50th post, Song: Nagu nagutha nali (ನಗುನಗುತ ನಲಿ), Movie: Bangarada manushya (ಬಂಗಾರದ ಮನುಷ್ಯ)

ಹಾಡು: ನಗುನಗುತ ನಲಿ
ರಚನೆ: ಹುಣಸೂರು ಕೃಷ್ಣಮೂರ್ತಿ
ಸಂಗೀತ: ಜಿ.ಕೆ. ವೆಂಕಟೇಶ್‌
ಗಾಯನ: ಪಿ. ಬಿ. ಶ್ರೀನಿವಾಸ್‌
ಚಲನಚಿತ್ರ: ಬಂಗಾರದ ಮನುಷ್ಯ


ನಗುನಗುತ ನಲಿ ನಲಿ
ಎಲ್ಲಾ ದೇವನ, ಕಲೆಯೆಂದೇ ನೀ ತಿಳಿ
ಅದರಿಂದ ನೀ ಕಲಿ

ನಗುನಗುತ ನಲಿ ನಲಿ, ಏನೇ ಆಗಲಿ

ಜಗವಿದು ಜಾಣ, ಚಲುವಿನ ತಾಣ
ಎಲ್ಲೆಲ್ಲೂ ರಸದೌತಣ, ನಿನಗೆಲ್ಲೆಲ್ಲೂ ರಸದೌತಣ
ಲತೆಗಳು ಕುಣಿದಾಗ, ಹೂಗಳು ಬಿರಿದಾಗ

ನಗುನಗುತ ನಲಿ ನಲಿ, ಏನೇ ಆಗಲಿ

ತಾಯಿ ಒಡಲಿನ, ಕುಡಿಯಾಗಿ ಜೀವನ(೨)
ಮೂಡಿ ಬಂದು ಚೇತನ, ತಾಳಲೆಂದು ಅನುದಿನ(೨)
ಅವಳೆದೆ ಅನುರಾಗ, ಕುಡಿಯುತ ಬೆಳೆದಾಗ

ನಗುನಗುತ ನಲಿ ನಲಿ, ಏನೇ ಆಗಲಿ

ಗೆಳೆಯರ ಜತೆಯಲಿ ಕುಣಿಕುಣಿದು
ಬೆಳೆಯುವ ಸೊಗಸಿನ ಕಾಲವಿದು{೨}
ಮುಂದೆ ಯೌವನ, ಮದುವೆ ಬಂಧನ

ಎಲ್ಲೆಲ್ಲೂ ಹೊಸಜೀವನ,
ಆಹಾ! ಎಲ್ಲೆಲ್ಲೂ ಹೊಸಜೀವನ
ಜತೆಯದು ದೊರೆತಾಗ,

ಜತೆಯದು ದೊರೆತಾಗ,
ಮೈಮನ ಮರೆತಾಗ

ನಗುನಗುತ ನಲಿ ನಲಿ, ಏನೇ ಆಗಲಿ

ಏರು ಪೇರಿನ, ಗತಿಯಲ್ಲಿ ಜೀವನ(೨)
ಸಾಗಿ ಮಾಗಿ ಹಿರಿತನ
ತಂದಿತಯ್ಯ ಮುದಿತನ

ಸಾಗಿ ಮಾಗಿ ಹಿರಿತನ
ತಂದಿತಯ್ಯ ಮುದಿತನ
ಅದರೊಳು ಹೊಸದಾದ
ರುಚಿಯಿದೆ ಸವಿಮೋದ

ನಗುನಗುತ ನಲಿ ನಲಿ, ಏನೇ ಆಗಲಿ

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

Song: Sada ninna kannali (ಸದಾ ನಿನ್ನ ಕಣ್ಣಲಿ), Movie: Bachchan (ಬಚ್ಚನ್-2013)

Song: Elliruve (ಎಲ್ಲಿರುವೆ), Movie: Bayaludaari (ಬಯಲುದಾರಿ)

Song: Ninninda dooragi iralarenu (ನಿನ್ನಿಂದ ದೂರಾಗಿ ಇರಲಾರೆನು), Movie: Siddartha (ಸಿದ್ದಾರ್ಥ)

Song: Preethi neenillade naanu hegirali (ಪ್ರೀತಿ ನೀನಿಲ್ಲದೆ ನಾನು ಹೇಗಿರಲಿ), Movie: Bhaava baamaida (ಭಾವ ಬಾಮೈದ)

Song: Onde ondu Aaseyu (ಒಂದೇ ಒಂದು ಆಸೆಯು), Seetharamu (ಸೀತಾರಾಮು)

Song: Kangalu vandane helide (ಕಂಗಳು ವಂದನೆ ಹೇಳಿದೆ), Movie: Mugiyada kathe (‌ಮುಗುಯದ ಕಥೆ)

Song: Neenu neene illi naanu naane (ನೀನು ನೀನೇ ಇಲ್ಲಿ ನಾನು ನಾನೇ), Movie: Gadibidi ganda (ಗಡಿಬಿಡಿ ಗಂಡ)

Song: Jaaji mallige node (ಜಾಜಿ ಮಲ್ಲಿಗೆ ನೋಡೆ), Movie: Sevanthi sevanthi (ಸೇವಂತಿ ಸೇವಂತಿ)

Song: Kannige kaanuva(ಕಣ್ಣಿಗೆ ಕಾಣುವ ), Movie: Yarivanu(ಯಾರಿವನು)