ್ಯರಿದ್ದರು. ಅವರು ಈ ಹಾಡನ್ನು ಹಾಡಿ "ದೊಡ್ಮನೆ" ಬ್ಯಾನರ್ ಗೌರವವನ್ನೂ ಉಳಿಸಿಕೊಟ್ಟರು!

    ಪ್ರತ್ಯುತ್ತರಅಳಿಸಿ

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

Song: Sada ninna kannali (ಸದಾ ನಿನ್ನ ಕಣ್ಣಲಿ), Movie: Bachchan (ಬಚ್ಚನ್-2013)

Song: Preethi neenillade naanu hegirali (ಪ್ರೀತಿ ನೀನಿಲ್ಲದೆ ನಾನು ಹೇಗಿರಲಿ), Movie: Bhaava baamaida (ಭಾವ ಬಾಮೈದ)

Song: Elliruve (ಎಲ್ಲಿರುವೆ), Movie: Bayaludaari (ಬಯಲುದಾರಿ)

Song: Maathu muride(ಮಾತು ಮುರಿದೆ‌), Movie: Ganda hendathi (ಗಂಡ-ಹೆಂಡತಿ)

Song: Onde ondu Aaseyu (ಒಂದೇ ಒಂದು ಆಸೆಯು), Seetharamu (ಸೀತಾರಾಮು)

Song: Kangalu vandane helide (ಕಂಗಳು ವಂದನೆ ಹೇಳಿದೆ), Movie: Mugiyada kathe (‌ಮುಗುಯದ ಕಥೆ)

Song: Jaaji mallige node (ಜಾಜಿ ಮಲ್ಲಿಗೆ ನೋಡೆ), Movie: Sevanthi sevanthi (ಸೇವಂತಿ ಸೇವಂತಿ)

Song: Prema chandrama (ಪ್ರೇಮ ಚಂದ್ರಮ), Movie: Yajamana (ಯಜಮಾನ)