Song: Sada ninna kannali (ಸದಾ ನಿನ್ನ ಕಣ್ಣಲಿ), Movie: Bachchan (ಬಚ್ಚನ್-2013)

ಹಾಡು: ಸದಾ ನಿನ್ನ ಕಣ್ಣಲಿ
ರಚನೆ:‌ ಜಯಂತ್‌ ಕಾಯ್ಕಿಣಿ
ಸಂಗೀತ: ವಿ. ಹರಿಕೃಷ್ಣ
ಗಾಯನ: ಸೋನು ನಿಗಂ, ಶ್ರೇಯ ಘೋಶಾಲ್
ಚಲನಚಿತ್ರ: ಬಚ್ಚನ್

ಸದಾ ನಿನ್ನ ಕಣ್ಣಲಿ, ನನ್ನ ಬಿಂಬ ಕಾಣಲು
ತುದಿಗಾಲಿನಲ್ಲಿ, ತಯಾರಾದೆ ನಾನು

ನಿನ್ನದೇ ಗುರುತು, ಕಣ್ಣಲ್ಲೇ ಕುಳಿತು
ನನ್ನೆದೆಯ ಸ್ಥಿತಿಯೇ ನಾಜೂಕು
ನಿನಗೆಂದೇ ಬಾಳುವೆ, ಹಠ ಮಾಡಿ ನಾನು

ಓ,ಸದಾ ನಿನ್ನ ಕಣ್ಣಲಿ, ನನ್ನ ಬಿಂಬ ಕಾಣಲು
ತುದಿಗಾಲಿನಲ್ಲಿ, ತಯಾರಾದೆ ನಾನು

ಬಲು ಭಾವುಕ, ಬದಲಾವಣೆ
ನನ್ನಲ್ಲಿ ನೀ ತಂದೆ, ಈಗ
ಅಲೆದಾಡುವ, ಅಪರೂಪವ
ನಿನ್ನಲ್ಲಿ ನಾ ಕಂಡೆ, ಓ ಓ

ನೀನೇ ಬಣ್ಣ, ನೀನೇ ನಕಾಶೆ
ನೀನೇ ನನ್ನ ದಿವ್ಯ ದುರಾಸೆ

ನೀನೇ ವಾರ್ತೆ, ನೀನೇ ವಿಹಾರ
ನೀನೇ ದಾರಿ ನನ್ನ ಬಿಡಾರ

ನೆನಪಾದರೆ ಸಾಕು, ಎದುರು ನೀನೆ ಬೇಕು
ಬಿಡಲಾರೆ ನಿನ್ನನು, ಸಲೀಸಾಗಿ ನಾನು

ಸದಾ ನಿನ್ನ ಕಣ್ಣಲಿ, ನನ್ನ ಬಿಂಬ ಕಾಣಲು
ಮರುಳಾಗಿ ಹೋದೆನು, ಸುಮಾರಾಗಿ ನಾನು

ಕನಸನು ಗುಣಿಸುವಂಥ, ನೆನಪನು ಎಣಿಸುವಂಥ
ಹೃದಯದ ಗಣಿತ ನೀನು

ನನ್ನ ಜೀವ ನಿನ್ನ ಸಮೀಪ
ಬೇರೆ ಏನೂ ಇಲ್ಲ ಕಲಾಪ
ನೀನೇ ಮೌನ ನೀನೇ ವಿಲಾಸ
ನೀನೇ ನನ್ನ ಖಾಯಂ ವಿಳಾಸ

ಬಳಿಯಿದ್ದರೆ ನೀನು, ಮರಣ ಬಾರದಿನ್ನು
ನಿನ್ನನ್ನೆ ನಂಬುತ ಬಚಾವಾದೆ ನಾನು

ಸದಾ ನಿನ್ನ ಕಣ್ಣಲಿ, ನನ್ನ ಬಿಂಬ ಕಾಣಲು
ತುದಿಗಾಲಿನಲ್ಲಿ, ತಯಾರಾದೆ ನಾನು





ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

Song: Elliruve (ಎಲ್ಲಿರುವೆ), Movie: Bayaludaari (ಬಯಲುದಾರಿ)

Song: Ninninda dooragi iralarenu (ನಿನ್ನಿಂದ ದೂರಾಗಿ ಇರಲಾರೆನು), Movie: Siddartha (ಸಿದ್ದಾರ್ಥ)

Song: Preethi neenillade naanu hegirali (ಪ್ರೀತಿ ನೀನಿಲ್ಲದೆ ನಾನು ಹೇಗಿರಲಿ), Movie: Bhaava baamaida (ಭಾವ ಬಾಮೈದ)

Song: Onde ondu Aaseyu (ಒಂದೇ ಒಂದು ಆಸೆಯು), Seetharamu (ಸೀತಾರಾಮು)

Song: Kangalu vandane helide (ಕಂಗಳು ವಂದನೆ ಹೇಳಿದೆ), Movie: Mugiyada kathe (‌ಮುಗುಯದ ಕಥೆ)

Song: Neenu neene illi naanu naane (ನೀನು ನೀನೇ ಇಲ್ಲಿ ನಾನು ನಾನೇ), Movie: Gadibidi ganda (ಗಡಿಬಿಡಿ ಗಂಡ)

Song: Jaaji mallige node (ಜಾಜಿ ಮಲ್ಲಿಗೆ ನೋಡೆ), Movie: Sevanthi sevanthi (ಸೇವಂತಿ ಸೇವಂತಿ)

Song: Kannige kaanuva(ಕಣ್ಣಿಗೆ ಕಾಣುವ ), Movie: Yarivanu(ಯಾರಿವನು)