ಪೋಸ್ಟ್‌ಗಳು

ಜೂನ್, 2020 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

Song: Ninninda dooragi iralarenu (ನಿನ್ನಿಂದ ದೂರಾಗಿ ಇರಲಾರೆನು), Movie: Siddartha (ಸಿದ್ದಾರ್ಥ)

ಹಾಡು: ನಿನ್ನಿಂದ ದೂರಾಗಿ ಇರಲಾರೆನು ರಚನೆ: ಜಯಂತ್‌ ಕಾಯ್ಕಿಣಿ ಸಂಗೀತ: ವಿ.ಹರಿಕೃಷ್ಣ  ಗಾಯನ: ರಘು ದೀಕ್ಷಿತ್ ಚಲನಚಿತ್ರ :‌ ಸಿದ್ದಾರ್ಥ ನಿನ್ನಿಂದ ದೂರಾಗಿ ಇರಲಾರೆನು ಇನ್ನೆಂದೂ ನಿನ್ನನ್ನು ಬಿಡಲಾರೆನು ಕಣ್ಣಲ್ಲೆ ನೀನು, ಕೂತಿದ್ದ ಮೇಲೆ ಬೇಕಿಲ್ಲ ಇನ್ನು ಕಣ್ಣಾಮುಚ್ಚಾಲೆ ನಾ ಕೂಗಲೇ ನಿನ್ನನು ಅದೇ ನೀನೂ, ಅದೇ ನಾನೂ ಅತೀ ಆಯ್ತೂ, ಪ್ರೀತಿ ಇನ್ನೂನೂ ಓ ಹೋ (೩) ಮುದ್ದಾದ ನಿನ್ನ ಶೈಲಿನೇ ಭಿನ್ನ ನಿನ್ನೋನು ನಾನು ಎನ್ನೋದೇ ಚೆನ್ನ ಮೆಚ್ಚೋದೇ ಬೇಡ ಇನ್ಯಾರೂ ನಿನ್ನ, ಹೇ ನೆನಪಿನ ನಿನ್ನ ಈ ಕೀಲಿಯಿಂದ ಕನಸಿನ ನನ್ನ ಖಜಾನೆಯೊಂದ ತೆರೆಯುವ ಯತ್ನ ತುಂಬಾನೇ ಚಂದ ಕಾಡಿಲ್ಲ, ನಿನ್ನಂತೆ ಇನ್ಯಾರೂ, ಜ್ವರದಂತೆ ಬಾ ನನ್ನ, ಸ್ವರದಂತೆ ಎಂದೆಂದಿಗೂ ನನ್ನ ಜೊತೆ  ನಿನ್ನಿಂದ ದೂರಾಗಿ ಇರಲಾರೆನು ಇನ್ನೆಂದೂ ನಿನ್ನನ್ನು ಬಿಡಲಾರೆನು ಕಣ್ಣಲ್ಲೆ ನೀನು, ಕೂತಿದ್ದ ಮೇಲೆ ಬೇಕಿಲ್ಲ ಇನ್ನು ಕಣ್ಣಾಮುಚ್ಚಾಲೆ ನಾ ಕೂಗಲೇ ನಿನ್ನನು ಅದೇ ನೀನೂ, ಅದೇ ನಾನೂ ಅತೀ ಆಯ್ತೂ, ಪ್ರೀತಿ ಇನ್ನೂನೂ ನಿನ್ನಿಂದ ದೂರಾಗಿ ಇರಲಾರೆನು ಇನ್ನೆಂದೂ ನಿನ್ನನ್ನು ಬಿಡಲಾರೆನು

Song: Hrudayadali idenidu(ಹೃದಯದಲಿ ಇದೇನಿದು), Movie: Devatha Manushya(ದೇವತಾ ಮನುಷ್ಯ)

ಇಮೇಜ್

Song: Jaaji mallige node (ಜಾಜಿ ಮಲ್ಲಿಗೆ ನೋಡೆ), Movie: Sevanthi sevanthi (ಸೇವಂತಿ ಸೇವಂತಿ)

ಹಾಡು: ಜಾಜಿ ಮಲ್ಲಿಗೆ ನೋಡೆ  ರಚನೆ: ಎಸ್.‌ ನಾರಾಯಣ್ ಸಂಗೀತ: ಎಸ್.‌ ಎ. ರಾಜ್‌ಕುಮಾರ್‌ ಗಾಯನ: ವಿಜಯ್‌ ರಾಘವೇಂದ್ರ, ಶ್ರೇಯ ಘೋಶಾಲ್ ಚಲನಚಿತ್ರ :‌ ಸೇವಂತಿ ಸೇವಂತಿ ಜಾಜಿ ಮಲ್ಲಿಗೆ ನೋಡೇ ಸೂಜುಗದ ಹೂವೇ ನೋಡೇ ಜಾಜಿ ಮಲ್ಲಿಗೆ ನೋಡೇ, ಸೂಜುಗದ ಹೂವೇ ನೋಡೇ ಎನ್ನ ಮ್ಯಾಲ ಮುನಿವಾರೇ ಜಾಜಿ ಮಲ್ಲಿಗೆ ನೋಡೇ, ಸೂಜುಗದ ಹೂವೇ ನೋಡೇ ಎನ್ನ ಮ್ಯಾಲ ಮುನಿವಾರೇ ಕಮಲದ ಹೂ ನಿನ್ನ ಕಾಣದೆ ಇರಲಾರೆ ಮಲ್ಲಿಗೆ ಮಾಯೆ, ಓ ಕೇದಿಗೆ ಗರಿ ನಿನ್ನ ಅಗಲಿ ಇರಲಾರೆ ಮಲ್ಲಿಗೆ ಮಾಯೆ, ಓ ಜಾಜಿ ಮಲ್ಲಿಗೆ ನೋಡೇ, ಸೂಜುಗದ ಹೂವೇ ನೋಡೇ ಎನ್ನ ಮ್ಯಾಲ ಮುನಿವಾರೇ ಕನ್ನೆ ಕಸ್ತೂರಿ ಬಾಲೆ, ರಾಮ ಲಕುಮಿ ಮಣಿಯೇ  ಮಾರುದ್ದ ಜಡೆಯೋಳೆ ವಿಸ್ತರದ ಹೆಣ್ಣೇ ಕನ್ನೆ ಕಸ್ತೂರಿ ಬಾಲೆ, ರಾಮ ಲಕುಮಿ ಮಣಿಯೇ  ಮಾರುದ್ದ ಜಡೆಯೋಳೆ ವಿಸ್ತರದ ಹೆಣ್ಣೇ ಎಳ್ಳು ಹೂವಿನ ಸೀರೆ, ಬೆಳ್ಳಿ ಕಾಲುಂಗುರ ಹಳ್ಳದ ನೀರು ತರುತ್ತಾಳೆ ನನ್ನ ಗೆಳತಿ ಬಣ್ಣದ ಬಾಲೆ, ನೀ ಹೇಳೇ ಎನ್ನ ಮ್ಯಾಲ ಮುನಿವಾರೇ ಜಾಜಿ ಮಲ್ಲಿಗೆ ನೋಡೇ, ಸೂಜುಗದ ಹೂವೆ ನೋಡೇ ಎನ್ನ ಮ್ಯಾಲ ಮುನಿವಾರೇ ಲಾಲಾ ಲಲಲಲ ಲಾಲಾ, ಲಾಲಾ ಲಲಲಲ ಲಾಲಾ ಲಾಲಾ ಲಲಲಲಲ ಲಾಲಾ ಲಾ ಲಲಲಾ{೨} ಕೋಗಿಲೆ ದನಿ ಚಂದ, ನಾಗರ ಹೆಡೆ ಚಂದ ದೇವಲೋಕದ ಪದುಮಿನಿ ನೀನು  ಮುನಿಸಿಲ್ಲ ನನ್ನ ಗೆಳೆಯ, ಕನಸಲ್ಲ ನಂಬು ನನ್ನ ಚನ್ನಾದ ಚಲುವ ನೀ ಕೇಳೋ ಹಣ್ಣು ಹೋಳಿಗೆ ತುಪ್ಪ ಅಡಿಗೆಯ ನಾ ಮಾಡಿ ಬತ್ತೀನಿ ನೀನಿಟ್ಟ ಗುರುತಿಗೆ ಬತ್ತೀನೀ ಜಾಣ, ಬರುವ ದಾರಿ ಕಾಯೋ ಎನ್ನ ಮ್ಯಾಲೆ ಮುನಿವಾ

Song: Ivalu yaaru balleyenu(ಇವಳು ಯಾರು ಬಲ್ಲೆ ಏನು), Movie: Gowri (ಗೌರಿ)

  ಹಾಡು: ಇವಳು ಯಾರು ಬಲ್ಲೆ ಏನು ರಚನೆ:‌ ಕೆ.ಎಸ್.‌ ನರಸಿಂಹಸ್ವಾಮಿ ಸಂಗೀತ: ಜಿ. ಕೆ. ವೆಂಕಟೇಶ್ ಗಾಯನ: ಪಿ. ಬಿ. ಶ್ರೀನಿವಾಸ್‌ ಚಲನಚಿತ್ರ: ಗೌರಿ   ಇವಳು ಯಾರು ಬಲ್ಲೆ ಏನು? ಇವಳ ಹೆಸರ ಹೇಳಲೇನು?   ಇವಳು ಯಾರು ಬಲ್ಲೆ ಏನು?(೨) ಇವಳ ಹೆಸರ ಹೇಳಲೇನು? ಇವಳ ದನಿಗೆ ತಿರುಗಲೇನು? ಇವಳು ಏತಕೋ, ಬಂದು ನನ್ನ ಸೆಳೆದಳು   ಇವಳು ಯಾರು ಬಲ್ಲೆ ಏನು? ಇವಳ ಹೆಸರ ಹೇಳಲೇನು? ಇವಳ ದನಿಗೆ ತಿರುಗಲೇನು? ಇವಳು ಏತಕೋ, ಬಂದು ನನ್ನ ಸೆಳೆದಳು   ಅಡಿಯ ಮುಟ್ಟ ನೀಳ ಜಡೆ ಅಡಿಯ ಮುಟ್ಟ ನೀಳ ಜಡೆ ಮುಡಿಯ ತುಂಬ ಹೂವು ಹೆಡೆ   ಇವಳು ಅಡಿಯನಿಟ್ಟ ಕಡೆ, ಹೆಜ್ಜೆ ಹೆಜ್ಜೆಗೆ ಇವಳು ಅಡಿಯನಿಟ್ಟ ಕಡೆ, ಹೆಜ್ಜೆ ಹೆಜ್ಜೆಗೆ ಒಂದು ದೊಡ್ಡ ಮಲ್ಲಿಗೆ   ಇವಳು ಯಾರು ಬಲ್ಲೆ ಏನು? ಇವಳ ಹೆಸರ ಹೇಳಲೇನು? ಇವಳ ದನಿಗೆ ತಿರುಗಲೇನು? ಇವಳು ಏತಕೋ, ಬಂದು ನನ್ನ ಸೆಳೆದಳು   ಅಂಗಾಲಿನ ಸಂಜೆಗೆಂಪು ಕಾಲಂದುಗೆ ಗೆಜ್ಜೆ ಇಂಪು   ಮೋಹದ ಮಲ್ಲಿಗೆಯ ಕಂಪು ಕರೆದುದೆನ್ನನು, ಆ..ಓ..   ಮೋಹದ ಮಲ್ಲಿಗೆಯ ಕಂಪು ಕರೆದುದೆನ್ನನು, ನಾನು ಹಿಡಿಯ ಹೋದೆನು ನಾನು ಹಿಡಿಯ ಹೋದೆನು   ಬಂಗಾರದ ಬೆಳಕಿನೊಳಗೆ, ಮುಂಗಾರಿನ ಮಿಂಚು ಬೆಳಗೆ ಇಳೆಗಿಳಿದಿಹ ಮೋಡದೊಳಗೆ ಮೆರೆಯುತಿದ್ದಳು, ನನ್ನ ಕರೆಯುತಿದ್ದಳು   ಇವಳು ಯಾರು ಬಲ್ಲೆ ಏನು? ಇವಳ ಹೆಸರ ಹೇಳಲೇನು? ಇವಳ ದನಿಗೆ ತಿರುಗಲೇನು? ಇವಳು ಏತಕೋ, ಬಂದು ನನ್ನ ಸೆಳೆದಳು  

Song: Missamma kissamma ಮಿಸ್ಸಮ್ಮ ಕಿಸ್ಸಮ್ಮ(ಮೈಸೂರ ಮಲ್ಲಿಗೆಯ)‌, Movie: Yuvaraja (ಯುವರಾಜ)

ಹಾಡು: ಮಿಸ್ಸಮ್ಮ ಕಿಸ್ಸಮ್ಮ  ರಚನೆ: ಕೆ. ಕಲ್ಯಾಣ್ ಸಂಗೀತ: ರಮಣ ಗೋಗುಲ ಗಾಯನ: ರಮಣ ಗೋಗುಲ, ನಂದಿತ ಚಲನಚಿತ್ರ: ಯುವರಾಜ ಮೈಸೂರ ಮಲ್ಲಿಗೆಯ ಯೌವ್ವನ ನೀನೇನೇ? ಬೇಲೂರ ಶಿಲ್ಪದ ಸಣ್ಣ ನೀನೇನೇ? ಆಗುಂಬೆ ಮಳೆಯ ವೈಯ್ಯಾರ ನೀನೇನೇ? ಜೋಗದ ಬಣ್ಣ ನೀನೇನೇ? ಓ ಮಿಸ್ಸಮ್ಮ ಕಿಸ್ಸಮ್ಮ ಯಮ್ಮಾ ನಿನ್‌ ಕಿಸ್ಸೇ ನನ್ನ ಟಾನಿಕ್ಕು ಕಣೇ ಓ ರಾಜ ಶಿವರಾಜ ಯುವರಾಜ ನಿನ್‌ ಲವ್ವೇ ನಂಗೆ ಮ್ಯಾಜಿಕ್ಕು ಕಣೋ ಲೋಕಕ್ಕೆ ಲೋಕವೇ, ಮೆಚ್ಚುವ ಪ್ರೀತಿಗೆ ನಾವಿಬ್ಬರೇ ಗುರುತು ನಮ್ಮಿಬ್ಬರಿಂದಲೆ ಪ್ರೇಮಿಗಳೆಲ್ಲರಿಗು ಭರವಸೆಯ ಮಾತು ಸ್ವರ್ಗ ಕೈಯ್ಯಳತೆ ದೂರಾನೇ ಹಾರಿ ಹಿಡಿಯೋಣ ಬಾ ನಮ್ಮ ನಿಸ್ವಾರ್ಥ ಪ್ರೀತಿನ ಹಂಚಿ ಹಾಡೋಣ ಬಾ ಓ ಮಿಸ್ಸಮ್ಮ ಕಿಸ್ಸಮ್ಮ ಯಮ್ಮಾ ನಿನ್‌ ಕಿಸ್ಸೇ ನನ್ನ ಟಾನಿಕ್ಕು ಕಣೇ ಓ ರಾಜ ಶಿವರಾಜ ಯುವರಾಜ ನಿನ್‌ ಲವ್ವೇ ನಂಗೆ ಮ್ಯಾಜಿಕ್ಕು ಕಣೋ ಅಂತರಿಕ್ಷದಾಚೆಗೆ, ಹೊತ್ತುಕೊಂಡೋಗುವೆ ಈ ನಿನ್ನ ಅಂತರಂಗ ಅಲ್ಲಿಂದ ಭೂಮಿಗೆ ರವಾನೆ ಮಾಡುವೆ ನೀ ಕೊಡೊ ಅನುರಾಗ ಲಾಲಾಲಾ  ಎಲ್ಲೂ ನಮಗಿಲ್ಲ ತಡೆಯಾಗ್ನೆ, ಹೇಯ್ ಒಲವೆ ಪ್ರಜ್ನೆ ಕಣೆ ಪ್ರೇಮಕೆ ಅಂತ್ಯ ಇನ್ನಿಲ್ಲ ಜಗವೆ ಹಸೆಮಣೆ ಓ ಮಿಸ್ಸಮ್ಮ ಕಿಸ್ಸಮ್ಮ ಯಮ್ಮಾ ನಿನ್‌ ಕಿಸ್ಸೇ ನನ್ನ ಟಾನಿಕ್ಕು ಕಣೇ ಓ ರಾಜ ಶಿವರಾಜ ಯುವರಾಜ ನಿನ್‌ ಲವ್ವೇ ನಂಗೆ ಮ್ಯಾಜಿಕ್ಕು ಕಣೋ ಹೇಯ್! ಮೈಸೂರ ಮಲ್ಲಿಗೆಯ ಯೌವ್ವನ ನೀನೇನೇ? ಬೇಲೂರ ಶಿಲ್ಪದ ಸಣ್ಣ ನೀನೇನೇ? ಆಗುಂಬೆ ಮಳೆಯ ವೈಯ್ಯಾರ ನೀನೇನೇ? ಜೋಗದ ಬಣ್ಣ ನೀನೇನೇ? ಓ ಮಿಸ್ಸಮ್ಮ ಕಿಸ

Song: Kan kanna salige (ಕಣ್‌ ಕಣ್ಣ ಸಲಿಗೆ), Movie: Navagraha (ನವಗ್ರಹ)

ಹಾಡು: ಕಣ್‌ ಕಣ್ಣ ಸಲಿಗೆ ರಚನೆ: ವಿ. ನಾಗೇಂದ್ರ ಪ್ರಸಾದ್‌ ಸಂಗೀತ: ವಿ. ಹರಿಕೃಷ್ಣ ಗಾಯನ: ಸೋನು ನಿಗಂ ಚಲನಚಿತ್ರ: ನವಗ್ರಹ ಕಣ್‌ ಕಣ್ಣ ಸಲಿಗೆ, ಸಲಿಗೆ ಅಲ್ಲ ಸುಲಿಗೆ ನೀನಿನ್ನು ನನಗೆ, ನನಗೇ ನನ್ನನಗೆ ಥರಥರ, ಹೊಸ ಥರ, ಒಲವಿನ ಅವಸರ ಹೃದಯಾನೆ ಜೋಕಾಲಿ ಕಣ್‌ ಕಣ್ಣ ಸಲಿಗೆ, ಸಲಿಗೆ ಅಲ್ಲ ಸುಲಿಗೆ ನೀನಿನ್ನು ನನಗೆ, ನನಗೇ ನನ್ನನಗೆ ಋತು ಏಳು ಭೂಮಿಯ ಮೇಲೆ ಪ್ರಣಯಾನೇ ಎಂಟನೆ ಓಲೆ, ತಿಳಿ ತಿಳಿ ಪ್ರೇಮ ಇರೋದಂತು ನಾಲ್ಕೇ ವೇದ ಪ್ರೀತಿ ತಾನೆ ಪಂಚಮ ವೇದ, ನಿಜ ನಿಜ ಪ್ರೇಮ ನಾನು ನಿನ್ನಲಿ, ಮೆಚ್ಚಿದ, ಅಂಶವೇ ಪ್ರೀತಿ ನೀನು ನನ್ನನು, ಒಪ್ಪದೇ, ಹೋದರೆ, ಏನೋ ಭೀತಿ ಕಣ್‌ ಕಣ್ಣ ಸಲಿಗೆ, ಸಲಿಗೆ ಅಲ್ಲ ಸುಲಿಗೆ ನೀನಿನ್ನು ನನಗೆ, ನನಗೇ ನನ್ನನಗೆ ಸಹಿ ಮಾಡು ನನ್ನೆದೆ ತುಂಬಾ, ನೀನೆ ಅದರ ತುಂಬಾ ತುಂಬಾ,  ನಂಬು ನನ್ನ ನಲ್ಲೆ ಒಂದೆ ಒಂದು ಮಾತು ಕೇಳು ಎಲ್ಲ ಜನುಮ ನನ್ನನೆ ಆಳು, ನೀನೆ ನನ್ನ ಬಾಳು ಯಾವ ತುದಿಯಲಿ, ಇದ್ದರೂ, ಭೂಮಿಯ ಮೇಲೆ ನಾನು ನಿನ್ನನೇ ಕಾಯುವೆ, ಪ್ರೀತಿಸೇ, ಪ್ರೀತಿ ಮಾಡೆ ಕಣ್‌ ಕಣ್ಣ ಸಲಿಗೆ, ಸಲಿಗೆ ಅಲ್ಲ ಸುಲಿಗೆ ನೀನಿನ್ನು ನನಗೆ, ನನಗೇ ನನ್ನನಗೆ ಥರಥರ, ಹೊಸ ಥರ, ಒಲವಿನ ಅವಸರ ಹೃದಯಾನೆ ಜೋಕಾಲಿ  

Song: Premalokada parijathave (ಪ್ರೇಮಲೋಕದ ಪಾರಿಜಾತವೇ), Movie: Jaana (ಜಾಣ)

ಹಾಡು: ಪ್ರೇಮಲೋಕದ ಪಾರಿಜಾತವೇ ರಚನೆ: ಹಂಸಲೇಖ ಸಂಗೀತ: ಹಂಸಲೇಖ ಗಾಯನ:‌ ಎಸ್.‌ ಪಿ. ಬಾಲಸುಬ್ರಮಣ್ಯಂ ಚಲನಚಿತ್ರ: ಜಾಣ ಪ್ರೇಮಲೋಕದ ಪಾರಿಜಾತವೇ ಯಾಕೆ ನೀನು ಎದೆಯ ತುಂಬಿದೆ ನೀನು ಒಳಗಿರಲು, ಮಲಗೊ ಮಾತಿಲ್ಲ ನೀನು ಒಳಗಿರಲು, ಉಸಿರೇ ಬೇಕಿಲ್ಲ ನೀನು ಕನ್ನಡದ, ಚಂದನದ, ಕಂಪು ಕಸ್ತೂರಿ ಪ್ರೇಮಲೋಕದ ಪಾರಿಜಾತವೇ ಯಾಕೆ ನೀನು ಎದೆಯ ತುಂಬಿದೆ ನೀನು ಒಳಗಿರಲು, ಮಲಗೊ ಮಾತಿಲ್ಲ ನೀನು ಒಳಗಿರಲು, ಉಸಿರೇ ಬೇಕಿಲ್ಲ ನೀನು ಕನ್ನಡದ, ಚಂದನದ, ಕಂಪು ಕಸ್ತೂರಿ ಚಲುವಿನ ಬಲೆಯಲೀ, ಒಲವಿನ ಮೀನು ನಾ(೨) ಸೆರಗಿನ ಗಿರಿಯಲಿ, ವಿಲವಿಲ ಹಾಡು ನಾ ಧರೆಗೆ ಇಳಿದ ಅಪ್ಸರೆ, ನಗುವೆ, ನಿನಗೆ, ಒಡವೇ ಸರಳ, ವಿರಳ ಸುಂದರಿ   ನೀನೇ, ಸ್ವರ್ಗ, ಎದುರೇ ಪ್ರೇಮಲೋಕದ ಪಾರಿಜಾತವೇ ಯಾಕೆ ನೀನು ಎದೆಯ ತುಂಬಿದೆ ನೀನು ಒಳಗಿರಲು, ಮಲಗೊ ಮಾತಿಲ್ಲ ನೀನು ಒಳಗಿರಲು, ಹಾ! ಉಸಿರೇ ಬೇಕಿಲ್ಲ ನೀನು ಕನ್ನಡದ, ಚಂದನದ, ಕಂಪು ಕಸ್ತೂರಿ ಕನ್ನಡ ಕವಿಗಳಾ, ಕವನದ ಕಿವಿಗಳಾ(೨) ಜೇನಿನ ಪದಗಳ, ಹೂಮಳೆ ಸುರಿಸುವೆ ಕಮಲ ವಿಮಲ ಮಲ್ಲಿಗೆ ಕಣ್ಣೂ, ಹೃದಯ, ಮನಸೂ ರಾತ್ರಿ ರಾಣಿ ನೈದಿಲೆ ನಿನ್ನ ಮೈಯಿ, ಸೊಗಸೂ ಪ್ರೇಮಲೋಕದ, ಪಾರಿಜಾತವೇ ಯಾಕೆ ನೀನು ಎದೆಯ ತುಂಬಿದೆ ನೀನು ಒಳಗಿರಲು, ಮಲಗೊ ಮಾತಿಲ್ಲ ನೀನು ಒಳಗಿರಲೂ, ಉಸಿರೇ ಬೇಕಿಲ್ಲ ನೀನು ಕನ್ನಡದ, ಚಂದನದ, ಕಂಪು ಕಸ್ತೂರಿ