Song: Maleyali jotheyali, Movie: Maleyali jotheyali

ಹಾಡು: ಮಳೆಯಲಿ ಜೊತೆಯಲಿ
ರಚನೆ: ಜಯಂತ ಕಾಯ್ಕಿಣಿ
ಸಂಗೀತ: ವಿ. ಹರಿಕೃಷ್ಣ
ಗಾಯನ: ಸೋನು ನಿಗಮ್‌
ಚಲನಚಿತ್ರ: ಮಳೆಯಲಿ ಜೊತೆಯಲಿ


ಮಳೆಯಲಿ, ಜೊತೆಯಲಿ, ದಿನವಿಡೀ ನೆನೆಯಲು


ಮಳೆಯಲಿ, ಜೊತೆಯಲಿ, ದಿನವಿಡೀ ನೆನೆಯಲು
ನನಗೆ ಕುತೂಹಲ, ಹೋ, ತುಂಬಾ ಕುತೂಹಲ.
ಹನಿ ಹನಿಯ, ಸವಿ ದನಿಯ, ನಾ ವಿವರಿಸಿ ಹೇಳಲಾ
ಮಳೆಯಲಿ, ಜೊತೆಯಲಿ, ದಿನವಿಡೀ ನೆನೆಯಲು
ನನಗೆ ಕುತೂಹಲ, ಹೋ, ತುಂಬಾ ಕುತೂಹಲ.


ಅದೇ ಅದೇ ಮೋಡವೀಗ, ವಿನೂತನ ರೂಪ ತಾಳಿ,
ನಿನ್ನಾ ಸೋಕಿದೆ.
ಪದೇ ಪದೇ ಗಂಧ ಗಾಳಿ, ವಿಚಾರಿಸಿ ನೂರು ಬಾರಿ,
ಸುಮ್ಮನಾಗಿದೆ.
ಕನಸಿನ ಕೊಡೆಯನು, ಮನಸಲಿ ಬಿಡಿಸಲು,
ತುಂಬಾ ಕುತೂಹಲ.
ಮಳೆಯಲಿ, ಜೊತೆಯಲಿ, ದಿನವಿಡೀ ನೆನೆಯಲು
ನನಗೆ ಕುತೂಹಲ, ಹೋ, ತುಂಬಾ ಕುತೂಹಲ.


ಇದೇನಿದು ಮೂಕಭಾವ, ತಯಾರಿಯೇ ಇಲ್ಲದೇನೆ,
ನನ್ನ ಕಾಡಿದೆ.
ನಿವೇದನೆ ಆದಮೇಲೂ, ಸತಾಯಿಸಬೇಕು ನೀನು,
ನನ್ನ ನೋಡದೆ.
ಸಿಡಿಲಿನ ಇರುಳಲೂ, ಪಿಸುನುಡಿ ಕೇಳಲು,
ತುಂಬಾ ಕುತೂಹಲ.
ಮಳೆಯಲಿ, ಜೊತೆಯಲಿ, ದಿನವಿಡೀ ನೆನೆಯಲು
ನನಗೆ ಕುತೂಹಲ, ಹೋ, ತುಂಬಾ ಕುತೂಹಲ
ಹನಿ ಹನಿಯ, ಸವಿ ದನಿಯ, ನಾ ವಿವರಿಸಿ ಹೇಳಲಾ


ಹೋ ಮಳೆಯಲಿ, ಜೊತೆಯಲಿ, ದಿನವಿಡೀ ನೆನೆಯಲು

ನನಗೆ ಕುತೂಹಲ, ಹೋ, ತುಂಬಾ ಕುತೂಹಲ

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

Song: Sada ninna kannali (ಸದಾ ನಿನ್ನ ಕಣ್ಣಲಿ), Movie: Bachchan (ಬಚ್ಚನ್-2013)

Song: Elliruve (ಎಲ್ಲಿರುವೆ), Movie: Bayaludaari (ಬಯಲುದಾರಿ)

Song: Ninninda dooragi iralarenu (ನಿನ್ನಿಂದ ದೂರಾಗಿ ಇರಲಾರೆನು), Movie: Siddartha (ಸಿದ್ದಾರ್ಥ)

Song: Preethi neenillade naanu hegirali (ಪ್ರೀತಿ ನೀನಿಲ್ಲದೆ ನಾನು ಹೇಗಿರಲಿ), Movie: Bhaava baamaida (ಭಾವ ಬಾಮೈದ)

Song: Onde ondu Aaseyu (ಒಂದೇ ಒಂದು ಆಸೆಯು), Seetharamu (ಸೀತಾರಾಮು)

Song: Kangalu vandane helide (ಕಂಗಳು ವಂದನೆ ಹೇಳಿದೆ), Movie: Mugiyada kathe (‌ಮುಗುಯದ ಕಥೆ)

Song: Neenu neene illi naanu naane (ನೀನು ನೀನೇ ಇಲ್ಲಿ ನಾನು ನಾನೇ), Movie: Gadibidi ganda (ಗಡಿಬಿಡಿ ಗಂಡ)

Song: Jaaji mallige node (ಜಾಜಿ ಮಲ್ಲಿಗೆ ನೋಡೆ), Movie: Sevanthi sevanthi (ಸೇವಂತಿ ಸೇವಂತಿ)

Song: Kannige kaanuva(ಕಣ್ಣಿಗೆ ಕಾಣುವ ), Movie: Yarivanu(ಯಾರಿವನು)