ಪೋಸ್ಟ್‌ಗಳು

2021 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

Song: Kannige kaanuva(ಕಣ್ಣಿಗೆ ಕಾಣುವ ), Movie: Yarivanu(ಯಾರಿವನು)

ಹಾಡು: ಕಣ್ಣಿಗೆ ಕಾಣುವ  ರಚನೆ: ಚಿ. ಉದಯಶಂಕರ್ ಸಂಗೀತ: ರಾಜನ್-ನಾಗೇಂದ್ರ ಗಾಯನ: ಮಾಸ್ಟರ್‌ ಲೋಹಿತ್ ಚಲನಚಿತ್ರ: ಯಾರಿವನು ಕಣ್ಣಿಗೆ ಕಾಣುವ ದೇವರು ಎಂದರೆ ಅಮ್ಮನು ತಾನೇ(೨) ಅಮ್ಮಾ...ಅಮ್ಮಾ… ಅಮ್ಮಾ ನಮ್ಮಮ್ಮಾ ಕಣ್ಣಿಗೆ ಕಾಣುವ ದೇವರು ಎಂದರೆ ಅಮ್ಮನು ತಾನೇ ಅಮ್ಮನು ತಾನೇ, ಅಮ್ಮನು ತಾನೇ ದೇವತೆಯಂತೆ ಭೂಮಿಗೆ ಬಂದಳು ಪ್ರೇಮದ ಸಿರಿಯ, ನನಗಾಗಿ ತಂದಳು{೨} ನನ್ನಲ್ಲಿ ಆನಂದ ತುಂಬಿ, ಸವಿಮಾತಿನ, ಸುಖ ನೀಡುತ(೨) ಒಳ್ಳೊಳ್ಳೆ ಕತೆಯನ್ನು ಹೇಳಿ ಉಲ್ಲಾಸ, ಸಂತೋಷ, ತಂದಳು ಕಣ್ಣಿಗೆ ಕಾಣುವ ದೇವರು ಎಂದರೆ ಅಮ್ಮನು ತಾನೇ(೨) ಅಮ್ಮಾ...ಅಮ್ಮಾ… ಅಮ್ಮಾ ನಮ್ಮಮ್ಮಾ ಅಮ್ಮನ ಮಡಿಲು, ಸ್ವರ್ಗದ ಹಾಗೆ ಅಮ್ಮನ ನುಡಿಯು, ಜೇನಿನ ಹಾಗೆ{೨} ಅಮ್ಮನು ನನ್ನ ಪ್ರಾಣದಂತೆ ಬೇರೇನನೂ ನಾ ಕೇಳೆನು(೨) ಎಂದೆಂದೂ ಜೊತೆಯಲ್ಲಿ ಹೀಗೇ ಇರುವಾಸೆ, ನನಗಿಂದು, ಅಮ್ಮಾ ಕಣ್ಣಿಗೆ ಕಾಣುವ ದೇವರು ಎಂದರೆ ಅಮ್ಮನು ತಾನೇ(೨) ಅಮ್ಮಾ...ಅಮ್ಮಾ… ಅಮ್ಮಾ ನಮ್ಮಮ್ಮಾ ಕಣ್ಣಿಗೆ ಕಾಣುವ ದೇವರು ಎಂದರೆ ಅಮ್ಮನು ತಾನೇ ಅಮ್ಮನು ತಾನೇ, ಅಮ್ಮನು ತಾನೇ, ಅಮ್ಮನು ತಾನೇ  

Song: Paatashaala (ಪಾಠಶಾಲಾ), Movie: Yuvarathnaa (ಯುವರತ್ನ)

‌ಹಾಡು: ಪಾಠಶಾಲಾ ರಚನೆ:‌ ಸಂತೋಷ್‌ ಆನಂದ್‌ರಾಮ್  ಸಂಗೀತ‌: ತಮನ್.‌ ಎಸ್ ಗಾಯನ: ವಿಜಯ್‌ಪ್ರಕಾಶ್  ಚಲನಚಿತ್ರ: ಯುವರತ್ನ   ದೇಶಕ್ಕೆ ಯೋಧ, ನಾಡಿಗೆ ರೈತ ಬಾಳಿಗೆ ಗುರು ಒಬ್ಬ ತಾನೇ ಅಕ್ಷರ ಕಲಿಸೋ, ಅಜ್ನಾನ ಅಳಿಸೋ ಅವನೂನೂ ಅನ್ನದಾತಾನೇ   ತಪ್ಪು ಸರಿಯ ತಿದ್ದಿ, ತಿಳಿಹೇಳಿ ಸಮಬುದ್ಧಿ  ನಮ್ಮ ಚಿತ್ತ ಶುದ್ಧಿ ಆಗೋ ಹಾದಿ ಎಷ್ಟೇ ದೂರ ಹೋದ್ರೂ ಮರಿಬೇಡ ನಿನ್ನ ಬೇರು ನಿನ್ನ ಸಾಧನೆಗೆಲ್ಲ ಇದುವೇ ಆದಿ   ಪಾಠಶಾಲಾ...ಪಾಠಶಾಲಾ…(೨)   ದೇಶಕ್ಕೆ ಯೋಧ, ನಾಡಿಗೆ ರೈತ ಬಾಳಿಗೆ ಗುರು ಒಬ್ಬ ತಾನೇ ಅಕ್ಷರ ಕಲಿಸೋ, ಅಜ್ನಾನ ಅಳಿಸೋ ಅವನೂನೂ ಅನ್ನದಾತಾನೇ ಹೇ… ಏ ಹೇ…..   ಪ್ರತಿಯೊಂದು ಮಾತು, ಕಲಿತ ಜಾಗ ಪ್ರತಿ ಹೆಜ್ಜೆ ಗುರುತು, ಅರಿತ ಜಾಗ ಕನಸುಗಳ ಜೊತೆಗೆ, ನಡೆದ ಜಾಗ ಸ್ನೇಹಿತರ ಪ್ರೀತಿ, ಪಡೆದ ಜಾಗ   ಎಲ್ಲರು ಒಂದೇ ಇಲ್ಲಿ ಮೇಲು ಕೀಳಿಲ್ಲ ಜ್ನಾನದ ಹಸಿವಿದ್ದಾಗ ಮೊದಲು ಕೊನೆಯಿಲ್ಲ ಮನೆಯೇ ಮೊದಲ ಶಾಲೆ ತಾಯೀನೇ ಗುರುವು ತಾಯಿಗು ಪಾಠ ಹೇಳಿದ ಗುರುವೇ ಅರಿವು   ಎಲ್ಲಾ ದಾನಕೂ ಶ್ರೇಷ್ಠ ವಿದ್ಯೆ ಎನ್ನುವುದನ್ನು  ತಿಳಿದ ದೇಶ ನಮ್ಮದು ವಿಶ್ವದ ಕಣ್ಣು ಮುಂದೆ ಗುರಿ ಇರಬೇಕು ಹಿಂದೆ ಗುರು ಇರಬೇಕು ನಂಬಿ ನಡೆದರೆ ಸಾಕು ಸಾರ್ಥಕ ಬದುಕು    ಪಾಠಶಾಲಾ...ಪಾಠಶಾಲಾ…(೨)   ಬೆರೆಯೋದು ಹೇಗೆ, ಕಂಡಿದ್ದಿಲ್ಲಿ ಜೊತೆಯಾಗಿ ಹಂಚಿ, ತಿಂದಿದ್ದಿಲ್ಲಿ ಹಿರಿಯರಿಗೆ ತಲೆಬಾಗಿ, ನಿಂತಿದ್ದಿಲ್ಲಿ ಬದುಕುವ ರೀತಿ, ಕಲಿತಿದ್ದಿಲ್ಲಿ   ಶಿಕ್ಷಣ ಶಿಕ್ಷೆ ಅಲ್ಲ ನಮ್ಮ ಕಾಯುವ ರ

Song: Yajamana title song (ಯಜಮಾನ), Movie: Yajamana (ಯಜಮಾನ)

ಹಾಡು: ಯಜಮಾನ ರಚನೆ:‌ ಸಂತೋಷ್‌ ಆನಂದ್‌ರಾಮ್  ಸಂಗೀತ‌: ವಿ. ಹರಿಕೃಷ್ಣ ಗಾಯನ: ವಿಜಯ್‌ಪ್ರಕಾಶ್  ಚಲನಚಿತ್ರ: ಯಜಮಾನ   ಯಾರೇ ಬಂದರೂ, ಎದುರ್ಯಾರೇ ನಿಂತರೂ ಪ್ರೀತಿ ಹಂಚುವ ಯಜಮಾನ ಜೀವ ಹೋದರೂ, ಜಗವೇನೇ ಅಂದರೂ ಮಾತು ತಪ್ಪದ ಯಜಮಾನ   ಕೂಗಿ ಕೂಗಿ ಹೇಳುತೈತೆ ಇಂದು ಜ಼ಮಾನ ಸ್ವಾಭಿಮಾನ ನನ್ನ ಪ್ರಾಣ ಅನ್ನೋ ಪ್ರಯಾಣ ನಿಂತ ನೋಡೋ ಯಜಮಾನ(೨)   ಯಾರೇ ಬಂದರೂ, ಎದುರ್ಯಾರೇ ನಿಂತರೂ  ಪ್ರೀತಿ ಹಂಚುವ ಯಜಮಾನ   ಯಾರ್‌ ಹೆತ್ತ ಮಗನೋ! ನಮಗಾಗಿ ಬಂದನು ಮೇಲು ಕೀಳು ಗೊತ್ತೇ ಇಲ್ಲ, ಬಡವನೂ ಗೆಳೆಯಾನೇ ಶ್ರೀಮಂತಿಕೆ ತಲೆಗ್‌ ಹತ್ತೇ ಇಲ್ಲ ಹತ್ತೂರ ಒಡೆಯಾನೇ   ನಿನ್ನ ಹೆಸರು, ನಿಂದೇ ಬೆವರು ತಾನು ಬೆಳೆದು ತನ್ನವರನ್ನು ಬೆಳೆಸೋ ಆ ಗುಣ ನೇರ ನುಡಿಗೆ ಸತ್ಯದೆಡೆಗೆ ಮಾಡಿದ ಪ್ರಮಾಣ ನಿಂತ ನೋಡೋ ಯಜಮಾನ(೨)   ಯಾರೇ ಬಂದರೂ, ಎದುರ್ಯಾರೇ ನಿಂತರೂ  ಪ್ರೀತಿ ಹಂಚುವ ಯಜಮಾನ   ಬಿರುಗಾಳಿ ಎದುರು ನಗುವಂಥ ದೀಪ ನೋವನ್ನು ಮರೆಸೋ ಮಗುವಂಥ ರೂಪ   ಯಾವುದೇ ಕೇಡು ತಾಕದು ನಿನಗೆ ಕಾಯುವುದು ಅಭಿಮಾನ ಸೋಲಿಗೂ ಸೋಲದ ಗೆದ್ದರೂ ಬೀಗದ ಒಬ್ಬನೆ ನಮ್‌ ಯಜಮಾನ   ಪ್ರೀತಿಗೆ ಅತಿಥಿ, ಸ್ನೇಹಕೆ ಸಾರಥಿ ಬಾಳಿನಲ್ಲಿ ಎಂದಿಗೂ ನಿನ್ನ ಹೆಸರೇ ಸವಾಲು ಏಳು-ಬೀಳು ಆಟದಿ ನಿನ್ನ ನಡೆಯೇ ಕಮಾಲು  ನಿಂತ ನೋಡೋ ಯಜಮಾನ(೨)    

Song: Ninna sanihake (ನಿನ್ನ ಸನಿಹಕೆ), Movie: Ninna sanihake (ನಿನ್ನ ಸನಿಹಕೆ)

‌ಹಾಡು: ನಿನ್ನ ಸನಿಹಕೆ  ರಚನೆ:‌ ವಾಸುಕಿ ವೈಭವ್ ಸಂಗೀತ‌: ರಘು ದೀಕ್ಷಿತ್ ಗಾಯನ: ಸಂಜಿತ್‌ ಹೆಗ್ಡೆ, ಶೃತಿ ವಿ ಎಸ್ ಚಲನಚಿತ್ರ: ನಿನ್ನ ಸನಿಹಕೆ   ಹೃದಯದ ಪರಿಪಾಡು ಹೀಗೇಕೆ ಅನಿಸುವುದು ಅರಿಯದೆ ಮನಸ್ಸೋತರೆ ಸಮಯದ ಗತಿಮೆಲ್ಲ ಹೀಗೇಕೆ ಸಾಗುವುದು ನೆನೆಯುತ ನಿನ್ನ ಕಾದರೆ   ಬಿಡದೇ ಹಿಡಿದಂಥಾ...ಒಲವಾ ಮಳೆಗೆ ಮನದಾ ನೆಲವೆಲ್ಲಾ...ಹಸಿರಾಗಿ ಹೂವಾಗಿದೆ, ನಿನ್ನಾ ಕೊಡುಗೆ ನಿನ್ನ ಸನಿಹಕೇ ಒಲವೇ, ಸೊಗಸಾದಂತೆ ಜೊತೆಗಾರಿಕೆ ನಿನ್ನ ಸನಿಹಕೇ ಬರುವೇ, ನನ್ನ ಈ ಜೀವ ಕಿರುಕಾಣಿಕೆ ನನ್ನ ಬದುಕೆಲ್ಲವ ಸರಿದೂಗುವ ಹೊಣೆಗಾರಿಕೆ….ನಿನ್ನಲ್ಲಿದೆ    ಕಿವಿಗೊಡು ನೀ ವಿವರಿಸುವೆ, ಬಿಸಿ ಉಸಿರಾ ಕವಿತೆಗಳಾ ಕೂಡಿರುವೆ ಬಿಡಬಿಡದೆ, ನೀನಿರುವಾ ನಿಮಿಷಗಳಾ ಉಪಗ್ರಹವೇ..ನಿನಗೇ..ನಾನು    ಕನಸುಗಳಾ ತರೆದಿಡುವೇ, ಆವರಿಸು ಅಡಿಗಡಿಗೆ ಕೋರಿಕೆಯು ಒಂದೇನೆ ಹೃದಯದಲಿ, ಮಿರುಮಿನುಗು, ಕೊನೆವರೆಗೂ ಇದೇ ಥರಾ ನಿನ್ನ ಸನಿಹಕೇ ಒಲವೇ, ಸೊಗಸಾದಂತೆ ಜೊತೆಗಾರಿಕೆ ನಿನ್ನ ಸನಿಹಕೇ ಬರುವೇ, ನನ್ನ ಈ ಜೀವ ಕಿರುಕಾಣಿಕೆ ನನ್ನ ಬದುಕೆಲ್ಲವ ಸರಿದೂಗುವ ಹೊಣೆಗಾರಿಕೆ….ನಿನ್ನಲ್ಲಿದೆ  

Song: Ninadene januma (ನಿನದೇನೇ ಜನುಮ), Love Mocktail 2 (ಲವ್‌ ಮಾಕ್‌ಟೇಲ್‌ ೨)

ಹಾಡು: ನಿನದೇನೇ ಜನುಮ ರಚನೆ:‌ ರಾಘವೇಂದ್ರ ಕಾಮತ್ ಸಂಗೀತ‌: ನಕುಲ್‌ ಅಭಯಂಕರ್ ಗಾಯನ: ನಕುಲ್‌ ಅಭಯಂಕರ್ ಚಲನಚಿತ್ರ: ಲವ್‌ ಮಾಕ್‌ಟೇಲ್‌ ೨    ನಿನದೇನೆ ನಿನದೇನೆ ಜನುಮ ನಿನ್ನೊಲವೇ ಹೃದಯಂಗಮ ನಿನದೇನೆ ನಿನದೇನೆ ಪ್ರೇಮ ನಿನ್ನೊಲವೇ ಹೃದಯಂಗಮ   ನೀನಿರದೆ ನಾನಿರೆನು ಓ ಒಲವೇ ನಿನ್ನ ನೆನಪೇ ಕಾಡುತಿದೆ ಇನ್ನು ನೀನಿರುವೆ ಎಲ್ಲೆಲ್ಲೂ ಈ ಮಿಡಿತ ಎದೆಬಡಿತ ನನ್ನುಸಿರೇ ನೇನು   ನಿನ್ನಿಂದಲೇ ಸದಾ...ಬದುಕುವೆನು ನಾ ದಿನಾ ನಿನ್ನಿಂದಲೇ ಸದಾ...ಬೆಳಗುವುದು ಈ ಮನ ನೀ ಜೀವನ   ಕನಸಾದೆ ನೀನು, ನನಸಾದೆ ನೀನು ಮನಸಾರೆ ನನ್ನ ಬಾಳಿಗೆ ನಗುವಾಧೆ ನೀನು, ಜಗವಾಧೆ ನೀನು ನೀ ಹೋದೆ ಯಾವ ಕಡೆಗೆ   ಹೇಗಿರಲಿ..ನಿನ್ನಾ ಹೊರತು ನೀನೇ, ನನ್ನ ಗುರುತು ಅಲೆದಾಟ ನನಗಿನ್ನು, ಬಿಡದ ನೆನಪು ಸುಡುತಾ ಇರಲು ನನ್ನನ್ನು ಎಂದಿಗೂ ಒಗಟಾಗಿದೆ..ಈ ಜೀವನ   ನಿನದೇನೆ ನಿನದೇನೆ ಜನುಮ ನಿನ್ನೊಲವೇ ಹೃದಯಂಗಮ ನಿನದೇನೆ ನಿನದೇನೆ ಪ್ರೇಮ ನಿನ್ನೊಲವೇ ಹೃದಯಂಗಮ   ನೀನಿರದೆ ನಾನಿರೆನು ಓ ಒಲವೇ ನಿನ್ನ ನೆನಪೇ ಕಾಡುತಿದೆ ಇನ್ನು ನೀನಿರುವೆ ಎಲ್ಲೆಲ್ಲೂ ಈ ಮಿಡಿತ ಎದೆಬಡಿತ ನನ್ನುಸಿರೇ ನೇನು   ನಿನ್ನಿಂದಲೇ ಸದಾ...ಬದುಕುವೆನು ನಾ ದಿನಾ ನಿನ್ನಿಂದಲೇ ಸದಾ...ಬೆಳಗುವುದು ಈ ಮನ ನೀ ಜೀವನ  

Song: Yaare yaare (ಯಾರೇ ಯಾರೇ), Movie: Ek love ya (ಏಕ್‌ ಲವ್‌ ಯಾ)

‌ಹಾಡು: ಯಾರೇ ಯಾರೇ ರಚನೆ:‌ ಪ್ರೇಮ್ ಸಂಗೀತ‌: ಅರ್ಜುನ್ ಜನ್ಯ ಗಾಯನ: ಅರ್ಮಾನ್‌ ಮಲಿಕ್‌ ಚಲನಚಿತ್ರ: ಏಕ್‌ ಲವ್‌ ಯಾ    ಯಾರೇ ಯಾರೇ…...ನೀನು ನಂಗೆ ಏನೋ ಆಸೆ…..ಹೇಳೋದ್ಹೆಂಗೇ ನಿನಗಾಗೇ ಜನನ..ನಿನಗಾಗೇ ಮರಣ ನೀನಿಲ್ದೆ ಇನ್ನೇನೇನಿದೇ ಏ ಏ   ಯಾರೇ ಯಾರೇ, ನೀನು ನಂಗೆ ಏನೋ ಆಸೆ, ಹೇಳೋದ್ಹೆಂಗೇ   ಜೊತೆಯಾಗಿ ಕೈಹಿಡಿದು ನಡೆಯೋದೇ ನಂಗಾಸೆ ಓಓ ಓಓಓ, ವೊ ಓಓ ಓಓಓ ಉಸಿರಾಗಿ ಕಡೆತನಕ ನಾ ಕಾಯುವ ಆಸೆ ಓಓ ಓಓಓ, ವೊ ಓಓ ಓಓಓ   ಸೂರ್ಯ ಹುಟ್ಟೋದನೇ, ಒಮ್ಮೆ ಮರೆತೋದ್ರೂನೂ ನಾ ನಿನಗಾಗೇ ಹುಟ್ಟಿ ಬರುವೇ ಏ ಏ   ಮಗುವಾಗಿ ಮಡಿಲಲ್ಲಿ ನಾ ಮಲಗುವಾ ಆಸೆ ಓಓ ಓಓಓ, ವೊ ಓಓ ಓಓಓ ಮಣ್ಣಲ್ಲಿ ಜೊತೆಯಾಗಿ ನಾ ಸೇರುವ ಆಸೆ ಓಓ ಓಓಓ, ವೊ ಓಓ ಓಓಓ   ತಪ್ಪಾದರೆ ಕ್ಷಮಿಸು, ಒಪ್ಪಿ ನನ್ನ ವರಿಸು ನಾನೊಬ್ಬ ಏಕ್‌ ಲವ್‌ ಯಾ ಕಣೇ   ಯಾರೇ ಯಾರೇ

Song: Dostha kano (ದೋಸ್ತಾ ಕಣೋ), Movie: Robert (ರಾಬರ್ಟ್)

‌ಹಾಡು: ದೋಸ್ತಾ ಕಣೋ ರಚನೆ:‌ ಚೇತನ್‌ ಕುಮಾರ್ ಸಂಗೀತ‌: ಅರ್ಜುನ್ ಜನ್ಯ ಗಾಯನ: ವಿಜಯ್‌ಪ್ರಕಾಶ್‌, ಹೇಮಂತ್ ಕುಮಾರ್ ಚಲನಚಿತ್ರ: ರಾಬರ್ಟ್    ಬೈದು ಬುದ್ಧಿ ಹೇಳೋ ಫಾದರ್‌ ಕಣೋ ಇವ್ನು ನೋವಲ್‌ ಕಣ್ಣೀರ್‌ ಒರ್ಸೋ ಮದರು ಕಣೋ   ಜೀವ್ನಕ್‌ ಪಾಠ ಹೇಳೋ ಟೀಚರ್‌ ಕಣೋ ಇವ್ನು ಲೈಫು ಪಾರ್ಟ್ನರ್‌ಗಿಂತ ಕ್ಲೋಸು ಕಣೋ   ರಕ್ತದ್‌ ಸಂಬಂಧಾನೂ ಮೀರಿದ್‌ ಬಂಧು ಇವ್ನು  ಜಾತಿ ಮತಕ್ಕಿಂತ ತುಂಬಾ ದೊಡ್ಡವ್ನ್‌ ಇವ್ನು   ಎಲ್ಲರ ಪ್ರೀತಿಗಿಂತ ತುಂಬಾ ಜಾಸ್ತಿ ಪ್ರೀತಿ ನೀಡೋನ್‌ ದೋಸ್ತಾ ಕಣೋ   ಅ ಬ್ರದರ್‌ ಫ್ರಮ್‌ ಅನದರ್‌ ಮದರ್ ಮೈ ಬ್ರದರ್‌ ಫ್ರಮ್‌ ಅನದರ್‌ ಮದರ್{‌೨}   ಓ ಗೆಳೆಯಾ….ಜೀವದ್‌ ಗೆಳೆಯಾ…   ಜೀವಕ್‌ ಜೀವ ಕೊಡ್ತೀನ್‌ ನಾನು, ಜೀವಕ್ಕಿಂತ ಜಾಸ್ತಿ ನೀನು ಜೀವ್ನ ಪೂರ್ತಿ ಜೊತೆಗೆ ಇರ್ತೀನ್‌ ನಾನು..(ಇರ್ತೀವ್‌ ನಾವು) ನಿಂಗೆ ಯಾರು ದುಷ್ಮನ್‌ ಆದ್ರೂ, ಅವ್ರೂ ನಂಗೆ ದುಷ್ಮನ್ನೇನೇ ನಿನ್ನ ಪರವಾಗಿ ತೊಡೆ ತಟ್ತೀನ್‌ ನಾನು..(ತಟ್ತೀವ್‌ ನಾವು)   ನೀ ನನ್ನ ಬೆಸ್ಟು ಫ್ರೆಂಡು...ನಮ್‌ ಪ್ರೀತಿಗಿಲ್ಲ ಡೆಡ್ಡು ಎಂಡು   ಎಲ್ಲ ಟೈಮು ದೇವ್ರು ಜೊತೆಗೆ ಇರೋದಿಲ್ಲ ಅದಕೆ ಅಂತ ತಾನೇ ದೋಸ್ತೀನ ಕೊಟ್ಟವ್ನಲ್ಲ   ನೋವಲ್ಲೂ ಬೆನ್ನ ಹಿಂದೆ ಬಂದು ನಿಂತು ಜೋಶು ನೀಡೋನ್‌ ದೋಸ್ತಾ ಕಣೋ ಬ್ರದರ್‌ ಬ್ರದರ್‌ ಬ್ರದರ್‌ ಬ್ರದರ್‌ ಬ್ರದರ್‌ ಬ್ರದರ್‌ ಬ್ರದರ್‌   ಅ ಬ್ರದರ್‌ ಫ್ರಮ್‌ ಅನದರ್‌ ಮದರ್ ಮೈ ಬ್ರದರ್‌ ಫ್ರಮ್‌ ಅನದರ್‌ ಮದರ್{‌೨} ಕಷ್ಟ ಸುಖ ಶೇರ್‌ ಮಾಡ್ತ

Song: Moolimani muddesa (ಮೂಲಿಮನಿ ಮುದ್ದೇಸ), Movie: Inspector Vikram {ಇನ್ಸ್ಪೆಕ್ಟರ್‌ ವಿಕ್ರಂ}(೨೦೨೧)

ಹಾಡು: ಮೂಲಿಮನಿ ಮುದ್ದೇಸ ರಚನೆ:‌ ಪ್ರಮೋದ್‌ ಮರವಂತೆ ಸಂಗೀತ‌: ಅನೂಪ್‌ ಸೀಳಿನ್ ಗಾಯನ: ಆಂತನಿ ದಾಸನ್ ಚಲನಚಿತ್ರ: ಇನ್ಸ್ಪೆಕ್ಟರ್‌ ವಿಕ್ರಂ(೨೦೨೧)    ಪುಬು ಬುಬು ಬುಂ, ಪುಬು ಬುಬು ಬುಂ  ಪುಬು ಬುಬು ಬುಂ..ಪುಬುಂ ಪುಬುಂ   ಮೂಲಿ ಮನಿ ಮುದ್ದೇಸ, ಮಾಡ್ತಾನ್‌ ನೋಡ ಹಗ್ಲ್ಯಾಸ ತ್ವಾಟದ್‌ ಮನಿ ಮೋಟಮ್ಮಂಗೂ ಕಿತ್ತಾಟದ ಹವ್ಯಾಸ   ಜಡೆ-ಜಡೆ ಹೊಡ್ದಾಡದ ನೋಡದಕ್ಕ ಚಂದ, ಆಹಾ! ಮೀಸೆ-ಜಡೆ ಗುದ್ದಾಡುದ್ರೆ ಊರಿಗೆಲ್ಲ ಹಬ್ಬ, ಆಹಾ! ಹಿಂದಕ್ಕ ಮುಂದಕ್ಕ ಎಳೆದಾಡಿ, ಹೋಗ ಇವ್ನಾ!   ಮೂಲಿ ಮನಿ ಮುದ್ದೇಸ, ಮಾಡ್ತಾನ್‌ ನೋಡ ಹಗ್ಲ್ಯಾಸ   ಮುದ್ದಾನೆ ಮೈಯಿ ಮುದ್ದಾಗಿರುವ ಸುಕುಮಾರನೆ ಬೆಳ್ಳಕ್ಕಿ ಹಂಗ ಹೊಂಚಾಕೋ ಸುಕುಮಾರಿಯೇ ಸುಕು ಸುಕು ಸುಕು ಮಾರ ಮಾರ ಸುಕು ಸುಕು ಸುಕು ಮಾರಿ ಮಾರಿ ಮಾರ ಮಾರಿ, ಮಾರ ಮಾರಿ ಮಾರಾಮಾರಿಯೇ ಪುಬು ಬುಬು ಬುಂ..ಪುಬುಂ ಪುಬುಂ   ಘಾಟಿ ಮೆಣ್ಸು ಬರೋಬ್ಬರಿ ಖಾರ ಇರ್ತದೆ ಹೆಣ್ಣು ಅಂದ್ರ ಮೈಯ್ಯಾಗ್‌ ಕೊಬ್ಬು ಇರ್ಬೇಕಾಗ್ತದೆ   ಹಾವಿಗೂ ಮುಂಗ್ಸಿಗೂ ಪ್ರೀತಿ, ಭಾಳಾ ಕಷ್ಟ ಐತಿ ಕಾಂಗ್ರೆಸು-ಬಿಜೆಪಿ ದೋಸ್ತಿ, ಆಗ್ಲೀಕಾಗ್ತದ?! ಎಡಕ್ಕ ಬಲಕ್ಕ ಜಗ್ಯಾಡಿ, ಹೋಗಾ ಇವ್ಳಾ!   ಮೂಲಿ ಮನಿ ಮುದ್ದೇಸ, ಮಾಡ್ತಾನ್‌ ನೋಡ ಹಗ್ಲ್ಯಾಸ ತ್ವಾಟದ್‌ ಮನಿ ಮೋಟಮ್ಮಂಗೂ ಕಿತ್ತಾಟದ ಹವ್ಯಾಸ   ಪುಬು ಬುಬು ಬುಂ..ಪುಬುಂ ಪುಬುಂ   ಗಂಡು ಹೆಣ್ಣು ಸಂದಿ ಮೂಲ್ಯಾಗ್‌ ಪ್ರೀತಿ ಮಾಡ್ತಾರ ಜಗ್ಳ ಮಾತ್ರ ಊರ ಮುಂದ ಬಂದು ಮಾಡ್ತಾರ   ಟಾಮ್‌ ಅಂಡ್‌ ಜೆರ್ರಿ ಸೇರಿ