Song: Kangalu vandane helide (ಕಂಗಳು ವಂದನೆ ಹೇಳಿದೆ), Movie: Mugiyada kathe (‌ಮುಗುಯದ ಕಥೆ)

ಹಾಡು: ಕಂಗಳು ವಂದನೆ ಹೇಳಿದೆ

ರಚನೆ:‌ ಚಿ. ಉದಯಶಂಕರ್

ಸಂಗೀತ:‌ ರಾಜನ್-‌ ನಾಗೇಂದ್ರ

ಗಾಯನ: ಎಸ್.‌ ಜಾನಕಿ, ಎಸ್.‌ ಪಿ. ಬಾಲಸುಬ್ರಹ್ಮಣ್ಯಂ

ಚಲನಚಿತ್ರ:‌ ‌ಮುಗುಯದ ಕಥೆ

 

 

ಕಂಗಳು ವಂದನೆ ಹೇಳಿದೆ, ಹೃದಯವು ತುಂಬಿ ಹಾಡಿದೆ

ಆಡದೆ, ಉಳಿದಿಹ, ಮಾತು ನೂರಿದೆ

 

ಕಂಗಳು ವಂದನೆ ಹೇಳಿದೆ, ಹೃದಯವು ತುಂಬಿ ಹಾಡಿದೆ

ಆಡದೆ, ಉಳಿದಿಹ, ಮಾತು ನೂರಿದೆ

ಜೀವ ಜೀವ ಸೇರಲು ಮಾತು ಏತಕೆ(೨)

ಒಲವಿನ ಕಾವ್ಯಕೆ ಇಂದೇ ಪೀಠಿಕೆ

 

ಕಂಗಳು ವಂದನೆ ಹೇಳಿದೆ, ಹೃದಯವು ತುಂಬಿ ಹಾಡಿದೆ

ಆಡದೆ, ಉಳಿದಿಹ, ಮಾತು ನೂರಿದೆ

 

ಮುಡಿಯ ಜಾರಿದ ಹೂವಿದು, ಮುಗಿಯದ ಕಥೆ ನನ್ನದು

ಈ ಹೂವನು ಮಣ್ಣಿಂದಲಿ ಕಾಪಾಡಿದ ಕೈಗಳಿವು

ಗಂಗೆಗೆ ಕೊಳೆ ಸೋಂಕದು, ಪಾಪದ ಫಲ ಸಲ್ಲದು 

ನಿನ್ನನು ಪಡೆದಂತಹ ಈ ಭಾಗ್ಯವು ನನ್ನದು

 

ಪೂರ್ವದ ಪುಣ್ಯವೋ, ಜನ್ಮದ ಬಂಧವೋ

ನಾನು-ನೀನು, ನೀನು- ನಾನು ಒಂದೇ ಎಂದೆಂದಿಗೂ 

 

ಕಂಗಳು ವಂದನೆ ಹೇಳಿದೆ, ಹೃದಯವು ತುಂಬಿ ಹಾಡಿದೆ

ಆಡದೆ, ಉಳಿದಿಹ, ಮಾತು ನೂರಿದೆ

 

ಬಾಳಿನ ಗುಡಿ ಬೆಳಗಲಿ, ಹರುಷದ ಹೊಳೆ ಹರಿಯಲಿ

ಪ್ರೇಮದ ಈ ನೌಕೆಯು ಸುಖ ತೀರವ ಸೇರಲಿ

ಹೇ ಹೇ...ಆಹಾಹಾ ಆಹಾಹಾ ಆಹಾಹಾ ಆಹಾಹಾ

ಆ ಹಾ...ಆಹಾಹಾ ಆಹಾಹಾ ಆಹಾಹಾ ಆಹಾಹಾ ಆ ಆ ಆ ಆ 

 

ಬಯಕೆಯ ಕುಡಿ ಚಿಗುರಲಿ, ಕನಸಿದು ಕೈಗೂಡಲಿ

ಎಂದಿಗೂ ಪತಿಸೇವೆಯ ಸೌಭಾಗ್ಯವು ಎನಗಿರಲಿ

ಸ್ವರವು ನೀ ಶೃತಿಯು ನಾ, ದೊರೆಯು ನೀ ದಾಸಿ ನಾ

ನಾನು-ನೀನು, ನೀನು- ನಾನು ಒಂದೇ ಎಂದೆಂದಿಗೂ 

 

ಕಂಗಳು ವಂದನೆ ಹೇಳಿದೆ, ಹೃದಯವು ತುಂಬಿ ಹಾಡಿದೆ

ಆಹಹ... ಆಹಹ.. ಆಹಾ ಆಹಹಾ(೨)

 

ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

Song: Sada ninna kannali (ಸದಾ ನಿನ್ನ ಕಣ್ಣಲಿ), Movie: Bachchan (ಬಚ್ಚನ್-2013)

Song: Elliruve (ಎಲ್ಲಿರುವೆ), Movie: Bayaludaari (ಬಯಲುದಾರಿ)

Song: Preethi neenillade naanu hegirali (ಪ್ರೀತಿ ನೀನಿಲ್ಲದೆ ನಾನು ಹೇಗಿರಲಿ), Movie: Bhaava baamaida (ಭಾವ ಬಾಮೈದ)

Song: Ninninda dooragi iralarenu (ನಿನ್ನಿಂದ ದೂರಾಗಿ ಇರಲಾರೆನು), Movie: Siddartha (ಸಿದ್ದಾರ್ಥ)

Song: Onde ondu Aaseyu (ಒಂದೇ ಒಂದು ಆಸೆಯು), Seetharamu (ಸೀತಾರಾಮು)

Song: Neenu neene illi naanu naane (ನೀನು ನೀನೇ ಇಲ್ಲಿ ನಾನು ನಾನೇ), Movie: Gadibidi ganda (ಗಡಿಬಿಡಿ ಗಂಡ)

Song: Jaaji mallige node (ಜಾಜಿ ಮಲ್ಲಿಗೆ ನೋಡೆ), Movie: Sevanthi sevanthi (ಸೇವಂತಿ ಸೇವಂತಿ)

Song: Kannige kaanuva(ಕಣ್ಣಿಗೆ ಕಾಣುವ ), Movie: Yarivanu(ಯಾರಿವನು)