ಪೋಸ್ಟ್‌ಗಳು

2020 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

Song: Neenaade naa(ನೀನಾದೆ ನಾ), Movie: Yuvarathnaa (ಯುವರತ್ನ)

‌ಹಾಡು: ನೀನಾದೆ ನಾ ರಚನೆ:‌ ಗೌಸ್‌ ಪೀರ್ ಸಂಗೀತ:‌ ತಮನ್‌ ಎಸ್ ಗಾಯನ: ಅರ್ಮಾನ್‌ ಮಲಿಕ್‌, ಶ್ರೇಯಾ ಘೋಶಾಲ್  ಚಲನಚಿತ್ರ:‌ ‌ಯುವರತ್ನ   ನಿನ್ನ ಜೊತೆ ನನ್ನ ಕಥೆ, ಒಂದೊಂದು ಸಾಲು ಜೀವಿಸಿದೆ ನನ್ನ ಜೊತೆ ನಿನ್ನ ಕಥೆ, ಬೇರೊಂದು ಲೋಕ ಸೃಷ್ಠಿಸಿದೆ ಎಂದೂ ಹೀಗೆ ಆಗೇ ಇಲ್ಲ, ಏನು ಇದರ ಸೂಚನೆ ನೂರು ವಿಷಯ ಇದ್ದರೂನು ನಿನ್ನದೊಂದೆ ಯೋಚನೆ ಇಬ್ಬರಲ್ಲ, ಒಬ್ಬರೀಗ, ನಾನಿನ್ನು ನಿನಗರ್ಪಣೆ   ನೀನಾದೆ ನಾ ನೀನಾದೆ ನಾ, ನಿನ್ನೊಂದಿಗೆ ಈ ಜೀವನ(೨) ನಿನ್ನ ಜೊತೆ ನನ್ನ ಕಥೆ, ಒಂದೊಂದು ಸಾಲು ಜೀವಿಸಿದೆ ನನ್ನ ಜೊತೆ ನಿನ್ನ ಕಥೆ, ಬೇರೊಂದು ಲೋಕ ಸೃಷ್ಠಿಸಿದೆ   ನೀನು ದೂರ, ನಾನು ದೂರ, ಆದರೂ ಇಲ್ಲೇ ಈ ಕ್ಷಣದಲ್ಲೆ ತಿರುಗುವ ಭುವಿಯಲ್ಲಿ, ಇರಲಿ ನಾ ಎಲ್ಲೇ, ಇರುವೆ ನಿನ್ನಲ್ಲೇ   ಎದೆಯ ಬಡಿತ ಹೃದಯ ತುಂಬಿ ಉಸಿರಾಡುವಾಗ, ವಿಪರೀತವೀಗ ಒಂಟಿತನಕೆ ನೀನೆ ತಾನೆ ಸರಿಯಾದ, ಸಿಹಿಯಾದ ಪರಿಹಾರ ಈಗ   ಉಕ್ಕಿ ಬರುವ ಅಕ್ಕರೆಗೆ ನಿನ್ನ ನೆರಳೆ ಉತ್ತರ ಯಾವ ದೃಷ್ಠಿ ತಾಕದಂತೆ ನಿನ್ನ ಕಣ್ಣೇ ನನ್ನ ಕಾವಲು   ನೀನಾದೆ ನಾ ನೀನಾದೆ ನಾ, ನಿನ್ನೊಂದಿಗೆ ಈ ಜೀವನ(೨) ನಿನ್ನ ಜೊತೆ ನನ್ನ ಕಥೆ, ಒಂದೊಂದು ಸಾಲು ಜೀವಿಸಿದೆ ನನ್ನ ಜೊತೆ ನಿನ್ನ ಕಥೆ, ಬೇರೊಂದು ಲೋಕ ಸೃಷ್ಠಿಸಿದೆ   ಎಂದೂ ಹೀಗೆ ಆಗೇ ಇಲ್ಲ, ಏನು ಇದರ ಸೂಚನೆ ನೂರು ವಿಷಯ ಇದ್ದರೂನು ನಿನ್ನದೊಂದೆ ಯೋಚನೆ ಇಬ್ಬರಲ್ಲ, ಒಬ್ಬರೀಗ, ನಾನಿನ್ನು ನಿನಗರ್ಪಣೆ   ನೀನಾದೆ ನಾ ನೀನಾದೆ ನಾ, ನಿನ್ನೊಂದಿಗೆ ಈ ಜೀವನ(೨) ನೀನಾದೆ

Song: Kangalu vandane helide (ಕಂಗಳು ವಂದನೆ ಹೇಳಿದೆ), Movie: Mugiyada kathe (‌ಮುಗುಯದ ಕಥೆ)

ಹಾಡು: ಕಂಗಳು ವಂದನೆ ಹೇಳಿದೆ ರಚನೆ:‌ ಚಿ. ಉದಯಶಂಕರ್ ಸಂಗೀತ:‌ ರಾಜನ್-‌ ನಾಗೇಂದ್ರ ಗಾಯನ: ಎಸ್.‌ ಜಾನಕಿ, ಎಸ್.‌ ಪಿ. ಬಾಲಸುಬ್ರಹ್ಮಣ್ಯಂ ಚಲನಚಿತ್ರ:‌ ‌ಮುಗುಯದ ಕಥೆ     ಕಂಗಳು ವಂದನೆ ಹೇಳಿದೆ, ಹೃದಯವು ತುಂಬಿ ಹಾಡಿದೆ ಆಡದೆ, ಉಳಿದಿಹ, ಮಾತು ನೂರಿದೆ   ಕಂಗಳು ವಂದನೆ ಹೇಳಿದೆ, ಹೃದಯವು ತುಂಬಿ ಹಾಡಿದೆ ಆಡದೆ, ಉಳಿದಿಹ, ಮಾತು ನೂರಿದೆ ಜೀವ ಜೀವ ಸೇರಲು ಮಾತು ಏತಕೆ(೨) ಒಲವಿನ ಕಾವ್ಯಕೆ ಇಂದೇ ಪೀಠಿಕೆ   ಕಂಗಳು ವಂದನೆ ಹೇಳಿದೆ, ಹೃದಯವು ತುಂಬಿ ಹಾಡಿದೆ ಆಡದೆ, ಉಳಿದಿಹ, ಮಾತು ನೂರಿದೆ   ಮುಡಿಯ ಜಾರಿದ ಹೂವಿದು, ಮುಗಿಯದ ಕಥೆ ನನ್ನದು ಈ ಹೂವನು ಮಣ್ಣಿಂದಲಿ ಕಾಪಾಡಿದ ಕೈಗಳಿವು ಗಂಗೆ ಗೆ ಕೊಳೆ ಸೋಂಕದು, ಪಾಪದ ಫಲ ಸಲ್ಲದು  ನಿನ್ನನು ಪಡೆದಂತಹ ಈ ಭಾಗ್ಯವು ನನ್ನದು   ಪೂರ್ವದ ಪುಣ್ಯವೋ, ಜನ್ಮದ ಬಂಧವೋ ನಾನು-ನೀನು, ನೀನು- ನಾನು ಒಂದೇ ಎಂದೆಂದಿಗೂ    ಕಂಗಳು ವಂದನೆ ಹೇಳಿದೆ, ಹೃದಯವು ತುಂಬಿ ಹಾಡಿದೆ ಆಡದೆ, ಉಳಿದಿಹ, ಮಾತು ನೂರಿದೆ   ಬಾಳಿನ ಗುಡಿ ಬೆಳಗಲಿ, ಹರುಷದ ಹೊಳೆ ಹರಿಯಲಿ ಪ್ರೇಮದ ಈ ನೌಕೆಯು ಸುಖ ತೀರವ ಸೇರಲಿ ಹೇ ಹೇ...ಆಹಾಹಾ ಆಹಾಹಾ ಆಹಾಹಾ ಆಹಾಹಾ ಆ ಹಾ...ಆಹಾಹಾ ಆಹಾಹಾ ಆಹಾಹಾ ಆಹಾಹಾ ಆ ಆ ಆ ಆ    ಬಯಕೆಯ ಕುಡಿ ಚಿಗುರಲಿ, ಕನಸಿದು ಕೈಗೂಡಲಿ ಎಂದಿಗೂ ಪತಿಸೇವೆಯ ಸೌಭಾಗ್ಯವು ಎನಗಿರಲಿ ಸ್ವರವು ನೀ ಶೃತಿಯು ನಾ, ದೊರೆಯು ನೀ ದಾಸಿ ನಾ ನಾನು-ನೀನು, ನೀನು- ನಾನು ಒಂದೇ ಎಂದೆಂದಿಗೂ    ಕಂಗಳು ವಂದನೆ ಹೇಳಿದೆ, ಹೃದಯವು ತುಂ

Song: Bisi Bisi Kajjaya (ಬಿಸಿ ಬಿಸಿ ಕಜ್ಜಾಯ), Movie: Haavina hede (‌ಹಾವಿನ ಹೆಡೆ)

‌ಹಾಡು: ಬಿಸಿ ಬಿಸಿ ಕಜ್ಜಾಯ ರಚನೆ:‌ ಚಿ. ಉದಯಶಂಕರ್ ಸಂಗೀತ:‌ ಜಿ. ಕೆ. ವೆಂಕಟೇಶ್ ಗಾಯನ: ಡಾ. ರಾಜ್‌ಕುಮಾರ್  ಚಲನಚಿತ್ರ:‌ ‌ಹಾವಿನ ಹೆಡೆ     ಬಿಸಿ ಬಿಸಿ ಕಜ್ಜಾಯ, ರುಚಿ ರುಚಿ ಕಜ್ಜಾಯ ಮಾಡಿಕೊಡಲೆ ನಾನು ಹಿಂದೆ ಎಂದೂ ತಿಂದೂ ಇಲ್ಲ ಮುಂದೆ ಎಲ್ಲೂ ಸಿಗೋದಿಲ್ಲ ಜನುಮ ಜನುಮದಲೂ ನೆನಪಲಿ ಉಳಿಯುವ ಬಿಸಿ ಬಿಸಿ ಕಜ್ಜಾಯ, ರುಚಿ ರುಚಿ ಕಜ್ಜಾಯ ಮಾಡಿಕೊಡಲೆ ನಾನು ಹಿಂದೆ ಎಂದೂ ತಿಂದೂ ಇಲ್ಲ ಮುಂದೆ ಎಲ್ಲೂ ಸಿಗೋದಿಲ್ಲ ಜನುಮ ಜನುಮದಲೂ ನೆನಪಲಿ ಉಳಿಯುವ ಬಿಸಿ ಬಿಸಿ ಕಜ್ಜಾಯ, ರುಚಿ ರುಚಿ ಕಜ್ಜಾಯ ಮಾಡಿಕೊಡಲೆ ನಾನು‌   ಸುಮ್ಮನೆ ಏತಕೆ, ನನ್ನನು ಕೆಣಕುವೆ ಆ..ಆಆ….ಆ ಆ ಆ ಆ ಆ ಸುಮ್ಮನೆ ಏತಕೆ, ನನ್ನನು ಕೆಣಕುವೆ ಒದ್ದರೆ ಬಿದ್ದೋಡುವೆ ಮುಟ್ಟಿದರೆ...ತಟ್ಟಿದರೆ ಮುಟ್ಟಿದರೆ, ಮೂಳೆಗಳ ಎಣಿಸುತಲಿ ಕುಂಟುತ ಅಯ್ಯಯ್ಯೋ! ಅಮ್ಮಮ್ಮ! ಎನ್ನುವಂತೆ ಮಾಡುವೆ   ಬಿಸಿ ಬಿಸಿ ಕಜ್ಜಾಯ, ರುಚಿ ರುಚಿ ಕಜ್ಜಾಯ ಮಾಡಿಕೊಡಲೆ ನಾನು ಹಿಂದೆ ಎಂದೂ ತಿಂದೂ ಇಲ್ಲ ಮುಂದೆ ಎಲ್ಲೂ ಸಿಗೋದಿಲ್ಲ ಜನುಮ ಜನುಮದಲೂ ನೆನಪಲಿ ಉಳಿಯುವ ಬಿಸಿ ಬಿಸಿ ಕಜ್ಜಾಯ ಇನ್ನೊಂದು ಕೊಡಲೇನು ಇಗೋ ತಿನ್ನು, ತಗೋ ತಿನ್ನು   ತುಂಟರ ಕಂಡರೆ, ಸೊಂಟವ ಮುರಿವೆ ಪುಂಡರ ರುಂಡವ ಚಂಡಾಡುವೆ ತುಂಟರ ಕಂಡರೇ….   ತಾಂ ತತ್ತೋಮ್‌, ತಜ್ಜೋಮ್‌ ತಕಧಿಮಿ ತಕಝಣು(೨) ತಾಂ ತತ್ತೋಮ್‌, ತೀಮ್‌, ತ ಥೈ ತಾಮ ತ ತೋಮ್‌, ತೀಮ್‌ ತ ತೋಮ್‌ ಥೈ ತುಂಟರ ಕಂಡರೇ….   ತಾ ಕುತು ಝಂ, ಕುಂ ಕುಂ ಕುಂ ಕುಂ ತದಿ ಕುತು ಜಂ, ಜಂ ಜಂ

Song- Cheluveya nota chenna (ಚಲುವೆಯ ನೋಟ ಚನ್ನ), Movie: Shankar guru (ಶಂಕರ್‌ ಗುರು)

‌ಹಾಡು: ಚಲುವೆಯ ನೋಟ ಚನ್ನ ರಚನೆ:‌ ಚಿ. ಉದಯಶಂಕರ್ ಸಂಗೀತ:‌ ಉಪೇಂದ್ರ ಕುಮಾರ್‌ ಗಾಯನ: ಡಾ. ರಾಜ್‌ಕುಮಾರ್  ಚಲನಚಿತ್ರ:‌ ‌ಶಂಕರ್‌ ಗುರು     ಚಲುವೆಯ ನೋಟ ಚನ್ನ... ಒಲವಿನ ಮಾತು ಚನ್ನ ಮಲ್ಲಿಗೆ ಹೂವೇ ನಿನ್ನ, ನಗುವು ಇನ್ನೂ ಚನ್ನ ಚಲುವೆಯ ನೋಟ ಚನ್ನ, ಒಲವಿನ ಮಾತು ಚನ್ನ ಮಲ್ಲಿಗೆ ಹೂವೇ ನಿನ್ನ, ನಗುವು ಇನ್ನೂ ಚನ್ನ ಚಲುವೆಯ ನೋಟ ಚನ್ನ   ಕಾಮನ ಬಿಲ್ಲು ಚನ್ನ, ಸುಳಿವ ಮಿಂಚು ಚನ್ನ ಹೊಳೆಯುವ ನಿನ್ನ ಕಣ್ಣ ಕಾಂತಿ ಇನ್ನೂ ಚನ್ನ ಆ ಆ ತಣ್ಣನೆ ಗಾಳಿ ಚನ್ನ, ಹುಣ್ಣಿಮೆ ಚಂದ್ರ ಚನ್ನ ನಿನ್ನನು ಸೇರಿ ನಿಂತ ನನ್ನ ಬಾಳೆ ಚನ್ನ ಆ ಆ ಆ   ಚಲುವೆಯ ನೋಟ ಚನ್ನ, ಒಲವಿನ ಮಾತು ಚನ್ನ ಮಲ್ಲಿಗೆ ಹೂವೇ ನಿನ್ನ, ನಗುವು ಇನ್ನೂ ಚನ್ನ ಚಲುವೆಯ ನೋಟ ಚನ್ನ   ಜಿಂಕೆಯ ಕಣ್ಣೆ ಚನ್ನ, ಹವಳದ ಬಣ್ಣ ಚನ್ನ ಅರಗಿಳಿ ನಿನ್ನ ರೂಪ ಚನ್ನದಲ್ಲಿ ಚನ್ನ ಅ ಆ  ಬೆಳಗಿನ ಬಿಸಿಲು ಚನ್ನ, ಹೊಂಗೆಯ ನೆರಳು ಚನ್ನ  ಗೆಳತಿಯೆ ನಿನ್ನ ಸ್ನೇಹ ಚಿನ್ನಕಿಂತ ಚನ್ನ ಆ ಆ ಆ   ಚಲುವೆಯ ನೋಟ ಚನ್ನ, ಒಲವಿನ ಮಾತು ಚನ್ನ ಮಲ್ಲಿಗೆ ಹೂವೇ ನಿನ್ನ, ನಗುವು ಇನ್ನೂ ಚನ್ನ ಚಲುವೆಯ ನೋಟ ಚನ್ನ{೨}  

Song: Boni aagada hrudayana (ಬೋಣಿ ಆಗದ ಹೃದಯಾನ), Movie: Anna bond (ಅಣ್ಣ ಬಾಂಡ್)

ಹಾಡು: ಬೋಣಿ ಆಗದ ಹೃದಯಾನ ರಚನೆ:‌ ಯೋಗರಾಜ್‌ ಭಟ್ ಸಂಗೀತ:‌ ವಿ. ಹರಿಕೃಷ್ಣ ಗಾಯನ: ಟಿಪ್ಪು ಚಲನಚಿತ್ರ:‌ ಅಣ್ಣ ಬಾಂಡ್   ಬೋಣಿ ಆಗದ ಹೃದಯಾನ, ಹೂವಿನಂಗ್ಡಿ ಮಾಡ್ಕೊಂಡು ಕಸ್ಟಮರ್ರು ಹುಡುಕುವ ಕ್ಯಾಮೆ ಬೇಕಿತ್ತಾ?(ಬೇಕಿತ್ತಾ-೪) ಅಪ್ಪಿ ತಪ್ಪಿ ನನ್ನನ್ನು, ಇವ್ಳು ಅಪ್ಪಿಕೊಂಡಾಗ ಒಳ್ಳೇವ್ನಾಗೇ ಉಳ್ಕೊಳ್ಳೋ, ಕ್ಯಾಮೆ ಬೇಕಿತ್ತಾ?(ಬೇಕಿತ್ತಾ-೪)   ಓಡಿ ಹೋಗೋ ಹೃದಯಕ್ಕೊಂದು ಬ್ರೇಕು ಬೇಕಿತ್ತಾ ಇವ್ಳ ನೋಡೋದಕ್ಕೆ ಒಂದು ಎಕ್ಸ್ಟ್ರಾ ಕಣ್ಣು ಬೇಕಿತ್ತಾ ಚನ್ನಾಗಿದ್ದೆ ನಾನು ಪ್ರೀತಿ ಮಾಡ್ಲೇಬೇಕಿತ್ತಾ?   ಬೋಣಿ ಆಗದ ಹೃದಯಾನ, ಹೂವಿನಂಗ್ಡಿ ಮಾಡ್ಕೊಂಡು ಕಸ್ಟಮರ್ರು ಹುಡುಕುವ ಕ್ಯಾಮೆ ಬೇಕಿತ್ತಾ?   ತಂಗಾಳಿನ ತಬ್ಕೊಂಡು, ನೂರು ಮುತ್ತು ಕೊಟ್ಕೊಂಡು ಮೈಕೈ ನೋವು ಮಾಡಿಕೊಂಡ ನಾನು ಲೂಜ಼ಾ ಹಿಂಗೇ ಇದ್ರೆ ಯೂಸಾಗಲ್ಲ ನಾಲ್ಕು ಪೈಸಾ   ಪ್ರೀತಿಯೊಂದು ತಣ್ಣೀರು, ಜಾಸ್ತಿ ಆದ್ರೆ ಬಿಸಿ ನೀರು ಕುಡಿದು ನೋಡ್ಲಾ ಸ್ನಾನಾ ಮಾಡ್ಲಾ ಯಾರಾನಾ ಹೇಳಿ ವಯಸ್ಸಿನಲ್ಲಿ ಕನ್‌ಪ್ಯೂಷನ್ನು ತುಂಬಾ ಮಾಮೂಲಿ    ಒಂಟಿ ಪಿಟೀಲು ಅಳ್ತಾ ಇದ್ರೆ ಎಂಥಾ ಸಂಗೀತ ಬೇಡ ಅಂದ್ರೂ ಬೀಳೋ ಕನಸಿಗೊಂದು ಕ್ಯಾಮರಾ ಬೇಕಿತ್ತಾ ಚನ್ನಾಗಿದ್ದೆ ನಾನು ಪ್ರೀತಿ ಮಾಡ್ಲೇಬೇಕಿತ್ತಾ?   ಬೋಣಿ ಆಗದ ಹೃದಯಾನ, ಹೂವಿನಂಗ್ಡಿ ಮಾಡ್ಕೊಂಡು ಕಸ್ಟಮರ್ರು ಹುಡುಕುವ ಕ್ಯಾಮೆ ಬೇಕಿತ್ತಾ?   ಗಂಡು ನವಿಲಿಗೆ ಮಾತ್ರಾನೇ, ಪುಕ್ಕ ಕೊಟ್ಟ ಭಗವಂತ ಕುಣಿಯೋ ಕೆಲ್ಸ ಗಂಡಸರಿಗೆ ಹೇಳಿ ಮಾಡ್ಸಿದ್ದು ಹೆಣ್ಣು ಮಕ್ಳು ಕುಣಿ

Song: Khaali Aakasha (ಖಾಲಿ ಆಕಾಶ), Movie: Window seat (ವಿಂಡೋ ಸೀಟ್)

ಹಾಡು: ಖಾಲಿ ಆಕಾಶ ರಚನೆ: ಕವಿರಾಜ್ ಸಂಗೀತ:‌ ಅರ್ಜುನ್‌ ಜನ್ಯ ಗಾಯನ: ವಿಜಯ್ ಪ್ರಕಾಶ್ ಚಲನಚಿತ್ರ:‌ ವಿಂಡೋ ಸೀಟ್   ಖಾಲಿ... ಆಕಾಶ ನನ್ನೇ ನೋಡಿದೆ ನೀಲಿ...ನನ್ನನ್ನೇ ನುಂಗೋ ಹಾಗಿದೆ   ಗೋಡೆಯ ಮೇಲಿನ ಚಿತ್ತಾರವೆಲ್ಲವೂ ನಗುತಲಿವೆ...ಅಣಕಿಸಿವೆ  ನೀನೇ ಇಲ್ಲದೆ…..ನಂಗೆ ಏನಿದೆ?   ಖಾಲಿ... ಆಕಾಶ ನನ್ನೇ ನೋಡಿದೆ ನೀಲಿ...ನನ್ನನ್ನೇ ನುಂಗೋ ಹಾಗಿದೆ   ನಿಜ, ಭ್ರಮೆ, ಬರೀ ಗೊಂದಲ ಜಗತ್ತೇ...ಹುಸಿ ಅರೆ, ಬರೆ ಕೊನೆಯಾಯಿತೇ ನನ್ನೆಲ್ಲ... ಖುಷಿ ಕೈಗೆ ಸಿಗೋ ಮುನ್ನವೇ ಮರೆಯಾದೆಯಾ ಓ ಮಾಯಾವಿಯೇ   ನೋಡೀಗ ನಿನ್ನದೇ, ನೆನಪಿನ ನೂರಾರು ಚೂರಿಯು ಇರಿಯುತಿದೆ, ಎಡಬಿಡದೆ ನೀನೇ ಇಲ್ಲದೆ...ನಂಗೆ ಏನಿದೆ? ನೀನೇ ಇಲ್ಲದೇ   ಖಾಲಿ….ಆಕಾಶ ನನ್ನೇ ನೋಡಿದೆ

Song: Onde ondu Aaseyu (ಒಂದೇ ಒಂದು ಆಸೆಯು), Seetharamu (ಸೀತಾರಾಮು)

‌ಹಾಡು: ಒಂದೇ ಒಂದು ಆಸೆಯು ರಚನೆ: ಚಿ. ಉದಯಶಂಕರ್ ಸಂಗೀತ:‌ ಸತ್ಯಂ ಗಾಯನ: ಎಸ್.‌ ಪಿ. ಬಾಲಸುಬ್ರಹ್ಮಣ್ಯಂ, ಎಸ್.‌ ಜಾನಕಿ ಚಲನಚಿತ್ರ:‌ ಸೀತಾರಾಮು   ಒಂದೇ ಒಂದು ಆಸೆಯು, ಹಾ ತೋಳಲಿ ಬಳಸಲು, ಹೋ ಹೋ ಒಂದೇ ಒಂದು ಬಯಕೆಯು, ನಿನ್ನ ಮುದ್ದಾಡಲು, ಹಾ ಹಾ ನಿನ್ನ ಮುದ್ದಾಡಲು, ಹೋ ಹೋ   ಒಂದೇ ಒಂದು ಆಸೆಯು, ಹಾ ತೋಳಲಿ ಬಳಸಲು, ಹೋ ಹೋ ಒಂದೇ ಒಂದು ಬಯಕೆಯು, ನಿನ್ನ ಮುದ್ದಾಡಲು, ಹಾ ಹಾ ನಿನ್ನ ಮುದ್ದಾಡಲು, ಹೇ ಹೇ   ಕೈ ಬಳೆ, ಘಲ್‌ ಎನ್ನಲು, ಎದೆಯು ಝಿಲ್‌ ಎಂದಿದೆ ತನುವು ಹೂವಾಗಿ ಮನವು ಹಾಯಾಗಿ ಸನಿಹಕೆ ವಾಲಿದೆ {೨}   ಹೋ ಬಳಿ ಸಾರಿ ನೀ ಬರಲು, ಈ ಜೀವ ಸೋಲುತಿದೆ ಬಳಿ ಸಾರಿ ನೀ ಬರಲು, ಈ ಜೀವ ಸೋಲುತಿದೆ   ಒಂದೇ ಒಂದು ಆಸೆಯು, ಹಾ ತೋಳಲಿ ಬಳಸಲು, ಹೋ ಹೋ ಒಂದೇ ಒಂದು ಬಯಕೆಯು, ನಿನ್ನ ಮುದ್ದಾಡಲು, ಹಾ ಹಾ ನಿನ್ನ ಮುದ್ದಾಡಲು, ಹೋ   ಪ್ರೀತಿಯ ಸವಿಮಾತಿಗೆ, ಗೆಳೆಯನೇ ಸೋತೆನು ಎಂದೂ ನಿನ್ನಲ್ಲೆ ಬೆರೆತು ಒಂದಾಗಿ ಇರಲು ನಾ ಬಂದೆನು{೨}   ಹೇ ಇನ್ನೆಂದೂ, ನಾ ನಿನಗೆ, ಎಂದೆಂದೂ ನೀ ನನಗೆ ಏ ಹೇ ಹೇ ಇನ್ನೆಂದೂ, ನಾ ನಿನಗೆ, ಎಂದೆಂದೂ ನೀ ನನಗೆ   ಒಂದೇ ಒಂದು ಆಸೆಯು, ಹಾ ತೋಳಲಿ ಬಳಸಲು, ಹಾ ಹಾ ಒಂದೇ ಒಂದು ಬಯಕೆಯು, ನಿನ್ನ ಮುದ್ದಾಡಲು, ಹಾ ಹಾ ನಿನ್ನ ಮುದ್ದಾಡಲು, ಹಾ ಹಾ, ನಿನ್ನ ಮುದ್ದಾಡಲು  

Song: Prema chandrama (ಪ್ರೇಮ ಚಂದ್ರಮ), Movie: Yajamana (ಯಜಮಾನ)

ಹಾಡು: ಪ್ರೇಮ ಚಂದ್ರಮ ರಚನೆ: ಕೆ. ಕಲ್ಯಾಣ್ ಸಂಗೀತ:‌ ರಾಜೇಶ್‌ ರಾಮನಾಥ್ ಗಾಯನ: ರಾಜೇಶ್‌ ಕೃಷ್ಣನ್  ಚಲನಚಿತ್ರ:‌ ಯಜಮಾನ   ಪ್ರೇಮ ಚಂದ್ರಮ ಕೈಗೆ ಸಿಗುವುದೇ ಹೇಳೆ ತಂಗಾಳಿ, ನೀ ಹೇಳೆ ತಂಗಾಳಿ ಮನಸಾರೆ ಮೆಚ್ಚಿಕೊಳ್ಳುವೆ, ಹೃದಯಾನ ಬಿಚ್ಚಿಕೊಡುವೆ ಈ ಭೂಮಿ ಇರೊವರೆಗೂ, ನಾ ಪ್ರೇಮಿಯಾಗಿರುವೆ   ಪ್ರೇಮ ಚಂದ್ರಮ ಕೈಗೆ ಸಿಗುವುದೇ ಹೇಳೆ ತಂಗಾಳಿ, ನೀ ಹೇಳೆ ತಂಗಾಳಿ   ಬಾನಲಿ ಹುಣ್ಣಿಮೆಯಾದರೆ ನೀ ಸವೆಯ ಬೇಡ ಸವೆಯುವೆ ನಾ ಮೇಣದ ಬೆಳಕೇ ಆದರೂ ನೀ, ಕರಗ ಬೇಡ ಕರಗುವೆ ನಾ ಹೂದೋಟವೆ ಆದರೆ ನೀನು, ಹೂಗಳ ಬದಲು ಉದುರುವೆ ನಾ ಹೇಳೆ ತಂಗಾಳಿ, ನೀ ಹೇಳೆ ತಂಗಾಳಿ   ಪ್ರೇಮ ಚಂದ್ರಮ ಕೈಗೆ ಸಿಗುವುದೇ ಹೇಳೆ ತಂಗಾಳಿ, ನೀ ಹೇಳೆ ತಂಗಾಳಿ   ಈ ಪ್ರತಿರೂಪ ಬಿಡಿಸಲು ನಾ, ನೆತ್ತರಲೇ ಬಣ್ಣವನಿಡುವೆ ಈ ಪ್ರತಿಬಿಂಬವ ಕೆತ್ತಲು ನಾ, ಎದೆಯ ರೋಮದ ಉಳಿಯಿಡುವೆ ಕವಿತೆಯ ಹಾಗೆ ಬರೆದಿಡಲು, ಉಸಿರನೇ ಬಸಿದು ಪದವಿಡುವೆ ಹೇಳೆ ತಂಗಾಳಿ, ನೀ ಹೇಳೆ ತಂಗಾಳಿ   ಪ್ರೇಮ ಚಂದ್ರಮ ಕೈಗೆ ಸಿಗುವುದೇ ಹೇಳೆ ತಂಗಾಳಿ, ನೀ ಹೇಳೆ ತಂಗಾಳಿ ಮನಸಾರೆ ಮೆಚ್ಚಿಕೊಳ್ಳುವೆ, ಹೃದಯಾನ ಬಿಚ್ಚಿ ಕೊಡುವೆ ಈ ಭೂಮಿ ಇರೊವರೆಗೂ, ನಾ ಪ್ರೇಮಿಯಾಗಿರುವೆ   ಪ್ರೇಮ ಚಂದ್ರಮ ಕೈಗೆ ಸಿಗುವುದೇ ಹೇಳೆ ತಂಗಾಳಿ, ನೀ ಹೇಳೆ ತಂಗಾಳಿ