Song: Nanna mele nanageega(ನನ್ನ ಮೇಲೆ ನನಗೀಗ), Movie: Kannadakkagi ondannu otti(ಕನ್ನಡಕ್ಕಾಗಿ ಒಂದನ್ನು ಒತ್ತಿ)

ಹಾಡು: ನನಮೇಲೆ ನನಗೀಗ
ರಚನೆ: ಕುಶಾಲ್‌
ಸಂಗೀತ: ಅರ್ಜುನ್‌ ಜನ್ಯ
ಗಾಯನ: ಸೋನು ನಿಗಮ್‌
ಚಲನಚಿತ್ರ: ಕನ್ನಡಕ್ಕಾಗಿ ಒಂದನ್ನು ಒತ್ತಿ

ನನಮೇಲೆ ನನಗೀಗ ಅನುಮಾನ ಶುರುವಾಗಿದೆ
ಬಡಪಾಯಿ ಎದೆಯಲ್ಲಿ ಒಲವೀಗ ಮನೆಮಾಡಿದೆ

ಸನ್ನೆಯಲ್ಲಿ ಏನೇನೋ ಹೇಳುವಾಗ
ಎಲ್ಲ ಮಾತು ನನ್ನಲ್ಲೆ ಬಾಕಿ ಈಗ

ಸರಿಹೋಗುವ ಮುನ್ಸೂಚನೆ
ಇತ್ತೀಚೆಗೆ ಸುಳಿದಾಡಿದೆ

ನನಮೇಲೆ ನನಗೀಗ ಅನುಮಾನ ಶುರುವಾಗಿದೆ

ಭೇಟಿಯಾದ ಜಾಗ ನಮ್ಮನ್ನೆ ಕಾಯುವಾಗ
ಏಕಾಂತವೀಗ ನನ್ನ ಕಾಡಿದೆ

ಒಂದೇ ಒಂದು ಮಾತು ನೀ ಚಂದವಾಗಿ ಆಡಿ
ನನ್ನ ಧ್ಯಾನವೆಲ್ಲ ಲೂಟಿ ಮಾಡಿದೆ

ಉಸಿರಿನ ಬಿಸಿಯು ತಗುಲಿದ ಮೇಲೆ
ಹುಡುಗನ ಪಾಡು ಹೀಗಾಗಿದೆ

ಪದ ಗೀಚುವ ಬೆರಳೆಲ್ಲವೂ
ಪದವಿಲ್ಲದೆ ಪರದಾಡಿದೆ


ಇನ್ನೇಕೆ ಕಾಲಹರಣ
ದೂರಾನೇ ತುಂಬ ಕಠಿಣ
ಕಣ್ಣಲ್ಲೆ ನೀಡು ಎಲ್ಲಾ ಸೂಚನೆ

ಎಲ್ಲೇ ಹೋದರೂನು, ನೀ ಎಲ್ಲೇ ಬಂದರೂನು
ನನಗೀಗ ನಿನ್ನದೊಂದೇ ಪ್ರಾರ್ಥನೆ

ಜೀವದ ಭಾಷೆ ಹೇಳಲು ನನಗೆ
ಜೀವವೆ ಹೋದ ಹಾಗಾಗಿದೆ

ಅನುರಾಗದ ಅನುವಾದಕೆ
ಸರಿಹೋಗುವ ಪದವೆಲ್ಲಿದೆ

ನನಮೇಲೆ ನನಗೀಗ ಅನುಮಾನ ಶುರುವಾಗಿದೆ

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

Song: Sada ninna kannali (ಸದಾ ನಿನ್ನ ಕಣ್ಣಲಿ), Movie: Bachchan (ಬಚ್ಚನ್-2013)

Song: Elliruve (ಎಲ್ಲಿರುವೆ), Movie: Bayaludaari (ಬಯಲುದಾರಿ)

Song: Preethi neenillade naanu hegirali (ಪ್ರೀತಿ ನೀನಿಲ್ಲದೆ ನಾನು ಹೇಗಿರಲಿ), Movie: Bhaava baamaida (ಭಾವ ಬಾಮೈದ)

Song: Ninninda dooragi iralarenu (ನಿನ್ನಿಂದ ದೂರಾಗಿ ಇರಲಾರೆನು), Movie: Siddartha (ಸಿದ್ದಾರ್ಥ)

Song: Onde ondu Aaseyu (ಒಂದೇ ಒಂದು ಆಸೆಯು), Seetharamu (ಸೀತಾರಾಮು)

Song: Kangalu vandane helide (ಕಂಗಳು ವಂದನೆ ಹೇಳಿದೆ), Movie: Mugiyada kathe (‌ಮುಗುಯದ ಕಥೆ)

Song: Neenu neene illi naanu naane (ನೀನು ನೀನೇ ಇಲ್ಲಿ ನಾನು ನಾನೇ), Movie: Gadibidi ganda (ಗಡಿಬಿಡಿ ಗಂಡ)

Song: Jaaji mallige node (ಜಾಜಿ ಮಲ್ಲಿಗೆ ನೋಡೆ), Movie: Sevanthi sevanthi (ಸೇವಂತಿ ಸೇವಂತಿ)

Song: Kannige kaanuva(ಕಣ್ಣಿಗೆ ಕಾಣುವ ), Movie: Yarivanu(ಯಾರಿವನು)