ಪೋಸ್ಟ್‌ಗಳು

ಮಾರ್ಚ್, 2020 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

Song: O Myna O myna (ಓ ಮೈನಾ), Movie: Yajamana (ಯಜಮಾನ)

ಹಾಡು: ಓ ಮೈನಾ ರಚನೆ: ಕೆ.ಕಲ್ಯಾಣ್‌ ಸಂಗೀತ: ರಾಜೇಶ್‌ ರಾಮನಾಥ್‌ ಗಾಯನ: ರಾಜೇಶ್‌ ಕೃಷ್ಣನ್‌, ಚಿತ್ರಾ ಚಲನಚಿತ್ರ: ಯಜಮಾನ ಓ ಮೈನಾ ಓ ಮೈನಾ, ಏನಿದು ಮಾಯೆ? ಮಳೆಯಿಲ್ಲದೆ ಮೈ ನೆನೆಯೋ ಮಾಯದ ಮಾಯೆ ನೆನ್ನೆ ಕಂಡ ನೋಟವೇ ಅಂತರಾಳವಾಗಿದೆ ಇಂದು ಕಂಡ ನೋಟವೇ ಗಟ್ಟಿಮೇಳವಾಗಿದೆ ರಾಗ ಎನ್ನಲೇ? ಅನುರಾಗ ಎನ್ನಲೇ? ಪ್ರೀತಿ ಎನ್ನಲೇ? ಹೊಸ ಮಾಯೆ ಎನ್ನಲೇ?!  ಓ ಮೈನಾ ಓ ಮೈನಾ, ಏನಿದು ಮಾಯೆ? ಮಳೆಯಿಲ್ಲದೆ ಮೈ ನೆನೆಯೋ ಮಾಯದ ಮಾಯೆ ಕಾವೇರಿ ತೀರದಲಿ, ಬರೆದೆನು ನಿನ್ಹೆಸರ ಮರಳೆಲ್ಲ ಹೊನ್ನಾಯ್ತು, ಯಾವ ಮಾಯೆ? ಬಿದಿರಿನ ಕಾಡಿನಲಿ, ಕೂಗಿದೆ ನಿನ್ಹೆಸರ ಬಿದಿರೆಲ್ಲ ಕೊಳಲಾಯ್ತು, ಯಾವ ಮಾಯೆ? ಸೂತ್ರವು ಇರದೇ, ಗಾಳಿಯು ಇರದೇ ಬಾನಲಿ ಗಾಳಿ ಪಟವಾಗಿರುವೆ ಇಂಥ ಮಾಯಾವಿ ಸಂತೋಷ ಇನ್ನೇನೆ ಮೈನಾ? ಓ ಮೈನಾ ಓ ಮೈನಾ, ಏನಿದು ಮಾಯೆ? ಮಳೆಯಿಲ್ಲದೆ ಮೈ ನೆನೆಯೋ ಮಾಯದ ಮಾಯೆ ಬೇಡನ ಕಣ್ಣಿಗೆ, ಬಾಣವ ನಾಟಿಸುವ ಈ ಜಿಂಕೆ ಬೇಟೆ ಇಲ್ಲಿ, ಯಾವ ಮಾಯೆ? ಹತ್ತಿಗೆ ಬೆಂಕಿಯನು, ಹತ್ತಿಸುವ ಮಾಯೆ ಮೀನುಗಳೆ ಗಾಳ ಬೀಸೋ, ಯಾವ ಮಾಯೆ ಆಕಾಶಕ್ಕೆ, ಬಲೆಯ ಬೀಸಿ ಮೋಡ ನಗುವ ಮರ್ಮ ಏನೋ? ಇಂಥ ಮಾಯಾವಿ ಸಂತೋಷ ಇನ್ನೇನೆ ಮೈನಾ? ಓ ಮೈನಾ ಓ ಮೈನಾ, ಏನಿದು ಮಾಯೆ? ಮಳೆಯಿಲ್ಲದೆ ಮೈ ನೆನೆಯೋ ಮಾಯದ ಮಾಯೆ ನೆನ್ನೆ ಕಂಡ ನೋಟವೇ ಅಂತರಾಳವಾಗಿದೆ ಇಂದು ಕಂಡ ನೋಟವೇ ಗಟ್ಟಿಮೇಳವಾಗ

Song: Nannane kele nanna pranave (ನನ್ನಾಣೆ ಕೇಳೆ ನನ್ನ ಪ್ರಾಣವೇ), Movie: Ekangi (ಏಕಾಂಗಿ‌)

ಹಾಡು: ನನ್ನಾಣೆ ಕೇಳೆ ನನ್ನ ಪ್ರಾಣವೇ ರಚನೆ: ವಿ. ರವಿಚಂದ್ರನ್‌ ಸಂಗೀತ: ವಿ. ರವಿಚಂದ್ರನ್‌ ಗಾಯನ: ಹರಿಹರನ್‌ ಚಲನಚಿತ್ರ: ಏಕಾಂಗಿ‌ ನನ್ನಾಣೆ ಕೇಳೆ ನನ್ನ ಪ್ರಾಣವೇ, ನಂಗೆ ಬೇರೆ ಯಾರಿಲ್ಲವೇ ನಿನ್ನಾಣೆ ಕೇಳೆ ನನ್ನ ಪ್ರಾಣವೇ, ಬೇರೆ ಯಾರೂ ಬೇಕಿಲ್ಲವೇ ಪ್ರೀತಿ ಕಣ್ಣು ತೆರೆದಾಗ, ಮರೆತ್ಹೋಯ್ತು ಲೋಕ ಕನಸು ಕಣ್ಣು ಬಿಟ್ಟಾಗ, ಶುರು ಪ್ರೇಮಲೋಕ ಇಲ್ಲಿ ನಾನು ನೀನು, ನೀನು ನಾನು ಇಬ್ಬರೇ ಬೇರೆ ಯಾರೂ ಇಲ್ಲ ಕೇಳೇಲೇ ನನ್ನಾಣೆ ಕೇಳೆ ನನ್ನ ಪ್ರಾಣವೇ, ನಂಗೆ ಬೇರೆ ಯಾರಿಲ್ಲವೇ ನಿನ್ನಾಣೆ ಕೇಳೆ ನನ್ನ ಪ್ರಾಣವೇ, ಬೇರೆ ಯಾರೂ ಬೇಕಿಲ್ಲವೇ ಹೂವು ಅರಳದ ಲೋಕ ಇದು, ಹೃದಯ ಅರಳೊ ಲೋಕ ಇದು ಹಕ್ಕಿ ಹಾರದ ಲೋಕ ಇದು, ಪ್ರೇಮಿಗಳು ಹಾರೊ ಲೋಕ ಇದು ಹಸಿರು ಇಲ್ಲ ಇಲ್ಲಿ, ಉಸಿರೇ ಎಲ್ಲಾ ಇಲ್ಲಿ ಅಲೆಗಳು ಇಲ್ಲ ಇಲ್ಲಿ, ಆಸೆಗಳೇ ಎಲ್ಲಾ ಇಲ್ಲಿ ನಾಳೆ ಅನ್ನೋ ಮಾತೇ ಇಲ್ಲ ಈ ಲೋಕದಲ್ಲಿ ಕೇಳೆಲೇ ನನ್ನಾಣೆ ಕೇಳೆ ನನ್ನ ಪ್ರಾಣವೇ, ನಂಗೆ ಬೇರೆ ಯಾರಿಲ್ಲವೇ ನಿನ್ನಾಣೆ ಕೇಳೆ ನನ್ನ ಪ್ರಾಣವೇ, ಬೇರೆ ಯಾರೂ ಬೇಕಿಲ್ಲವೇ ಸೂರ್ಯನಿಲ್ಲದ ಲೋಕ ಇದು, ಚಂದ್ರನಿಲ್ಲದ ಲೋಕ ಇದು ಸಮಯ ತಿರುಗದ ಲೋಕ ಇದು, ವೇಳೆ ಕಳೆಯದ ಲೋಕ ಇದು ಒಂದೇ ಒಂದು ಕಥೆ ಇಲ್ಲಿ, ನನ್ನ ನಿನ್ನ ಕಥೆ ಇಲ್ಲಿ ಒಂದೇ ಒಂದು ಸಾಲು ಇಲ್ಲಿ, ಪ್ರೇಮಕೆ ಸಾವು ಎಲ್ಲಿ ಏಳು ಜನ್ಮ ಒಂದೇ ದಿನ ಈ ಲೋಕದಲ್ಲಿ ಕೇಳೆಲೇ ನನ್ನಾಣೆ ಕೇಳೆ

Song: Banna bannada loka (ಬಣ್ಣ ಬಣ್ಣದಾ ಲೋಕ), Movie: Ekangi (ಏಕಾಂಗಿ)

ಹಾಡು: ಬಣ್ಣ ಬಣ್ಣದಾ ಲೋಕ ರಚನೆ: ವಿ. ರವಿಚಂದ್ರನ್‌ ಸಂಗೀತ: ವಿ. ರವಿಚಂದ್ರನ್‌ ಗಾಯನ: ಶಂಕರ್‌ ಮಹಾದೇವನ್‌ ಚಲನಚಿತ್ರ: ಏಕಾಂಗಿ ಬಣ್ಣ ಬಣ್ಣದಾ ಲೋಕ ಬಣ್ಣಿಸಲು ಸಾಲದು ಈ ಸಾಲೂ ಬಣ್ಣ ಬಣ್ಣದಾ ಲೋಕ ಬಣ್ಣಿಸಲು ಸಾಲದು ಈ ಸಾಲು(೨) ಪ್ರೇಮ ಕನಸಾಯ್ತಲ್ಲ, ಬಣ್ಣ ಮಾಸಿ ಹೋಯ್ತಲ್ಲ, ಎಲ್ಲ ಮೋಸವಾಯಿತಲ್ಲ ಏಕಾಂಗಿ ನಾನಮ್ಮ, ಪ್ರೇಮಾಂಗಿ ನಾನಮ್ಮ, ಅಪ್ಪ ಅಮ್ಮ ಇಲ್ಲಮ್ಮ, ನಿನ್‌ ಬಿಟ್ರೆ ನನಗ್ಯಾರಮ್ಮ ಬಣ್ಣ ಬಣ್ಣದಾ ಲೋಕ ಬಣ್ಣಿಸಲು ಸಾಲದು ಈ ಸಾಲು ಹೇ, ಕನಸು ಮುಗಿದೋಯ್ತಾ? ಮನಸಲ್ಲೇ ಎಲ್ಲಾ ನಡೆದೋಯ್ತು, ಮನಸಲ್ಲೇ ಮುಗಿದೋಯ್ತು ಹೇ ಚಿಟ್ಟೆ ಹಾರೋಯ್ತಾ? ಚಿಟ್ಟೆಯ ಬಣ್ಣ ನಾ ನೋಡಿಲ್ಲ, ಹೆಣ್ಣಿನ ಬಣ್ಣ ನಾ ಕಂಡಿಲ್ಲ ಹಾರಿ ಹೋದ ಚಿಟ್ಟಯೆ ನಿನ್ನ ಮನಸಲಿ ಏನಿತ್ತೇ? ಮನಸಲ್ಲಿ ನಾನಿಲ್ವ? ನಿನಗೆ ಮನಸೇ ಇಲ್ವಾ? ಮೋಸ ಮಾಡೋಕೆ ನಿಂಗೆ ಬೇರೆ ಯಾರೂ ಸಿಗಲಿಲ್ವಾ? ಏಕಾಂಗಿ ನಾನಮ್ಮ, ಪ್ರೇಮಾಂಗಿ ನಾನಮ್ಮ, ಅಪ್ಪ ಅಮ್ಮ ಇಲ್ಲಮ್ಮ, ನಿನ್‌ ಬಿಟ್ರೆ ನನಗ್ಯಾರಮ್ಮ? ಬಣ್ಣ ಬಣ್ಣದಾ ಲೋಕ ಬಣ್ಣಿಸಲು ಸಾಲದು ಈ ಸಾಲು ಹೇ, ಪ್ರೀತಿ ಸತ್ತೋಯ್ತಾ? ಸಾಧ್ಯ ಇಲ್ಲ ಅಸಾಧ್ಯ ಎಲ್ಲಾ, ಸಾಯೋದಿಲ್ಲ ಈ ಪ್ರೀತಿ ಹೇ, ಲೋಕ ನಿಂತೋಯ್ತಾ? ಸೂರ್ಯ ಯಾಕೆ, ಚಂದ್ರ ಯಾಕೆ? ನೀನೇ ನನ್ನಾಕೆ ಹಾರಿ ಹೋದ ಚಿಟ್ಟಯೆ ನಿನ್ನ ಮನಸಲಿ ಏನಿತ್ತೇ? ಮನಸಲ್ಲಿ ನಾನಿಲ್ವ? ನಿನಗೆ ಮನಸೇ ಇಲ್ವಾ? ಮೋಸ ಮಾಡೋಕೆ ನಿಂಗೆ

Song: Nee ekangiyaagamma (ನೀ ಏಕಾಂಗಿಯಾಗಮ್ಮ), Movie: Ekangi (ಏಕಾಂಗಿ)

ಹಾಡು:ನೀ ಏಕಾಂಗಿಯಾಗಮ್ಮ ರಚನೆ: ವಿ. ರವಿಚಂದ್ರನ್‌ ಸಂಗೀತ: ವಿ. ರವಿಚಂದ್ರನ್‌ ಗಾಯನ: ಮಧು ಬಾಲಕೃಷ್ಣ ಚಲನಚಿತ್ರ: ಏಕಾಂಗಿ ನೀ ಏಕಾಂಗಿಯಾಗಮ್ಮ ನೀ ಪ್ರೇಮಾಂಗಿಯಾಗಮ್ಮ ನಿನ್ನ ನೀನು ಪ್ರೀತಿಸದೆ, ಕಾಣೋದು ಹೇಗೆ ಈ ಲೋಕಾನಾ ನಿನ್ನ ನೀನು ಅರಿಯದೆ, ತಿಳಿಯೋದು ಹೇಗೆ ಈ ಲೋಕಾನಾ ಲೋಕವೆ ನಿನ್ನೊಳಗೆ, ಏ, ನಿಸರ್ಗವೆ ನಿನ್ನೊಳಗೆ ಏ ಏಕಾಂತವೇ ಓ ಸ್ವರ್ಗವೇ ನೀ ಏಕಾಂಗಿಯಾಗಮ್ಮ ನೀ ಪ್ರೇಮಾಂಗಿಯಾಗಮ್ಮ ಕಣ್ಣು ಅರಳೋದು ಅರಳೊ ಹೂವಿನಾ, ಗುರುತಿಗೆ ಉಸಿರು ಆಡೋದು, ನಾಡಿ ನುುಡಿಯೋದು ಸೂರ್ಯನ ಗುರುತಿಗೆ ಹೃದಯವೇ ವಿಶಾಲವಾದ ಆಕಾಶವೇ ಲೋಕವೆ ನಿನ್ನೊಳಗೆ, ಏ, ಸೌಂದರ್ಯವೆ ನಿನ್ನೊಳಗೆ ಏ ಏಕಾಂತವೇ ಓ ಸ್ವರ್ಗವೇ ನೀ ಏಕಾಂಗಿಯಾಗಮ್ಮ ನೀ ಪ್ರೇಮಾಂಗಿಯಾಗಮ್ಮ ಚಂದ್ರ ಮೂಡೋದು, ತಾರೆ ಮಿನುಗೋದು ನಗುವಿನಾ ಗುರುತಿಗೆ ಹಗಲು ಇರುಳು ಮೂಡೋದು, ಹುಟ್ಟು-ಸಾವಿನ ಗುರುತಿಗೆ ಕರಗುವಾ, ಮೋಡವೇ ಈ ಮನಸೂ ಲೋಕವೆ ನಿನ್ನೊಳಗೆ, ಏ, ನಿನ್ನ ನೆರಳು ನಿನ್ನೊಳಗೆ ಏ ಏಕಾಂತವೇ ಓ ಸ್ವರ್ಗವೇ

100 th post. Song: Yaaru tiliyaru ninna (ಯಾರು ತಿಳಿಯರು ನಿನ್ನ), Movie: Babruvahana (ಬಬ್ರುವಾಹನ)

ಹಾಡು: ಯಾರು ತಿಳಿಯರು ನಿನ್ನ ರಚನೆ: ಹುಣಸೂರು ಕೃಷ್ಣಮೂರ್ತಿ ಸಂಗೀತ: ಟಿ.ಜಿ. ಲಿಂಗಪ್ಪ ಗಾಯನ: ಪಿ. ಬಿ. ಶ್ರೀನಿವಾಸ್.‌ ಡಾ. ರಾಜಕುಮಾರ್ ಚಲನಚಿತ್ರ: ಬಬ್ರುವಾಹನ ಬಬ್ರುವಾಹನ(ಬ), ಅರ್ಜುನ (ಅ) ಬ: ಯಾರು ತಿಳಿಯರು ನಿನ್ನ ಭುಜಬಲದ ಪರಾಕ್ರಮ ಸಮರದೋಳ್‌ ಆರ್ಜಿಸಿದ, ಆ ನಿನ್ನ ವಿಜಯಗಳ ಮರ್ಮ ಎಲ್ಲದಕು ಕಾರಣನು ಶ್ರೀಕೃಷ್ಣ ಪರಮಾತ್ಮ ಬ: ಹಗಲಿರುಳು ನೆರಳಂತೆ, ತಲೆಕಾಯ್ದು ಕಾಪಾಡಿ ಜಯವ ತಂದಿತ್ತ ಆ ಯದುನಂದನ ಅವನಿಲ್ಲದೆ ಬಂದ ನೀನು, ತೃಣಕ್ಕೆ ಸಮಾನ ಅ: ಅಸಹಾಯ ಶೂರ, ನಾ, ಅಕ್ಷೀಣ ಬಲನೋ  ಹರನೊಡನೆ ಹೋರಾಡಿ, ಪಾಶುಪಥವಂ ಪಡೆದವನೋ ಆಗ್ರಹದೊಳೆದುರಾಗೊ ಅರಿಗಳ ನಿಗ್ರಹಿಸೊ ವ್ಯಾಘ್ರನಿವನೋ, ಉಗ್ರಪ್ರತಾಪಿ ಬ: ಓ ಹೊಹೊಹೊಹೊ, ಉಗ್ರಪ್ರತಾಪಿ ಸಭೆಯೊಳಗೆ ದ್ರೌಪದಿಯ ಸೀರೆಯನು ಸೆಳೆವಾಗ ಎಲ್ಲಿ ಅಡಗಿತ್ತೋ, ಈ ನಿನ್ನ ಶೌರ್ಯ  ನೂಪುರಂಗಳ ಕಟ್ಟಿ, ನಟಿಸಿ ತಕಥೈ ಎಂದು ನಾಟ್ಯ ಕಲಿಸಿದ ನಪುಂಸಕ ನೀನು ಚಕ್ರವ್ಯೂಹದೆ ನುಗ್ಗಿ ಛಲದಿಂದ ಛೇದಿಸದೆ ಮಗನನ್ನು ಬಲಿಕೊಟ್ಟ ಭ್ರಷ್ಟ ನೀನು ಗಂಡುಗಲಿಗಳ ಗೆಲ್ಲೋ, ಗುಂಡಿಗೆಯು ನಿನಗೆಲ್ಲೋ ಖಂಡಿಸದೆ, ಉಳಿಸುವೆ, ಹೋಗೋ, ಹೋಗೆಲೊ ಶಿಖಂಡಿ ಅ: ಫಡಫಡ ಶಿಖಂಡಿಯೆಂದಡಿಗಡಿಗೆ ನುಡಿಯಬೇಡೆಲೋ ಮೂಢ ಭಂಡರೆದೆ ಗುಂಡಿಗೆಯ ಖಂಡಿಸುತ ರಣಚಂಡಿಗೌತಣವೀವ ಈ ಗಾಂಡೀವಿ ಗಂಡುಗಲಿಗಳ ಗಂಡ, ಉದ್ದಂಡ, ಭೂಮಂಡಲದೊಳಖಂಡ ಕೀರ್ತಿ ಪ್ರಚಂಡ ಬ: ಚಂಡನೋ, ಪ್ರಚಂಡನೋ, ಪುಂಡ

Song: Sagaradha alegu(ಸಾಗರದ ಅಲೆಗೂ), Movie: Rajakumara (ರಾಜಕುಮಾರ)

ಹಾಡು: ಸಾಗರದ ಅಲೆಗೂ ಸಾಹಿತ್ಯ: ಗೌಸ್‌ ಪೀರ್ ಸಂಗೀತ:‌ ವಿ. ಹರಿಕೃವ್ಣ ಗಾಯನ: ಸೋನು ನಿಗಂ ಚಲನಚಿತ್ರ: ರಾಜಕುಮಾರ ಸಾಗರದ ಅಲೆಗೂ ದಣಿವು ಪರ್ವತಕೂ ಬೀಳೋ ಭಯವು ಮಳೆಯ ಹನಿಗು ಬಂತು ನೋಡು ದಾಹ ಶಶಿಗೆ ಕಳಚಿ ಹೋಯ್ತು ಖುಷಿಯ ಸ್ನೇಹ ಹಾರಾಡೋ ಮೋಡವಿಂದು, ರೆಕ್ಕೆಗಳ ಮುರಿದುಕೊಂಡು ನಿಂತಿದೆ ಮಂಕಾಗಿ ಸುಮ್ಮನೆ ತಂಗಾಳಿ ಅಂಗಳವು ದಂಗಾಗಿ, ಬೆವರಿರೋ ಸೂಚನೆ ಬೆಂಕಿ ಮಳೆಗೆ ಬೆಂದ ಮೇಲೆ ಹೂವು ಹೇಗೆ ತಾನೆ ಕಾಣಬೇಕು ನಗುವು ಬೇಸರದ ರಾಟೆಯು, ಎದೆಯಲಿ ತಿರುಗಿ ತಿರುಗುವ ಈ ಭೂಮಿಯೇ, ನಿಂತಿದೆ ಕೊರಗಿ ಬದುಕಿನ ಹೊಸರೂಪದ ಪರಿಚಯವಾಗಿ ಬೆಳಕೇ ಕಳೆದ್ಹೋಗಿದೆ ಸೂರ್ಯನು ಮುಳುಗಿ ಎಲ್ಲೇ ನೋಡು, ಹಳೇ ಗುರುತು ಬಾಳೋದ್ಹೇಗೆ, ಎಲ್ಲಾ ಮರೆತು ಬಯಸದೆ ನಾ ಎಲ್ಲ ಅಂದು, ಬಯಸಿದರೂ ಇಲ್ಲ ಇಂದು ಈಜುವುದ್ಹೇಗೆ ಕುದಿಯೋ ನದಿಯನ್ನ ಚೂಪಾದ ಕಲ್ಲಿಂದ ಚೂರಾಯ್ತು, ಕನಸಿನ ದರ್ಪಣ ಕಾಲ ನೀನು ಮಾಯಾ ಇಲ್ಲಾ ನಿನಗೆ ನ್ಯಾಯ ನಂಜು ಒಂದು, ಹೃದಯ ಸವರಿ ಮಂಜು ಕವಿದು, ಮಬ್ಬು ದಾರಿ  ಗೆದ್ದಾಗ ಬೆನ್ನು ತಟ್ಟಿ, ಬಿದ್ದಾಗ ಮೇಲೆ ಎತ್ತಿ ಜೊತೆಯಲಿ ನಿಲ್ಲೋರಿಲ್ಲ ಒಂಟಿ ನಾ ಆಸೆಗಳ ಆಕಾಶ ಪಾತಾಳ, ಮುಟ್ಟಿದೆ ಈ ದಿನ ಸಾಗರದ ಅಲೆಗೂ ದಣಿವು ಬೆಂಕಿ ಮಳೆಗೆ ಬೆಂದ ಮೇಲೆ ಹೂವು ಹೇಗೆ ತಾನೆ ಕಾಣಬೇಕು ನಗುವು

Song: Saviyo saviyu (ಸವಿಯೋ ಸವಿಯು), Movie: Savi savi nenapu (ಸವಿ ಸವಿ ನೆನಪು)

ಹಾಡು: ಸವಿಯೋ ಸವಿಯು ರಚನೆ: ನಾಗತಿಹಳ್ಳಿ ಚಂದ್ರಶೇಖರ್ ಸಂಗೀತ ಆರ್.‌ ಪಿ. ಪಟ್ನಾಯಕ್ ಗಾಯನ: ಸೋನು ನಿಗಮ್‌, ಶ್ರೇಯ ಘೋಶಾಲ್ ಚಲನಚಿತ್ರ: ಸವಿ ಸವಿ ನೆನಪು ‌ ಸವಿಯೋ, ಸವಿಯು, ಒಲವಾ ನೆನಪು ಎದೆಯಾ ನಿಧಿಯೇ ಅನುರಾಗ  ಸವಿಯೋ, ಸವಿಯು, ಒಲವಾ ನೆನಪು ಎದೆಯಾ ನಿಧಿಯೇ ಅನುರಾಗ ಪ್ರತಿಕ್ಷಣದಲಿ, ಪ್ರಾರ್ಥನೆಯಲಿ, ಕಾಡುವೆ ಏತಕೆ ಪ್ರತಿಕ್ಷಣದಲಿ, ಪ್ರಾರ್ಥನೆಯಲಿ, ಕಾಡುವೆ ಏತಕೆ ಸೂರ್ಯನಂತೆ ನಾ ಹೊಳೆವಾಗ ಭೂಮಿಯಂತೆ ನೀ ಬಾ ಭೂಮಿಯಂತೆ ನಾ ಕರೆವಾಗ ಮಳೆಬಿಲ್ಲಂತೆ ನೀ ಬಾ ಸವಿಯೋ, ಸವಿಯು, ಒಲವಾ ನೆನಪು ಎದೆಯಾ ನಿಧಿಯೇ ಅನುರಾಗ  ನೀ ಬರುವ ದಾರಿಯಲ್ಲಿ, ಒಲವೆಂಬ ರಂಗವಲ್ಲಿ ನಿನಗಾಗಿ ಮೂಡಿದೆ ನೋಡು ಬಾ ಹೇ ಹೇ ಹೇ ಒಡಲಾಳ ತಂತು ಸ್ನೇಹ, ಒಡಮೂಡಿ ಬಂತು ಮೋಹ ಕತೆಯಾಗಿ ಕಾಡಿತು ಮೂಡಿತು ಆ ಗದ್ಯಗೊಳದ್ದಿದ ಪದ್ಯದ ಮಧ್ಯದ ಅದ್ಭುತ ಭಾವಾರ್ಥವೇ ನೀ ಗದ್ಯಗೊಳದ್ದಿದ ಪದ್ಯದ ಮಧ್ಯದ ಅದ್ಭುತ ಭಾವಾರ್ಥವೇ ಸವಿಯೋ, ಸವಿಯು, ಒಲವಾ ನೆನಪು ಎದೆಯಾ ನಿಧಿಯೇ ಅನುರಾಗ  ಮರುಭೂಮಿ ಯಾನದಲ್ಲಿ, ಅಮ್ರತದ ಧಾರೆ ಚಲ್ಲಿ ತಂಪಾಯ್ತು ಜೀವಕೆ ಭಾವಕೆ ಹಾ ಹಾ ಹಾ ಮುಂಜಾನೆ ಮಂಜಿನಲ್ಲೂ, ಚುಮುಗುಡುವ ಬೆಳಗಿನಲ್ಲೂ ಬಿಸಿಯಾಯ್ತು ಮೈಯಿಗೂ ಮನಸಿಗೂ  ಹೇ ಹೇ ಏ ನೀ ಬೆಚ್ಚನೆ ಪ್ರೀತೀಯ ಹುಚ್ಚಿನ ಮೆಚ್ಚಿನ ಇಚ್ಛೆಯ ಹೆಣ್ಣಲ್ಲವೇ ನೀ ಬೆಚ್ಚನೆ ಪ್ರೀತೀಯ ಹುಚ್ಚಿನ ಮೆಚ್ಚಿನ ಇಚ್ಛೆಯ ಗಂಡ

Song: Savi savi nenapu (ಸವಿ ಸವಿ ನೆನಪು), Movie: My Autograph (ಮೈ ಆಟೋಗ್ರಾಫ್‌)

ಹಾಡು: ಸವಿ ಸವಿ ನೆನಪು ರಚನೆ: ಕೆ. ಕಲ್ಯಾಣ್‌ ಸಂಗೀತ: ಭಾರದ್ವಾಜ್‌ ಗಾಯನ: ಹರಿಹರನ್‌ ಚಲನಚಿತ್ರ: ಮೈ ಆಟೋಗ್ರಾಫ್‌ ಸವಿ ಸವಿ ನೆನಪು ಸಾವಿರ ನೆನಪು ಸಾವಿರ ಕಾಲಕು ಸವೆಯದ ನೆನಪು ಎದೆಯಾಳದಲಿ ಬಚ್ಚಿಕೊಂಡಿರುವ ಅಚ್ಚಳಿಯದ ನೂರೊಂದು ನೆನಪು ಸವಿ ಸವಿ ನೆನಪು ಸಾವಿರ ನೆನಪು ಸಾವಿರ ಕಾಲಕು ಸವೆಯದ ನೆನಪು ಎದೆಯಾಳದಲಿ ಬಚ್ಚಿಕೊಂಡಿರುವ ಅಚ್ಚಳಿಯದ ನೂರೊಂದು ನೆನಪು ಏನೋ ಒಂದು ತೊರೆದ ಹಾಗೆ ಯಾವುದೊ ಒಂದು ಪಡೆದ ಹಾಗೆ ಅಮ್ಮನ ಮಡಿಲ ಅಪ್ಪಿದ ಹಾಗೆ ಕಣ್ಣಂಚಲ್ಲಿ, ಕಣ್ಣೀರ ನೆನಪು ಸವಿ ಸವಿ ನೆನಪು, ಸವಿ ಸವಿ ನೆನಪು ಸಾವಿರ ನೆನಪು ಮೊದಮೊದಲ್‌ ಹಿಡಿದ ಬಣ್ಣದ ಚಿಟ್ಟೆ ಮೊದಮೊದಲ್‌ ಕದ್ದ ಜಾತ್ರೆಯ ವಾಚು ಮೊದಮೊದಲ್‌ ಸೇದಿದ ಗಣೇಶ ಬೀಡಿ ಮೊದಮೊದಲ್‌ ಕೂಡಿಟ್ಟ ಹುಂಡಿಯ ಕಾಸು ಮೊದಮೊದಲ್‌ ಕಂಡ ಟೂರಿಂಗ್‌ ಸಿನಿಮಾ ಮೊದಮೊದಲ್‌ ಗೆದ್ದ ಕಬಡಿ ಆಟ ಮೊದಮೊದಲಿದ್ದ ಹಳ್ಳಿಯ ಗರಿಮನೆ ಮೊದಮೊದಲ್‌ ತಿಂದ ಕೈ ತುತ್ತೂಟ ಮೊದಮೊದಲಾಡಿದ ಚುಕುಬುಕು ಪಯಣ ಮೊದಮೊದಲಳಿಸಿದ ಗೆಳೆಯನ ಮರಣ ಸವಿ ಸವಿ ನೆನಪು, ಸವಿ ಸವಿ ನೆನಪು ಸಾವಿರ ನೆನಪು ಮೊದಮೊದಲ್‌ ಕಲಿತ ಅರೆಬರೆ ಈಜು ಮೊದಮೊದಲ್‌ ಕೊಂಡ ಹೀರೋ ಸೈಕಲ್‌ ಮೊದಮೊದಲ್‌ ಕಲಿಸಿದ ಕಮಲ ಟೀಚರ್‌ ಮೊದಮೊದಲ್‌ ತಿಂದ ಅಪ್ಪನ ಏಟು ಮೊದಮೊದಲ್‌ ಆದ ಮೊಣಕೈ ಗಾಯ ಮೊದಮೊದಲ್‌ ತೆಗೆಸಿದ ಕಲರ್‌ ಕಲರ್‌ ಫೋಟೋ ಮೊದಮೊದಲಾಗಿ ಚಿಗುರ