Song: Tunturu alli neera haadu, Movie: Amruthavarshini

ಹಾಡು: ತುಂತುರು ಅಲ್ಲಿ ನೀರ ಹಾಡು
ರಚನೆ: ಕೆ. ಕಲ್ಯಾಣ್‌
ಸಂಗೀತ: ದೇವ
ಗಾಯನ: ಕೆ. ಎಸ್.‌ ಚಿತ್ರ
ಚಲನಚಿತ್ರ: ಅಮೃತವರ್ಷಿಣಿ

ತುಂತುರು, ಅಲ್ಲಿ ನೀರ ಹಾಡು
ಕಂಪನ, ಇಲ್ಲಿ ಪ್ರೀತಿ ಹಾಡು{೨}

ಹಗಲಿರಲಿ ಇರುಳಿರಲಿ
ನೀನಿರದೇ ಹೇಗಿರಲಿ
ನನ್ನ ತುಂಬು ಹೃದಯ ನೀ ತುಂಬಿದೆ

ನಿನ್ನ ಈ ತುಂಬು ಪ್ರೀತಿಯನು
ಕಣ್ಣ ಹಾಡಂತೆ ಕಾಯುವೆನು

ತುಂತುರು, ಅಲ್ಲಿ ನೀರ ಹಾಡು
ಕಂಪನ, ಇಲ್ಲಿ ಪ್ರೀತಿ ಹಾಡು

ಗಗನದ ಸೂರ್ಯ ಮನೆಮೇಲೆ
ನೀ ನನ್ನ ಸೂರ್ಯ ಹಣೆಮೇಲೆ

ಚಿಲಿಪಿಲಿ ಹಾಡು ಎಲೆಮೇಲೆ
ನಿನ್ನ ಪ್ರೀತಿ ಹಾಡು ಎದೆಮೇಲೆ

ಗಾಳಿ ಗಾಳಿ ತಂಪು ಗಾಳಿ ಊರ ತುಂಬ ಇದೆಯೊ
ನಿನ್ನ ಹೆಸರ ಗಾಳಿಯೊಂದೆ ನನ್ನ ಉಸಿರಲ್ಲಿದೆಯೊ

ನಮ್ಮ ಪ್ರೀತಿ ಬೆಳಗೋ ಇತಿಹಾಸವು

ನಿನ್ನ ಸಹಚಾರವೇ ಚೈತ್ರ
ಅಲ್ಲಿ ನನ ಇಂಚರ ಅಮರ

ತುಂತುರು, ಅಲ್ಲಿ ನೀರ ಹಾಡು
ಕಂಪನ, ಇಲ್ಲಿ ಪ್ರೀತಿ ಹಾಡು

ಚಲುವನೆ ನಿನ್ನ ಮುಗುಳುನಗೆ
ಹಗಲಲು ಶಶಿಯು ಬೇಡುವನು

ರಸಿಕನೆ ನಿನ್ನ ರಸಿಕತೆಗೆ
ಮದನನು ಮರುಗಿ ಸೊರಗುವನು

ತಾಯಿ-ತಂದೆ ಎಲ್ಲಾ ನೀನೆ ಯಾಕೆ ಬೇರೆ ನಂಟು
ಸಾಕು ಎಲ್ಲ ಸಿರಿಗಳ ಮೀರೋ ನಿನ್ನ ಪ್ರೀತಿ ಗಂಟು

ಜಗವೆಲ್ಲ ಮಾದರಿ ಈ ಪ್ರೇಮವೇ

ನನ್ನ ಎದೆಯಾಳೊ ಧಣಿ ನೀನೇ
ನಿನ್ನ ಸಹಚಾರಿಣಿ ನಾನೇ
ತುಂತುರು, ಅಲ್ಲಿ ನೀರ ಹಾಡು
ಕಂಪನ, ಇಲ್ಲಿ ಪ್ರೀತಿ ಹಾಡು

ಹಗಲಿರಲಿ ಇರುಳಿರಲಿ
ನೀನಿರದೇ ಹೇಗಿರಲಿ
ನನ್ನ ತುಂಬು ಹೃದಯ ನೀ ತುಂಬಿದೆ

ನಿನ್ನ ಈ ತುಂಬು ಪ್ರೀತಿಯನು
ಕಣ್ಣ ಹಾಡಂತೆ ಕಾಯುವೆನು{೨}

















ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

Song: Sada ninna kannali (ಸದಾ ನಿನ್ನ ಕಣ್ಣಲಿ), Movie: Bachchan (ಬಚ್ಚನ್-2013)

Song: Elliruve (ಎಲ್ಲಿರುವೆ), Movie: Bayaludaari (ಬಯಲುದಾರಿ)

Song: Ninninda dooragi iralarenu (ನಿನ್ನಿಂದ ದೂರಾಗಿ ಇರಲಾರೆನು), Movie: Siddartha (ಸಿದ್ದಾರ್ಥ)

Song: Preethi neenillade naanu hegirali (ಪ್ರೀತಿ ನೀನಿಲ್ಲದೆ ನಾನು ಹೇಗಿರಲಿ), Movie: Bhaava baamaida (ಭಾವ ಬಾಮೈದ)

Song: Onde ondu Aaseyu (ಒಂದೇ ಒಂದು ಆಸೆಯು), Seetharamu (ಸೀತಾರಾಮು)

Song: Kangalu vandane helide (ಕಂಗಳು ವಂದನೆ ಹೇಳಿದೆ), Movie: Mugiyada kathe (‌ಮುಗುಯದ ಕಥೆ)

Song: Neenu neene illi naanu naane (ನೀನು ನೀನೇ ಇಲ್ಲಿ ನಾನು ನಾನೇ), Movie: Gadibidi ganda (ಗಡಿಬಿಡಿ ಗಂಡ)

Song: Jaaji mallige node (ಜಾಜಿ ಮಲ್ಲಿಗೆ ನೋಡೆ), Movie: Sevanthi sevanthi (ಸೇವಂತಿ ಸೇವಂತಿ)

Song: Kannige kaanuva(ಕಣ್ಣಿಗೆ ಕಾಣುವ ), Movie: Yarivanu(ಯಾರಿವನು)