Song: Beautiful manasugalu, Movie: Beautiful manasugalu

ಹಾಡು: ಬ್ಯೂಟಿಫುಲ್‌ ಮನಸುಗಳು
ರಚನೆ: ಮದನ್‌ ಬೆಳ್ಳಿಸಾಲು
ಸಂಗೀತ: ಭರತ್‌. ಬಿ.ಜೆ
ಗಾಯನ: ವಿಜಯಪ್ರಕಾಶ್
ಚಲನಚಿತ್ರ: ಬ್ಯೂಟಿಫುಲ್‌ ಮನಸುಗಳು

ನಮ್ಮೂರಲ್ಲಿ ಚಳಿಗಾಲದಲ್ಲಿ
ಮುಂಜಾವು ಮೂಡೋದೆ ಚಂದ
ಮಾರ್ಕೆಟ್‌ ರೋಡಲ್ಲಿ ಬ್ಯಾಸ್ಕೆಟ್‌ ಹಿಡ್ಕೊಂಡು
ನಮ್‌ ಹುಡುಗಿ ನಡೆಯೋದೆ ಅಂದ

ಮಾದೇವ್ನ ಜಾತ್ರೇಲಿ ಮುಳುಗೋಗ್ಲಿ ಊರು
ಬೆರಳಿಡ್ದು ನಡಿತೀನಿ ನಾಚ್ಬೇಕು ತೇರು

ಬಡಿಸೌಳೆ ಕನ್ಸು ನೂರಾರು
ಮರೆತೋಯ್ತು ಮುದ್ದೆ ಬಸ್ಸಾರು

ಬ್ಯೂಟಿಫುಲ್‌ ಮನಸುಗಳು,
ಬ್ಯೂಟಿಫುಲ್‌, ಮನಸುಗಳು{೨}

ತುಟಿ ಮೇಲೆ ಜೇನು, ಕೆಂದಾವರೆ ಶೈನು
ಮಾತೆಲ್ಲ ಮಿನಿ ಕೋಗಿಲೆ ಟ್ಯೂನು

ಮುದ್ದಾದ ಕಣ್ಣು, ಏನ್‌ ಹೇಳ್ಳಿ ನಾನು
ಹುಬ್ಬೆರಡೂ ರಂಗೋಲಿ ಲೈನು

ಆ ಕಿರುನೋಟ ಮತ್ತೇರಿಸೊ ವೈನು
ಬಿದ್ದಾಯ್ತು ಕಾಡಿಗೆಯ ಸೈನು
ಮುತ್ತಲ್ಲೆ ಕಟ್ಟುವೆನು ಫೈನು

ಬ್ಯೂಟಿಫುಲ್‌ ಮನಸುಗಳು,
ಬ್ಯೂಟಿಫುಲ್‌, ಮನಸುಗಳು{೨}

ನಮ್ಮೂರಲ್ಲಿ ಚಳಿಗಾಲದಲ್ಲಿ
ಮುಂಜಾವು ಮೂಡೋದೆ ಚಂದ
ಮಾರ್ಕೆಟ್‌ ರೋಡಲ್ಲಿ ಬ್ಯಾಸ್ಕೆಟ್‌ ಹಿಡ್ಕೊಂಡು
ನಮ್‌ ಹುಡುಗಿ ನಡೆಯೋದೆ ಅಂದ

ನಾಕಾಣಿಯಲ್ಲೂ ಚೌಕಾಸಿ ಮಾಡಿ
ನಡೆಸ್ತಾಳೆ ಸಂಸಾರ ನೌಕೆ

ಶೋಕಿಗೆ ಸಾಲ, ಶೋಕಕ್ಕೆ ಮೂಲ
ಅಂತಾಳೆ ಆಗಾಗ ಈಕೆ
ಹೇ ನೀ ನನ್ನ ಉಳಿತಾಯ ಶಾಖೆ
ಇದಕಿಂತ ಸೌಭಾಗ್ಯ ಬೇಕೆ
ಈ ನಿನ್ನ ಸಾಂಗತ್ಯ ಸಾಕೇ

ಬ್ಯೂಟಿಫುಲ್‌ ಮನಸುಗಳು,
ಬ್ಯೂಟಿಫುಲ್‌, ಮನಸುಗಳು{೪}
















ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

Song: Sada ninna kannali (ಸದಾ ನಿನ್ನ ಕಣ್ಣಲಿ), Movie: Bachchan (ಬಚ್ಚನ್-2013)

Song: Elliruve (ಎಲ್ಲಿರುವೆ), Movie: Bayaludaari (ಬಯಲುದಾರಿ)

Song: Ninninda dooragi iralarenu (ನಿನ್ನಿಂದ ದೂರಾಗಿ ಇರಲಾರೆನು), Movie: Siddartha (ಸಿದ್ದಾರ್ಥ)

Song: Preethi neenillade naanu hegirali (ಪ್ರೀತಿ ನೀನಿಲ್ಲದೆ ನಾನು ಹೇಗಿರಲಿ), Movie: Bhaava baamaida (ಭಾವ ಬಾಮೈದ)

Song: Onde ondu Aaseyu (ಒಂದೇ ಒಂದು ಆಸೆಯು), Seetharamu (ಸೀತಾರಾಮು)

Song: Kangalu vandane helide (ಕಂಗಳು ವಂದನೆ ಹೇಳಿದೆ), Movie: Mugiyada kathe (‌ಮುಗುಯದ ಕಥೆ)

Song: Neenu neene illi naanu naane (ನೀನು ನೀನೇ ಇಲ್ಲಿ ನಾನು ನಾನೇ), Movie: Gadibidi ganda (ಗಡಿಬಿಡಿ ಗಂಡ)

Song: Jaaji mallige node (ಜಾಜಿ ಮಲ್ಲಿಗೆ ನೋಡೆ), Movie: Sevanthi sevanthi (ಸೇವಂತಿ ಸೇವಂತಿ)

Song: Kannige kaanuva(ಕಣ್ಣಿಗೆ ಕಾಣುವ ), Movie: Yarivanu(ಯಾರಿವನು)