ಪೋಸ್ಟ್‌ಗಳು

ಅಕ್ಟೋಬರ್, 2020 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

Song: Bhale bhale chendada (ಭಲೆ ಭಲೆ ಚಂದದ), Movie: Amruthavarshini (ಅಮೃತವರ್ಷಿಣಿ)

ಹಾಡು: ಭಲೆ ಭಲೆ ಚಂದದ ರಚನೆ: ಕೆ. ಕಲ್ಯಾಣ್ ಸಂಗೀತ: ದೇವ ಗಾಯನ: ಎಸ್.‌ ಪಿ. ಬಾಲಸುಬ್ರಹ್ಮಣ್ಯಂ ಚಲನಚಿತ್ರ: ಅಮೃತವರ್ಷಿಣಿ   ಎಲ್ಲಾ ಶಿಲ್ಪಗಳಿಗೂ, ಒಂದೊಂದು ಹಿಂದಿನ ಕಥೆ ಇದೆ  ನನ್ನ ಶಿಲ್ಪಚೆಲುವೆ, ಇವಳ ಮುಂದೆನ್ನ ಬದುಕಿದೆ   ಭಲೆ ಭಲೆ ಚಂದದ ಚಂದುಳ್ಳಿ ಹೆಣ್ಣು ನೀನು ಮಿಂಚು ಕೂಡ ನಾಚುವ ಮಿಂಚಿನ ಬಳ್ಳಿ ನೀನು{೨} ನಿನ್ನ ಚಂದ ಹೊಗಳಲು, ಪದಪುಂಜ ಸಾಲದು ನಿನ್ನ ಕಂಗಳ ಕಾಂತಿಗಳಿಂದನೇ ತಾನೇನೆ ಊರೆಲ್ಲ ಹೊಂಬೆಳಕು ನೀನು ಹೆಜ್ಜೆಯ ಇಟ್ಟಲ್ಲಲ್ಲೆಲ್ಲಾನು ಕಾಲಡಿ ಹೂವಾಗಿ ಬರಬೇಕು   ಭಲೆ ಭಲೆ ಚಂದದ ಚಂದುಳ್ಳಿ ಹೆಣ್ಣು ನೀನು ಮಿಂಚು ಕೂಡ ನಾಚುವ ಮಿಂಚಿನ ಬಳ್ಳಿ ನೀನು   ತಂಪು ತಂಗಾಳಿಯು ತಂದಾನ ಹಾಡಿತ್ತು ಕೇಳೋಕೆ ನಾ ಹೋದರೆ, ನಿನ್ನ ಈ, ಸರಿಗಮ ಕೇಳಿತು ಸಮಸಮ ಹಂಚಿತು   ಝುಳುಝುಳು ನೀರಿಲ್ಲಿ ತಿಲ್ಲಾನ ಹಾಡಿತ್ತು   ನೋಡೋಕೆ ನಾ ಬಂದರೆ, ನಿನ್ನದೇ ತಕಥೈ ಕಂಡಿತು ತಕಧಿಮಿ ಹೆಚ್ಚಿತು   ಅಲ್ಲೊಂದು ಸುಂದರ ತೋಟವಿದೆ, ಅಲ್ಲಿ ನೂರಾರು ಹೂಗಳ ರಾಶಿ ಇದೆ ಇಲ್ಲೊಂದು ಪ್ರೀತಿಯ ಹಾಡು ಇದೆ, ಇಲ್ಲಿ ಹತ್ತಾರು ಮೆಚ್ಚಿನ ಸಾಲು ಇದೆ ಎಲ್ಲ ಸಾಲಲ್ಲು ಇಣುಕೊ ಅಕ್ಷರ ನಿಂದೇನಾ?!   ಉತ್ತರ, ಇಲ್ಲದ, ಸಿಹಿ ಒಗಟು ನಿನ್ನಂದ ನಿನ್ನಂದ ನಿನ್ನಂದವೆ    ಭಲೆ ಭಲೆ ಚಂದದ ಚಂದುಳ್ಳಿ ಹೆಣ್ಣು ನೀನು ಮಿಂಚು ಕೂಡ ನಾಚುವ ಮಿಂಚಿನ ಬಳ್ಳಿ ನೀನು   ಅತ್ತ ಕಾಳಿದಾಸ, ಇತ್ತ ರವಿವರ್ಮ ನಿನ್ನ ಹಿಂದೆ ಬಂದರೂ ಅಂದವ, ಹೊಗಳಲು ಸಾಧ್ಯವೇ, ನಿನ್ನ ಮುಂದೆ ಮೌನವೇ ಅತ್ತ ಊರ್ವಶಿಯು

Song: Marete hodenu (ಮರೆತೇ ಹೋದೆನು), Movie: Dayavittu Gamanisi(ದಯವಿಟ್ಟು ಗಮನಿಸಿ)

ಹಾಡು: ಮರೆತೇ ಹೋದೆನು ರಚನೆ: ಜಯಂತ್‌ ಕಾಯ್ಕಿಣಿ ಸಂಗೀತ: ಅನೂಪ್‌ ಸೀಳಿನ್ ಗಾಯನ: ವಸಿಷ್ಠ ಸಿಂಹ ಚಲನಚಿತ್ರ: ದಯವಿಟ್ಟು ಗಮನಿಸಿ   ಮರೆತೇ ಹೋದೆನು, ಹೊರಟ ಕಾರಣ ನಿನ್ನಯ ಮಿಂಚಿನ ದಾಳಿಯಲಿ ಕ್ಷಮಿಸು ನನ್ನನು, ತಪ್ಪು ನಿನ್ನದೇ ಬಿದ್ದರೆ ನಿನ್ನದೇ ತೋಳಿನಲಿ   ಗಂಧದ ಹೂವಿಗೂ, ದೋಚುವ ಗಾಳಿಗೂ ಎಂತಹ ಸುಂದರ ನೇಹಾ, ಆಹಾ!   ನಿನ್ನಯ ಕೈಯಲ್ಲಿ,ಪ್ರೀತಿಯ ಪುಸ್ತಕ ಆಗುವ ಹಂಬಲ ನನಗೀಗ ಹೇಳಲು ಬಾರದ, ಹೇಳಿಯೂ ತೀರದ ತರಬೇತಿ ಇರದಂತಹ ದಾಹ, ಆಹಾ!   ಸನಿಹ ಬಂದರೂ, ಗೆರೆಯ ದಾಟದೆ ದೂರವೇ ನಿಲ್ಲುವೆ ನಿರುಪಾಯ ನಲ್ಮೆಯ ಜೀವವೇ, ನೆಮ್ಮದಿ ಕೋರುವೆ ಎದೆಯಲ್ಲೇ ಬಚ್ಚಿಟ್ಟು ಗಾಯಾ, ಆಹಾ   ಮರತೇ ಹೋದೆನು ಹೊರಟ ಕಾರಣ ನಿನ್ನಯ ಮಿಂಚಿನ ದಾಳಿಯಲಿ ಕ್ಷಮಿಸು ನನ್ನನು, ತಪ್ಪು ನಿನ್ನದೇ ಬಿದ್ದರೆ ನಿನ್ನದೇ ತೋಳಿನಲಿ   ಗಂಧದ ಹೂವಿಗೂ,ದೋಚುವ ಗಾಳಿಗೂ ಎಂತಹ ಸುಂದರ ನೇಹಾ,ಆಹಾ!