Song: Naa Ninna Mareyalaare, Movie: Naa ninna mareyalaare

ಹಾಡು: ನಿನ್ನ ಮರೆಯಲಾರೆ
ರಚನೆ: ಚಿ.ಉದಯಶಂಕರ್‌
ಸಂಗೀತ: ರಾಜನ್-ನಾಗೇಂದ್ರ
ಗಾಯನ: ಡಾ. ರಾಜಕುಮಾರ್‌, ವಾಣಿ ಜಯರಾಮ್‌
ಚಲನಚಿತ್ರ: ನಾ ನಿನ್ನ ಮರೆಯಲಾರೆ


ನಿನ್ನ, ಮರೆಯಲಾರೆ,
ನಾ ನಿನ್ನ, ಮರೆಯಲಾರೆ,
ಎಂದೆಂದು ನಿನ್ನ ಬಿಡಲಾರೆ ಚಿನ್ನ,
ನೀನೇ ಪ್ರಾಣ ನನ್ನಾಣೆಗೂ


ನಿನ್ನ, ಮರೆಯಲಾರೆ,
ನಾ ನಿನ್ನ, ಮರೆಯಲಾರೆ


ಜೊತೆಗೆ ನೀನು ಸೇರಿ ಬರುತಿರೆ
ಜಗವ ಮೆಟ್ಟಿ ನಾ ನಿಲ್ಲುವೆ
ಒಲಿದ ನೀನು, ನಕ್ಕು ನಲಿದರೆ
ಏನೇ ಬರಲಿ ನಾ ಗೆಲ್ಲುವೆ


ಚೆಲುವೆ ನೀನು ಉಸಿರು ಉಸಿರಲಿ
ಬೆರೆತು ಬದುಕು ಹೂವಾಗಿದೆ
ಎಂದೂ ಹೀಗೆ ಇರುವ ಬಯಕೆಯು
ಮೂಡಿ ಮನಸು ತೇಲಾಡಿದೆ
ನಮ್ಮ, ಬಾಳು, ಹಾಲು, ಜೇನು


ನಿನ್ನ, ಮರೆಯಲಾರೆ,
ನಾ ನಿನ್ನ, ಮರೆಯಲಾರೆ
ಎಂದೆಂದು ನಿನ್ನ ಬಿಡಲಾರೆ ಚಿನ್ನ,
ನೀನೇ ಪ್ರಾಣ ನನ್ನಾಣೆಗೂ
ನಿನ್ನ, ಮರೆಯಲಾರೆ,
ನಾ ನಿನ್ನ, ಮರೆಯಲಾರೆ


ನಾಳೆ,ಏನೊ ಯಾರು ಅರಿಯರು
ಇಂದು ಏನೊ ಹಾಯಾಗಿದೆ
ತನುವಾ ನೀನು ಸೋಕೆ ಎದೆಯಲಿ
ಮಿಂಚು ಹರಿದು ಝುಂ ಎಂದಿದೆ


ಮನದ ಮಾತ ಎದೆಯ ಮಿಡಿತದಿ
ಅರಿತು ಆಸೆ ಪೂರೈಸಿದೆ
ಇನ್ನೂ ಸನಿಹ ಸೇರಿ ನಿನ್ನನು 
ಬೆರೆವ ಕನಸು ಓಲಾಡಿದೆ
ಸರಸ, ವಿರಸ, ಎಲ್ಲಾ, ಹರುಷ


ನಿನ್ನ, ಮರೆಯಲಾರೆ,
ನಾ ನಿನ್ನ, ಮರೆಯಲಾರೆ


ನೂರು ಮಾತು ಏಕೆ ಒಲವಿಗೆ
ನೋಟ ಒಂದೆ ಸಾಕಾಗಿದೆ
ಕಣ್ಣ ತುಂಬ ನೀನೆ ತುಂಬಿಹೆ
ದಾರಿ ಕಾಣದಂತಾಗಿದೆ


ಸಿಡಿಲೇ ಬರಲಿ, ಊರೆ ಗುಡುಗಲಿ
ದೂರ ಹೋಗೆ ನಾನೆಂದಿಗೂ
ಸಾವೇ ಬಂದು ನನ್ನ ಸೆಳೆದರೂ
ನಿನ್ನ ಬಿಡೆನು ಎಂದೆಂದಿಗೂ
ನೋವು, ನಲಿವು, ಎಲ್ಲ, ಒಲವು


ನಿನ್ನ, ಮರೆಯಲಾರೆ,
ನಾ ನಿನ್ನ, ಮರೆಯಲಾರೆ
ಎಂದೆಂದು ನಿನ್ನ ಬಿಡಲಾರೆ ಚಿನ್ನ,
ನೀನೇ ಪ್ರಾಣ ನನ್ನಾಣೆಗೂ
ನಿನ್ನ, ನಾ ನಿನ್ನ ಮರೆಯಲಾರೆ, ಮರೆಯಲಾರೆ

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

Song: Sada ninna kannali (ಸದಾ ನಿನ್ನ ಕಣ್ಣಲಿ), Movie: Bachchan (ಬಚ್ಚನ್-2013)

Song: Elliruve (ಎಲ್ಲಿರುವೆ), Movie: Bayaludaari (ಬಯಲುದಾರಿ)

Song: Preethi neenillade naanu hegirali (ಪ್ರೀತಿ ನೀನಿಲ್ಲದೆ ನಾನು ಹೇಗಿರಲಿ), Movie: Bhaava baamaida (ಭಾವ ಬಾಮೈದ)

Song: Ninninda dooragi iralarenu (ನಿನ್ನಿಂದ ದೂರಾಗಿ ಇರಲಾರೆನು), Movie: Siddartha (ಸಿದ್ದಾರ್ಥ)

Song: Onde ondu Aaseyu (ಒಂದೇ ಒಂದು ಆಸೆಯು), Seetharamu (ಸೀತಾರಾಮು)

Song: Kangalu vandane helide (ಕಂಗಳು ವಂದನೆ ಹೇಳಿದೆ), Movie: Mugiyada kathe (‌ಮುಗುಯದ ಕಥೆ)

Song: Neenu neene illi naanu naane (ನೀನು ನೀನೇ ಇಲ್ಲಿ ನಾನು ನಾನೇ), Movie: Gadibidi ganda (ಗಡಿಬಿಡಿ ಗಂಡ)

Song: Jaaji mallige node (ಜಾಜಿ ಮಲ್ಲಿಗೆ ನೋಡೆ), Movie: Sevanthi sevanthi (ಸೇವಂತಿ ಸೇವಂತಿ)

Song: Kannige kaanuva(ಕಣ್ಣಿಗೆ ಕಾಣುವ ), Movie: Yarivanu(ಯಾರಿವನು)