ಪೋಸ್ಟ್‌ಗಳು

ಮೇ, 2020 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

Song: Kannale bachidala (ಕಣ್ಣಲೇ ಬಚ್ಚಿಡಲಾ), Movie: Ambareesha (ಅಂಬರೀಶ)

ಹಾಡು: ಕಣ್ಣಲೇ ಬಚ್ಚಿಡಲಾ ರಚನೆ: ವಿ.ನಾಗೇಂದ್ರ ಪ್ರಸಾದ್ ಸಂಗೀತ:‌ ವಿ. ಹರಿಕೃಷ್ಣ ಗಾಯನ: ಶ್ರೇಯ ಘೋಶಾಲ್‌ ಚಲನಚಿತ್ರ: ಅಂಬರೀಶ ಕಣ್ಣಲೇ ಬಚ್ಚಿಡಲಾ? ನನ್ನಲೇ ಮುಚ್ಚಿಡಲಾ? ಹೇಗಪ್ಪ ಕಾಪಾಡಲಿ? ಚಿನ್ನದಂಥ ಹುಡುಗ, ನನ್ನೋನು ನನ್ನ ಬಳಗ ಇವನು, ಗೊತ್ತೇನು? ನಂದೇ ದೃಷ್ಟಿ ಏನು ಹೇ ಚಿನ್ನಾ… ಮುಚ್ಚಿಟ್ಟರು ಬಚ್ಚಿಟ್ಟರು ನಿನ್ನೊಳಗೆ ಹಾಯಾಗಿರುವೇ ಹೇ ಚಿನ್ನಾ… ನಾನೆಂದಿಗೂ ನಿನ್ನೊಲವಿಗೆ ನಂಬಿಕೆಯ ನೆರಳಾಗಿರುವೆ ಬೊಂಬೆಯಂಥ ಹುಡುಗಿ, ನನ್ನೋಳು ಹಾಲು-ಜೇನು ಮನಸು, ಗೊತ್ತೇನು? ನಂದೇ ದೃಷ್ಟಿ ಏನು ಹೋ, ಬಂದೇ ಬರುವ ಎಂದು, ಪ್ರೇಮಿಗಾಗಿ ಕಾಯೋ ಆತಂಕ ಹೆಚ್ಚಲ್ಲವಾ? ಬಂದ ಮೇಲೆ ಇವನ ತಬ್ಬಿಕೊಂಡ್ರೆ ನನ್ನ ಆಯಸ್ಸು ಹೆಚ್ಚಲ್ಲವಾ? ದಿನಾನು ಇವನ ಕನಸೇ ಬಂದ್ರೆ ಏನು ಮಾಡಲಿ? ಅಲ್ಲೂನು ಇವನ ಸ್ಪರ್ಶ ಸುಖವ ಹೇಗೆ ತಾಳಲಿ? ಓ ಚಿನ್ನಾ… ಕನಸಲ್ಲಿಯೂ ನನಸಲ್ಲಿಯೂ ನಿನ್ನ ನೆನಪಲ್ಲೇ ಇರುವೇ ಓ ಚಿನ್ನಾ… ನಿನ್ನೊಲವಿನ ಮಳೆಬಿಲ್ಲಿಗೆ ರಂಗನ್ನು ತುಂಬಿಕೊಡುವೆ ಬೊಂಬೆಯಂಥ ಹುಡುಗಿ, ನನ್ನೋಳು ಹಾಲು-ಜೇನು ಮನಸು, ಗೊತ್ತೇನು? ನಂದೇ ದೃಷ್ಟಿ ಏನು ನನ್ನ ಉಸಿರ ಒಳಗೆ ನಡೆದ ಏರು-ಪೇರು ಹೇಳಲು ಆಗುವುದೇ? ನನ್ನ ಹಣೆಯ ಬೆವರ ಹನಿಯ ಸಾಲು ಕೂಡ ಇವನ್ಹೆಸರ ಗೀಚುತ್ತಿದೆ   ಗುಲಾಬಿ ಹೂವ ಸೋಕಿದಂತೆ ನನ್ನ ತಾಕುವ ಪ್ರಮಾಣ ಮಾಡಿ ಹೇಳುತೀನಿ ಪ್ರೇಮವೇ ಇವ ಓ ಚಿನ್ನಾ…  ಇಂದಾದರು ಮುಂದಾದರು ನಿನ್ನೊಲವಿಗೆ ಉಸಿರಾಗಿರುವೆ ಬಾ ಚಿನ್ನಾ…  ಈ ಜನ್ಮಕು ಮರುಜನ್ಮಕು ನಿನ್ಹೆಸರಿಗೆ ಜೊತೆಯಾ

Song: Haavadru kachchabaarda (ಹಾವಾದ್ರೂ ಕಚ್ಚಬಾರ್ದಾ), Movie: Yardo duddu yellamman jaathre (ಯಾರ್ದೋ ದುಡ್ಡು ಯಲ್ಲಮನ್‌ ಜಾತ್ರೆ)

ಹಾಡು: ಹಾವಾದ್ರೂ ಕಚ್ಚಬಾರ್ದಾ ರಚನೆ: ವಿ.ಮನೋಹರ್ ಸಂಗೀತ:‌ ವಿ. ಮನೋಹರ್ ಗಾಯನ: ಜಗ್ಗೇಶ್‌ ಚಲನಚಿತ್ರ: ಯಾರ್ದೋ ದುಡ್ಡು ಯಲ್ಲಮನ್‌ ಜಾತ್ರೆ ಅಯ್ಯೋ, ಅಯ್ಯೋ, ಅಯ್ಯೋ ಅಯ್ಯೋ, ನಿನ್‌ ಮನೆ ಕಾಯ್ವೋಗ ದೀನ ದಯಾಳು ಧರ್ಮ ರತ್ನಾಕರ ರಾವ್‌ ಬಹದ್ದೂರ್‌ ರವಿಚಂದ್ರ ಶಾಸ್ತ್ರಿ ರಾಠೋಡರ ಮರಿ ಮೊಮ್ಮಗನಾದ ನನ್ನ ಮನೆಗೆ ಕಾಗೆ ಹೊಕ್ದಂಗ್‌ ಹೊಕ್ಕು  ನಮ್ಮನೆಯಿಂದ ನಂದೇ ಪಾತ್ರೆ ಪಗಡಿಗಳನ್ನೆಲ್ಲ ಹೊರಕ್ಕೆಸಿತಾಳಲ್ಲಪ್ಪ ಇವಳಿಗೆ ಲಕ್ವ ಹೊಡ್ದು ಹಣೆಗಕ್ಕಿ ಇಕ್ಕಿ ಚಾಪೇಲ್‌ ಮುದುರ್ಕೊಂಡೋಗಿ ಇವಳ್‌ ಮನೆ ಮುಂದೆ ಹೊಗೆ ಹಾಕ್ಸಿ, ಬಿದುರ್‌ ಮೋಟ್ರಲ್‌ ಮೆರವಣಿಗೆ ಓಗ ಈ ಉರಿ ಮುಸುಡಿ, ನರಿ ಮುಸುಡಿಯ ಕಿರಿಕಿರಿಯ ಕರಿಮಾರಿಯ ಗುರ್‌ ಗುರ್‌ ಗೊಗ್ಗಯ್ಯಂಗೆ ಹಾವಾದ್ರೂ ಕಚ್ಚಬಾರ್ದಾ, ಚೇಳಾದ್ರೂ ಕುಟ್ಕಬಾರ್ದಾ(೨) ಹೊಟ್ಟೀಯ ನೋವು ಬಂದು, ಹಟ್ಟೀಯ ಈಡ್ಯಾಬಾರ್ದಾ ನಾಕಾರು ಜ್ವರ ಬಂದು, ನಳ್ಳಾಡಿ ಸಾಯಬಾರ್ದಾ ಕಳ್ಳೀ ಇವ್ಳ್‌ ತಲೆ ಮ್ಯಾಲ್‌ ಬಡಿಯ, ತಂದನ್ನ ತಾನಾನಾ ತಂದನ್ನ ತಾನಾನಾ ತಂದನಾನಾ ತಾನಾನಾ ತಂದನ್ನ ತಾನಾನಾ, ತಂದನಾನಾ ತಾನಾನಾ ಮಾನ ಮರ್ಯಾದಿ ಬಿಟ್ಟೋರ್ಗೆ ಸಂತೆಲಿದ್ರೂ ಚಿಂತೆ ಇಲ್ವಂತೆ ಪರ್ರನ್ನ ಕಿತ್ಕೊಂಡ್‌ ಉಣ್ಣೋರ್ಗ್‌ ಯಾವ್‌ ರೋಗಾನೂ ಬಡಿಯಲ್ವಂತೆ ಈ ಪರಿಯಾಗ್‌ ಯಾರ್ದೋ ದುಡ್ಡಲ್‌ ಯಲ್ಲಮ್ಮನ್‌ ಜಾತ್ರೆ ನಡ್ಸೋ‌ ಈ ಮನೆಹಾಳೀನ, ಈ ಗುರ್‌ ಗುರ್‌ ಗೊಗ್ಗಯ್ಯನ್ನ ಒಂದಪ ಪ್ರೀತಿಯಿಂದ ಕ್ಯಾಕರ್ಸ್‌

Song: ಗುಡ್‌ ಮಾರ್ನಿಂಗ್(Good morning)

ಹಾಡು: ಗುಡ್‌ ಮಾರ್ನಿಂಗ್ ರಚನೆ:‌ ಆಲ್‌ ಓಕೆ ಸಂಗೀತ:‌ ಆಲ್‌ ಓಕೆ ಗಾಯನ: ಆಲ್‌ ಓಕೆ ಗುಡ್‌ ವೈಬ್ಸ್‌ ಒಳಗೆಳೆಯುತ ಬ್ಯಾಡ್‌ ವೈಬ್ಸ್‌ ಹೊರಗೂದುತ ಗುಮ್‌ ಅಂತ ಕಣ್ಮುಚ್ಚಿಕೊಂಡು  ನಿನ್ನ ಧ್ಯಾನ ಮಾಡ್ವೆ ತಲೆದೂಗುತ ಒಳ್ಳೆತನಕೆಂದೂ ಸ್ವಾಗತ ಕೆಟ್ಟತನವಾಗ್ಲಿ ಭೂಗತ ದೇವನೊಬ್ಬ ಒಳಗಿರುವನೆಂದು ನೀ ಬಾಳ್ವೆ ನಡೆಸಿದೊಳ್‌ ಅದ್ಭುತ ಸರಿ‌ ಕೇಳ್ ಜಗದಲಿ ಜಿಗಿದಬ್ಬರಿಸಿ ದವಸ ಪೊಗರಿದೋಳ್‌ ಕಮರು ಕಬ್ಬರವೆ ದಿನದಲಿ ಒಲವನು ಇರಿಸಿ ದೈವ ನೇತ್ರನನ್‌ ನೆಚ್ಚಿ ನೆನೆ ಮನವೆ ನಿಚ್ಚ ಮನದಿ ಸರಿ ದಾರಿ ತೋರು ನೀ ಪ್ರಬಲ ಮುಂದೆ ತಲೆ ಎತ್ತುವೆ ಸ್ವಚ್ಛ ಗುಣವ ದಯಪಾಲಿಸೆನಗೆ ನಾ ಪ್ರೀತಿಗಾಗಿ ತಲೆಬಾಗುವೆ ಹೆಜ್ಜೆ ಹಜ್ಜೆಗೂ ಗಾಲಿಗರಿಲ್ಲಿ ಮಿತ್ರ ತೆಗಳಿದೊಳ್ ಬೆಳೆಯುವುದೆಲ್ಲಿ ಜಾತಿ ಬೇಧವ ಮಾಡುವ ಮನುಜರ ಮಧ್ಯೆ ಇದ್ರೆ ಸಹಬಾಳ್ವೆ ಎಲ್ಲಿ ಹೊಸ ದಾರಿಯನ್ನು ನೀ ತೋರಿಸು ಮನಮಂದಿರವನ್ನು ರಕ್ಷಿಸು ನನ್ನ ಅಹಂ ಅನ್ನುನೀ ಕ್ಷೀಣಿಸಿ ಮನದಲ್‌ ಸೂರ್ಯೋದಯವನು ತೋರಿಸು ಏಸುಕಾಯಂಗಳ ಕಳೆದು  ಎಂಭತ್ನಾಲ್ಕು ಲಕ್ಷ ಜೀವ ರಾಶಿಯನ್ನು ದಾಟಿ ಬಂದ ಈ ಶರೀರ(೨) ತಾನಲ್ಲ ತನ್ನದಲ್ಲ(೨) ಆಸೆ ತರವಲ್ಲ, ಮುಂದೆ ಬಾಹೋದಲ್ಲ ದಾಸನಾಗು, ವಿಶೇಷನಾಗು ನೊಂದಿದ್ದೆ ಯಾರೂ ಇಲ್ಲ ಅಂತ ಈಗ ಒಂಟಿತನದ ಬೆಲೆ ಗೊತ್ತು ನಂಬಿಕೆ ತುಂಬ ಇಡ್ತಿದ್ದೆ ಈಗ ಬೆನ್ನು ತುಂಬ ಬರಿ ಕುರುಪು ಜೀವನ ಎಷ್ಟೇ ಪಾಠ ಕಲಿಸಿದ

Song: Negila hidida [ನೇಗಿಲ ಹಿಡಿದ (ಉಳುವ ಯೋಗಿಯ ನೋಡಲ್ಲಿ)], Movie: Kaamanabillu (ಕಾಮನಬಿಲ್ಲು)

ಹಾಡು: ನೇಗಿಲ ಹಿಡಿದ (ಉಳುವ ಯೋಗಿಯ ನೋಡಲ್ಲಿ) ರಚನೆ:‌ ಕುವೆಂಪು ಸಂಗೀತ:‌ ಉಪೇಂದ್ರ ಕುಮಾರ್ ಗಾಯನ: ಸಿ. ಅಶ್ವತ್ಥ್  ಚಲನಚಿತ್ರ:‌ ಕಾಮನಬಿಲ್ಲು  ಓ….ಓಒಒ..ಓ ಹೋ ಓ…. ನೇಗಿಲ ಹಿಡಿದ  ಹೊಲದೊಳು ಹಾಡುತ ಉಳುವಾ ಯೋಗಿಯ ನೋಡಲ್ಲಿ, ಓ{೨} ಫಲವನು ಬಯಸದೆ ಸೇವೆಯೆ ಪೂಜೆಯು, ಕರ್ಮವೇ ಇಹಪರ ಸಾಧನವು ಕಷ್ಟದೊಳನ್ನವ ದುಡಿವನೆ ತ್ಯಾಗಿ, ಸೃಷ್ಠಿನಿಯಮದೊಳಗವನೇ ಭೋಗಿ.                                             ಉಳುವ ಯೋಗಿಯ ನೋಡಲ್ಲಿ, ಉಳುವಾ ಯೋಗಿಯ ನೋಡಲ್ಲಿ  ಹೇ….ಏ ಏ ಏ ಲೋಕದೊಳೇನೆ ನಡೆಯುತಲಿರಲಿ ತನ್ನೀ ಕಾರ್ಯವ ಬಿಡನೆಂದೂ ರಾಜ್ಯಗಳುದಿಸಲಿ, ರಾಜ್ಯಗಳಳಿಯಲಿ ಹಾರಲಿ ಗದ್ದುಗೆ ಮುಕುಟಗಳು{೨) ಮುತ್ತಿಗೆ ಹಾಕಲಿ ಸೈನಿಕರೆಲ್ಲ(೨) ಬಿತ್ತುಳುವುದನವ ಬಿಡುವುದೇ ಇಲ್ಲ(೨) ಉಳುವ ಯೋಗಿಯ ನೋಡಲ್ಲಿ, ಉಳುವಾ ಯೋಗಿಯ ನೋಡಲ್ಲಿ  ಹೇ….ಏ ಏ ಏ                                       .. ಯಾರೂ ಅರಿಯದ ನೇಗಿಲ ಯೋಗಿಯೇ ಲೋಕಕೆ ಅನ್ನವನೀಯುವನು{೨} ಹೆಸರನು ಬಯಸದೆ ಅತಿಸುಖಕೆಳಸದೆ, ದುಡಿವನು ಗೌರವಕಾಶಿಸದೆ ನೇಗಿಲ ಕುಲದೊಳಗಡಗಿದೆ ಕರ್ಮಾ, ಹೋ… ನೇಗಿಲ ಕುಲದೊಳಗಡಗಿದೆ ಕರ್ಮಾ ನೇಗಿಲ ಮೇಲೆಯೇ ನಿಂತಿದೆ ಧರ್ಮ(೨) ಉಳುವ ಯೋಗಿಯ ನೋಡಲ್ಲಿ, ಉಳುವಾ ಯೋಗಿಯ ನೋಡಲ್ಲಿ  ಹೇ….ಏ ಏ ಏ ಉಳುವ ಯೋಗಿಯ ನೋಡಲ್ಲಿ(೪)          

Song: Ee touchali eno ide (ಈ ಟಚ್ಚಲಿ ಏನೋ ಇದೆ), Movie: Dhumm (ಧಮ್)

ಹಾಡು: ಈ ಟಚ್ಚಲಿ ಏನೋ ಇದೆ  ರಚನೆ:‌ ವಿ, ನಾಗೇಂದ್ರ ಪ್ರಸಾದ್‌ ಸಂಗೀತ:‌ ಗುರುಕಿರಣ್ ಗಾಯನ: ಲಕ್ಷ್ಮಿ ಮನ್‌ಮೋಹನ್  ಚಲನಚಿತ್ರ:‌ ಧಮ್ ಈ ಟಚ್ಚಲಿ, ಏನೋ ಇದೆ ಕಣ್ಣಂಚಲಿ, ಸುಳಿಮಿಂಚಿದೆ ಮನದ, ಮರದ, ಕೋಗಿಲೆ ಕೂ ಎಂದಿದೆ ಮೊದಲ, ತೊದಲ, ಹಾಡಾಗಿದೇ{೨} ತೇಲಾಡಿದೆ, ಓಲಾಡಿದೆ ಎದೆತಾಳವು, ಜೋರಾಗಿದೆ ಕಾಯಾಗದೆ, ಹಣ್ಣಾಗಿದೆ ಈ ಜೀವವೇ, ನೀರಾಗಿದೆ ಈ ಮೋಹದ, ದಾಸೋಹದ ದಾಸಾನು ದಾಸಿ, ಆದೆ ನಾ ಈ ಟಚ್ಚಲಿ, ಏನೋ ಇದೆ ಕಣ್ಣಂಚಲಿ, ಸುಳಿಮಿಂಚಿದೆ ಮನದ, ಮರದ, ಕೋಗಿಲೆ ಕೂ ಎಂದಿದೆ ಮೊದಲ, ತೊದಲ, ಹಾಡಾಗಿದೇ ಈ ಟಚ್ಚಲಿ, ಏನೋ ಇದೆ ಈ ಹಾರ್ಟಿಗೆ, ಏನಾಗಿದೆ ಮಾತಿಲ್ಲದೆ, ಕೈಜಾರಿದೆ ಸಾಕಾಗದೆ, ಬೇಕಾಗಿದೆ ಈ ತಲ್ಲಣ, ಹಾಯಾಗಿದೆ ಈ ಶೀತಲ, ಕೋಲಾಹಲ ಹಾಲಾಗಿ ಮೇರೆ, ಮೀರಿದೆ ಈ ಟಚ್ಚಲಿ, ಏನೋ ಇದೆ ಕಣ್ಣಂಚಲಿ, ಸುಳಿಮಿಂಚಿದೆ ಮನದ, ಮರದ, ಕೋಗಿಲೆ ಕೂ ಎಂದಿದೆ ಮೊದಲ, ತೊದಲ, ಹಾಡಾಗಿದೇ

Song: Ee nanna kannane (ಈ ನನ್ನ ಕಣ್ಣಾಣೆ), Movie: Abhi (ಅಭಿ)

ಹಾಡು: ಈ ನನ್ನ ಕಣ್ಣಾಣೆ ರಚನೆ:‌ ಕೆ. ಕಲ್ಯಾಣ್ ಸಂಗೀತ:‌ ಗುರುಕಿರಣ್ ಗಾಯನ: ಉದಿತ್‌ ನಾರಾಯಣ್‌, ಮಹಾಲಕ್ಷ್ಮಿ ಐಯ್ಯರ್ ಚಲನಚಿತ್ರ:‌ ಅಭಿ ಈ ನನ್ನ ಕಣ್ಣಾಣೆ ಈ ನನ್ನ ಎದೆಯಾಣೆ ಈ ನನ್ನ ಮನದಾಣೆ ಈ ನನ್ನ ಉಸಿರಾಣೆ ಏ, ಹುಡುಗಾ ನೀ ನನ್ನ ಪ್ರಾಣ ಕಣೋ ಈ ನನ್ನ ಕಣ್ಣಾಣೆ ಈ ನನ್ನ ಎದೆಯಾಣೆ ಈ ನನ್ನ ಮನದಾಣೆ ಈ ನನ್ನ ಉಸಿರಾಣೆ ನಂಗೂ ನಿಂಗೂ ಇನ್ನೂ ಹೊಸದು, ಇಂಥ ಅನುಭವ ಕಂಡು ಕಂಡು ಎದೆಯಾ ಒಳಗೆ, ಏನೋ ಕಲರವ ಸದಾ,  ಸದಾ ವೈಯ್ಯಾರದ, ಪದ, ಪದ ಬೆಸೆದಿದೆ ಹೊಸ, ಹೊಸ, ಶೃಂಗಾರದ, ರಸರಾಗ ಲಹರಿಯ ಹರಿಸುತಿದೆ ಓ ಒಲವೇ, ಒಲವೆಂಬ ಒಲವಿಲ್ಲಿದೆ ಈ ನನ್ನ ಕಣ್ಣಾಣೆ ಈ ನನ್ನ ಎದೆಯಾಣೆ ಈ ನನ್ನ ಮನದಾಣೆ ಈ ನನ್ನ ಉಸಿರಾಣೆ ಪ್ರೀತಿ ಒಂದು ಗಾಳಿಯ ಹಾಗೆ, ಗಾಳಿಮಾತಲ್ಲ ಪ್ರೀತಿ ಹರಿಯೊ ನೀರಿನ ಹಾಗೆ, ನಿಂತ ನೀರಲ್ಲ  ಅದು, ಒಂದು, ಜ್ಯೋತಿಯ ಹಾಗೆ  ಸುಡೋ, ಸುಡೋ ಬೆಂಕಿಯಲ್ಲ ಅದು, ಒಂದು,ಭುವಿಯ ಹಾಗೆ ನಿರಂತರ ಈ ಪ್ರೇಮಸ್ವರ ಈ, ಪ್ರೀತಿ, ಆಕಾಶಕೂ ಎತ್ತರ ಹೋ,ಈ ನನ್ನ ಕಣ್ಣಾಣೆ ಈ ನನ್ನ ಎದೆಯಾಣೆ ಈ ನನ್ನ ಮನದಾಣೆ ಈ ನನ್ನ ಉಸಿರಾಣೆ ಏ, ಹುಡುಗೀ ನೀ ನನ್ನ ಪ್ರಾಣ ಕಣೇ    

Song: Onde usirante (ಒಂದೇ ಉಸಿರಂತೆ) Movie: Snehaloka (ಸ್ನೇಹಲೋಕ)

ಹಾಡು: ಒಂದೇ ಉಸಿರಂತೆ ರಚನೆ:‌ ಹಂಸಲೇಖ ಸಂಗೀತ: ಹಂಸಲೇಖ ಗಾಯನ: ರಾಜೇಶ್‌ ಕೃಷ್ಣನ್‌, ಕೆ.ಎಸ್.‌ ಚಿತ್ರ ಚಲನಚಿತ್ರ: ಸ್ನೇಹಲೋಕ ಹಾಡು ಹಾಡು, ಒಂದು ಹಾಡು ಹಾಡು ಹಾಡದಿದ್ದರೆ ನನ್ನ ಹಾಡು ಕೇಳು ಉಸಿರು ಕಟ್ಟಿ ಹಾಡುವೆ ಈ ಹಾಡು ಈ ಉಸಿರು ನಿಂತರೆ ನಿನಗೆ ನಷ್ಟ ನೋಡು ಒಂದೇ ಉಸಿರಂತೆ ಇನ್ನು ನಾನು ನೀನು ನಾನು ನೀನು ಬೇರೆ ಏನು, ನೀನೇ ನಾನು ನಾನೇ ನೀನು ಒಂದೇ ಕಡಲಂತೆ ಇನ್ನು ನಾನು ನೀನು ತೀರ ಸಾಗರ ಬೇರೆ ಏನು, ಬೇರೆ ಎಂದರೆ ಅರ್ಥ ಏನು ಹಾಡೇ ಕೋಗಿಲೇ ಒಂದೇ ಉಸಿರಿನಲಿ ಚಂದಿರನನ್ನು ಚಂದಿರನೆನ್ನಲು ಅಂಜಿಕೆಯೇನು ಅಳುಕಿನ್ನೇನು ಕೇಳೇ ಕೋಗಿಲೇ ನನ್ನ ಕೊರಳಿನಲಿ ನಿನ್ನ ಹೆಸರೆ ಕೊನೆಯ ಮಾತು, ಕೊನೆಯ ನಾದ ಕೊನೆಯ ವೇದ ಪ್ರೀತಿ ಪ್ರೀತಿ ಪ್ರೀತಿ ಪ್ರೀತಿ, ಕೊಡುವೆ ನನ್ನ ಪ್ರಾಣ ಪ್ರೀತಿ ಒಂದೇ ಉಸಿರಂತೆ ಇನ್ನು ನಾನು ನೀನು ನಾನು ನೀನು ಅಲ್ಲ ಇನ್ನು, ನೀನೇ ನಾನು ನಾನೇ ನೀನು ಎತ್ತ ಇತ್ತು ಎಂತು ಬಂತೋ ಕಾಣೆ ನಾನು  ಒಂದೇ ಧೈರ್ಯ ಒಂದೇ ಹುರುಪು, ಹಾಡೋ ಹಂಬಲ ತಂದೆ ನೀನು  ಕೋಟಿ ಕೋಗಿಲೇ ಒಂದೇ ಉಸಿರಿನಲಿ ಪ್ರೀತಿ ಮಾಡು ಪ್ರೀತಿಯ ಬೇಡು ಅಂದಿದೆ ಅಂದಿದೆ ಹಾಡಿದೆ ಹೆಣ್ಣೆದೆ ಅಂತರಂಗದ ಸಹ್ಯಾದ್ರಿ ಮಡಿಲಲಿ ನೂರು ನವಿಲಾಗಿ ಹೃದಯ ಆಡಿದೆ ಆಡಿದೆ ಕುಣಿದಿದೆ ಕುಣಿದಿದೆ  ಕಾದಿದೆ ಕಾದಿದೆ ಪ್ರೀತಿ ನೀಡಲು ಒಂದೇ ಉಸಿರಲಿ ನಿಂತಿದೆ ನಿಂತಿದೆ ಇಂದು ಪ್ರೀತಿಯು ಹಾಡಿದ ಪರ್ವ ದಿನ(೨)