Song: Baaluvantha hoove, movie; Aakasmika

ಹಾಡು: ಬಾಳುವಂಥ ಹೂವೇ
ರಚನೆ: ಹಂಸಲೇಖ
ಸಂಗೀತ: ಹಂಸಲೇಖ
ಗಾಯನ: ಡಾ. ರಾಜಕುಮಾರ್‌
ಚಲನಚಿತ್ರ: ಆಕಸ್ಮಿಕ


ಬಾಳುವಂಥ ಹೂವೇ, ಬಾಡುವಾಸೆ ಏಕೆ(೨)
ಹಾಡುವಂಥ ಕೋಗಿಲೆ, ಅಳುವ ಆಸೆ ಏಕೆ
ಕವಲುದಾರಿಯಲ್ಲಿ ಬಾಳು ಸಾಧ್ಯವೇ
ಅವಳಿದೋಣಿಯಲ್ಲಿ ಯಾನ ಯೋಗ್ಯವೇ


ಬಾಳುವಂಥ ಹೂವೇ, ಬಾಡುವಾಸೆ ಏಕೆ
ಹಾಡುವಂಥ ಕೋಗಿಲೆ, ಅಳುವ ಆಸೆ ಏಕೆ.


ಯಾರಿಗಿಲ್ಲ ನೋವು, ಯಾರಿಗಿಲ್ಲ ಸಾವು
ವ್ಯರ್ಥವ್ಯಸನದಿಂದ, ಸಿಹಿಯು ಕೂಡ ಬೇವು
ಬಾಳು ಒಂದು ಸಂತೆ,ಸಂತೆ ತುಂಬ ಚಿಂತೆ
ಮದ್ಯಮದಗಳಿಂದ ಚಿಂತೆ ಬೆಳೆವುದಂತೆ.
ಅಂಕೆ ಇರದ ಮನಸನು, ದಂಡಿಸುವುದು ನ್ಯಾಯ
ಮೂಕ ಮುಗ್ಧ ದೇಹವ, ಹಿಂಸಿಸುವುದು ಹ್ಯೇಯ
ಸಣ್ಣ ಬಿರುಕು ಸಾಲದೇ, ತುಂಬುದೋಣೆ ತಳಸೇರಲು
ಸಣ್ಣ ಅಳುಕು ಸಾಲದೇ, ತುಂಬು ಬದುಕು ಬರಡಾಗಲು


ಬಾಳುವಂಥ ಹೂವೇ, ಬಾಡುವಾಸೆ ಏಕೆ
ಹಾಡುವಂಥ ಕೋಗಿಲೆ, ಅಳುವ ಆಸೆ ಏಕೆ.


ಬಾಳ ಕದನದಲ್ಲಿ, ಭರವಸೆಗಳು ಬೇಕು
ನಾಳೆ ನನ್ನದೆನ್ನುವ, ನಂಬಿಕೆಗಳು ಬೇಕು
ಜೀವರಾಶಿಯಲ್ಲಿ, ಮಾನವರಿಗೆ ಆದ್ಯತೆ
ನಾವೆ ಮೂಢರಾದರೆ, ಜ್ನಾನಕೆಲ್ಲಿ ಪೂಜ್ಯತೆ
ಇಲ್ಲಿ ಈಸಬೇಕು, ಇದ್ದು ಜಯಿಸಬೇಕು
ನಾಗರೀಕರಾದಮೇಲೆ, ಸುಗುಣರಾಗಬೇಕು
ನಿನ್ನ ಹಳದಿ ಕಣ್ಣಲಿ, ಜನರನೇಕೆ ನೀ ನೋಡುವೆ
ಮನದ ಟೊಂಕು ಕಾಣದೇ, ಜಗವನೇಕೆ ನೀ ದೂರುವೆ


ಬಾಳುವಂಥ ಹೂವೇ, ಬಾಡುವಾಸೆ ಏಕೆ
ಹಾಡುವಂಥ ಕೋಗಿಲೆ, ಅಳುವ ಆಸೆ ಏಕೆ
ಕವಲುದಾರಿಯಲ್ಲಿ ಬಾಳು ಸಾಧ್ಯವೇ
ಅವಳಿದೋಣಿಯಲ್ಲಿ ಯಾನ ಯೋಗ್ಯವೇ


ಬಾಳುವಂಥ ಹೂವೇ, ಬಾಡುವಾಸೆ ಏಕೆ
ಹಾಡುವಂಥ ಕೋಗಿಲೆ, ಅಳುವ ಆಸೆ ಏಕೆ

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

Song: Sada ninna kannali (ಸದಾ ನಿನ್ನ ಕಣ್ಣಲಿ), Movie: Bachchan (ಬಚ್ಚನ್-2013)

Song: Elliruve (ಎಲ್ಲಿರುವೆ), Movie: Bayaludaari (ಬಯಲುದಾರಿ)

Song: Ninninda dooragi iralarenu (ನಿನ್ನಿಂದ ದೂರಾಗಿ ಇರಲಾರೆನು), Movie: Siddartha (ಸಿದ್ದಾರ್ಥ)

Song: Preethi neenillade naanu hegirali (ಪ್ರೀತಿ ನೀನಿಲ್ಲದೆ ನಾನು ಹೇಗಿರಲಿ), Movie: Bhaava baamaida (ಭಾವ ಬಾಮೈದ)

Song: Onde ondu Aaseyu (ಒಂದೇ ಒಂದು ಆಸೆಯು), Seetharamu (ಸೀತಾರಾಮು)

Song: Kangalu vandane helide (ಕಂಗಳು ವಂದನೆ ಹೇಳಿದೆ), Movie: Mugiyada kathe (‌ಮುಗುಯದ ಕಥೆ)

Song: Neenu neene illi naanu naane (ನೀನು ನೀನೇ ಇಲ್ಲಿ ನಾನು ನಾನೇ), Movie: Gadibidi ganda (ಗಡಿಬಿಡಿ ಗಂಡ)

Song: Jaaji mallige node (ಜಾಜಿ ಮಲ್ಲಿಗೆ ನೋಡೆ), Movie: Sevanthi sevanthi (ಸೇವಂತಿ ಸೇವಂತಿ)

Song: Kannige kaanuva(ಕಣ್ಣಿಗೆ ಕಾಣುವ ), Movie: Yarivanu(ಯಾರಿವನು)