Song: Akka pakka, Movie: Rangitaranga

ಹಾಡು: ಅಕ್ಕ ಪಕ್ಕ
ರಚನೆ: ಅನೂಪ್‌ ಭಂಡಾರಿ
ಸಂಗೀತ: ಅನೂಪ್‌ ಭಂಡಾರಿ
ಗಾಯನ: ಅನೂಪ್‌ ಭಂಡಾರಿ, ಸುಚಿತ್ರ ಲತಾ
ಚಲನಚಿತ್ರ: ರಂಗಿತರಂಗ


ಅಕ್ಕ ಪಕ್ಕ ಸಿಕ್ಕಿ ನಕ್ಕ ಹಕ್ಕಿ ಪುಕ್ಕ ಹೆಕ್ಕಿ ಮೂಕರಾಗಿ ನಕ್ಕು ಕಿಕ್ಕಿರಿದ ಟಕರಕ ಟಕಟ
ಬಕ್ಕತಲೆ ಚಿಕ್ಕತಲೆ ಪಕ್ಕದಲೆ ಸುತ್ತುತಲೆ ಕಗ್ಗತ್ತಲೆ ಮೂಡುತ್ತಲೇ ಕೊಕ್ಕರೆದ ಕುಕ್ಕುಟ


ಗುಂಪಲಿ ಬಂದ ಗೋವಿಂದ
ಧರ್ಮದ ಏಟಿನ ನೋವಿಂದ
ರಾಧೆಯ ತಾಳಕೆ ಕುಣಿದ
ಸರಿಗಮ ಪದನಿಸ ಕುಣಿಸಿದ


ಅಕ್ಕ ಪಕ್ಕ ಸಿಕ್ಕಿ ನಕ್ಕ ಹಕ್ಕಿ ಪುಕ್ಕ ಹೆಕ್ಕಿ ಮೂಕರಾಗಿ ನಕ್ಕು ಕಿಕ್ಕಿರಿದ ಟಕರಕ ಟಕಟ
ಬಕ್ಕತಲೆ ಚಿಕ್ಕತಲೆ ಪಕ್ಕದಲೆ ಸುತ್ತುತಲೆ ಕಗ್ಗತ್ತಲೆ ಮೂಡುತ್ತಲೇ ಕೊಕ್ಕರೆದ ಕುಕ್ಕುಟ

ಬುಧವಾರ ಗಡಿಯಾರ ಬಡಿದಾಗ ಹನ್ನೆರಡು
ಮರುಳಾದ ಕಪಿರಾಯ ನುಡಿದಾಗ ಕಣ್ಣೆರಡು
ಜೋಪಾನ ಬರಿ ಮಾಯೆ ಈ ಹೊನ್ನು ಹೆಣ್ಣೆರಡು
ತಲೆನೋವು ನೂರುಂಟು ಬೇಕೇನು ಇನ್ನೆರಡು


ಏರುವೆ ಏಕೆ ಈ ಮಹಡಿಯನು
ಶಿವಪೂಜೆಗೆ ಕರೆಯುವೆ ಕರಡಿಯನು
ಕಡಲ ಮಡಲ ಮಡಿಲ ಕುಡಿಲ ಬಡಿದ ಸಿಡಿಲ ಕಿಡಿಯನು
ಮನಸಿನ ಒಳಗೆ ಬಿಟ್ಟರೆ ನೀನು ಆಗು ಯುದ್ದಕೆ ಸಿದ್ಧ 
ಇಲ್ಲಿಯ ವರೆಗೂ ಹೇಗಿದ್ದ
ಮದುವೆಯ ಸಂಗವು ಬೇಕಿತ್ತಾ
ಯಾಮಾರಿ ಹಳ್ಳಕೆ ಜಿಗಿದ
ಮದುಮಗ ಅಳುಮೊಗ ಧರಿಸಿದ


ಅಕ್ಕ ಪಕ್ಕ ಸಿಕ್ಕಿ ನಕ್ಕ ಹಕ್ಕಿ ಪುಕ್ಕ ಹೆಕ್ಕಿ ಮೂಕರಾಗಿ ನಕ್ಕು ಕಿಕ್ಕಿರಿದ ಟಕರಕ ಟಕಟ
ಬಕ್ಕತಲೆ ಚಿಕ್ಕತಲೆ ಪಕ್ಕದಲೆ ಸುತ್ತುತಲೆ ಕಗ್ಗತ್ತಲೆ ಮೂಡುತ್ತಲೆ

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

Song: Sada ninna kannali (ಸದಾ ನಿನ್ನ ಕಣ್ಣಲಿ), Movie: Bachchan (ಬಚ್ಚನ್-2013)

Song: Elliruve (ಎಲ್ಲಿರುವೆ), Movie: Bayaludaari (ಬಯಲುದಾರಿ)

Song: Preethi neenillade naanu hegirali (ಪ್ರೀತಿ ನೀನಿಲ್ಲದೆ ನಾನು ಹೇಗಿರಲಿ), Movie: Bhaava baamaida (ಭಾವ ಬಾಮೈದ)

Song: Ninninda dooragi iralarenu (ನಿನ್ನಿಂದ ದೂರಾಗಿ ಇರಲಾರೆನು), Movie: Siddartha (ಸಿದ್ದಾರ್ಥ)

Song: Onde ondu Aaseyu (ಒಂದೇ ಒಂದು ಆಸೆಯು), Seetharamu (ಸೀತಾರಾಮು)

Song: Kangalu vandane helide (ಕಂಗಳು ವಂದನೆ ಹೇಳಿದೆ), Movie: Mugiyada kathe (‌ಮುಗುಯದ ಕಥೆ)

Song: Neenu neene illi naanu naane (ನೀನು ನೀನೇ ಇಲ್ಲಿ ನಾನು ನಾನೇ), Movie: Gadibidi ganda (ಗಡಿಬಿಡಿ ಗಂಡ)

Song: Jaaji mallige node (ಜಾಜಿ ಮಲ್ಲಿಗೆ ನೋಡೆ), Movie: Sevanthi sevanthi (ಸೇವಂತಿ ಸೇವಂತಿ)

Song: Kannige kaanuva(ಕಣ್ಣಿಗೆ ಕಾಣುವ ), Movie: Yarivanu(ಯಾರಿವನು)