ಪೋಸ್ಟ್‌ಗಳು

ಮಾರ್ಚ್, 2021 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

Song: Paatashaala (ಪಾಠಶಾಲಾ), Movie: Yuvarathnaa (ಯುವರತ್ನ)

‌ಹಾಡು: ಪಾಠಶಾಲಾ ರಚನೆ:‌ ಸಂತೋಷ್‌ ಆನಂದ್‌ರಾಮ್  ಸಂಗೀತ‌: ತಮನ್.‌ ಎಸ್ ಗಾಯನ: ವಿಜಯ್‌ಪ್ರಕಾಶ್  ಚಲನಚಿತ್ರ: ಯುವರತ್ನ   ದೇಶಕ್ಕೆ ಯೋಧ, ನಾಡಿಗೆ ರೈತ ಬಾಳಿಗೆ ಗುರು ಒಬ್ಬ ತಾನೇ ಅಕ್ಷರ ಕಲಿಸೋ, ಅಜ್ನಾನ ಅಳಿಸೋ ಅವನೂನೂ ಅನ್ನದಾತಾನೇ   ತಪ್ಪು ಸರಿಯ ತಿದ್ದಿ, ತಿಳಿಹೇಳಿ ಸಮಬುದ್ಧಿ  ನಮ್ಮ ಚಿತ್ತ ಶುದ್ಧಿ ಆಗೋ ಹಾದಿ ಎಷ್ಟೇ ದೂರ ಹೋದ್ರೂ ಮರಿಬೇಡ ನಿನ್ನ ಬೇರು ನಿನ್ನ ಸಾಧನೆಗೆಲ್ಲ ಇದುವೇ ಆದಿ   ಪಾಠಶಾಲಾ...ಪಾಠಶಾಲಾ…(೨)   ದೇಶಕ್ಕೆ ಯೋಧ, ನಾಡಿಗೆ ರೈತ ಬಾಳಿಗೆ ಗುರು ಒಬ್ಬ ತಾನೇ ಅಕ್ಷರ ಕಲಿಸೋ, ಅಜ್ನಾನ ಅಳಿಸೋ ಅವನೂನೂ ಅನ್ನದಾತಾನೇ ಹೇ… ಏ ಹೇ…..   ಪ್ರತಿಯೊಂದು ಮಾತು, ಕಲಿತ ಜಾಗ ಪ್ರತಿ ಹೆಜ್ಜೆ ಗುರುತು, ಅರಿತ ಜಾಗ ಕನಸುಗಳ ಜೊತೆಗೆ, ನಡೆದ ಜಾಗ ಸ್ನೇಹಿತರ ಪ್ರೀತಿ, ಪಡೆದ ಜಾಗ   ಎಲ್ಲರು ಒಂದೇ ಇಲ್ಲಿ ಮೇಲು ಕೀಳಿಲ್ಲ ಜ್ನಾನದ ಹಸಿವಿದ್ದಾಗ ಮೊದಲು ಕೊನೆಯಿಲ್ಲ ಮನೆಯೇ ಮೊದಲ ಶಾಲೆ ತಾಯೀನೇ ಗುರುವು ತಾಯಿಗು ಪಾಠ ಹೇಳಿದ ಗುರುವೇ ಅರಿವು   ಎಲ್ಲಾ ದಾನಕೂ ಶ್ರೇಷ್ಠ ವಿದ್ಯೆ ಎನ್ನುವುದನ್ನು  ತಿಳಿದ ದೇಶ ನಮ್ಮದು ವಿಶ್ವದ ಕಣ್ಣು ಮುಂದೆ ಗುರಿ ಇರಬೇಕು ಹಿಂದೆ ಗುರು ಇರಬೇಕು ನಂಬಿ ನಡೆದರೆ ಸಾಕು ಸಾರ್ಥಕ ಬದುಕು    ಪಾಠಶಾಲಾ...ಪಾಠಶಾಲಾ…(೨)   ಬೆರೆಯೋದು ಹೇಗೆ, ಕಂಡಿದ್ದಿಲ್ಲಿ ಜೊತೆಯಾಗಿ ಹಂಚಿ, ತಿಂದಿದ್ದಿಲ್ಲಿ ಹಿರಿಯರಿಗೆ ತಲೆಬಾಗಿ, ನಿಂತಿದ್ದಿಲ್ಲಿ ಬದುಕುವ ರೀತಿ, ಕಲಿತಿದ್ದಿಲ್ಲಿ   ಶಿಕ್ಷಣ ಶಿಕ್ಷೆ ಅಲ್ಲ ನಮ್ಮ ಕಾಯುವ ರ