Song: Chanooranu, Movie: Mufti

ಹಾಡು: ಚಾಣೂರನು
ರಚನೆ: ಸಾಯಿ ಸರ್ವೇಶ್
ಸಂಗೀತ: ರವಿ ಬಸ್ರೂರು
ಗಾಯನ: ರವಿ ಬಸ್ರೂರು
ಚಲನಚಿತ್ರ: ಮಫ್ತಿ

ಚಾಣೂರನು ಅತಿಕ್ರೂರನು, ಘನಘೋರನೂ
ನಾ ಕಂಡ ಅಸುರ ನೀನೇನಾ
ನಿಸ್ಸೀಮನು, ಧೀಮಂತನು ಏಕೈಕನೂ,
ಜನದನಿಯ ಉಸಿರು ನೀನೇನಾ

ಓ,ಸಿಡಿಲಾಗಿ ಕಂಡ ನೀನು,
ಜಗಬೆಳಗೋ ದೀಪ ಏನು
ಏನೆಂದು ನಿನ್ನ ತಿಳಿಯಲಿ

 ಓ, ಧಗಧಗಿಸೋ ಜ್ವಾಲೆ ನೀನು
ತಂಪಾದ ಸೋನೆ ಏನು
ಏನೆಂದು ನಿನ್ನ ಅಳೆಯಲಿ

ರಾಕ್ಷಸನೂ, ನೀನೇನಾ
ರಕ್ಷಕನೂ ನೀನೇನಾ{೨}

ಹರಿದೋದ ಬದುಕನು ಹುಡುಕಿ,
ನವಿರಾದ ನೂಲನು ಬಳಸಿ,
ಹಸನಾಗಿ ಹೆಣೆದು ಕೊಡುವಾ
ನೇಕಾರನೇ
ಮಾಳಿಗೆಯು ಸೋರುವ ಮುನ್ನ
ಛಾವಣಿಯ ಹಾಸುವ ನೀನು
ಶತಕೋಟಿ ಮನಗಳು ಹರಸೋ
ನೇತಾರನೇ

ಧರಣಿತೂಕದ ಭುಜದಬಲವನು
ಜನರ ಒಳಿತಿಗೆ ತೋರಿ ಮೆರೆವನು
ಹಿತವನು ಬಯಸುವ
ಕಡುರಾಕ್ಷಸನೂ ನೀನೇನಾ
ರಕ್ಷಕನೂ ನೀನೇನಾ
ರಾಕ್ಷಸನೂ ನೀನೇನಾ
ರಕ್ಷಕನೂ ನೀನೇನಾ

ಕಡಲಿಂದ ಆವಿಯಾಗಿ
ಕಾರ್ಮೋಡದಂತೆ ಸಾಗಿ
ಬರುಡಾದ ಭೂಮಿಗೆ ಸುರಿವಾ
ಜಲಧಾರೆಯೋ

ಕಟುಕರ ನೆತ್ತರು ಹರಿಸಿ
ಬಡವರ ಕಂಬನಿ ಒರೆಸಿ
ಕುಸಿದಂಥ ಬಾಳಿನ ನೊಗಕೆ
ಹೆಗಲಾದೆಯೋ
ದುರುಳ ಜನರಿಗೆ ಸಜೆಯ ವಿಧಿಸುವ
ಹಸಿದ ಜನರಿಗೆ ಸುಧೆಯ ಹರಿಸುವ
ಹಿತವನು ಬಯಸುವ
ಕಡುರಾಕ್ಷಸನೂ ನೀನೇನಾ
ರಕ್ಷಕನೂ ನೀನೇನಾ
ರಾಕ್ಷಸನೂ ನೀನೇನಾ
ರಕ್ಷಕನೂ ನೀನೇನಾ






ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

Song: Sada ninna kannali (ಸದಾ ನಿನ್ನ ಕಣ್ಣಲಿ), Movie: Bachchan (ಬಚ್ಚನ್-2013)

Song: Elliruve (ಎಲ್ಲಿರುವೆ), Movie: Bayaludaari (ಬಯಲುದಾರಿ)

Song: Preethi neenillade naanu hegirali (ಪ್ರೀತಿ ನೀನಿಲ್ಲದೆ ನಾನು ಹೇಗಿರಲಿ), Movie: Bhaava baamaida (ಭಾವ ಬಾಮೈದ)

Song: Ninninda dooragi iralarenu (ನಿನ್ನಿಂದ ದೂರಾಗಿ ಇರಲಾರೆನು), Movie: Siddartha (ಸಿದ್ದಾರ್ಥ)

Song: Onde ondu Aaseyu (ಒಂದೇ ಒಂದು ಆಸೆಯು), Seetharamu (ಸೀತಾರಾಮು)

Song: Kangalu vandane helide (ಕಂಗಳು ವಂದನೆ ಹೇಳಿದೆ), Movie: Mugiyada kathe (‌ಮುಗುಯದ ಕಥೆ)

Song: Neenu neene illi naanu naane (ನೀನು ನೀನೇ ಇಲ್ಲಿ ನಾನು ನಾನೇ), Movie: Gadibidi ganda (ಗಡಿಬಿಡಿ ಗಂಡ)

Song: Jaaji mallige node (ಜಾಜಿ ಮಲ್ಲಿಗೆ ನೋಡೆ), Movie: Sevanthi sevanthi (ಸೇವಂತಿ ಸೇವಂತಿ)

Song: Kannige kaanuva(ಕಣ್ಣಿಗೆ ಕಾಣುವ ), Movie: Yarivanu(ಯಾರಿವನು)