Song: Aa devara haadidu, Movie: Appu

ಹಾಡು: ಆ ದೇವರ ಹಾಡಿದು
ರಚನೆ: ಹಂಸಲೇಖ
ಸಂಗೀತ: ಗುರುಕಿರಣ್
ಗಾಯನ: ಡಾ. ರಾಜಕುಮಾರ್
ಚಲನಚಿತ್ರ: ಅಪ್ಪು

ಆ ದೇವರ ಹಾಡಿದು
ನಮ್ಮಂತೆ ಎಂದೂ ಇರದು
ನಗುವಿರಲಿ, ಅಳುವಿರಲಿ
ಅವನಂತೆಯೇ ನಡೆವುದು{೨}

ನೋವಲ್ಲು ನೂರು, ಸುಖವುಂಟು ಇಲ್ಲಿ
ಸುಖದಲ್ಲು ನೂರು, ನೋವುಂಟು ಇಲ್ಲಿ

ಈ ಕಾಲದ, ಕೈಯಲ್ಲಿರೋ 
ಗಡಿಯಾರವೇ ನಾನು ನೀನು
ನಡೆಸೋನದೇ ಕೊನೆಯ ಮಾತು

ಆ ದೇವರ ಹಾಡಿದು
ಅದು ಎಂದೋ ಬರೆದಾಗಿಹುದು

ಉಸಿರಿನಲೇ, ಹೃದಯಗಳು, ಉಯ್ಯಾಲೆಯಾಗಿರುವುದು

ಕ್ಷಣಕೊಮ್ಮೆ ಸನಿಹ, ಕ್ಷಣಕೊಮ್ಮೆ ವಿರಹ
ಹಣೆ ಮೇಲೆ ಕುಳಿತ, ಆ ವಿಧಿಯ ಬರಹ

ಈ ಭೂಮಿಯೇ, ಸುರವೀಣೆಯು
ಸ್ವರತಂತಿಯೇ ನಾನು ನೀನು
ನುಡಿಸೋನದೇ ಕೊನೆಯ ಹಾಡು

ಆ ದೇವರ ಹಾಡಿದು
ಅದು ಎಂದೂ ಬದಲಾಗದು

ಭರವಸೆಯೇ, ಹೊಸಬೆಳಕು
ನಿಜ ಪ್ರೀತಿ ನಿಯಮ ಇದು

ಆ ದೇವರ ಹಾಡಿದು
ನಮ್ಮಂತೆ ಎಂದೂ ಇರದು
ನಗುವಿರಲಿ, ಅಳುವಿರಲಿ
ಅವನಂತೆಯೇ ನಡೆವುದು(೩)



ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

Song: Sada ninna kannali (ಸದಾ ನಿನ್ನ ಕಣ್ಣಲಿ), Movie: Bachchan (ಬಚ್ಚನ್-2013)

Song: Ninninda dooragi iralarenu (ನಿನ್ನಿಂದ ದೂರಾಗಿ ಇರಲಾರೆನು), Movie: Siddartha (ಸಿದ್ದಾರ್ಥ)

Song: Preethi neenillade naanu hegirali (ಪ್ರೀತಿ ನೀನಿಲ್ಲದೆ ನಾನು ಹೇಗಿರಲಿ), Movie: Bhaava baamaida (ಭಾವ ಬಾಮೈದ)

Song: Elliruve (ಎಲ್ಲಿರುವೆ), Movie: Bayaludaari (ಬಯಲುದಾರಿ)

Song: Maathu muride(ಮಾತು ಮುರಿದೆ‌), Movie: Ganda hendathi (ಗಂಡ-ಹೆಂಡತಿ)

Song: Onde ondu Aaseyu (ಒಂದೇ ಒಂದು ಆಸೆಯು), Seetharamu (ಸೀತಾರಾಮು)

Song: Kangalu vandane helide (ಕಂಗಳು ವಂದನೆ ಹೇಳಿದೆ), Movie: Mugiyada kathe (‌ಮುಗುಯದ ಕಥೆ)

Song: Jaaji mallige node (ಜಾಜಿ ಮಲ್ಲಿಗೆ ನೋಡೆ), Movie: Sevanthi sevanthi (ಸೇವಂತಿ ಸೇವಂತಿ)

Song: Prema chandrama (ಪ್ರೇಮ ಚಂದ್ರಮ), Movie: Yajamana (ಯಜಮಾನ)