ಪೋಸ್ಟ್‌ಗಳು

ಜುಲೈ, 2020 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

Song: Serial Chiller (ಸೀರಿಯಲ್‌ ಚಿಲ್ಲರ್), Artist: All OK (ಆಲ್‌ ಓಕೆ) ‌

ಹಾಡು: ಸೀರಿಯಲ್‌ ಚಿಲ್ಲರ್ ರಚನೆ: ಆಲ್‌ ಓಕೆ ಸಂಗೀತ: ಆಲ್‌ ಓಕೆ ಗಾಯನ: ಆಲ್‌ ಓಕೆ ‌ ಲೈಫು ಕೇಳೋ ಪ್ರಶ್ನೆಗೆ, ನಾನು ಮೂಕ ವಿಸ್ಮಿತ ಬ್ಲ್ಯಾಕ್‌ ಅಂಡ್‌ ವೈಟು ಕನಸಿಗೆ, ಬಣ್ಣ ಹಚ್ಚುವ ಕಲಾವಿದ ತೇಲುತಿರುವೆ ನಾ ಸಾಗುತ ದೂರ, ದೂರ ಮರೆಯುತಿರುವೆ ನನ್ನ ನೋವನು, ಈಗ ಬೇಬಿ ಫಕ್‌ ಇಟ್‌,‌ ಲೆಟ್ಸ್‌ ಚಿಲೌಟ್ ಫಕ್‌ ಇಟ್,‌ ಲೆಟ್ಸ್‌ ಚಿಲೌಟ್(೪) ಹಿಂದೇನು, ಮುಂದೇನು, ಅಂತ ನೀ ಯೋಚನೆ ಮಾಡೋದು, ಸಹಜ ನಿನ್‌ತನವ ಕಾಪಾಡ್ಕೊ, ಯಾರನ್ನೂ ಮೆಚ್ಚಿಸಬೇಕಿಲ್ಲ, ಮನುಜ  ನಾವು ತುಂಬಾ ಪ್ರೀತಿ ಮಾಡೋರೇನೆ ನೋವು ಕೊಡೋದು ಕೊಂಚ ಭಾವನೆಗೂ ಬೆಲೆ ಕೊಡದೆ ಇಲ್ಲಿ ಇದ್ದಾಗಲ್ಲ ಹೋದ ಮೇಲೆ ಕೇರು ಮಾಡೋದು ಬದುಕು ಲೈಫಿನ್‌ ಜೊತೆ ಠೂ ಬಿಡದೆ  ಒನ್‌ ಸ್ಟೆಪ್‌ ಲೆಫ್ಟ್‌, ಒನ್‌ ಸ್ಟೆಪ್‌ ರೈಟ್ ‌ ಕಣ್ಣ ಬಿಟ್ಟು ನೋಡು ಮಗ ಜಗ ಫುಲ್ಲು ಬ್ರೈಟ್‌ ಭೂಮಿ ಸುತ್ತಬೇಕು ನೀನು, ಕೋಶ ಓದಬೇಕು ಆದ್ರೆ ಅದಕೂ ಮುಂಚೆ ನಿನ್ನ ಫ್ಲೈಟು ಏರಬೇಕು ಹೈ  ನೀ ರೈಟ್‌ ನೀ‌ ಬ್ರೈಟ್, ನಿನ್ನ ಕಣ್ಣುಗಳು ಅರಳಿವೆ ಟಾಕ್ಸಿಕ್‌ ಜನರಿಂದ ಕೋಪವು ಕೆರಳಿದೆ ಹೇಳಬೇಡ ಕಷ್ಟಕೆ, ವೈ ಮಿ? ವೈ ಮಿ? ಫೇಸ್‌ ಮಾಡಿ ಹೇಳು ಕಮ್‌ ಅಂಡ್‌ ಟ್ರೈ ಮಿ ಟ್ರೈ ಮಿ ಗಾಳಿ ಫುಲ್ಲು ಗ್ರೀನಿ, ಮೂಡ್‌ ಫುಲ್ಲು ಡ್ರೀಮಿ ನೋಡಿ ತಿಕ ಉರ್ಕೊಬೇಕು, ದೆ ಕೆನ್‌ ನೆವರ್‌ ಸ್ಟಾಪ್‌ ಮಿ ಈ ಕಾಡಿಗೆ ನಾನು ಒಂಟಿ ಸಲಗ ನೊಂದ ಎಲ್ಲ ಜೀವವಿಲ್ಲಿ ನನ್ನ ಬಳಗ ವೈಬ್‌ ಈಸ್‌ ಗುಡ್‌ ಮಗ, ಲೈಫ್‌ಸ್ಟೈಲ್‌ ಟಾಪ್‌-ಎಂಡ್ ‌ ಟ್ವೆಂಟಿ-ಫೋರ್‌ ತ್ರೀ ಸ

Song: Jagave ondu ranaranga (ಜಗವೆ ಒಂದು ರಣರಂಗ), Movie: Ranaranga (ರಣರಂಗ)

ಹಾಡು: ಜಗವೆ ಒಂದು ರಣರಂಗ ರಚನೆ: ಹಂಸಲೇಖ ಸಂಗೀತ: ಹಂಸಲೇಖ ಗಾಯನ: ಡಾ. ರಾಜ್‌ಕುಮಾರ್‌ ಚಲನಚಿತ್ರ: ರಣರಂಗ ಜಗವೇ ಒಂದು ರಣರಂಗ ಧೈರ್ಯ, ಇರಲಿ ನಿನ್ನ ಸಂಗ  ಬಾರೋ, ಬಾರೊ ನನ್ನ ರಾಜ ನಿನಗೆ ನೀನೆ ಮಹಾರಾಜ  ಹಿಡಿಯೋ, ಆತ್ಮಬಲದಸ್ತ್ರ ಅದುವೆ, ಜಯದ ಮಹಾಮಂತ್ರ ನಿನ್ನ ದಾರಿಯಲ್ಲಿ, ಎಲ್ಲೂ ಸೋಲೇ ಇಲ್ಲ ಬಾಳ ಯುದ್ಧದಲ್ಲಿ ನಿನ್ನ ಗೆಲ್ಲೋರಿಲ್ಲ ಛಲವೇ, ಬಲವೋ, ಮುಂದೆ ನುಗ್ಗಿ ನುಗ್ಗಿ ಬಾ ಜಗವೇ ಒಂದು ರಣರಂಗ ಧೈರ್ಯ, ಇರಲಿ ನಿನ್ನ ಸಂಗ  ಬಾರೋ, ಬಾರೊ ನನ್ನ ರಾಜ ತಿರುಗೋ ಭೂಮಿಯಲ್ಲಿ, ನಡೆವ ಬಾಳಿನಲ್ಲಿ ಏನೂ ನಿಲ್ಲದಮ್ಮ ರಾಜ ಜನನ ಎಂಬುದಿಲ್ಲಿ ಮರಣ ಎಂಬುದನ್ನ ಎಂದೂ ಗೆಲ್ಲದಮ್ಮ ರಾಜ ಜನ ಇರುವ ಗೋಲವೋ ಇದು ದಿನ ಕಳೆವ ಜಾಲವೋ ಇದು ಜಯ ಭಯದ ಚಿಂತೆ ಮಾಡದೆ ಸೆಣಸಾಡೋ ರಂಗವೋ ಇದು ಇಲ್ಲಿ ದಾನವರ ಕೆಟ್ಟ ಮಾಯವಿದೆ ಇಲ್ಲಿ ಮಾನವರ ಸುಟ್ಟ ಗಾಯವಿದೆ ಇದ್ದರೆ ಗೆದ್ದರೆ ನ್ಯಾಯವನ್ನು ಉಳಿಸು ಬಾ ಜಗವೇ ಒಂದು ರಣರಂಗ ಧೈರ್ಯ, ಇರಲಿ ನಿನ್ನ ಸಂಗ  ಬಾರೋ, ಬಾರೊ ನನ್ನ ರಾಜ ದೇಹೀ ಎನ್ನುವಾಗ ನಿದ್ದೆ ಮಾಡುವಾಗ  ಕತ್ತಿ ಎತ್ತಬೇಡ ರಾಜ ಶತ್ರು ಬೀಳುವಾಗ ಯುದ್ಧ ಮಾಡುವಾಗ ಕರುಣೆ ಕಟ್ಟಿ ಇಡು ರಾಜ ಭೂಮೀಲಿ ಹುಟ್ಟಿ ಬಂದರೆ ಆ ಋಣವ ಕಟ್ಟಬೇಡವೇ ಅನ್ಯಾಯ ಗೆಲ್ಲುತಿದ್ದರೆ ಸಿಡಿದೆದ್ದು ನಿಲ್ಲಬೇಡವೇ ಇಲ್ಲಿ ಕ್ರೂರತನ ಅಟ್ಟದಲ್ಲಿ ಇದೆ ನಿನ್ನ ಜಾಣತನ ಮೆಟ್ಟುವಲ್ಲಿ ಇದೆ ಮೆಟ್ಟು ಬಾ, ಅಟ್ಟು ಬಾ, ದಿಟ್ಟ ಹೆಜ್ಜೆ ಇಟ್ಟು ಬಾ ಜಗವೇ ಒಂದು ರಣರಂಗ ಧೈರ್ಯ, ಇರಲಿ ನಿನ್ನ ಸಂಗ  ಬಾ

Song: Raghupathi raghava (ರಘುಪತಿ ರಾಘವ), Movie: Gandhinagara (ಗಾಂಧಿನಗರ)

ಹಾಡು: ರಘುಪತಿ ರಾಘವ ರಚನೆ: ಚಿ. ಸದಾಶಿವಯ್ಯ ಸಂಗೀತ: ಸತ್ಯಂ ಗಾಯನ: ಪಿ. ಬಿ. ಶ್ರೀನಿವಾಸ್, ಎಸ್.‌ ಜಾನಕಿ‌ ಚಲನಚಿತ್ರ: ಗಾಂಧಿನಗರ   ರಘುಪತಿ ರಾಘವ ರಾಜಾರಾಮ್‌ ಪತಿತ ಪಾವನ ಸೀತಾರಾಮ್{೨}   ನಿನ್ನಯ ಪಾವನ ಪುಣ್ಯನಾಮ ನೆನೆಯುವ ದಿನವೆ ಶುಭದಿನವು{೨} ನಿನ್ನಯ ಅಮೃತ ನುಡಿಗಳ ಮನದಿ ಸ್ಮರಿಸದ ಕ್ಷಣವೇ ಮಂಗಳವು   ರಘುಪತಿ ರಾಘವ ರಾಜಾರಾಮ್‌ ಪತಿತ ಪಾವನ ಸೀತಾರಾಮ್ ಹೋ ಪತಿತ ಪಾವನ ಸೀತಾರಾಮ್   ಭಾರತ ಮಾತೆಯ ಕೋಟಿ ವರುಷಗಳ ತಪಸ್ಸು ನೀಡಿದ ಫಲ ನೀನು{೨}   ಭಾರತೀಯರ ದಾಸ್ಯ ಹರಿಸಲು ದೇವನು ತಂದ ವರ ನೀನು   ರಘುಪತಿ ರಾಘವ ರಾಜಾರಾಮ್‌ ಪತಿತ ಪಾವನ ಸೀತಾರಾಮ್ ಹೋ ಪತಿತ ಪಾವನ ಸೀತಾರಾಮ್   ದ್ವೇಷ ಅಸೂಯೆ ಭೇದ ಭಾವವ ತೊರೆಯಿರೆಂದು ಉಪದೇಶಿಸಿದೆ{೨}   ಸತ್ಯ ಅಹಿಂಸೆಯ ವ್ರತದ ಮಹಿಮೆಯ ಜಗಕೆಲ್ಲ ನೀ ತೋರಿಸಿದೆ   ರಘುಪತಿ ರಾಘವ ರಾಜಾರಾಮ್‌ ಪತಿತ ಪಾವನ ಸೀತಾರಾಮ್{೨} ಪತಿತ ಪಾವನ ಸೀತಾರಾಮ್(೨)  

Song: Oduva nadi saagarava (ಓಡುವ ನದಿ ಸಾಗರವ), Movie: Bangaarada hoovu (ಬಂಗಾರದ ಹೂವು)

ಹಾಡು:‌ ಓಡುವ ನದಿ ಸಾಗರವ ರಚನೆ: ಚಿ. ಉದಯಶಂಕರ್ ಸಂಗೀತ: ರಾಜನ್-‌ ನಾಗೇಂದ್ರ ಗಾಯನ: ಪಿ. ಬಿ. ಶ್ರೀನಿವಾಸ್‌, ಪಿ. ಸುಶೀಲ ಚಲನಚಿತ್ರ: ಬಂಗಾರದ ಹೂವು     ಓಡುವ ನದಿ ಸಾಗರವ ಬೆರೆಯಲೆಬೇಕು ನಾನು ನೀನು ಎಂದಾದರು ಸೇರಲೆಬೇಕು ಸೇರಿ ಬಾಳಲೆಬೇಕು, ಬಾಳು ಬೆಳಗಲೆಬೇಕು   ಹೃದಯ ಹಗುರಾಯಿತು, ಬದುಕು ಜೇನಾಯಿತು ನಿನ್ನ ವಚನ ಹೊಸಬಾಳಿಗೆ ನಾಂದಿಯಾಯಿತು   ಓಡುವ ನದಿ ಸಾಗರವ ಬೆರೆಯಲೆಬೇಕು ನಾನು ನೀನು ಎಂದಾದರು ಸೇರಲೆಬೇಕು ಸೇರಿ ಬಾಳಲೆಬೇಕು, ಬಾಳು ಬೆಳಗಲೆಬೇಕು     ದೂರ ಬೆಟ್ಟದಲ್ಲಿ ಪುಟ್ಟ ಮನೆಯಿರಬೇಕು ಮನೆಯ ಸುತ್ತ ಹೂವ ರಾಶಿ ಹಾಸಿರಬೇಕು{೨}   ತಂಗಾಳಿ ಜೋಗುಳವ ಹಾಡಲಿಬೇಕು(೨) ಬಂಗಾರದೆ ಹೂವೆ ನೀನು ನಗುತಿರಬೇಕು, ನನ್ನ ಜೊತೆಗಿರಬೇಕು     ಓಡುವ ನದಿ ಸಾಗರವ ಬೆರೆಯಲೆಬೇಕು ನಾನು ನೀನು ಎಂದಾದರು ಸೇರಲೆಬೇಕು ಸೇರಿ ಬಾಳಲೆಬೇಕು, ಬಾಳು ಬೆಳಗಲೆಬೇಕು   ನನ್ನ ಬಾಳ ನಗುವ ನಿನ್ನ ಮುಖದಿ ಕಾಣುವೆ ಹರುಷದಲ್ಲಿ ದುಖದಲ್ಲಿ ಭಾಗಿಯಾಗುವೆ{೨}   ಎಲ್ಲಿ ಹೋದರಲ್ಲಿ ನಿನ್ನ ನೆರಳಾಗಿರುವೆ(೨) ಬಳ್ಳಿ ಮರವ ಹಬ್ಬಿದಂತೆ ನಿನ್ನೊಡನಿರುವೆ, ಬಯಕೆ ಪೂರೈಸುವೆ   ಓಡುವ ನದಿ ಸಾಗರವ ಬೆರೆಯಲೆಬೇಕು ನಾನು ನೀನು ಎಂದಾದರು ಸೇರಲೆಬೇಕು ಸೇರಿ ಬಾಳಲೆಬೇಕು, ಬಾಳು ಬೆಳಗಲೆಬೇಕು   ಹೃದಯ ಹಗುರಾಯಿತು, ಬದುಕು ಜೇನಾಯಿತು ನಿನ್ನ ವಚನ ಹೊಸಬಾಳಿಗೆ ನಾಂದಿಯಾಯಿತು   ಲಾಲಲಲ ಲಾಲಲಲ, ಲ ಲ ಲ ಲ ಲ ಆ ಹಹಾ, ಲಾಲಲ, ಓ ಹೊಹೊ, ಲಲಲ

Song: Naavaaduva nudiye (ನಾವಾಡುವ ನುಡಿಯೇ), Movie: Gandhada Gudi (ಗಂಧದ ಗುಡಿ)

ಈ ಕನ್ನಡದ ಬ್ಲಾಗ್‌ನ ೧೫೦ ನೇ ಹಾಡಾಗಿ ಕರ್ನಾಟಕ ರತ್ನ ಡಾ. ರಾಜಕುಮಾರರ ಅಭಿನಯದ ೧೫೦ನೇ ಚಿತ್ರ ʼಗಂಧದ ಗುಡಿʼಯ ಸಾರ್ವಕಾಲಿಕ ಶ್ರೇಷ್ಠ ಹಾಡನ್ನು ನಿಮ್ಮ ಜೊತೆ ಹಂಚಿಕೊಳ್ಳುತ್ತಿದ್ದೇವೆ   ಹಾಡು: ನಾವಾಡುವ ನುಡಿಯೇ ರಚನೆ: ಚಿ. ಉದಯಶಂಕರ್ ಸಂಗೀತ: ರಾಜನ್-‌ ನಾಗೇಂದ್ರ ಗಾಯನ:‌ ಪಿ. ಬಿ. ಶ್ರೀನಿವಾಸ್ ಚಲನಚಿತ್ರ: ಗಂಧದ ಗುಡಿ ಆ ಆಹಾ ಆಹಾ ಆಹಹಾ, ಓಹೊಹೋ ಓಹೊಹೊಹೊಹೋ ನಾವಾಡುವ ನುಡಿಯೇ ಕನ್ನಡ ನುಡಿ, ಚಿನ್ನದ ನುಡಿ, ಸಿರಿಗನ್ನಡ ನುಡಿ ನಾವಿರುವ ತಾಣವೆ ಗಂಧದ ಗುಡಿ,  ಅಂದದ ಗುಡಿ, ಚೆಂದದಗುಡಿ ನಾವಾಡುವ ನುಡಿಯೇ ಕನ್ನಡ ನುಡಿ,  ನಾವಿರುವ ತಾಣವೆ ಗಂಧದ ಗುಡಿ ಅಂದದ ಗುಡಿ, ಗಂಧದ ಗುಡಿ, ಚೆಂದದ ಗುಡಿ, ಶ್ರೀಗಂಧದಗುಡಿ ಆಹಹಾ ಆಹಹಾ ಆಹಹಾ, ಆಹಹಾ ಆಹಹಾ ಆಹಹಾ   ಹಸುರಿನ ಬನಸಿರಿಗೇ ಒಲಿದು, ಸೌಂದರ್ಯ ಸರಸ್ವತಿ ಧರೆಗಿಳಿದು ಆಹಹಾ ಓಹೊಹೋ, ಹಾ ಆ,  ಓಓ ಹರಿಯುವ ನದಿಯಲಿ ಈಜಾಡಿ, ಹೂಬನದಲಿ ನಲಿಯುತ ಓಲಾಡಿ ಚೆಲುವಿನ ಬಲೆಯ ಬೀಸಿದಳು, ಈ ಗಂಧದ ಗುಡಿಯಲಿ ನೆಲೆಸಿದಳು ಇದು ಯಾರ ತಪಸಿನ ಫಲವೋ! ಈ ಕಂಗಳು ಮಾಡಿದ ಪುಣ್ಯವೋ! ಓ ಹೊ ಹೋ, ಹಾಆ   ನಾವಿರುವ ತಾಣವೆಗಂಧದ ಗುಡಿ   ಹಾ ಅಹಾ ಅಹಾ, ಆ ಆ ಆ ಅ ಅ, ಆ ಹ ಹ ಆ ಆ   ಚಿಮ್ಮುತ ಓಡಿವೆ ಜಿಂಕೆಗಳು, ಕುಣಿದಾಡುತ ನಲಿದಿವೆ ನವಿಲುಗಳು ಆಹಹಹಹಾ, ಮುಗಿಲನು ಚುಂಬಿಸುವಾಸೆಯಲಿ, ತೂಗಾಡುತ ನಿಂತ ಮರಗಳಲಿ ಹಾಡುತಿರೆ ಬಾನಾಡಿಗಳು, ಎದೆಯಲ್ಲಿ ಸಂತಸದ ಹೊನಲು ಇದು ವನ್ಯ ಮೃಗಗಳ ಲೋಕವೋ!  ಈ ಭೂಮಿಗೆ ಇಳಿದ ನಾಕವೋ! ಆಹಹಾ,

Song: The Bengaluru Song (ದ ಬೆಂಗಳೂರು ಸಾಂಗ್), Movie: French Biriyani (ಫ್ರೆಂಚ್‌ ಬಿರಿಯಾನಿ)

ಹಾಡು: ದ ಬೆಂಗಳೂರು ಸಾಂಗ್‌ ರಚನೆ: ವಾಸುಕಿ ವೈಭವ್‌, ಅವಿನಾಶ್.‌ ಬಿ ಸಂಗೀತ: ವಾಸುಕಿ ವೈಭವ್ ಗಾಯನ:‌ ಅದಿತಿ ಸಾಗರ್, ಮಾಧುರಿ, ವಾಸುಕಿ, ಗೋಕುಲ್‌, ಭರತ್ ಚಲನಚಿತ್ರ: ಫ್ರೆಂಚ್‌ ಬಿರಿಯಾನಿ ಅತಿಥಿ ದೇವೋಭವ, ಅತಿಥಿ ದೇವೋಭವ (೨) ನಮ ನಮ ನಮಸ್ತೆ, ಏನಿದು ಅವಸ್ಥೆ ಬೇರೆ ಭಾಷೆ ಆಡೋ ಬಾಯಿ, ಆದರು ಕನ್ನಡವೇ ನಮ್‌ ತಾಯಿ ಮನಸು ಒಡೆದ ತೆಂಗಿನ್‌ ಕಾಯಿ, ಟ್ರಾಫಿಕ್‌ ಜ್ಯಾಮಲ್‌ ಹೇಗೋ ಸಾಯಿ ನಮ ನಮ ನಮಸ್ತೆ, ಏನಿದು ಅವಸ್ಥೆ ಇದೇನು ಹಂಪಾ? ಇಲ್ಲ ಸಮಾಧಿನಾ? ಯಾಕಿಷ್ಟು ರಂಪ, ಸ್ವಲ್ಪ ಸಮಾಧಾನ ಸಾವ್ಧಾನ ಬೆಂದಕಾಳೂರು, ಜಸ್ಟ್‌ ಹೋಲ್ಡ್‌ ಆನ್‌ ಓ ಬೆಂಗಳೂರು{೨} ಅತಿಥಿ ದೇವೋಭವ, ಅತಿಥಿ ದೇವೋಭವ (೨) ಅರೆ, ಅರೇ ಅವಸರವೇ ಅಪಘಾತಕ್ಕೆ ಕಾರಣ ಪ್ರಾಣ-ಗೀಣ ಹೋದ್ರೆ ಇನ್ನೊಂದ್‌ ಎಲ್ಲಿಂದ ತರಣ ಆಂಬ್ಯುಲನ್ಸ್‌ ಗೆ ಇಲ್ಲ ರೋಡು ವಿ.ಐ.ಪಿ ನೇ ನಮ್ಮ ಗಾಡು ಬೆಳ್ಗೆ ಸಂಜೆ ಸಿಲ್ಕ್‌ ಬೋರ್ಡು ಐ.ಟಿ ಪಾಡು ನಾಯಿ ಪಾಡು ಫ್ಲೈ-ಓವರ್‌ ಅಂಡರ್‌ ಪಾಸು ಮೆಟ್ರೋ ಸತತ ಕಾಮಗಾರಿ ಸ್ವಚ್ಛ ಭಾರತ ಆದ್ರೆ ಮನುಷ್ಯ ಮಾತ್ರ ಅಬ್ಬೇಪಾರಿ ನೆನ್ನೆ ಭಿಕಾರಿ ಇವತ್‌ ಸಾವ್ಕಾರ ಇದೇ ನೋಡಿ ಬೆಂಗಳೂರಿನ ಚಮತ್ಕಾರ ನೀನ್‌ ಕೆಲ್ಸಕ್‌ ಬಂದ್ಯೋ, ಉಳ್ಸಕ್‌ ಬಂದ್ಯೋ ಮೆರಿಯಕ್‌ ಬಂದ್ಯೋ, ತೆರಿಯಕ್‌ ಬಂದ್ಯೋ ಕೂಡಿ ಕಳ್ದು ಗುಣ್ಸಿ ಭಾಗ್ಸಿ, ಕಿತ್ತೇನ್‌ ದಬ್ಬಾಕಕ್‌ ಬಂದ್ಯೋ ಟೈಮಿಲ್ಲ ಯಾರ್ಗೂ ಇಲ್ಲಿ ಕೇಳಕ್‌ ನಿನ್ನ ಸಮಾಚಾರ ಒಳ್ಳೇವ್ನಾಗಿದ್ರೆ ಮಾತ್ರ ಕಾದಿದೆ ಗ್ರಾಚಾರ ಅತಿವೇಗ ತಿಥಿ ಬೇಗ, ಅರ

Song: Dehavendare O manuja(ದೇಹವೆಂದರೆ ಓ ಮನುಜ), Movie: Janumada jodi ( ಜನುಮದ ಜೋಡಿ)

ಹಾಡು: ದೇಹವೆಂದರೆ ಓ ಮನುಜ ರಚನೆ: ವಿ. ಮನೋಹರ್ ಸಂಗೀತ: ವಿ. ಮನೋಹರ್ ಗಾಯನ: ಡಾ. ರಾಜ್‌ಕುಮಾರ್‌ ಚಲನಚಿತ್ರ: ಜನುಮದ ಜೋಡಿ ದೇಹವೆಂದರೆ ಓ ಮನುಜ, ಮೂಳೆ ಮಾಂಸಗಳ ತಡಿಕೆ ನಿಜ ಮನಸು ಆಸೆ ತುಂಬಿದ ಕಣಜ ಮೋಹದಿಂದ ದುಃಖವು ಸಹಜ ನಶ್ವರ ಕಾಯ ನಂಬದಿರಯ್ಯ ಈಶ್ವರನೇ ಗತಿ ಮರೆಯದಿರಯ್ಯ ತ್ಯಾಗದಿ ಪಡೆಯೋ ಸುಖವು ಶಾಶ್ವತ ದೇಹವೆಂದರೆ ಓ ಮನುಜ, ಮೂಳೆ ಮಾಂಸಗಳ ತಡಿಕೆ ನಿಜ ಮನಸು ಆಸೆ ತುಂಬಿದ ಕಣಜ ಮೋಹದಿಂದ ದುಃಖವು ಸಹಜ ಕಟ್ಟಿರುವ ಗುಡಿಯಲ್ಲಿ, ಉಟ್ಟಿರುವ ಮಡಿಯಲ್ಲಿ ಸುಟ್ಟ ಧೂಪ ದೀಪದಿ, ಶಿವನಿಲ್ಲ ಬಗೆಬಗೆ ಮಂತ್ರದಲ್ಲಿ, ಯಾಗ ಯಜ್ಣಗಳಲ್ಲಿ ಜಪ-ತಪ ವ್ರತದಲ್ಲಿ, ಅವನಿಲ್ಲ ಮಣ್ಣ ಕಣಕಣದಲ್ಲು, ಜೀವ ಜೀವಗಳಲ್ಲು ಒಳಗಿನ ಕಣ್ಣಿಗೆ ಕಾಣುವಾತನು ದೇಹವೆಂದರೆ ಓ ಮನುಜ, ಮೂಳೆ ಮಾಂಸಗಳ ತಡಿಕೆ ನಿಜ ಮನಸು ಆಸೆ ತುಂಬಿದ ಕಣಜ ಮೋಹದಿಂದ ದುಃಖವು ಸಹಜ ಮೇಲು-ಕೀಳಿನ ನಡತೆ, ಹಾದಿ ತಪ್ಪಿದ ಜಡತೆ ಕುಲ ವ್ಯಾಕುಲಗಳು ಸರಿಯೇನು ರೋಷ ದ್ವೇಷದ ಉರಿಯು, ಲೋಭ ಮೋಸದ ಪರಿಯು ಸಾಗುವ ದಾರಿಗೆ ಬೆಳಕೇನು ಅನ್ಯರ ಗುಣದಿ ಸನ್ಮತಿ ಹುಡುಕು ಸತ್ಯದ ಪಥವೇ ಬೆಳ್ಳಿ ಬೆಳಕು ಕರುಣೆ ಪ್ರೇಮವೇ ಉಲ್ಲಾಸ, ನಿತ್ಯ ಕಾಯಕವೇ ಕೈಲಾಸ ಚಿತ್ತ ನಿರ್ಮಲದಿ ಸಂತೋಷ, ನೀತಿ ಮಾರ್ಗವೇ ಭವನಾಶ ವೈಭೋಗ ಜೀವನ ತ್ಯಾಗವ ಮಾಡಿ ವೈರಾಗ್ಯ ಯೋಗದ ಸಾಧನೆ ಮಾಡಿ ಕೈವಲ್ಯ ಹೊಂದುವ ಪರಮಸಂಪದ ಕರುಣೆ ಪ್ರೇಮವೇ ಉಲ್ಲಾಸ, ನಿತ್ಯ ಕಾಯಕವೇ ಕೈಲಾಸ ಚಿತ್ತ ನಿರ್ಮಲದಿ ಸಂತೋಷ, ನೀತಿ ಮಾರ್ಗವೇ ಭವನಾಶ

Song: Shiva shiva (ಶಿವ, ಶಿವ) Movie: Purushottama (ಪುರುಷೋತ್ತಮ)

ಹಾಡು: ಶಿವ, ಶಿವ ರಚನೆ: ಹಂಸಲೇಖ ಸಂಗೀತ: ಹಂಸಲೇಖ ಗಾಯನ: ಡಾ. ರಾಜ್‌ಕುಮಾರ್‌ ಚಲನಚಿತ್ರ: ಪುರುಷೋತ್ತಮ ಶಿವ, ಶಿವ, ಇವ ಶಿವ(೨) ಸದಾ, ಜಯ, ತೋಳಲ್ಲಿರುವ ಗಂಡು ಶಿವ ನಯ, ಭಯ, ಬಾಳಲ್ಲಿರುವ ಗಂಡು ಶಿವ ಹೇ, ಕನ್ನಡದ ಮಣ್ಣಿನಲ್ಲಿ ಹುಟ್ಟಿರುವ ಹುಟ್ಟಿರುವ ಕನ್ನಡಿಗ ಶಿವ, ಶಿವ, ಇವ ಶಿವ(೨) ಸದಾ, ಜಯ, ತೋಳಲ್ಲಿರುವ ಗಂಡು ಶಿವ ನಯ, ಭಯ, ಬಾಳಲ್ಲಿರುವ ಗಂಡು ಶಿವ ಹೇ, ಕನ್ನಡದ ಮಣ್ಣಿನಲ್ಲಿ ಹುಟ್ಟಿರುವ ಹುಟ್ಟಿರುವ ಕನ್ನಡಿಗ ಶಿವ, ಶಿವ, ಇವ ಶಿವ(೨) ಹಗಲು ರಾತ್ರಿ ದುಡಿದು ದುಡಿದು ದಣಿದು ಬಂದ ಹೃದಯಗಳಿಗೆ ತಂಪನೆರೆವ ಸೇವಕ ಬೆವರ ನೀರ ಹರಿಸಿ ಹರಿಸಿ ಬಳಲಿ ಬಂದ ಮನಸುಗಳಿಗೆ  ಇಂಪನಿಡುವ ಗಾಯಕ ಬಡತನದಲಿ ಬೆರೆಯುವೆ, ಸಿಹಿ ಕಹಿಯಲಿ ಉಳಿಯುವೆ ಶ್ರಮಿಸುವ ರಸಋಷಿಗಳ ಜೊತೆ ಕುಣಿಯುತ ದಿನ ಕಳೆಯುವೆ ದುಡುದು ದುಡುದು ಬಡವರಾದ ಕೆಲಸಗಾರ ಬಂಧುಗಳಿಗೆ ನ್ಯಾಯ ಕೇಳೊ ನಾಯಕ ಕನಸು ಕಂಡು ಕುರುಡರಾಗಿ ಕರುಣೆ ಬಯಸೊ ಕಾರ್ಮಿಕರಿಗೆ ಉಸಿರು ನೀಡೊ ಮಾಂತ್ರಿಕ ಕನಸುಗಳನು ತೆರೆಯುವೆ, ಮನಸುಗಳನು ನಗಿಸುವೆ ಶ್ರಮಿಸುವ ರಸಋಷಿಗಳ ಜೊತೆ ಕುಣಿಯುತ ದಿನ ಕಳೆಯುವೆ ಸದಾ, ಜಯ, ತೋಳಲ್ಲಿರುವ ಗಂಡು ಶಿವ ನಯ, ಭಯ, ಬಾಳಲ್ಲಿರುವ ಗಂಡು ಶಿವ ಹೇ, ಕನ್ನಡದ ಮಣ್ಣಿನಲ್ಲಿ ಹುಟ್ಟಿರುವ ಹುಟ್ಟಿರುವ ಕನ್ನಡಿಗ ಶಿವ, ಶಿವ, ಇವ ಶಿವ(೨) ದಾಸ್ಯ ಹೋಗಿ ಹಸಿವು ಬಂತು ನಮ್ಮ ನಾಡ ಬಡವನೀಗ ಒಂದು ಯಂತ್ರ ಮಾನವ ಕೆಲಸ ಹೆಚ್ಚು ಕೂಲಿ ಕಡಿಮೆ ನಮ್ಮ ನಾಡ ಧನಿಕನೀಗ ಒಬ್ಬ ಕ್ರೂರ ದಾನವ ಬರಿ ಬವಣೆಯ ಬೆ

Song: Hey dinakara (ಹೇ ದಿನಕರ), Movie: Om (ಓಂ)

ಹಾಡು: ಹೇ ದಿನಕರ ರಚನೆ: ಹಂಸಲೇಖ ಸಂಗೀತ: ಹಂಸಲೇಖ ಗಾಯನ: ಡಾ. ರಾಜ್‌ಕುಮಾರ್‌ ಚಲನಚಿತ್ರ: ಓಂ ಓಂ, ಓಂ ಓಂ ಬ್ರಹ್ಮಾನಂದ ಓಂಕಾರ ಆತ್ಮಾನಂದ ಸಾಕಾರ ಓಂ ವೇದಾಂತರ್ಯ ಝೇಂಕಾರ ಆಧ್ಯಾತ್ಮಾಭಿ ಮಧುಸಾರ  ಹೇ ದಿನಕರ, ಶುಭಕರ, ಧರೆಗೆ ಬಾ ಈ ಧರಣಿಯ ದೇಗುಲ ಬೆಳಗು ಬಾ ನೀಗಿಸು ಬಾಳಿನ ಅಹಂ ಅಹಂ, ಅಹಂ, ಅಹಂ, ಅಹಂ ಮಾನಸ ಮಂದಿರ ತುಂಬು ಓಂಕಾರ ನಾದವೋ ಓಂ ಬ್ರಹ್ಮಾನಂದ ಓಂಕಾರ ಆತ್ಮಾನಂದ ಸಾಕಾರ ಓಂ ವೇದಾಂತರ್ಯ ಝೇಂಕಾರ ಆಧ್ಯಾತ್ಮಾಭಿ ಮಧುಸಾರ  ನಗುವ ಮನಸೇ ಸಾಕು ನಮಗೆ ಹಗಲುಗನಸೇ ಬೇಡ ಮನೆಯ ತುಂಬ ಪ್ರೀತಿ ಸಾಕು ಬೆಳ್ಳಿ ಚಿನ್ನ ಬೇಡ ತಂದೆ ತಾಯೇ ದೈವ, ಗುರುವೆ ನಮ್ಮ ಜೀವ ಎಂಬ ದಿವ್ಯ ಮಂತ್ರ, ನಮ್ಮ ಹೃದಯ ತುಂಬಿಸು ಹೇ ದಿನಕರ, ಶುಭಕರ, ಧರೆಗೆ ಬಾ ಈ ಧರಣಿಯ ದೇಗುಲ ಬೆಳಗು ಬಾ ಸತ್ಯ ಹೇಳೋ ಕನ್ನಡಿಯಂತೆ ಅಂತರಂಗ ಮಾಡು ದಯೆ ತೋರೋ ಧರಣಿಯಂತ ಮನೋಧರ್ಮ ನೀಡು ನೊಂದ ಎಲ್ಲ ಜೀವ, ನನ್ನದೆಂಬ ಭಾವ ಬಾಳಿನಲ್ಲಿ ತುಂಬೋ ವಿದ್ಯ ವಿನಯ ಕರುಣಿಸೋ ಹೇ ದಿನಕರ, ಶುಭಕರ, ಧರೆಗೆ ಬಾ ಈ ಧರಣಿಯ ದೇಗುಲ ಬೆಳಗು ಬಾ ನೀಗಿಸು ಬಾಳಿನ ಅಹಂ ಅಹಂ, ಅಹಂ, ಅಹಂ, ಅಹಂ ಮಾನಸ ಮಂದಿರ ತುಂಬು ಓಂಕಾರ ನಾದವೋ ಓಂ ಬ್ರಹ್ಮಾನಂದ ಓಂಕಾರ ಆತ್ಮಾನಂದ ಸಾಕಾರ ಓಂ ವೇದಾಂತರ್ಯ ಝೇಂಕಾರ ಆಧ್ಯಾತ್ಮಾಭಿ ಮಧುಸಾರ 

Song: Modada olage( ಮೋಡದ ಒಳಗೆ) , Movie: Payana(ಪಯಣ)

ಇಮೇಜ್

Song: Arere avala naguva (ಅರೆರೆ ಅವಳ ನಗುವ), Song: Sa. hi. pra. sha (ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ)

ಹಾಡು: ಅರೆರೆ ಅವಳ ನಗುವ ರಚನೆ: ತ್ರಿಲೋಕ್‌ ತ್ರಿವಿಕ್ರಮ ಗಾಯನ: ವಾಸುಕಿ ವೈಭವ್‌ ಸಂಗೀತ: ವಾಸುಕಿ ವೈಭವ್‌ ಚಲನಚಿತ್ರ: ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ   ಅರೆರೆ ಅವಳ ನಗುವ, ನೋಡಿ ಮರೆತೆ ಜಗವ ಹಗಲು ಗನಸು ಮುಗಿಸಿ, ಸಂಜೆ ಮೇಲೆ ಸಿಗುವ   ಮುಸ್ಸಂಜೆಗೆ ಹಾಡಾಗಲು ತಂಗಾಳಿಯ ತಯಾರಿ ಸದ್ದಿಲ್ಲದೆ ಆ ಸೂರ್ಯನು ಬಾನಾಚೆಗೆ ಪರಾರಿ   ಅವಳೆದುರು ಬಂದಾಗ, ಎದೆಬಡಿತ ಜೋರಾಗಿ ಕೂಗೊ, ಕೋಗಿಲೆ, ಮನದ ಮಾಮರಕೆ ಮರಳಿದೆ ಮೈಕು ತರುವುದನೆ ಮರೆತಿದೆ   ಹಾಡು ಹಗಲೇನೆ ಬಾನಲಿ ಮೂನು ದಾರಿಯ ತಪ್ಪಿದೆ ಈ ಹರೆಯವು ಬಳಿ ಬಂದರೆ ಬೋರ್ವೆಲ್ಲಿಗೂ ಬಾಯಾರಿಕೆ ಈ ವಯಸಿದು ಕನಸೆಲ್ಲವ ನನಸಾಗಿಸೊ ಕೈಗಾರಿಕೆ   ಗಿದ ಮರವಾಗೊ ವರ ದೊರೆತಾಗ ಬೆಟ್ಟ ಬಳಿಕರೆದು ಗುಟ್ಟು ಹೇಳಿದೆ, ಹೊಟ್ಟಯೊಳಗಿಂದ ಚಿಟ್ಟೆ ಹಾರಿದೆ   ಬಿಸಿಲೇರೊ ಟೈಮಲ್ಲಿ, ಬೀಸಿರಲು ತಂಗಾಳಿ ತೇಲೊ, ಮೋಡವು, ಮೂಡು ಬಂದ ಕಡೆ ಓಡಿದೆ ಗಾಳಿ ಮಾತನ್ನೆ ಕೇಳದೆ   ಓಡೊ ಕಾಲದ ಕಾಲಿಗೆ, ಕಾಲು ಗೆಜ್ಜೆಯ ಕಟ್ಟಿದೆ ದಿನ ಶಾಲೆಗೆ ಲೇಟಾದರೂ, ತುಸುನಾಚುತ ತಲೆಬಾಚಿದ ಕೊಳಪೆಟ್ಟಿಗೆ ಏಟಾದರೂ ನಸುನಾಚುತ ಕೈಚಾಚಿದ   ಎಳೆ ಹೃದಯಕ್ಕೆ ಮಳೆ ಸುರಿದಾಗ ಮೀಸೆ ಅಂಚಲ್ಲಿ ಆಸೆ ಚಿಗುರಿದೆ ಬಂಚು ಬಂಚಾಗಿ ಕನಸು ಬಂದಿದೆ ಕಿರುನಗೆಯ ತೇರನ್ನು, ಕಣ್ಣಲ್ಲೆ ಎಳೆವಾಗ ರಾಶಿ, ಕಾಮನೆ, ಎದೆಯ ಬಾಗಿಲಿಗೆ ಬಂದಿದೆ ಏನೂ ಸುಳಿವನ್ನೆ ನೀಡದೆ    

Song: Innunu bekaagide (ಇನ್ನೂನು ಬೇಕಾಗಿದೆ), Movie: Mundina nildana (ಮುಂದಿನ ನಿಲ್ದಾಣ)

ಹಾಡು: ಇನ್ನೂನು ಬೇಕಾಗಿದೆ ರಚನೆ: ಪ್ರಮೋದ್‌ ಮರವಂತೆ ಸಂಗೀತ: ವಾಸುಕಿ ವೈಭವ್‌ ಗಾಯನ: ವಾಶುಕಿ ವೈಭವ್‌ ಚಲನಚಿತ್ರ: ಮುಂದಿನ ನಿಲ್ದಾಣ   ಇನ್ನೂನು ಬೇಕಾಗಿದೆ, ಒಲವು ಇನ್ನೂನು ಬೇಕಾಗಿದೆ(೨) ಸೋಕಿ ನಿನ್ನ ಮೌನ ತಂಗಾಳಿನೂ ಹಾಡಾಗಿದೆ ಇನ್ನೂನು ಹೇಳೋದಿದೆ, ನನಗೆ ಇನ್ನೂನು ಕೇಳೋದಿದೆ(೨)   ಭಾವಗಳ ಬೀಸಣಿಗೆ ಬೀಸೋ ಮಾಯಾವಿ ನೀನು ನಿನ್ನುಸಿರ ಧ್ಯಾನಿಸುವ ತೀರ ಸಾಮಾನ್ಯ ನಾನು   ಆಕಾಶದಲ್ಲಿ ನೀ ದೀಪವಾದೆ ಇರುಳಾಗಿ ನಾನು ನೊನಗಾಗಿ ಕಾದೆ ಈ ಮೌನಕೀಗ ಮಾಧುರ್ಯವಾಧೆ ಹೊರತಾಗಿ ನಿನ್ನ ನಾ ಖಾಲಿಯಾದೆ   ಸಿಹಿ, ಕಹಿ, ಏನಾದರೂ ಪ್ರತಿ, ಕ್ಷಣ ಜೊತೆಯಾಗಿರು   ಇನ್ನೂನು ಬೇಕಾಗಿದೆ, ಒಲವು ಇನ್ನೂನು ಬೇಕಾಗಿದೆ(೨) ಸೋಕಿ ನಿನ್ನ ಮೌನ ತಂಗಾಳಿನೂ ಹಾಡಾಗಿದೆ ಇನ್ನೂನು ಹೇಳೋದಿದೆ, ನನಗೆ ಇನ್ನೂನು ಕೇಳೋದಿದೆ(೨)