Song: Preethi neenillade naanu hegirali (ಪ್ರೀತಿ ನೀನಿಲ್ಲದೆ ನಾನು ಹೇಗಿರಲಿ), Movie: Bhaava baamaida (ಭಾವ ಬಾಮೈದ)

‌ಹಾಡು: ಪ್ರೀತಿ ನೀನಿಲ್ಲದೆ ನಾನು ಹೇಗಿರಲಿ

ರಚನೆ:‌ ಹಂಸಲೇಖ

ಸಂಗೀತ‌: ಹಂಸಲೇಖ

ಗಾಯನ: ಕೆ.ಎಸ್.‌ ಚಿತ್ರಾ, ಸೋನು ನಿಗಂ

ಚಲನಚಿತ್ರ:‌ ‌ಭಾವ ಬಾಮೈದ

 

ಪ್ರೀತಿ ನೀನಿಲ್ಲದೆ ನಾನು ಹೇಗಿರಲಿ

ಪ್ರೀತಿ ನಿನ್ನೊಂದಿಗೆ ನನ್ನ ಬಾಳಿರಲಿ

ನಿನಗಾಗಿ, ನಿನಗಾಗಿ, ಈ ತನುಮನವೇ ನಿನಗಾಗಿ

ಪ್ರೀತಿ ನೀನಿಲ್ಲದೆ ನಾನು ಹೇಗಿರಲಿ

ಪ್ರೀತಿ ನಿನ್ನೊಂದಿಗೆ ನನ್ನ ಬಾಳಿರಲಿ

ನಿನಗಾಗಿ, ನಿನಗಾಗಿ, ಈ ತನುಮನವೇ ನಿನಗಾಗಿ

ಪ್ರೀತಿ ನೀನಿಲ್ಲದೆ ನಾನು ಹೇಗಿರಲಿ

ಪ್ರೀತಿ ನಿನ್ನೊಂದಿಗೆ ನನ್ನ ಬಾಳಿರಲಿ

 

ಮನಸಿನ ಮೌನ ಮಾತಾಯ್ತು, ಆಹಾ ಪ್ರೀತಿ ನಿನ್ನಿಂದ

ಸುಖೀ ಆದೆ ನಿನ್ನಿಂದ

ಹೃದಯದ ರಾಯಭಾರವೇ, ಆಹಾ ಪ್ರೀತಿ ನಿನ್ನಿಂದ

ಪ್ರಿಯ ಆದೆ ನಿನ್ನಿಂದ

 

ಸಾಗರವು, ಹುಣ್ಣಿಮೆಯು, ಜಿಗಿಯುವುದೇ ಪ್ರೀತಿಸಲು

ಮಲ್ಲಿಗೆಯೂ, ಗಂಧವೂ, ಬೆರೆಯುವುದೇ ಪ್ರೀತಿಸಲು

 

ಪ್ರೀತಿ ನಿನ್ನ ಸ್ಮರಣೆಯಲಿ, ಅಧರಗಳು ಅರಳುವುದು

ಚುಂಬಿಸುತ, ಪ್ರೀತಿಸಲು

 

ಪ್ರೀತಿ ನೀನಿಲ್ಲದೆ ನಾನು ಹೇಗಿರಲಿ

ಪ್ರೀತಿ ನಿನ್ನೊಂದಿಗೆ ನನ್ನ ಬಾಳಿರಲಿ

ನಿನಗಾಗಿ, ನಿನಗಾಗಿ, ಈ ತನುಮನವೇ ನಿನಗಾಗಿ

ಪ್ರೀತಿ ನೀನಿಲ್ಲದೆ ನಾನು ಹೇಗಿರಲಿ

ಪ್ರೀತಿ ನಿನ್ನೊಂದಿಗೆ ನನ್ನ ಬಾಳಿರಲಿ

 

ಪ್ರೀತಿ ನಿನ್ನ ದಯದಿಂದ, ಆಹಾ ಅಂದ ಜಗವೆಲ್ಲ

ಮಹಾನಂದ ಬದುಕೆಲ್ಲ

ಪ್ರೀತಿ ನಿನ್ನ ಇಂಪಿಂದ, ಎಲ್ಲಾ ಮಾತು ಸಂಗೀತ

ಸಿಹಿ ಜೇನು ಮನಸೆಲ್ಲಾ

 

ನೇಸರನ ಬೆಳಕ ಮಳೆ, ಧರಣಿಯನು ಚಿಗುರಿಸಲು

ದುಂಬಿಗಳ, ಮಧುಬೇಟೆ, ಹೂವುಗಳ ಸಂಧಿಸಲು

 

ಪ್ರೀತಿ ನಿನ್ನ ವರದಿಂದ, ಹೃದಯಗಳು ಮಿಡಿಯುವುದು

ಭಯವಿರದೆ ಪ್ರೀತಿಸಲು

 

ಪ್ರೀತಿ ನೀನಿಲ್ಲದೆ ನಾನು ಹೇಗಿರಲಿ

ಪ್ರೀತಿ ನಿನ್ನೊಂದಿಗೆ ನನ್ನ ಬಾಳಿರಲಿ

ನಿನಗಾಗಿ, ನಿನಗಾಗಿ, ಈ ತನುಮನವೇ ನಿನಗಾಗಿ

ಪ್ರೀತಿ ನೀನಿಲ್ಲದೆ ನಾನು ಹೇಗಿರಲಿ

ಪ್ರೀತಿ ನಿನ್ನೊಂದಿಗೆ ನನ್ನ ಬಾಳಿರಲಿ

 

ಕಾಮೆಂಟ್‌ಗಳು

  1. ತಿಂಡೆನಂದ್ರಾ ನಾ ರೆಡಿ
    ನಾ ಮೊದಲ ತಿಂಡಿಗಡಿ
    ತಿಂಡ್ಯಾದ ಮಕ್ಕಳಿಗೆ ಒಡ್ಡಿನಿ.ఓర్యాడి ಇದ್ದಾರಗ ಇಟ್ಟಿ ನೀ ಅವನನ್ನ ತಡಿಯಾವನನ್ನ ತಡಿಯಕ ಬಂದವರದ ಹೊಗ್ಯಾರ ಮಾವ

    ಪ್ರತ್ಯುತ್ತರಅಳಿಸಿ

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

Song: Sada ninna kannali (ಸದಾ ನಿನ್ನ ಕಣ್ಣಲಿ), Movie: Bachchan (ಬಚ್ಚನ್-2013)

Song: Elliruve (ಎಲ್ಲಿರುವೆ), Movie: Bayaludaari (ಬಯಲುದಾರಿ)

Song: Ninninda dooragi iralarenu (ನಿನ್ನಿಂದ ದೂರಾಗಿ ಇರಲಾರೆನು), Movie: Siddartha (ಸಿದ್ದಾರ್ಥ)

Song: Onde ondu Aaseyu (ಒಂದೇ ಒಂದು ಆಸೆಯು), Seetharamu (ಸೀತಾರಾಮು)

Song: Kangalu vandane helide (ಕಂಗಳು ವಂದನೆ ಹೇಳಿದೆ), Movie: Mugiyada kathe (‌ಮುಗುಯದ ಕಥೆ)

Song: Neenu neene illi naanu naane (ನೀನು ನೀನೇ ಇಲ್ಲಿ ನಾನು ನಾನೇ), Movie: Gadibidi ganda (ಗಡಿಬಿಡಿ ಗಂಡ)

Song: Jaaji mallige node (ಜಾಜಿ ಮಲ್ಲಿಗೆ ನೋಡೆ), Movie: Sevanthi sevanthi (ಸೇವಂತಿ ಸೇವಂತಿ)

Song: Kannige kaanuva(ಕಣ್ಣಿಗೆ ಕಾಣುವ ), Movie: Yarivanu(ಯಾರಿವನು)