Song: Bombe helutaite, Movie: Rajakumara

ಹಾಡು: ಬೊಂಬೆ ಹೇಳುತೈತೆ
ರಚನೆ: ಸಂತೋಷ್‌ ಆನಂದ್‌ ರಾಮ್
ಸಂಗೀತ:‌ ವಿ. ಹರಿಕೃಷ್ಣ
ಗಾಯನ: ವಿಜಯಪ್ರಕಾಶ್
ಚಲನಚಿತ್ರ: ರಾಜಕುಮಾರ

ಬೊಂಬೆ ಹೇಳುತೈತೆ, ಮತ್ತೆ ಹೇಳುತೈತೆ
ನೀನೇ ರಾಜಕುಮಾರ(೨)

ಹೊಸಬೆಳಕೊಂದು, ಹೊಸಿಲಿಗೆ ಬಂದು
ಬೆಳಗಿದೆ ಮನೆಯ ಮನಗಳ ಇಂದು
ಆರಾಧಿಸೊ ರಾರಾಜಿಸೊ ರಾಜರತ್ನನು

ಆಡಿಸಿಯೇ ನೋಡು, ಬೀಳಿಸಿಯೇ ನೋಡು
ಎಂದೂ ಸೋಲದು, ಸೋತು ತಲೆಯ ಬಾಗದು

ಬೊಂಬೆ ಹೇಳುತೈತೆ, ಮತ್ತೆ ಹೇಳುತೈತೆ
ನೀನೇ ರಾಜಕುಮಾರ

ಗುಡಿಸಲೆ ಆಗಲಿ ಅರಮನೆಯಾಗಲಿ
ಆಟವೆ ನಿಲ್ಲದು, ಎಂದೂ ಆಟ ನಿಲ್ಲದು
ಹಿರಿಯರೆ ಇರಲಿ, ಕಿರಿಯರೆ ಬರಲಿ
ಭೇದವ ತೋರದು, ಎಂದೂ ಭೇದ ತೋರದು

ಎಲ್ಲ ಇದ್ದೂ ಏನೂ ಇಲ್ಲದ ಹಾಗೆ ಬದುಕಿರುವ
ಆಕಾಶ ನೋಡದ ಕೈಯೆ ನಿನದು, ಪ್ರೀತಿ ಹಂಚಿರುವ

ಜೊತೆಗಿರು ನೀನು ಅಪ್ಪನ ಹಾಗೆ
ಹಣ್ಣೆಲೆ ಕಾಯೋ ವಿನಯದಿ ಹೀಗೆ

ನಿನ್ನನು ಪಡೆದ ನಾವು ಪುನೀತ
ಬಾಳು ನಗುನಗುತ

ಬೊಂಬೆ ಹೇಳುತೈತೆ, ಮತ್ತೆ ಹೇಳುತೈತೆ
ನೀನೇ ರಾಜಕುಮಾರ

ತಾನೇ ಉರಿದು ಮನೆಗೆ ಬೆಳಕು ಕೊಡುವ ದೀಪವಿದು
ನಂದಾದೀಪವೇ ಇದು
ಆಡಿಸುವಾತನ ಕರುಣೆಯ ಮೇಲೆ ನಮ್ಮ ಪಾತ್ರವು
ಸಮಯದ ಸೂತ್ರ ಅವನದು

ಒಂದು ಮುತ್ತಿನ ಕಥೆಯ ಹೇಳಿತು ಈ ಬೊಂಬೆ
ಆ ಕಥೆಯಲ್ಲಿದ್ದ ರಾಜನಂಗೆ ನೀನು ಬಂದೆ

ಯೋಗವು ಒಮ್ಮೆ ಬರುವುದು ನಮಗೆ
ಯೋಗ್ಯತೆ ಒಂದೇ, ಉಳಿವುದು ಕೊನೆಗೆ

ಸೂರ್ಯನೊಬ್ಬ, ಚಂದ್ರನೊಬ್ಬ ರಾಜನು ಒಬ್ಬ
ಈ ರಾಜನು ಒಬ್ಬ

ಆಡಿಸಿಯೇ ನೋಡು, ಬೀಳಿಸಿಯೇ ನೋಡು
ಎಂದೂ ಸೋಲದು, ಸೋತು ತಲೆಯ ಬಾಗದು

ಬೊಂಬೆ ಹೇಳುತೈತೆ, ಮತ್ತೆ ಹೇಳುತೈತೆ
ನೀನೇ ರಾಜಕುಮಾರ





















ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

Song: Sada ninna kannali (ಸದಾ ನಿನ್ನ ಕಣ್ಣಲಿ), Movie: Bachchan (ಬಚ್ಚನ್-2013)

Song: Elliruve (ಎಲ್ಲಿರುವೆ), Movie: Bayaludaari (ಬಯಲುದಾರಿ)

Song: Preethi neenillade naanu hegirali (ಪ್ರೀತಿ ನೀನಿಲ್ಲದೆ ನಾನು ಹೇಗಿರಲಿ), Movie: Bhaava baamaida (ಭಾವ ಬಾಮೈದ)

Song: Ninninda dooragi iralarenu (ನಿನ್ನಿಂದ ದೂರಾಗಿ ಇರಲಾರೆನು), Movie: Siddartha (ಸಿದ್ದಾರ್ಥ)

Song: Onde ondu Aaseyu (ಒಂದೇ ಒಂದು ಆಸೆಯು), Seetharamu (ಸೀತಾರಾಮು)

Song: Kangalu vandane helide (ಕಂಗಳು ವಂದನೆ ಹೇಳಿದೆ), Movie: Mugiyada kathe (‌ಮುಗುಯದ ಕಥೆ)

Song: Neenu neene illi naanu naane (ನೀನು ನೀನೇ ಇಲ್ಲಿ ನಾನು ನಾನೇ), Movie: Gadibidi ganda (ಗಡಿಬಿಡಿ ಗಂಡ)

Song: Jaaji mallige node (ಜಾಜಿ ಮಲ್ಲಿಗೆ ನೋಡೆ), Movie: Sevanthi sevanthi (ಸೇವಂತಿ ಸೇವಂತಿ)

Song: Kannige kaanuva(ಕಣ್ಣಿಗೆ ಕಾಣುವ ), Movie: Yarivanu(ಯಾರಿವನು)