ಪೋಸ್ಟ್‌ಗಳು

ಆಗಸ್ಟ್, 2020 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

Song: Soul of Dia (ಸೋಲ್‌ ಆಫ್‌ ದಿಯಾ), Movie: Dia (ದಿಯಾ)

ಹಾಡು: ಸೋಲ್‌ ಆಫ್‌ ದಿಯಾ ರಚನೆ: ಧನಂಜಯ್‌ ರಂಜನ್ ಸಂಗೀತ: ಬಿ. ಅಜನೀಶ್‌ ಲೋಕನಾಥ್ ಗಾಯನ: ಸಂಜಿತ್‌ ಹೆಗ್ಡೆ, ಚಿನ್ಮಯಿ ಶ್ರೀಪಾದ ಚಲನಚಿತ್ರ: ದಿಯಾ   ಹಾಯಾದ ಹಾಯಾದ, ನನ್ನ ಪುಟ್ಟ ಲೋಕ ನೀನೇ ಅಲ್ಲವೇ ಮಾಯಾದಾ ಮಾಯಾದಾ, ಕನಸಿನಲ್ಲಿ ನಾ ನಿನ್ನ ಸೇರಲೇ   ಕೈ ಜಾರೋ ಸಂಜೆಯ, ಕೈ ಬೀಸಿ ಕರೆದೆಯಾ ನೂರಾರು ಕಲ್ಪನೆ ಮೆಲ್ಲನೆ ಬಂದು ಮರೆಯಾಗಿದೆ ಹಾಯಾದ ಹಾಯಾದ, ನನ್ನ ಪುಟ್ಟ ಲೋಕ ನೀನೇ ಅಲ್ಲವೇ   ಹೂವಂತೆ ನಗಲು ಪ್ರೀತಿ, ಕೈ ಚಾಚಿ ಕರೆದ ರೀತಿ ಅದು ವಿರಳ, ತುಂಬ ಸರಳ, ನದಿ ತುಂಬೋ ರೀತಿ ಕಡಲ   ನಾನು ಈಗ ಬೇಕಂತಲೇ ನಗಿಸೋಕೆ ಬಂದೆ ಶಾಕುಂತಲೆ ನಿನ್ನ ಮೋಹಿಸುವಂತಲೇ ನೂರಾರು ಕನಸು ಹೂ ಅಂತಲೇ ಇದುವೇ ನಮಗೆ ಹೊಸ ಬದುಕಿದು   ಬಾ ನನ್ನ ಬಾ ನನ್ನ, ಬಂದು ಕೇಳು ಒಮ್ಮೆ ನನ್ನ ಕಂಪನ   ನಾ ನಿನ್ನ ನಾ ನಿನ್ನ, ಕೂಡಿ ಬಾಳಬೇಕು ಎಂಬ ಆಸೆನ   ತಾನಾಗೇ ಹುಟ್ಟೊ ಪ್ರೀತಿ, ನಮ್ಮ ನೆನಪೇ ನಮಗೆ ಸ್ಫೂರ್ತಿ ಅದು ಬಹಳ ಅಂತರಾಳ, ಇದು ತಿಳಿಸೋ ರೀತಿ ಬಹಳ   ಒಮ್ಮೆ ಬಿಟ್ಟು ಸ್ಪಂದಿಸೋ, ಸರಿಯಾದ ಸಮಯಕೆ ಸೇರಿಸೋ ಒಮ್ಮೆ ಕೈಯನು ಹಿಡಿದರೆ, ಅದೆ ತಾನೆ ಪ್ರೀತಿಯ ಆಸರೆ  ಇದುವೆ ನಮಗೆ ಹೊಸ ಬೆಸುಗೆಯ   ಹಾಯಾದ ಹಾಯಾದ, ನನ್ನ ಪುಟ್ಟ ಲೋಕ ನೀನೇ ಅಲ್ಲವೇ ಮಾಯಾದಾ ಮಾಯಾದಾ, ಕನಸಿನಲ್ಲಿ ನಾ ನಿನ್ನ ಸೇರಲೇ    

Song: Maley maley (ಮಳೆ ಮಳೆ), Movie: Ninna sanihake (ನಿನ್ನ ಸನಿಹಕೆ)

ಹಾಡು: ಮಳೆ ಮಳೆ ರಚನೆ: ವಾಸುಕಿ ವೈಭವ್ ಸಂಗೀತ: ರಘು ದೀಕ್ಷಿತ್‌ ಗಾಯನ: ರಘು ದೀಕ್ಷಿತ್‌ ಚಲನಚಿತ್ರ: ನಿನ್ನ ಸನಿಹಕೆ   ಮಳೆ ಮಳೆ ಮಳೆಯೇ, ಪ್ರೀತಿಯಾ ಮಳೆ(೨)   ಹನಿ ಹನಿ ಮೊಳಗಲಿ, ನವಿರಾಗುವ ತೀರಕೆ ಮನದನಿ ಬಯಸಿದ, ಈಡೇರಿಸು ಕೋರಿಕೆ  ‌ ಮಳೆ ಮಳೆ ಮಳೆಯೇ, ಪ್ರೀತಿಯಾ ಮಳೆ(೨)   ಉಸಿರಲಿ ಹರಡಿದೆ, ಸುಂದರ ಸಂಕಟ ಹೆಸರನು ನೆನೆದರೆ, ಜೀವನ ಸಾರ್ಥಕ ಕಂಗಳ ಹಿಂಬಾಲಿಸು, ಹೇಳುವೆ ಕನಸಾ ನೀನಿರೆ ನನ್ನ ಜೀವಕೆ , ಎಲ್ಲಿದೆ ವಿರಸ   ನಿನ್ನಯ ಮುನಿಸಲ್ಲಿಯೇ ನನ್ನನೇ ನೇಮಿಸು ನಿನ್ನಯ ಸಂಕೋಚಕೆ, ನನ್ನನೇ ಸ್ಮರಿಸು   ಮಳೆ ಮಳೆ ಮಳೆಯೇ, ಪ್ರೀತಿಯಾ ಮಳೆ(೨)   ಕೊರಳನು ಬಿಗಿಯುವ ನೋವಿದೆ ನನ್ನಲಿ ಕೇವಲ ಮಾತಲಿ, ಹೇಗೆ ನಾ ತುಂಬಲಿ ನನ್ನಯ ಈ ಕಂಬನಿ, ನಿನ್ನದೇ ಕೊಡುಗೆ ಸೇರಲಿ ಉಸಿರೆಲ್ಲವೂ, ಸಾವಿನ ಬಳಿಗೆ   ಕಾಣುವ ಕನಸೆಲ್ಲವೂ, ಬರಿ ಮೂಢ ನಂಬಿಕೆ ಕಾಡುವ ನೆನಪೆಲ್ಲವೂ ಏಕಾಂತದ ಕೋರಿಕೆ   ಮಳೆ ಮಳೆ ಮಳೆಯೇ, ಪ್ರೀತಿಯಾ ಮಳೆ(೨)     ಹನಿ ಹನಿ ಮೊಳಗಲಿ, ನವಿರಾಗುವ ತೀರಕೆ ಮನದನಿ ಬಯಸಿದ, ಈಡೇರಿಸು ಕೋರಿಕೆ  ‌ ಮಳೆ ಮಳೆ ಮಳೆಯೇ, ಪ್ರೀತಿಯಾ ಮಳೆ(೨)                              

Song: Ee hasiru siriyali (ಈ ಹಸಿರು ಸಿರಿಯಲಿ), Movie: Nagamandala (ನಾಗಮಂಡಲ)

ಹಾಡು: ಈ ಹಸಿರು ಸಿರಿಯಲಿ ಸಾಹಿತ್ಯ: ಗೋಪಾಲ್‌ ಯಾಗ್ನಿಕ್‌ ಸಂಗೀತ: ಸಿ.ಅಶ್ವಥ್ ಗಾಯನ: ಸಂಗೀತ ಕಟ್ಟಿ ಚಲನಚಿತ್ರ: ನಾಗಮಂಡಲ ಈ ಹಸಿರು ಸಿರಿಯಲಿ ಮನಸು ಮೆರೆಯಲಿ ನವಿಲೇ ನಿನ್ನಾಂಗೆಯೆ ಕುಣಿವೆ, ನಿನ್ನಂತೆಯೆ ನಲಿವೆ ನವಿಲೇ, ನವಿಲೆ ಈ ನೆಲದ ನೆಲೆಯಲಿ ಕನಸು ಸುರಿಯಲಿ, ನವಿಲೇ. ನೀನೇನೆ ನಾನಾಗುವೆ, ಗೆಲುವಾಗಿಯೆ ಒಲಿವೆ ನವಿಲೇ, ನವಿಲೆ ತಂಗಾಳಿ ಬೀಸಿ ಬರದೆ, ಸೌಗಂಧಾ ಸುಖವ ತರದೇ ಚಿಗುರೆಲೆಯು ಎಲ್ಲಿ ಮರವೆ, ನಿನ್ನ ಗೆಳತಿ ನಾನು ಮೊರೆವೆ{೨} ಮತ್ಯಾಕೆ ಮೌನ ಗಿಳಿಯೇ, ಸಿಟ್ಯಾಕೆ ಎಂದು ತಿಳಿಯೆ ಹೊತ್ಯಾಕೆ ಹೇಳು ಅಳಿಲೇ, ಗುಟ್ಯಾಕೆ ನನ್ನ ಬಳಿಯೆ ಹೇಳೀರೆ ನಿಮ್ಮನ್ನ ನಾ ಹ್ಯಾಂಗ ಮರೆಯಲೇ, ತೊಳೆಯಲೇ ಈ ಹಸಿರು ಸಿರಿಯಲಿ ಮನಸು ಮೆರೆಯಲಿ, ನವಿಲೇ ನಿನ್ನಾಂಗೆಯೆ ಕುಣಿವೆ, ನಿನ್ನಂತೆಯೆ ನಲಿವೆ ನವಿಲೇ, ನವಿಲೆ ಏನಂಥಾ ಮುನಿಸು ಗಿರಿಯೆ, ಮಾತನ್ನ ಮರೆತೆ ಸರಿಯೇ ಜೇನಂಥಾ ಪ್ರೀತಿ ಸುರಿದೇ, ನನ್ನ ಜೀವ ಜೀವ ನದಿಯೇ{೨} ಸುರಲೋಕಾ ಇದನು ಬಿಡಲೇ, ತವರೀಗೆ ಸಾಟಿ ಇದೆಯೇ ಚಿರಕಾಲ ಇಲ್ಲೆ ಇರಲೇ, ನಗುತಿರು ನೀಲಿ ಮುಗಿಲೇ ನಾನಿನ್ನು ನಿಮ್ಮಿಂದ ಬಹುದೂರ ಸಾಗುವೇ, ಹರಸಿರೇ ಈ ಹಸಿರು ಸಿರಿಯಲಿ ಮನಸು ಮೆರೆಯಲಿ, ನವಿಲೇ ನಿನ್ನಾಂಗೆಯೆ ಕುಣಿವೆ, ನಿನ್ನಂತೆಯೆ ನಲಿವೆ ನವಿಲೇ ನವಿಲೆ, ನವಿಲೇ ನವಿಲೆ, ನವಿಲೇ ನವಿಲೆ

Song: Karabu (ಖರಾಬು), Movie: Pogaru (ಪೊಗರು)

ಹಾಡು: ಖರಾಬು ರಚನೆ:‌ ಚಂದನ್‌ ಶೆಟ್ಟಿ  ಸಂಗೀತ: ಚಂದನ್‌ ಶೆಟ್ಟಿ  ಗಾಯನ: ಚಂದನ್‌ ಶೆಟ್ಟಿ  ಚಲನಚಿತ್ರ: ಪೊಗರು ‌ ಖರಾಬು, ಬಾಸು ಖರಾಬು, ಸುಮ್ನೆ ಓಡೋಗು ನಿಲ್ಲಬೇಡ ಓಡೋಗೇ ಓಡೋಗು{೨} ಡಾನುಗಳು, ರೌಡಿಗಳು ಫಿದಾ ಆಗವ್ರೇ ನನ್ನ ಭೇಟಿ ಮಾಡೋಕೆ ಮುಗಿಬಿದ್ದವ್ರೇ ಫೀಲ್ಡಲ್ಲಿ ನನ್ನ ಕಿಂಗು ಅಂತಾರೆ ನನ್ನ ಕಟ್ಕಂಡು ನೀ ಕ್ವೀನು ಆಗು ಬಾರೇ ನೀನು ಕರೆದಲ್ಲಿ ಬರದತೀನಿ ನಡಿ ನಾ ರೆಡಿ ನಾನು ಮಾಡ್ತಾ ಇಲ್ಲ ಕಣೇ ಈಗ ಕಾಮೆಡಿ  ಯಾರ್ಗು ಹೆದರಬೇಡ ಗೊತ್ತಲ್ಲ ನಾನು ರೌಡಿ ತಪ್ಪಿ ನಂಗೆ ನೀನು ಬೇಡ ಅಂದ್ರೆ ಎಲ್ಲ ಪುಡಿಪುಡಿ ಸೈತಾನ್‌ಪೇಟೆ ಸೈತಾನು, ನೋಡೋಕಿವ್ನು ಪೈಥಾನು ಟಕ್‌‌ ಟಕ್‌ ಟಕ್‌ ಟಾಂಗ್‌ ಟಕರ್ ಟಿಂಗ್‌ ಟಾಕ್ ಕಿಟ್ಟಾಟೇ  ರಾಂಗಾ ಟಾ ಟಾಕ್‌ ಕಿಟ್ಟಾ ಕಿಟ್ಟಾ ಕಿಟ್ಟಾಟೇ ಅಣ್ಣಾ ಬಂದಾ, ಬಾಸು ಬಂದಾ ಎದ್ದು ಎರಡು ಸ್ಟೆಪ್‌ ಹಾಕೇ ಖರಾಬು, ಖರಾಬು...ನಾ ನಿನ್ನಾ ನವಾಬು ಬೀಡಾ ಅಂಗ್ಡಿ ಬಾಬು ಒಂದ್‌ ಬೀಡಾ ಹಾಕು ಕೊಡ್ತೀನ್‌ ನೋಡು ಇವಳಿಗೆ ಕರೆಂಟ್‌ ಶಾಕು ಹೇಳಿ ಕೇಳಿ ಮೊದ್ಲೇ ನಾ ಚೂರು ಕ್ರಾಕು ನಂದು ಶ್ಟಾರ್ಟಾದ್ರೆ ಶ್ಟಾಪೇ ಇಲ್ಲ ಒಂದೇ ಟೇಕು ಓಡೋಗೇ, ನಿಲ್ಲಬೇಡ ನೀ ಓಡೋಗೇ ಓಡು ಓಡು ಓಡು ಯಾರೂ ಹೇಳಂಗೂ ಇಲ್ಲ, ನನ್ನ ಕೇಳಂಗೂ ಇಲ್ಲ  ನಾನು ಮುಟ್ಟುದ್ಮೇಲೆ ನಂದೇನೇ  ಖರಾಬು, ಬಾಸು ಖರಾಬು, ಸುಮ್ನೆ ಓಡೋಗು ನಿಲ್ಲಬೇಡ ಓಡೋಗೇ ಓಡೋಗು{೨} ಏ ಪಾಪಿಗಳ ಪಾಪಿ ಅಂತ ಶಾಪ ಹಾಕ್ತಾರೆ ಪೋಲಿ ಪುಂಡನೂ ಪಂಟನೂ ಅಂತ ಅಂತಾರೆ  ಅಬ್ಬಬ್ಬಾ ರಾಕ್ಷಸ ಬಂದ ಅಂತಾರೆ ಎಲ

Song: Jaggadu jaggadu india (ಜಗ್ಗದು ಜಗ್ಗದು ಇಂಡಿಯಾ), Movie: Hagalu vesha (ಹಗಲು ವೇಷ)

ಹಾಡು: ಜಗ್ಗದು ಜಗ್ಗದು ಇಂಡಿಯಾ ರಚನೆ:‌ ಬರಗೂರು ರಾಮಚಂದ್ರಪ್ಪ ಸಂಗೀತ: ಹಂಸಲೇಖ ಗಾಯನ: ಡಾ. ರಾಜ್‌ಕುಮಾರ್‌ ಮತ್ತು ಸಂಗಡಿಗರು  ಚಲನಚಿತ್ರ: ಹಗಲು ವೇಷ ‌ ಇಂಡಿಯಾ, ಇಂಡಿಯಾ, ನಮ್ಮ ಇಂಡಿಯಾ(೨) ಬೆವರಿನ ಬೆಳಕಿನ ಬೆಟ್ಟ ಇಂಡಿಯಾ ದುಡಿಮೆಯ ಹಿರಿಮೆಯ ದಿಟ್ಟ ಇಂಡಿಯಾ ಜಗ್ಗದು ಜಗ್ಗದು ಯಾರಿಗೂ ಜಗ್ಗದು ಇಂಡಿಯಾ ಅಗ್ಗದ ಅರಸರಿಗೆಂದಿಗೂ ಕುಗ್ಗದು ಇಂಡಿಯಾ ನಮ್ಮಿಂಡಿಯಾ, ಬೆವರಿನ ಇಂಡಿಯಾ{೨} ಜಗ್ಗದು ಜಗ್ಗದು ಯಾರಿಗು ಜಗ್ಗದು ಇಂಡಿಯಾ ಬಂಡೆ ಬಂಡೆಯ ಮೇಲೆ, ಗಂಡು ಅರಳಿದ ಲೀಲೆ ಗುಂಡು ಹೊಡೆಯೋ ದಂಡು, ಒಣಗಿ ನಿಂತ ಬೆಂಡು ಬಿಡುಗಡೆಯ ಬೆಳಕನು ಚಲ್ಲೋ, ಓಓ ಓಹೋ ಓ ಓ ಓ, ಆ ಆ ಓಹೋ ಓ ಓ ಓ  ಬಿಡುಗಡೆಯ ಬೆಳಕನು ಚಲ್ಲೋ ಬಂಡಾಯದ ಗುಂಡಿಗೆ ಜಗ್ಗದು ಜಗ್ಗದು(೨) ಜಗ್ಗದು ಜಗ್ಗದು ಯಾರಿಗೂ ಜಗ್ಗದು ಇಂಡಿಯಾ ಅಗ್ಗದ ಅರಸರಿಗೆಂದಿಗೂ ಕುಗ್ಗದು ಇಂಡಿಯಾ ನಮ್ಮಿಂಡಿಯಾ, ಬೆವರಿನ ಇಂಡಿಯಾ ಜಗ್ಗದು ಜಗ್ಗದು ಯಾರಿಗು ಜಗ್ಗದು ಇಂಡಿಯಾ ಇಂಡಿಯಾ, ಇಂಡಿಯಾ, ನಮ್ಮ ಇಂಡಿಯಾ(೨) ಕೋಟೆ ಕೊತ್ತಲ ಕಾದ ಕೋಟಿ ದೀಪದ ಹಣತೆ ನಾಡಿಗೆ ದಿನವೂ ದುಡಿದ, ಕೂಲಿ ಕುಂಬಣಿ ಜನತೆ  ಸ್ವಾತಂತ್ರ್ಯದ ಹಕ್ಕನ್ನು ಕೇಳಿ ಓಓ ಓಹೋ ಓ ಓ ಓ, ಆ ಆ ಓಹೋ ಓ ಓ ಓ  ಸ್ವಾತಂತ್ರ್ಯದ ಹಕ್ಕನ್ನು ಕೇಳಿ, ಎದ್ದು ನಿಂತ ಚಿರತೆ ಜಗ್ಗದು ಜಗ್ಗದು(೨) ಜಗ್ಗದು ಜಗ್ಗದು ಯಾರಿಗೂ ಜಗ್ಗದು ಇಂಡಿಯಾ ಅಗ್ಗದ ಅರಸರಿಗೆಂದಿಗೂ ಕುಗ್ಗದು ಇಂಡಿಯಾ ನಮ್ಮಿಂಡಿಯಾ, ಬೆವರಿನ ಇಂಡಿಯಾ ಜಗ್ಗದು ಜಗ್ಗದು ಯಾರಿಗು ಜಗ್ಗದು ಇಂಡಿಯಾ ಇ

Song: Bharatambe ninna janmadina(ಭಾರತಾಂಬೆ ನಿನ್ನ ಜನ್ಮದಿನ), Movie: Veerapanayaka( ವೀರಪ್ಪನಾಯ್ಕ)

ಹಾಡು: ಭಾರತಾಂಬೆ ನಿನ್ನ ಜನ್ಮದಿನ ರಚನೆ:‌ ಎಸ್. ನಾರಾಯಣ್ ಸಂಗೀತ: ರಾಜೇಶ್‌ ರಾಮನಾಥ್ ಗಾಯನ: ಎಸ್.‌ ಪಿ. ಬಾಲಸುಬ್ರಮಣ್ಯಂ ಚಲನಚಿತ್ರ: ವೀರಪ್ಪನಾಯ್ಕ ‌ ಭಾರತಾಂಬೆ ನಿನ್ನ ಜನ್ಮದಿನ ಭಾರತೀಯರ ಶೌರ್ಯ ಮೆರೆದ ದಿನ ಗಂಡೆದೆ ವೀರರಲ್ಲಿ, ಗುಂಡಿಗೆ ಪ್ರಾಣ ಚೆಲ್ಲಿ ನಿನ್ನನು ಬಿಡಿಸಿದ ಇದೇ ದಿನ ಜನ್ಮವ ಕೊಡಿಸಿದ ಮಹಾದಿನ ಭಾರತಾಂಬೆ ನಿನ್ನ ಜನ್ಮದಿನ ಭಾರತೀಯರ ಶೌರ್ಯ ಮೆರೆದ ದಿನ ಹೇ, ಹತ್ತಾರು ಭಾವೆಗಳ ಹೆತ್ತೋಳಮ್ಮ ನಿನ್ನ ಮಡಿಲಲ್ಲಿ ಗಂಗೆ ತುಂಗೆ ನಗುತಾರಮ್ಮ ಅನ್ಯರು ಬಂದರೂನು ಮುತ್ತಾಡುವ ತಾಯಿ ನಮ್ಮೂರ ಅಪ್ಪಿಕೊಂಡು ನಲಿದಾಡುವೆ ಭೂಗೋಳದಲ್ಲಿ ಒಂದು ಜ್ಯೋತಿ ಇದೆ ಅದಕೆ ಭಾರತ ಮಾತೆ ಎಂಬ ಹೆಸರು ಇದೆ ಲೋಕವೆ ಮೆಚ್ಚುವಂತ ಗೀತೆಯು ಇಲ್ಲಿ ಇದೆ ವಂದೇ ಮಾತರಂ ಎಂಬ ನಾಮದ ಗಂಧವಿದೆ ನುಡಿಯಲವನೆ ಧನ್ಯ ಭಾರತಾಂಬೆ ನಿನ್ನ ಜನ್ಮದಿನ ಭಾರತೀಯರ ಶೌರ್ಯ ಮೆರೆದ ದಿನ ಭಾರತ, ನಮ್ಮ ಭಾರತ(೨) ಉಸಿರಿರುವ ತನಕ, ನೀ ಭಾರತೀಯನೆಂದು ಬೀಗು ಕೊನೆಯುಸಿರೆಳೆವಾಗಲೂ, ವಂದೇ ಮಾತರಂ ಎಂದು ಕೂಗು ವಂದೇ ಮಾತರಂ(೪) ಭಾರತಾಂಬೆ ನಿನ್ನ ಜನ್ಮದಿನ ಭಾರತೀಯರ ಶೌರ್ಯ ಮೆರೆದ ದಿನ ಗಂಡೆದೆ ವೀರರಲ್ಲಿ, ಗುಂಡಿಗೆ ಪ್ರಾಣ ಚೆಲ್ಲಿ ನಿನ್ನನು ಬಿಡಿಸಿದ ಇದೇ ದಿನ ಹೋ, ಜನ್ಮವ ಕೊಡಿಸಿದ ಮಹಾದಿನ ಭಾರತಾಂಬೆ ನಿನ್ನ ಜನ್ಮದಿನ ಭಾರತೀಯರ ಶೌರ್ಯ ಮೆರೆದ ದಿನ       

Song: Hindustanavu yendu mareyada(ಹಿಂದೂಸ್ತಾನವು ಎಂದೂ ಮರೆಯದ), Movie: Amrutha ghalige ( ಅಮೃತಘಳಿಗೆ)

ಹಾಡು: ಹಿಂದೂಸ್ತಾನವು ಎಂದೂ ಮರೆಯದ ರಚನೆ: ವಿಜಯನಾರಸಿಂಹ ಸಂಗೀತ: ವಿಜಯ ಭಾಸ್ಕರ್ ಗಾಯನ: ಪಿ. ಜಯಚಂದ್ರನ್‌ ಚಲನಚಿತ್ರ: ಅಮೃತಘಳಿಗೆ ‌ ಹಿಂದೂಸ್ತಾನವು ಎಂದೂ ಮರೆಯದ ಭಾರತ ರತ್ನವು ಜನ್ಮಿಸಲಿ(೨) ಈ ಕನ್ನಡ ಮಾತೆಯ ಮಡಿಲಲ್ಲಿ ಈ ಕನ್ನಡ ನುಡಿಯ ಗುಡಿಯಲ್ಲಿ  ಹಿಂದೂಸ್ತಾನವು ಎಂದೂ ಮರೆಯದ ಭಾರತ ರತ್ನವು ಜನ್ಮಿಸಲಿ ದೇಶಭಕ್ತಿಯ ಬಿಸಿ ಬಿಸಿ ನೆತ್ತರು ಧಮನಿ ಧಮನಿಯಲಿ ತುಂಬಿರಲಿ(೨) ವಿಶ್ವಪ್ರೇಮದ, ಶಾಂತಿಮಂತ್ರದ ಘೋಷವ ಎಲ್ಲೆಡೆ ಮೊಳಗಿಸಲಿ ಸಕಲ ಧರ್ಮದ ಸತ್ವ ಸಮನ್ವಯ ಸತ್ವ ಜ್ಯೋತಿಯ ಬೆಳಗಿಸಲಿ ಹಿಂದೂಸ್ತಾನವು ಎಂದೂ ಮರೆಯದ ಭಾರತ ರತ್ನವು ಜನ್ಮಿಸಲಿ ಕನ್ನಡ ತಾಯಿಯ ಕೋಮಲ ಹೃದಯದ ಭವ್ಯ ಶಾಸನ ಬರೆಯಿಸಲಿ(೨) ಕನ್ನಡ ನಾಡಿನ ಎದೆಎದೆಯಲ್ಲು ಕನ್ನಡ ವಾಣಿಯ ಸ್ಥಾಪಿಸಲಿ ಈ ಮಣ್ಣಿನ ಪುಣ್ಯದ ದಿವ್ಯ ಚರಿತ್ರೆಯ ಕಲ್ಲು ಕಲ್ಲಿನಲು ಕೆತ್ತಿಸಲಿ ಹಿಂದೂಸ್ತಾನವು ಎಂದೂ ಮರೆಯದ ಭಾರತ ರತ್ನವು ಜನ್ಮಿಸಲಿ ಈ ಕನ್ನಡ ಮಾತೆಯ ಮಡಿಲಲ್ಲಿ ಈ ಕನ್ನಡ ನುಡಿಯ ಗುಡಿಯಲ್ಲಿ  ಹಿಂದೂಸ್ತಾನವು ಎಂದೂ ಮರೆಯದ ಭಾರತ ರತ್ನವು ಜನ್ಮಿಸಲಿ ಲಾ ಲಲ ಲಾ ಲಲ ಲಾ ಲಲಲ(೨)