Song: Haagella nee nodabeda, Movie: Prithvi

ಹಾಡು: ಹಾಗೆಲ್ಲ ನೀ ನೋಡಬೇಡ
ರಚನೆ: ಜಯಂತ ಕಾಯ್ಕಿಣಿ
ಸಂಗೀತ: ಮಣಿಕಾಂತ್ ಕದ್ರಿ
ಗಾಯಕರು: ಹರಿಚರಣ್, ಅನಿತ ಕಾರ್ತಿಕೇಯನ್
ಚಲನಚಿತ್ರ: ಪೃಥ್ವಿ

ಹಾಗೆಲ್ಲ ನೀ ನೋಡಬೇಡ,
ಹೀಗೆಲ್ಲ ನೀ ಕಾಡಬೇಡ
ಈ ಮೌನ ಮಾತಾಡುವಾಗ ಮೆಲ್ಲಗೆ

ಏನೇನೂ ನೀ ಹೇಳಬೇಡ
ಇನ್ನೇನೂ ನೀ ಕೇಳಬೇಡ
ಈ ಸ್ವಪ್ನ ಪಾಲಾಗುವಾಗ ಮೆಲ್ಲಗೆ

ಹಾಡಲ್ಲಿ ಸಾಲಂತೆ ನೀನು, ಇರುವಾಗ ನನ್ನೊಂದಿಗೆ
ನಾನಿನ್ನು ಹಾಡೋದು ಯಾರಿಗೆ
ಕಣ್ಣಲ್ಲಿ ನೀರಂತೆ ನೀನು, ಇರುವಾಗ ನನ್ನೊಂದಿಗೆ
ನಾ ನಿಂತು ನೋಡೋದು ಯಾರಿಗೆ

ಬೇರೇನೇ ಭಾವ ಅಂದ ಮಾತಿಗೆ
ನೂರಾರು ರಾಗ ಮೂಕ ಪ್ರೀತಿಗೆ
ಇನ್ನೇಕೆ ದೂರು,
ಮಾತಾಡೂ ಚೂರು

ಎಲೆಯಲ್ಲಿ ಹೂವಂತೆ ನೀನು
ಇರುವಾಗ ನನ್ನೊಂದಿಗೆ
ಮುಂಜಾವು ಕಾಯೋದು ಯಾರಿಗೆ
ಒಲೆಯಲ್ಲಿ ಕಾವಂತೆ ನೀನು
ಇರುವಾಗ ನನ್ನೊಂದಿಗೆ
ಈ ಜೀವ ಬೇಯೋದು ಯಾರಿಗೆ

ಈ ದಾರಿಯಲ್ಲಿ, ನೆನಪೇ ಸೇತುವೆ
ಏಕಾಂಗಿಯಾಗಿ ಹೇಗೆ ದಾಟುವೆ
ದೂರಾಗೋ ಮುನ್ನ
ನೀ ನೋಡೂ ನನ್ನ

ಮನಸಲ್ಲಿ ಮಳೆಯಂತೆ ನೀನು
ಇರುವಾಗ ನನ್ನೊಂದಿಗೆ
ಚಂದ್ರಮ ಕಾಣೋದು ಯಾರಿಗೆ

ನೀರಲ್ಲಿ ಅಲೆಯಂತೆ ನೀನು
ಇರುವಾಗ ನನ್ನೊಂದಿಗೆ
ತಂಗಾಳಿ ಬೀಸೋದು ಯಾರಿಗೆ

ಹಾಗೆಲ್ಲ ನೀ ನೋಡಬೇಡ,
ಹೀಗೆಲ್ಲ ನೀ ಕಾಡಬೇಡ
ಈ ಮೌನ ಮಾತಾಡುವಾಗ ಮೆಲ್ಲಗೆ

ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

Song: Sada ninna kannali (ಸದಾ ನಿನ್ನ ಕಣ್ಣಲಿ), Movie: Bachchan (ಬಚ್ಚನ್-2013)

Song: Elliruve (ಎಲ್ಲಿರುವೆ), Movie: Bayaludaari (ಬಯಲುದಾರಿ)

Song: Preethi neenillade naanu hegirali (ಪ್ರೀತಿ ನೀನಿಲ್ಲದೆ ನಾನು ಹೇಗಿರಲಿ), Movie: Bhaava baamaida (ಭಾವ ಬಾಮೈದ)

Song: Ninninda dooragi iralarenu (ನಿನ್ನಿಂದ ದೂರಾಗಿ ಇರಲಾರೆನು), Movie: Siddartha (ಸಿದ್ದಾರ್ಥ)

Song: Onde ondu Aaseyu (ಒಂದೇ ಒಂದು ಆಸೆಯು), Seetharamu (ಸೀತಾರಾಮು)

Song: Kangalu vandane helide (ಕಂಗಳು ವಂದನೆ ಹೇಳಿದೆ), Movie: Mugiyada kathe (‌ಮುಗುಯದ ಕಥೆ)

Song: Neenu neene illi naanu naane (ನೀನು ನೀನೇ ಇಲ್ಲಿ ನಾನು ನಾನೇ), Movie: Gadibidi ganda (ಗಡಿಬಿಡಿ ಗಂಡ)

Song: Jaaji mallige node (ಜಾಜಿ ಮಲ್ಲಿಗೆ ನೋಡೆ), Movie: Sevanthi sevanthi (ಸೇವಂತಿ ಸೇವಂತಿ)

Song: Kannige kaanuva(ಕಣ್ಣಿಗೆ ಕಾಣುವ ), Movie: Yarivanu(ಯಾರಿವನು)