Song:Nee sanihake bandare, Movie: Maleyali jotheyali

ಹಾಡು: ನೀ ಸನಿಹಕೆ ಬಂದರೆ
ರಚನೆ: ಜಯಂತ್‌ ಕಾಯ್ಕಿಣಿ
ಸಂಗೀತ: ವಿ. ಹರಿಕೃಷ್ಣ
ಗಾಯನ: ಸೋನು ನಿಗಮ್‌
ಚಲನಚಿತ್ರ: ಮಳೆಯಲಿ ಜೊತೆಯಲಿ


ನೀ ಸನಿಹಕೆ ಬಂದರೆ ಹೃದಯದ ಗತಿಯೇನು,
ಹೇಳೂ ನೀನು, ನೀನೇ ಹೇಳು
ಇನ್ನು ನಿನ್ನ, ಕನಸಿನಲ್ಲಿ, ಕರೆ ನೀನು, ಶುರು ನಾನು
ನಿನ್ನೊಲವಿಗೆ ಮಿಡಿಯದ ಹೃದಯದ ಉಪಯೋಗ,
ಏನು ಹೇಳೂ, ಹೇಳೂ ನೀನು


ಸಮೀಪ ಬಂತು ಬಯಕೆಗಳ, 
ವಿಶೇಷವಾದ ಮೆರವಣಿಗೆ.
ಇದೀಗ ನೋಡು ಬೆರಳುಗಳ
ಸರಾಗವಾದ ಬರವಣಿಗೆ.
ನಿನ್ನ ಬಿಟ್ಟು ಇಲ್ಲ ಜೀವ,
ಎಂದೂ ಕೂಡ, ಒಂದೂ ಘಳಿಗೆ
ನಿನ್ನ ಮಾತು ಏನೇ ಇರಲಿ,
ನಿನ್ನ ಮೌನ, ನಂದೇ ಏನು


ನೀ ಸನಿಹಕೆ ಬಂದರೆ ಹೃದಯದ ಗತಿಯೇನು,
ಹೇಳೂ ನೀನು, ನೀನೇ ಹೇಳು


ನನ್ನ ಎದೆಯ, ಸಣ್ಣ ತೆರೆಯ,
ಧಾರಾವಾಹಿ ನಿನ್ನ ನೆನಪು,
ನೆನ್ನೆ ತನಕ, ಎಲ್ಲಿ ಅಡಗಿ
ಇತ್ತು ನಿನ್ನ ಕಣ್ಣ ಹೊಳಪು
ಉಸಿರು ಹಾರಿ ಹೋಗುವ ಹಾಗೆ,
ಬಿಗಿದು ತಬ್ಬಿಕೊಳ್ಳು ನೀನು,
ಮತ್ತೆ ಮತ್ತೆ ನಿನ್ನುಸಿರು ನೀಡುತಾ
ಉಳಿಸು ನನ್ನನು


ದಾರಿಯಲ್ಲಿ, ಬುತ್ತಿ ಹಿಡಿದು,
ನಿಂತ ಸಾಥೀ ನೀನೇ ಏನು


ನೀ ಸನಿಹಕೆ ಬಂದರೆ ಹೃದಯದ ಗತಿಯೇನು,
ಹೇಳೂ ನೀನು, ನೀನೇ ಹೇಳು
ನಿನ್ನೊಲವಿಗೆ ಮಿಡಿಯದ ಹೃದಯದ ಉಪಯೋಗ,
ಏನು ಹೇಳೂ, ಹೇಳೂ ನೀನು

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

Song: Sada ninna kannali (ಸದಾ ನಿನ್ನ ಕಣ್ಣಲಿ), Movie: Bachchan (ಬಚ್ಚನ್-2013)

Song: Elliruve (ಎಲ್ಲಿರುವೆ), Movie: Bayaludaari (ಬಯಲುದಾರಿ)

Song: Ninninda dooragi iralarenu (ನಿನ್ನಿಂದ ದೂರಾಗಿ ಇರಲಾರೆನು), Movie: Siddartha (ಸಿದ್ದಾರ್ಥ)

Song: Preethi neenillade naanu hegirali (ಪ್ರೀತಿ ನೀನಿಲ್ಲದೆ ನಾನು ಹೇಗಿರಲಿ), Movie: Bhaava baamaida (ಭಾವ ಬಾಮೈದ)

Song: Onde ondu Aaseyu (ಒಂದೇ ಒಂದು ಆಸೆಯು), Seetharamu (ಸೀತಾರಾಮು)

Song: Kangalu vandane helide (ಕಂಗಳು ವಂದನೆ ಹೇಳಿದೆ), Movie: Mugiyada kathe (‌ಮುಗುಯದ ಕಥೆ)

Song: Neenu neene illi naanu naane (ನೀನು ನೀನೇ ಇಲ್ಲಿ ನಾನು ನಾನೇ), Movie: Gadibidi ganda (ಗಡಿಬಿಡಿ ಗಂಡ)

Song: Jaaji mallige node (ಜಾಜಿ ಮಲ್ಲಿಗೆ ನೋಡೆ), Movie: Sevanthi sevanthi (ಸೇವಂತಿ ಸೇವಂತಿ)

Song: Kannige kaanuva(ಕಣ್ಣಿಗೆ ಕಾಣುವ ), Movie: Yarivanu(ಯಾರಿವನು)