Song: Enendu hesaridali(ಏನೆಂದು ಹೆಸರಿಡಲಿ), Movie: Anna bond (ಅಣ್ಣ ಬಾಂಡ್)
ಹಾಡು: ಏನೆಂದು ಹೆಸರಿಡಲಿ ರಚನೆ: ಜಯಂತ್ ಕಾಯ್ಕಿಣಿ ಸಂಗೀತ: ವಿ. ಹರಿಕೃಷ್ಣ ಗಾಯನ: ಸೋನು ನಿಗಮ್, ಶ್ರೇಯ ಘೋಶಾಲ್ ಚಲನಚಿತ್ರ: ಅಣ್ಣ ಬಾಂಡ್ ಏನೆಂದು ಹೆಸರಿಡಲಿ ಈ ಚಂದ ಅನುಭವಕೆ ಈಗಂತು ಹೃದಯದಲಿ ನಿಂದೇನೆ ಚಟುವಟಿಕೆ ಈ ಮೋಹದ, ರೂವಾರಿ ನೀನಲ್ಲವೇ ಇನ್ನೇತಕೆ ಬೇಜಾರು ನಾನಿಲ್ಲವೇ ಏನೆಂದು ಹೆಸರಿಡಲಿ ಈ ಚಂದ ಅನುಭವಕೆ ಈಗಂತು ಹೃದಯದಲಿ ನಿಂದೇನೆ ಚಟುವಟಿಕೆ ಜಾತ್ರೆಲೂ, ಸಂತೇಲೂ, ನೀ ಕೈಯ್ಯ ಬಿಡದಿರು ಆಗಾಗ ಕಣ್ಣಲ್ಲಿ, ಸಂದೇಶ ಕೊಡುತಿರು ಅದೇ ಪ್ರೀತಿ ಬೇರೆ ರೀತಿ, ಹೇಗಂತ ಹೇಳೋದು ಇಡೀ ರಾತ್ರಿ ಕಳೆದೆ ನಿನ್ನ ಬೆಳಕಿಗೆ ಕಾದು ಈ ಸ್ವಪ್ನದ, ಸಂಚಾರ ಸಾಕಲ್ಲವೇ ಇನ್ನೇತಕೆ ಬೇಜಾರು ನಾನಿಲ್ಲವೇ ಏನೆಂದು ಹೆಸರಿಡಲಿ ಈ ಚಂದ ಅನುಭವಕೆ ಈಗಂತು ಹೃದಯದಲಿ ನಿಂದೇನೆ ಚಟುವಟಿಕೆ ಓ, ಹೊತ್ತಿಲ್ಲ, ಗೊತ್ತಿಲ್ಲ, ಬೆನ್ನಲ್ಲೇ ಬರುವೆ ನಾ ನೀನಿಟ್ಟ ಮುತ್ತುಂಟು, ಇನ್ನೆಲ್ಲಿ ಬಡತನ ಗಸ್ತು ಹೊಡೆವ ಚಂದ್ರ ಬಂದ, ಕೇಳುತ್ತ ಮಾಮೂಲು ಕೊಟ್ಟು ಕಳಿಸೋಣ ಒಂದು ಕವಿತೆಯ ಸಾಲು ಓ, ನಿನ್ನಾಸೆಯು, ನಂದೂನು ಹೌದಲ್ಲವೇ ಇನ್ನೇತಕೆ ಬೇಜಾರು ನಾನಿಲ್ಲವೇ ಏನೆಂದು ಹೆಸರಿಡಲಿ ಈ ಚಂದ ಅನುಭವಕೆ ಈಗಂತು ಹೃದಯದಲಿ ನಿಂದೇನೆ ಚಟುವಟಿಕೆ ಈ ಮೋಹದ, ರೂವಾರಿ ನೀನಲ್ಲವೇ ಇನ್ನೇತಕೆ ಬೇಜಾರು ನಾನಿಲ್ಲವೇ EnEndu hEsariDali ee chanda anuBhavakE Eegantu hruda...
ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ