Song: Neene modalu neene kone, Movie: Kiss

ಹಾಡು: ನೀನೆ ಮೊದಲು ನೀನೇ ಕೊನೆ
ರಚನೆ: ಎ.ಪಿ. ಅರ್ಜುನ್‌
ಸಂಗೀತ: ವಿ. ಹರಿಕೃಷ್ಣ
ಗಾಯನ: ಶ್ರೇಯ ಘೋಶಾಲ್‌
ಚಲನಚಿತ್ರ: ಕಿಸ್‌


ನೀನೆ ಮೊದಲು ನೀನೇ ಕೊನೆ
ಬೇರೆ ಯಾರೂ ಬೇಡ ನನಗೆ
ಉಸಿರು ಇರುವ ಕೊನೆಯವರೆಗೂ
ಇರಲೆಬೇಕು, ನನ್ನ ಜೊತೆಗೆ


ನನ್ನನ್ನು ಪ್ರೀತಿಸು ಒಂದು ಬಾರಿ
ನಿನ್ನೆಲ್ಲ ಪ್ರೀತಿಯ ನನಗೆ ತೋರಿ


ಆ ಏಳು ಜನ್ಮದ ಪ್ರೀತಿಗೆ ಇದು
ಮೊದಲ ದಿವಸ


ನೀನೆ ಮೊದಲು ನೀನೇ ಕೊನೆ
ಬೇರೆ ಯಾರೂ ಬೇಡ ನನಗೆ


ನೀನಿರುವುದು ನನಗೆ 
ನಾನು ಇರುವುದು ನಿನಗೆ
ನಮ್ಮಿಂದ ಇನ್ನು ಪ್ರೀತಿ ಬೆಳೆಯಲಿ ಆಕಾಶದ ತುದಿಗೆ


ಕಡಲು ಇರುವುದು ಅಲೆಗೆ
ಮಳೆಯು ಇರುವುದು ಇಳೆಗೆ
ಎದೆಯಲ್ಲಿ ಇನ್ನು ಜೀವ ಉಳಿದಿದೆ ನಿನ್ನ ಒಲವಿನ ಕರೆಗೆ


ಆಮಂತ್ರಿಸು ನನ್ನ, ನಿನ್ನ ಪ್ರೀತಿ ಅರಮನೆಗೆ
ಕಾದಿರಲಿ ನನಗೊಂದು ಅಂಬಾರಿ ಮೆರವಣಿಗೆ


ನಿನ್ನಿಂದಲೇ, ನಿನ್ನಿಂದಲೇ, ನಿನ್ನಿಂದಲೇ
ಎಲ್ಲಾ ನಿನ್ನಿಂದಲೇ


ಆ ಏಳು ಜನ್ಮದ ಪ್ರೀತಿಗೆ ಇದು
ಮೊದಲ ದಿವಸ


ಜೀವ ಹೋದರೂನು, ಈ ಜೀವಕೆ ಜೀವ ನೀನು
ಸಾಕೆನ್ನುವಂತೆ ಪ್ರೀತಿಸಬೇಕು ಸಾಯುವವರೆಗೂ ನಾನು


ಪ್ರತಿಯೊಂದು ಹೆಜ್ಜೆಯು ನನ್ನ,ನಿನ್ನ ಹತ್ತಿರ ತಂದು ಬಿಡಲಿ
ನೀ ಎಲ್ಲೇ ಹೋದರು ನನ್ನ ಜೊತೆಗೆ ನಿನ್ನ ನೆರಳೇ ಬರಲಿ


ಮನಸಾರೆ ನಿನ್ನನ್ನು ನಾ ಒಪ್ಪಿಕೊಂಡಿರುವೆ
ನಿನ್ನನ್ನು ನೋಡುತ್ತ ನಾ ಮೌನಿಯಾಗಿರುವೆ


ನಿನ್ನಿಂದಲೇ, ನಿನ್ನಿಂದಲೇ, ನಿನ್ನಿಂದಲೇ
ಎಲ್ಲಾ ನಿನ್ನಿಂದಲೇ


ಆ ಏಳು ಜನ್ಮದ ಪ್ರೀತಿಗೆ ಇದು
ಮೊದಲ ದಿವಸ


Any other kannada song lyrics that you would like to see here? Just ask for in the comments section below






ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

Song: Enendu hesaridali(ಏನೆಂದು ಹೆಸರಿಡಲಿ), Movie: Anna bond (ಅಣ್ಣ ಬಾಂಡ್‌)

Song: Onde ondu Aaseyu (ಒಂದೇ ಒಂದು ಆಸೆಯು), Seetharamu (ಸೀತಾರಾಮು)

Song: Maathu muride(ಮಾತು ಮುರಿದೆ‌), Movie: Ganda hendathi (ಗಂಡ-ಹೆಂಡತಿ)

Song: Jaaji mallige node (ಜಾಜಿ ಮಲ್ಲಿಗೆ ನೋಡೆ), Movie: Sevanthi sevanthi (ಸೇವಂತಿ ಸೇವಂತಿ)

Song: Ninninda dooragi iralarenu (ನಿನ್ನಿಂದ ದೂರಾಗಿ ಇರಲಾರೆನು), Movie: Siddartha (ಸಿದ್ದಾರ್ಥ)

Song: Dehavendare O manuja(ದೇಹವೆಂದರೆ ಓ ಮನುಜ), Movie: Janumada jodi ( ಜನುಮದ ಜೋಡಿ)

Song: Preethi neenillade naanu hegirali (ಪ್ರೀತಿ ನೀನಿಲ್ಲದೆ ನಾನು ಹೇಗಿರಲಿ), Movie: Bhaava baamaida (ಭಾವ ಬಾಮೈದ)

Song: Hesaru poorthi helade, Movie: Paramathma

Song: Nodivalandava (ನೋಡಿವಳಂದವ), Movie: The Villain (ದಿ ವಿಲನ್)