Song: Thaayi thaayi. Movie: Hoovu Hannu/Vamshi

ಹಾಡು: ತಾಯಿ, ತಾಯಿ
ರಚನೆ: ಹಂಸಲೇಖ
ಸಂಗೀತ: ಹಂಸಲೇಖ
ಗಾಯನ: ಡಾ. ರಾಜಕುಮಾರ್‌
ಚಲನಚಿತ್ರ: ಹೂವು ಹಣ್ಣು, ವಂಶಿ

ಜೋ ಜೋ ನನ್ನ ಮುದ್ದಿನ ಕಂದ ಗುಮ್ಮನು ಬಂದ
ಜೋ ಜೋ ನನ್ನ ಚಿನ್ನದ ಕಂದ ಚಂದಿರ ಬಂದ

ತಾಯಿ, ತಾಯಿ, ಲಾಲಿ ಹಾಡೋ ಭೂಮಿತಾಯಿಗೆ
ತಾಯಿ, ತಾಯಿ, ಲಾಲಿ ಹಾಡೋ ಹೆತ್ತ ತಾಯಿಗೆ

ಹೊರುವಳು ಭೂಮಿ ಭಾರ
ಹೆರುವಳು ತಾಯಿ ನೋವ
ತ್ಯಾಗಮಯಿ ತಾಯಿ

ತಾಯಿ, ತಾಯಿ, ಲಾಲಿ ಹಾಡೋ ಭೂಮಿತಾಯಿಗೆ
ಲಾಲಿ ಹಾಡೋ ಹೆತ್ತ ತಾಯಿಗೆ

ಕಾಲಕೂಟವನು ಸಹಿಸಿ, ಕಾಮಕೂಟವನು ಕ್ಷಮಿಸಿ
ಜಗವನೇ ಮಗುವಿನ ತೆರದಲಿ ತಿಳಿವಳು

ಅಳುವಳು ಅಬಲೆಯು ಎಂದು
ಉಳಿವಳು ಮಗುವಿದೆ ಎಂದು
ಪ್ರೇಮಮಯಿ ತಾಯಿ

ತಾಯಿ, ತಾಯಿ, ಲಾಲಿ ಹಾಡೋ ಭೂಮಿತಾಯಿಗೆ
ಲಾಲಿ ಹಾಡೋ ಹೆತ್ತ ತಾಯಿಗೆ

ಗರ್ಭವೆ ತಾಯಿಯ ಸ್ವರ್ಗ ಎಂದಿತು ದೈವ ನಿಸರ್ಗ
ಮೊಲೆಯುಣಿಸುವ ಸ್ತ್ರೀ ಧರ್ಮ, ವಹಿಸಿದ ತಾಯಿಗೆ ಬ್ರಹ್ಮ

ತೊರೆವಳು ಸುಖ ಸಹವಾಸ
ಇರುವಳು ದಿನ ಉಪವಾಸ
ವೇದಮಯಿ ತಾಯಿ

ತಾಯಿ, ತಾಯಿ, ಲಾಲಿ ಹಾಡೋ ಭೂಮಿತಾಯಿಗೆ
ಲಾಲಿ ಹಾಡೋ ಹೆತ್ತ ತಾಯಿಗೆ

ಯೌವ್ವನ, ಜೊತೆ ಬಡತನ
ಹಂಗಿಸೋ, ಆ ಸಿರಿತನ
ಈ ಉದರಕಾಗಿ, ಈ ಅಧರಕೆ ಕಹಿ ಚುಂಬನ

ಈ ಬದುಕಿಗಾಗಿ ಈ ಮೌನದ ಆಕ್ರಂದನ

ಹೊರುವಳು ಭೂಮಿ ಭಾರ
ಹೆರುವಳು ತಾಯಿ ನೋವ
ತ್ಯಾಗಮಯಿ ತಾಯಿ

ತಾಯಿ, ತಾಯಿ, ಲಾಲಿ ಹಾಡೋ ಭೂಮಿತಾಯಿಗೆ
ತಾಯಿ, ತಾಯಿ, ಲಾಲಿ ಹಾಡೋ ಹೆತ್ತ ತಾಯಿಗೆ














ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

Song: Sada ninna kannali (ಸದಾ ನಿನ್ನ ಕಣ್ಣಲಿ), Movie: Bachchan (ಬಚ್ಚನ್-2013)

Song: Elliruve (ಎಲ್ಲಿರುವೆ), Movie: Bayaludaari (ಬಯಲುದಾರಿ)

Song: Ninninda dooragi iralarenu (ನಿನ್ನಿಂದ ದೂರಾಗಿ ಇರಲಾರೆನು), Movie: Siddartha (ಸಿದ್ದಾರ್ಥ)

Song: Preethi neenillade naanu hegirali (ಪ್ರೀತಿ ನೀನಿಲ್ಲದೆ ನಾನು ಹೇಗಿರಲಿ), Movie: Bhaava baamaida (ಭಾವ ಬಾಮೈದ)

Song: Onde ondu Aaseyu (ಒಂದೇ ಒಂದು ಆಸೆಯು), Seetharamu (ಸೀತಾರಾಮು)

Song: Kangalu vandane helide (ಕಂಗಳು ವಂದನೆ ಹೇಳಿದೆ), Movie: Mugiyada kathe (‌ಮುಗುಯದ ಕಥೆ)

Song: Neenu neene illi naanu naane (ನೀನು ನೀನೇ ಇಲ್ಲಿ ನಾನು ನಾನೇ), Movie: Gadibidi ganda (ಗಡಿಬಿಡಿ ಗಂಡ)

Song: Jaaji mallige node (ಜಾಜಿ ಮಲ್ಲಿಗೆ ನೋಡೆ), Movie: Sevanthi sevanthi (ಸೇವಂತಿ ಸೇವಂತಿ)

Song: Kannige kaanuva(ಕಣ್ಣಿಗೆ ಕಾಣುವ ), Movie: Yarivanu(ಯಾರಿವನು)