ಪೋಸ್ಟ್‌ಗಳು

ಜನವರಿ, 2021 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

Song: Bittaku bittaku (ಬಿಟ್ಹಾಕು ಬಿಟ್ಹಾಕು), Movie: Superstar (ಸೂಪರ್‌ಸ್ಟಾರ್‌)

‌ಹಾಡು: ಬಿಟ್ಹಾಕು ಬಿಟ್ಹಾಕು ರಚನೆ:‌ ಹಂಸಲೇಖ ಸಂಗೀತ‌: ಹಂಸಲೇಖ ಗಾಯನ: ಅದ್ನಾನ್‌ ಸಮಿ, ಲತಾ ಹಂಸಲೇಖ ಚಲನಚಿತ್ರ:‌ ‌ಸೂಪರ್‌ಸ್ಟಾರ್‌   ಡೋಂಟ್‌ ವರಿ ಮಾಡಬೇಡ, ಡರ್‌ಪೋಕ್‌ ಆಗಬೇಡ  ಲವ್‌ ಎಂಡ್‌ ವಾರಿನಲ್ಲಿ ಎಸ್ಕೇಪ್‌ ಆಗಬೇಡ ಕಂಗಾಲಾಗಬೇಡ ಬಿಟ್ಹಾಕು ಬಿಟ್ಹಾಕು   ಬ್ಯಾಡ್‌ ಟೈಮ್‌ ಅನ್ನಬೇಡ, ಮೂಡೌಟ್‌ ಆಗಬೇಡ ಲಕ್‌ ಚೆಕ್‌ ಮಾಡಬೇಡ, ಲವ್‌ ಲಾಕ್‌ ಬಿಚ್ಚಬೇಡ ಪಿಟೀಲು ಕೊಯ್ಯಬೇಡ ಬಿಟ್ಹಾಕು ಬಿಟ್ಹಾಕು   ಒಳಗೇ ಏನೇನಿದೆ?... ತುಂಬಾ ಹೇಳೋದಿದೆ ಹೋ ಕೇಳೋದಿನ್ನೇನಿದೆ?...ಇಷ್ಟಾ...ಕಷ್ಟ ಇದೆ ಹೋ ಕಷ್ಟವೇನು? ಅಪ್ಪ ಇಲ್ಲ ಅಮ್ಮ ಇಲ್ಲ ಒಕೆ ನಷ್ಟವೇನು? ತಾಳಿ ಇಲ್ಲ ಮಂತ್ರವಿಲ್ಲ  ಅದು ವೇಷ್ಟು ಬಿಟ್ಹಾಕೆ     ಕನ್ಫ್ಯೂಝ್‌ ಆಗಬೇಡ, ಟೈಮ್‌ ವೇಸ್ಟ್‌ ಮಾಡಬೇಡ ಯಾವ್‌ ಗೋಳಿದ್ದರೇನು, ನನ್‌ ತೋಳಿಲ್ಲವೇನು ಹಿಂದೇಟ್ಹಾಕಬೇಡ ಬಿಟ್ಹಾಕು ಬಿಟ್ಹಾಕು   ಓ ಗಾಡ್‌ ಅನ್ನಬೇಡ, ಹಾ ಸೇವ್‌ ಮಿ ಅನ್ನಬೇಡ ಕೇಳಿದ್ದೆಲ್ಲ ನಾನು ನೀಡೋದಿಲ್ಲವೇನು ನಾನೇ ನಿನ್‌ ದೇವನು, ಸುತ್ಹಾಕು ಸುತ್ಹಾಕು     ಬ್ಯಾಂಕಾಕ್‌ ಬೊಂಬಾಟಿದೆ ನಮಗೂ ಫ್ರೀಡಮ್ಮಿದೆ ಕುಣಿಯೋ ಖುಷಿ ಇದೆ ಓ, ಶ್ಟ್ರೀಟ್‌ ಲವ್‌ ಪರ್ಮಿಟ್‌ ಇದೆ   ಆಮ್‌ ಎ ಹಿಂದು, ನಾನೆ ತಾನೆ ಹಿಂದು ಮುಂದು  ಆಮ್‌ ಎ ಲೇಡಿ, ನೀನೆ ನನ್ನ ಬಾಡಿ ನಾಡಿ ಸಾಕ್‌ ಸಾಕು ಲವ್‌ ಮಾಡು ಐ ಸೇ, ಡೋಂಟ್‌ ವರಿ ಮಾಡಬೇಡ, ಡರ್‌ಪೋಕ್‌ ಆಗಬೇಡ  ಲವ್‌ ಎಂಡ್‌ ವಾರಿನಲ್ಲಿ ಎಸ್ಕೇಪ್‌ ಆಗಬೇಡ ಕಂಗಾಲಾಗಬೇಡ ಬಿಟ್ಹಾಕು ಬಿಟ್ಹಾಕು  

Song: Usiraaguve hasiraaguve (ಉಸಿರಾಗುವೆ ಹಸಿರಾಗುವೆ), Movie: Mourya (ಮೌರ್ಯ)

ಹಾಡು: ಉಸಿರಾಗುವೆ ಹಸಿರಾಗುವೆ ರಚನೆ:‌ ಕೆ. ಕಲ್ಯಾಣ್ ಸಂಗೀತ‌: ಗುರುಕಿರಣ್ ಗಾಯನ: ಶ್ರೀನಿವಾಸ್‌, ಶ್ರೇಯಾ ಘೋಶಾಲ್ ಚಲನಚಿತ್ರ:‌ ‌ಮೌರ್ಯ   ಉಸಿರಾಗುವೆ, ಹಸಿರಾಗುವೆ ಆ ಸೂರ್ಯ ಚಂದ್ರ ಇರುವವರೆಗೂ, ಆಕಾಶ ಭೂಮಿ ಇರುವವರೆಗೂ ನನ್ನಾಣೆಗೂ, ನಿನ್ನಾಣೆಗೂ, ಜೊತೆ ಇರುವೆ ನಾ ಎಂದೆಂದಿಗೂ ಉಸಿರಾಗುವೆ, ಮ್..ಹಸಿರಾಗುವೆ ‌ ಹಸಿವು ಇಲ್ಲ, ನಿದಿರೆ ಇಲ್ಲ, ಹೃದಯ ನಿನ್ನ ಪ್ರೀತಿ ಜಪಿಸುತಿದೆ ಹಗಲು ರಾತ್ರಿ, ದಿನವೂ ನಿನ್ನ ನೆನಪೇ ನನ್ನನ್ನು ಕೆಣಕುತಿದೆ   ಇಲ್ಲೂ ನೀನೆ, ಅಲ್ಲೂ ನೀನೆ, ಎಲ್ಲೆಲ್ಲೂ ನೀನೆ ಒಲವೇ ಈ ದೇಹಕೂ, ಈ ಪ್ರಾಣಕೂ, ಪ್ರೀತಿಯೊಂದೇ ಉಸಿರಾಟವು   ಉಸಿರಾಗುವೆ, ಹಸಿರಾಗುವೆ   ಮಧುರ ನಮ್ಮ ಅಮರ ಪ್ರೇಮ, ನಮಗೆ ಸೋಲಿಲ್ಲ ಕನಸಲ್ಲೂ ಕವಿತೆ ಆಗಿ, ಚರಿತೆ ಆಗಿ, ಜೊತೆಗೆ ಕಳೆಯೋಣ ಜನುಮಗಳು   ಜಗವೇ ಕೇಳು, ತಿಳಿಸಿ ಹೇಳು ಒಲವೇ ನಮ್ಮ ಬಾಳು ಮಣ್ಣಾಣೆಗೂ, ಮನದಾಣೆಗೂ, ಕೈಬಿಡೆನು ನಾ ಎಂದೆಂದಿಗೂ   ಉಸಿರಾಗುವೆ(ಉಸಿರಾಗುವೆ, ಹಸಿರಾಗುವೆ(ಹಸಿರಾಗುವೆ) ಆ ಸೂರ್ಯ ಚಂದ್ರ ಇರುವವರೆಗೂ, ಆಕಾಶ ಭೂಮಿ ಇರುವವರೆಗೂ ನನ್ನಾಣೆಗೂ, ನಿನ್ನಾಣೆಗೂ, ಜೊತೆ ಇರುವೆ ನಾ ಎಂದೆಂದಿಗೂ  

Song: Nee Amruthadhare (ನೀ ಅಮೃತಧಾರೆ), Movie: Amruthadhare (ಅಮೃತಧಾರೆ)

‌ಹಾಡು: ನೀ ಅಮೃತಧಾರೆ ರಚನೆ:‌ ನಾಗತಿಹಳ್ಳಿ ಚಂದ್ರಶೇಖರ್ ಸಂಗೀತ‌: ಮನೋಮೂರ್ತಿ ಗಾಯನ: ಹರೀಶ್‌ ರಾಘವೇಂದ್ರ, ಸುಪ್ರಿಯಾ ಆಚಾರ್ಯ ಚಲನಚಿತ್ರ:‌ ‌ಅಮೃತಧಾರೆ   ನೀ, ಅಮೃತಧಾರೆ, ಕೋಟಿ ಜನುಮ ಜತೆಗಾತಿ ನೀ, ಅಮೃತಧಾರೆ, ಇಹಕೂ ಪರಕೂ ಸಂಗಾತಿ ನೀ, ಇಲ್ಲವಾದರೆ ನಾ ಹೇಗೆ ಬಾಳಲಿ   ಹೇ, ಪ್ರೀತಿ ಹುಡುಗ, ಕೋಟಿ ಜನುಮ ಜತೆಗಾರ  ಹೇ, ಪ್ರೀತಿ ಹುಡುಗ, ನನ್ನ ಬಾಳ ಕಥೆಗಾರ ನೀ, ಇಲ್ಲವಾದರೆ ನಾ ಹೇಗೆ ಬಾಳಲಿ ಹೇ, ಪ್ರೀತಿ ಹುಡುಗ   ನೆನಪಿದೆಯೆ ಮೊದಲ ನೋಟ, ನೆನಪಿದೆಯೆ ಮೊದಲ ಸ್ಪರ್ಶ? ನೆನಪಿದೆಯೆ ಮತ್ತನು ತಂದ, ಆ ಮೊದಲ ಚುಂಬನ?   ನೆನಪಿದೆಯೆ ಮೊದಲ ಕನಸು, ನೆನಪಿದೆಯೆ ಮೊದಲ ಮುನಿಸು? ನೆನಪಿದೆಯೆ ಕಂಬನಿ ತುಂಬಿ, ನೀನಿತ್ತ ಸಾಂತ್ವನ? ನೀ, ಇಲ್ಲವಾದರೆ ನಾ ಹೇಗೆ ಬಾಳಲಿ   ನೀ, ಅಮೃತಧಾರೆ, ಕೋಟಿ ಜನುಮ ಜತೆಗಾತಿ ನೀ, ಅಮೃತಧಾರೆ, ಇಹಕೂ ಪರಕೂ ಸಂಗಾತಿ ನೀ, ಅಮೃತಧಾರೆ   ನೆನಪಿದೆಯೆ ಮೊದಲ ಸರಸ, ನೆನಪಿದೆಯೆ ಮೊದಲ ವಿರಸ ನೆನಪಿದೆಯೆ ಮೊದಲು ತಂದ ಸಂಭ್ರಮದ ಕಾಣಿಕೆ?   ನೆನಪಿದೆಯೆ ಮೊದಲ ಕವನ, ನೆನಪಿದೆಯೆ ಮೊದಲ ಪಯಣ ನೆನಪಿದೆಯೆ ಮೊದಲ ದಿನದ ಭರವಸೆಯ ಆಸರೆ? ನೀ, ಇಲ್ಲವಾದರೆ ನಾ ಹೇಗೆ ಬಾಳಲಿ   ಹೇ, ಪ್ರೀತಿ ಹುಡುಗ, ಕೋಟಿ ಜನುಮ ಜತೆಗಾರ ನೀ, ಅಮೃತಧಾರೆ, ಇಹಕೂ ಪರಕೂ ಸಂಗಾತಿ ನೀ, ಇಲ್ಲವಾದರೆ ನಾ ಹೇಗೆ ಬಾಳಲಿ ನೀ, ಅಮೃತಧಾರೆ  

Song: Salaga (ಸಲಗ), Movie: Salaga (ಸಲಗ)

‌ಹಾಡು: ಸಲಗ ರಚನೆ:‌ ನಾಗಾರ್ಜುನ್‌ ಶರ್ಮ ಸಂಗೀತ‌: ಚರಣ್‌ ರಾಜ್‌ ಗಾಯನ: ಯೋಗಿ ಬಿ, ಸಂಜಿತ್‌ ಹೆಗ್ಡೆ, ಶರತ್‌ ಸಂತೋಷ್‌, ಚರಣ್‌ ರಾಜ್‌, ನಾರಾಯಣ್‌ ಶರ್ಮ ಚಲನಚಿತ್ರ:‌ ‌ಸಲಗ   ಭಾಗ್‌ ಭಾಗ್‌...ಪೇಟೆಗೆಲ್ಲ ಟಾಪು ಸಲಗ ಸಾಲಾ ಹಟ್‌...ಬೇಟೆ ಬೇಟೆ ಆಡೋ ಖಡ್ಗ ಚಲ್‌ ಚಲ್‌...ಡಿಚ್ಚಿ ಡಿಚ್ಚಿ ಡಿಚ್ಚಿ ಡೋಲು ಮಾ ಊರ ಕಣ್ಣು ಮಾರಿ ಕಣ್ಣು ಇವನ ಮೇಲೆ ಸಲಗ   ಏ ಏ, ಮಾಮ ಮಾಮಾಮಾ ಮಿಯಾ ಮಾ ಪಾಗಲ್‌, ಗಿಲ್ಲಿ ಒಡ್ಡಿ ಒಡ್ಡಿ ಒಡ್ಡಿ ಮಾ ರನ್‌ ರನ್..‌ ರೋಡು ರೋಡು ರೋಡು ಓಡು ಮಾ ಆಣೆ ಮಾಡುತೀನಿ ಸೀಳುತಾನೆ ಸಲಗ   ರಕ್ತದಿಂದ ಮಾಸೊ ರಕ್ತದ ಕಲೆ, ನೀತಿ ಬೇಕಿಲ್ಲ ಎಲ್ಲ ಕತ್ತಲೆ ಸಾವು ಮಲ್ಗಿರುತ್ತೆ ನಿನ್ನ ಪಕ್ದಲೇ...ಗೊತ್ತಾಗೋದು ಎದ್ದಾಗಲೇ ಸಲಗಾ…… ಏರಿಯಾಗೆ ಒಮ್ಮೆ ಬಂದು ನೋಡು ಜಾತ್ತರೆ ಹಬ್ಬ ಮಾಡುತಾನೆ ಅಪ್ಪಿ ತಪ್ಪಿ ಸಿಕ್ಕರೆ ಫುಲ್ಲು ಸ್ಯಾವೇಜು ಡ್ಯಾಮೇಜು ಬಂದರೆ ಮಗಾ ಬೀ ಕೇರ್ಫುಲ್‌ ಆಗೋಯ್ತ್ಯಾ ಕಣ್ಮರೆ ಹೊಡಿ..ಹೊಡಿ, ಜಡಿ...ಜಡಿ ಒಂಟಿ ತಲೆ ರಾವಣಾನೆ ರೇಜು ರೇಜಲ್‌ ಸಿಡಿದಂತೆ   ನಾಯಕ್‌ ನಹೀ, ಖಲ್ನಾಯಕ್‌ ಹೇ ತೂ ಝುಲ್ಮೀ ಬಡಾ ದುಖ್ದಾಯಕ್‌ ಹೆ ತೂ{೨} (ನೀನು ಸುಡಕ್ಕೆ ನೋಡ್ತಾ ಇದ್ರೆ, ನಾನ್‌ ಬೇಯ್ಸಕ್ಕೆ ನೋಡ್ತಾ ಇದ್ದಿನಿ)   ಕಾಲ ಕಾಲ ಖರಾಬು ವ್ಹಾ ವ್ಹಾ ಮಾಂಜಾ ಮಾಂಜಾ ಲಡಾಯ್ಸು ವ್ಹಾ ವ್ಹಾ ಡರ್‌ ಆಗ್ಬೇಕು ಸುಮ್ನೆ ಬಿಡ್ತೀವಾ ಬೀಸು ಬೀಸು ಬೀಸು ಮಚ್ಚು ಘರ್ವ   ಭಾಗ್‌ ಭಾಗ್….ಸಾಲಾ ಹಟ್...‌ ಚಲ್‌ ಚಲ್…. ಏ ಏ… ಬರ್ನಿನ್‌ ಬರ್ನಿನ್‌

Song: Preethi neenillade naanu hegirali (ಪ್ರೀತಿ ನೀನಿಲ್ಲದೆ ನಾನು ಹೇಗಿರಲಿ), Movie: Bhaava baamaida (ಭಾವ ಬಾಮೈದ)

‌ಹಾಡು: ಪ್ರೀತಿ ನೀನಿಲ್ಲದೆ ನಾನು ಹೇಗಿರಲಿ ರಚನೆ:‌ ಹಂಸಲೇಖ ಸಂಗೀತ‌: ಹಂಸಲೇಖ ಗಾಯನ: ಕೆ.ಎಸ್.‌ ಚಿತ್ರಾ, ಸೋನು ನಿಗಂ ಚಲನಚಿತ್ರ:‌ ‌ಭಾವ ಬಾಮೈದ   ಪ್ರೀತಿ ನೀನಿಲ್ಲದೆ ನಾನು ಹೇಗಿರಲಿ ಪ್ರೀತಿ ನಿನ್ನೊಂದಿಗೆ ನನ್ನ ಬಾಳಿರಲಿ ನಿನಗಾಗಿ, ನಿನಗಾಗಿ, ಈ ತನುಮನವೇ ನಿನಗಾಗಿ ಪ್ರೀತಿ ನೀನಿಲ್ಲದೆ ನಾನು ಹೇಗಿರಲಿ ಪ್ರೀತಿ ನಿನ್ನೊಂದಿಗೆ ನನ್ನ ಬಾಳಿರಲಿ ನಿನಗಾಗಿ, ನಿನಗಾಗಿ, ಈ ತನುಮನವೇ ನಿನಗಾಗಿ ಪ್ರೀತಿ ನೀನಿಲ್ಲದೆ ನಾನು ಹೇಗಿರಲಿ ಪ್ರೀತಿ ನಿನ್ನೊಂದಿಗೆ ನನ್ನ ಬಾಳಿರಲಿ   ಮನಸಿನ ಮೌನ ಮಾತಾಯ್ತು, ಆಹಾ ಪ್ರೀತಿ ನಿನ್ನಿಂದ ಸುಖೀ ಆದೆ ನಿನ್ನಿಂದ ಹೃದಯದ ರಾಯಭಾರವೇ, ಆಹಾ ಪ್ರೀತಿ ನಿನ್ನಿಂದ ಪ್ರಿಯ ಆದೆ ನಿನ್ನಿಂದ   ಸಾಗರವು, ಹುಣ್ಣಿಮೆಯು, ಜಿಗಿಯುವುದೇ ಪ್ರೀತಿಸಲು ಮಲ್ಲಿಗೆಯೂ, ಗಂಧವೂ, ಬೆರೆಯುವುದೇ ಪ್ರೀತಿಸಲು   ಪ್ರೀತಿ ನಿನ್ನ ಸ್ಮರಣೆಯಲಿ, ಅಧರಗಳು ಅರಳುವುದು ಚುಂಬಿಸುತ, ಪ್ರೀತಿಸಲು   ಪ್ರೀತಿ ನೀನಿಲ್ಲದೆ ನಾನು ಹೇಗಿರಲಿ ಪ್ರೀತಿ ನಿನ್ನೊಂದಿಗೆ ನನ್ನ ಬಾಳಿರಲಿ ನಿನಗಾಗಿ, ನಿನಗಾಗಿ, ಈ ತನುಮನವೇ ನಿನಗಾಗಿ ಪ್ರೀತಿ ನೀನಿಲ್ಲದೆ ನಾನು ಹೇಗಿರಲಿ ಪ್ರೀತಿ ನಿನ್ನೊಂದಿಗೆ ನನ್ನ ಬಾಳಿರಲಿ   ಪ್ರೀತಿ ನಿನ್ನ ದಯದಿಂದ, ಆಹಾ ಅಂದ ಜಗವೆಲ್ಲ ಮಹಾನಂದ ಬದುಕೆಲ್ಲ ಪ್ರೀತಿ ನಿನ್ನ ಇಂಪಿಂದ, ಎಲ್ಲಾ ಮಾತು ಸಂಗೀತ ಸಿಹಿ ಜೇನು ಮನಸೆಲ್ಲಾ   ನೇಸರನ ಬೆಳಕ ಮಳೆ, ಧರಣಿಯನು ಚಿಗುರಿಸಲು ದುಂಬಿಗಳ, ಮಧುಬೇಟೆ, ಹೂವುಗಳ ಸಂಧಿಸಲು   ಪ್ರೀತಿ ನಿನ್ನ ವರ

Song: Hrudayake hedarike (ಹೃದಯಕೆ ಹೆದರಿಕೆ), Movie: Thaayige takka maga (ತಾಯಿಗೆ ತಕ್ಕ ಮಗ)

ಹಾಡು: ಹೃದಯಕೆ ಹೆದರಿಕೆ ರಚನೆ:‌ ಜಯಂತ್‌ ಕಾಯ್ಕಿಣಿ ಸಂಗೀತ‌: ಜುಡಾ ಸ್ಯಾಂಡಿ ಗಾಯನ: ಸಂಗೀತ ರವೀಂದ್ರನಾಥ್‌, ಸಂಜಿತ್‌ ಹೆಗ್ಡೆ ಚಲನಚಿತ್ರ:‌ ‌ತಾಯಿಗೆ ತಕ್ಕ ಮಗ   ಹೃದಯಕೆ, ಹೆದರಿಕೆ, ಹೀಗೆ ನೋಡಿದರೆ ಹುಡುಕುತಾ, ಬರುವೆಯಾ? ಹೇಳದೆ, ಹೋದರೆ   ಎದೆಯಲ್ಲಿ, ಬಿರುಗಾಳಿ, ಮೊದಲೇನೇ ಇತ್ತು ನೀ ನನಗೆ, ಏನೆಂದು, ನನಗಷ್ಟೇ ಗೊತ್ತು     ಹೃದಯಕೆ, ಹೆದರಿಕೆ, ಹೀಗೆ ನೋಡಿದರೆ ಹುಡುಕುತಾ, ಬರುವೆಯಾ? ಹೇಳದೆ, ಹೋದರೆ   ಓ ಮರವೇ, ನಿನ್ನಾ ತಬ್ಬಿ, ಹಬ್ಬುತಿರೋ ಬಳ್ಳಿ ನಾನು ಮೆಲ್ಲಗೆ ವಿಚಾರಿಸು, ನನ್ನ ಮೈಮರೆತು ನಿನ್ನಾ ಮುಂದೆ ವರ್ತಿಸುವ ಮಳ್ಳಿ ನಾನು ಕೋಪವ ನಿವಾಳಿಸು ಚಿನ್ನ   ನೀ ನನಗೆ ದೊರೆತಂಥ ಸಿಹಿಯಾದ ಮತ್ತು ನಿನಗಾಗೋ ಕನಸೆಲ್ಲಾ ನನಗಷ್ಟೇ ಗೊತ್ತು   ಮುಚ್ಚಿರುವ, ಕಣ್ಣಿನಲ್ಲೂ, ಮೂಡಿರುವ ಬಣ್ಣ ನೀನು ಮುತ್ತಿಡು ಮಾತಾಡುವ ಮುನ್ನ   ಹಾ...ನೆನೆ ನೆನೆದು ತುಂಬ ಸೊರಗಿ, ಆಗಿರುವೆ ಸಣ್ಣ ನಾನು ಹಿಡಿಸುವೆನು ಹೃದಯದಲ್ಲಿ ನಿನ್ನ   ನಾ ನಿನ್ನ ಬಿಗಿದಪ್ಪಿ ಇರುವಂಥ ಹೊತ್ತು ಜಗವೆಲ್ಲಾ ಮರೆಯಾಯ್ತು ನನಗಷ್ಟೇ ಗೊತ್ತು   ಹೃದಯಕೆ, ಹೆದರಿಕೆ, ಹೀಗೆ ನೋಡಿದರೆ ಹುಡುಕುತಾ ಬರುವೆಯಾ? ಹೇಳದೆ, ಹೋದರೆ  

Song: Kannalli yeno minchondu kandithalla (ಕಣ್ಣಲ್ಲಿ ಏನೋ ಮಿಂಚೊಂದು ಕಂಡಿತಲ್ಲ), Movie: Vasantha geetha (‌ವಸಂತ ಗೀತ)

‌ಹಾಡು: ಕಣ್ಣಲ್ಲಿ ಏನೋ ಮಿಂಚೊಂದು ಕಂಡಿತಲ್ಲ ರಚನೆ:‌ ಚಿ. ಉದಯಶಂಕರ್ ಸಂಗೀತ‌: ಎಂ. ರಂಗರಾವ್ ಗಾಯನ: ಡಾ. ರಾಜಕುಮಾರ್  ಚಲನಚಿತ್ರ:‌ ‌ವಸಂತ ಗೀತ   ಕಣ್ಣಲ್ಲಿ ಏನೋ ಮಿಂಚೊಂದು ಕಂಡಿತಲ್ಲ ನಿನ್ನಾಸೆ ಏನೋ ನಾನಿಂದು ಕಾಣೆನಲ್ಲ ಕೋಪವೋ?! ತಾಪವೋ?! ಕೋಪವೋ, ತಾಪವೋ, ನಡುಗಿದೆ ತುಟಿ ಏತಕೆ… ಕಣ್ಣಲ್ಲಿ ಏನೋ ಮಿಂಚೊಂದು ಕಂಡಿತಲ್ಲ   ಒಳ್ಳೆ ವಯಸ್ಸು, ಒಳ್ಳೆ ಸೊಗಸು, ಏಕೆ ಹೀಗಾಯ್ತು ಮನಸು ಕಣ್ಣು ಚನ್ನ, ಬಣ್ಣ ಚನ್ನ, ನಾ ಕಾಣೆ ಹೀಗೇಕೆ ಮುನಿಸು, ಹೋ ಒಳ್ಳೆ ವಯಸ್ಸು, ಒಳ್ಳೆ ಸೊಗಸು, ಏಕೆ ಹೀಗಾಯ್ತು ಮನಸು ಕಣ್ಣು ಚನ್ನ, ಬಣ್ಣ ಚನ್ನ, ನಾ ಕಾಣೆ ಹೀಗೇಕೆ ಮುನಿಸು   ಈ ರೋಷವೋ, ಆವೇಷವೋ, ಈ ದ್ವೇಷವೋ, ಆಕ್ರೋಷವೋ ಚಲುವೆಯೆ ನಿನಗೇತಕೆ…..ಎಏ ಎಏ ಏಏ?   ಕಣ್ಣಲ್ಲಿ ಏನೋ ಮಿಂಚೊಂದು ಕಂಡಿತಲ್ಲ ನಿನ್ನಾಸೆ ಏನೋ ನಾನಿಂದು ಕಾಣೆನಲ್ಲ   ಚಲುವೆ ಮೊಗದಿ, ಗೆಲುವ ಕಂಡೆ, ಎಲ್ಲಿ ಏನಾಯ್ತೋ ಕಾಣೆ ಗೆಲುವ ಹಿಂದೆ, ಛಲವ ಕಂಡೆ, ಅಮ್ಮಮ್ಮ ನೀನೆಂಥ ಜಾಣೆ...ಹೇ ಏ ಚಲುವೆ ಮೊಗದಿ, ಗೆಲುವ ಕಂಡೆ, ಎಲ್ಲಿ ಏನಾಯ್ತೋ ಕಾಣೆ ಗೆಲುವ ಹಿಂದೆ, ಛಲವ ಕಂಡೆ, ಅಮ್ಮಮ್ಮ ನೀನೆಂಥ ಜಾಣೆ   ನಿನ್ನಾಸೆಯ ನಾ ಬಲ್ಲೆನು, ಇನ್ನಾರನೂ ನಾ ಒಲ್ಲೆನು ಸರಸಕೆ ಬರಲಾರೆಯಾ? ಹೇಳು...ಬರಲಾರೆಯಾ?   ನಿನ್ನಂಥ ನೂರು ಹೆಣ್ಣನ್ನು ನಾನು ಬಲ್ಲೆ ನನ್ನಲ್ಲಿ ಇನ್ನು ನಿನ್ನಾಟ ಸಾಗದಲ್ಲೇ   ಬಳಿಗೆ ಬರುವ, ಮನವ ಗೆಲ್ಲುವ ಆಸೆ ನನ್ನಲ್ಲಿ ಬಂತೇ ಸರಸದಿಂದ ನಿನ್ನ ಬೆರೆವೆ, ಬಾ ಹೇಳು ಇನ್ನೇಕೆ ಚಿಂತೆ...ಹೇ