Song: Ee sanje yaakaagide, Movie: Geleya

ಹಾಡು: ಈ ಸಂಜೆ ಯಾಕಾಗಿದೆ
ರಚನೆ: ಜಯಂತ್‌ ಕಾಯ್ಕಿಣಿ
ಸಂಗೀತ: ಮನೋಮೂರ್ತಿ
ಗಾಯನ: ಸೋನು ನಿಗಮ್‌
ಚಲನಚಿತ್ರ: ಗೆಳೆಯ

ಈ ಸಂಜೆ ಯಾಕಾಗಿದೆ ನೀನಿಲ್ಲದೆ
ಈ ಸಂಜೆ ಯಾಕಾಗಿದೆ
ಈ ಸಂತೆ ಸಾಕಾಗಿದೆ ನೀನಿಲ್ಲದೆ
ಈ ಸಂತೆ ಸಾಕಾಗಿದೆ

ಏಕಾಂತವೇ ಆಲಾಪವು
ಏಕಾಂಗಿಯ ಸಲ್ಲಾಪವು
ಈ ಮೌನ ಬಿಸಿಯಾಗಿದೆ, ಓ
ಈ ಮೌನ ಬಿಸಿಯಾಗಿದೆ

ಈ ಸಂಜೆ ಯಾಕಾಗಿದೆ ನೀನಿಲ್ಲದೆ
ಈ ಸಂಜೆ ಯಾಕಾಗಿದೆ

ಈ ನೋವಿಗೆ ಕಿಡಿ ಸೋಕಿಸಿ
ಮಜ ನೋಡಿವೆ ತಾರಾಗಣ
ತಂಗಾಳಿಯ ಪಿಸುಮಾತಿಗೆ
ಯುಗವಾಗಿದೆ, ನನ್ನ ಕ್ಷಣ

ನೆನಪೆಲ್ಲವೂ ಹೂವಾಗಿದೆ
ಮೈಯೆಲ್ಲವೂ ಮುಳ್ಳಾಗಿದೆ
ಈ ಜೀವ ಕಸಿಯಾಗಿದೆ(೨)

ಈ ಸಂಜೆ ಯಾಕಾಗಿದೆ ನೀನಿಲ್ಲದೆ
ಈ ಸಂಜೆ ಯಾಕಾಗಿದೆ

ನೀನಿಲ್ಲದೇ, ಆ ಚಂದಿರ
ಈ ಕಣ್ಣಲಿ ಕಸವಾಗಿದೆ
ಅದನೂದುವ, ಉಸಿರಿಲ್ಲದೆ
ಬೆಳದಿಂಗಳು ಅಸುನೀಗಿದೆ

ಆಕಾಶದಿ ಕಲೆಯಾಗಿದೆ,
ಈ ಸಂಜೆಯ ಕೊಲೆಯಾಗಿದೆ
ಈ ಗಾಯ ಹಸಿಯಾಗಿದೆ(೨)

ಈ ಸಂಜೆ ಯಾಕಾಗಿದೆ ನೀನಿಲ್ಲದೆ
ಈ ಸಂಜೆ ಯಾಕಾಗಿದೆ
ಈ ಸಂತೆ ಸಾಕಾಗಿದೆ ನೀನಿಲ್ಲದೆ
ಈ ಸಂತೆ ಸಾಕಾಗಿದೆ

ಏಕಾಂತವೇ ಆಲಾಪವು
ಏಕಾಂಗಿಯ ಸಲ್ಲಾಪವು
ಈ ಮೌನ ಬಿಸಿಯಾಗಿದೆ, ಓ
ಈ ಮೌನ ಬಿಸಿಯಾಗಿದೆ

ಈ ಸಂಜೆ ಯಾಕಾಗಿದೆ ನೀನಿಲ್ಲದೆ
ಈ ಸಂಜೆ ಯಾಕಾಗಿದೆ












ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

Song: Enendu hesaridali(ಏನೆಂದು ಹೆಸರಿಡಲಿ), Movie: Anna bond (ಅಣ್ಣ ಬಾಂಡ್‌)

Song: Ninna Danigaagi (ನಿನ್ನ ದನಿಗಾಗಿ), Movie: Savaari 2 (ಸವಾರಿ 2)

SONG:PARAVASHANADENU(ಪರವಶನಾದೆನು), MOVIE:PARAMATHMA(ಪರಮಾತ್ಮ)

Song: Sada ninna kannali (ಸದಾ ನಿನ್ನ ಕಣ್ಣಲಿ), Movie: Bachchan (ಬಚ್ಚನ್-2013)

Song: Ee hasiru siriyali (ಈ ಹಸಿರು ಸಿರಿಯಲಿ), Movie: Nagamandala (ನಾಗಮಂಡಲ)

Song: Nee Amruthadhare (ನೀ ಅಮೃತಧಾರೆ), Movie: Amruthadhare (ಅಮೃತಧಾರೆ)

Song: Ee nanna kannane (ಈ ನನ್ನ ಕಣ್ಣಾಣೆ), Movie: Abhi (ಅಭಿ)

Song: Neeralli sanna aleyondu (ನೀರಲ್ಲಿ ಸಣ್ಣ ಅಲೆಯೊಂದು). Movie: Hudugaru (ಹುಡುಗರು)

Song: Jenina holeyo (ಜೇನಿನ ಹೊಳೆಯೋ), Movie: Chalisuva modagalu (ಚಲಿಸುವ ಮೋಡಗಳು)

Song: Dehavendare O manuja(ದೇಹವೆಂದರೆ ಓ ಮನುಜ), Movie: Janumada jodi ( ಜನುಮದ ಜೋಡಿ)