ಪೋಸ್ಟ್‌ಗಳು

2022 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

Song: Bisile irali(ಬಿಸಿಲೇ ಇರಲಿ), Movie: Bettada hoovu(ಬೆಟ್ಟದ ಹೂವು)

ಹಾಡು: ಬಿಸಿಲೇ ಇರಲಿ ರಚನೆ: ಚಿ. ಉದಯಶಂಕರ್ ಸಂಗೀತ:‌ ರಾಜನ್-ನಾಗೇಂದ್ರ ಗಾಯನ:‌ ಎಸ್.ಪಿ.ಬಿ, ಪುನೀತ್‌ ರಾಜ್‌ಕುಮಾರ್ ಚಲನಚಿತ್ರ: ಬೆಟ್ಟದ ಹೂವು ನಾನು? ಐ ನೀನು? ಯೂ ಕಾಡು? ಫಾರೆಸ್ಟ್‌ ಬೆಟ್ಟ? ಮೌಂಟನ್‌ ಹೂವು? ಫ್ಲವರ್‌ ಬೆಟ್ಟದ ಹೂ? ಮೌಂಟನ್‌ ಫ್ಲವರ್ ಬಿಸಿಲೇ ಇರಲಿ, ಮಳೆಯೇ ಬರಲಿ ಕಾಡಲ್ಲಿ ಮೇಡಲ್ಲಿ ಅಲೆವೆ, ಹ್ಮ್…‌ ಎಲ್ಲಿ ಇನ್ನೊಂದ್‌ ಸಲ ಹೇಳು? ಬಿಸಿಲೇ ಇರಲಿ, ಮಳೆಯೇ ಬರಲಿ ಕಾಡಲ್ಲಿ ಮೇಡಲ್ಲಿ ಅಲೆವೆ ಸನ್‌ಲೈಟ್‌ ಲೆಟ್‌ ಕಮ್‌, ರೇನ್‌ ಲೆಟ್‌ ಇಟ್‌ ಕಮ್‌ ಫಾರೆಸ್ಟ್‌ ಮೌಂಟನ್‌ ಐ ಗೋ ರೋಮಿಂಗ್ ‌ ಶರ್ಲಿ ಮೇಡಂಗಾಗಿ ಕೊಡಲು ಬೆಟ್ಟದ ಹೂವಾ ತರುವೆ ಓಯ್‌ ಶರ್ಲಿ ಮೇಡಂ ಟು ಗಿವಿಂಗು ಮೌಂಟನ್‌ ಫ್ಲವರ್‌ ಬ್ರಿಂಗಿಂಗ್‌ ಬಿಸಿಲೇ ಇರಲಿ, ಮಳೆಯೇ ಬರಲಿ ಕಾಡಲ್ಲಿ ಮೇಡಲ್ಲಿ ಅಲೆವೆ ಸನ್‌ಲೈಟ್‌ ಲೆಟ್‌ ಕಮ್‌, ರೇನ್‌ ಲೆಟ್‌ ಇಟ್‌ ಕಮ್‌ ಫಾರೆಸ್ಟ್‌ ಮೌಂಟನ್‌ ಐ ಗೋ ರೋಮಿಂಗ್ ದಿನವೂ ಹೂವ ಕೊಡುವೆ, ಝಣ-ಝಣ ರುಪಾಯಿ ಪಡೆವೆ(೨) ಅಮ್ಮನ ಕೈಲಿ ಎಲ್ಲಾ ಕೊಟ್ಟು ಹತ್ತೇ ಪೈಸಾ ತೆಗೆದುಕೊಳ್ಳುವೆ ಆ…ವೇಟ್‌ ಒನ್‌ ಮಿನಿಟ್‌ ಐ ಟೆಲ್‌ ಕರೆಕ್ಟ್‌ ಡೇಲಿ ಫ್ಲವರ್‌ ಗಿವಿಂಗ್, ಠಣ್‌ ಠಣ್‌ ರುಪೀ ಟೇಕಿಂಗ್‌, ಕರೆಕ್ಟಾ? ಡೇಲಿ ಫ್ಲವರ್‌ ಗಿವಿಂಗ್, ಠಣ್‌ ಠಣ್‌ ರುಪೀ ಟೇಕಿಂಗ್‌ ಆಲ್‌ ದ ಮನಿ ಮದರ್‌ ಗಿವಿಂಗ್‌, ಟೆನ್‌ ಪೈಸೋನ್ಲಿ ಐ ರಿಸೀವಿಂಗ್‌ ಬಿಸಿಲೇ ಇರಲಿ,  ಓಯ್‌ ಸನ್‌ಲೈಟ್‌ ಲೆಟ್‌ ಕಮ್‌ ಕಮ್ ‌ ಮಳೆಯೇ ಬರಲಿ,‌  ಆಹಾ! ರೇನ್‌ ಲೆಟ್‌ ಇಟ್ ಕಮ್‌ ಕಾ

Song: Naa ninage kaavalugaara (ನಾ ನಿನಗೆ ಕಾವಲುಗಾರ), Movie: James (ಜೇಮ್ಸ್)

ಹಾಡು: ನಾ ನಿನಗೆ ಕಾವಲುಗಾರ ರಚನೆ: ಚೇತನ್‌ ಕುಮಾರ್ ಸಂಗೀತ:‌ ಚರಣ್‌ ರಾಜ್‌ ಗಾಯನ:‌ ಸಂಜಿತ್‌ ಹೆಗ್ಡೆ, ಅಂಕಿತ ಕುಂಡು ಚಲನಚಿತ್ರ: ಜೇಮ್ಸ್ ಈ ಕಣ್ಣಿನ ಜಲಪಾತದ ಮೇಲೆ ನಿಂತು ಹಾಡುತಿದೆ ಈ ಹೃದಯ ಜೋಕಾಲಿ ಅತಿ ಸುಂದರ ಅತಿ ಮೌನದ ಸೆಳೆತಕೆ ಸೋತು ಹಿಂಬಾಲಿಸಿದೆ ಹರೆಯ ಖಾಲಿಗೈಯ್ಯಲಿ ನಿನ್ನ ಸಂಗ, ಅತಿರೋಚಕ ಪ್ರತಿಗನಸಾ, ನೀ ಮಾಲೀಕ ಸಿಕ್ಕಿಹುದು ನನಗೀಗ ಪಾರಿತೋಷಕ ಅಭಿಮಾನಿ ನಾ ನಿನಗೆ ವಿದೂಷಕ ನಾ ನಿನಗೆ, ಕಾವಲುಗಾರ ಕಾಯುವೆನು, ಜನುಮ ಪೂರ{೨} ಸಿಕ್ಕಿಹುದು ನನಗೀಗ ಪಾರಿತೋಷಕ ಅಭಿಮಾನಿ ನಾ ನಿನಗೆ ವಿದೂಷಕ ಇತಿಹಾಸದ ಪುಟದ ಒಳಗೆ ಇರಬಹುದು ಒಂದು ನಂಟು ಪ್ರತಿಘಳಿಗೆಗೂ ಒಂದು ಚೂರು ಅಪ್ಪುಗೆಯ ಸೆಳೆತ ಉಂಟು ಸಾಟಿ ಇಲ್ಲದ ನೋಟದ ಧಾಟಿ ನಿನ್ನದು ಭೇಟಿಯಾಗಲು ಕಾಯುವ ಮನಸು ನನ್ನದು ಬದಲಾಗಿದೆ ದಿನಚರಿ, ಬೇಕು ನಿನ್ನ ಹಾಜರಿ ಈ ಹೃದಯಕೆ ನೀನೆಂದಿಗೂ ರಾಯಭಾರಿ ಸಿಕ್ಕಂಗೆ ಆಗಿಹುದು ಪಾರಿತೋಷಕ ಅಭಿಮಾನಿ ನಾ ನಿನಗೆ ವೀಕ್ಷಕ ನೀ ನನಗೆ, ಕಾವಲುಗಾರ ಚಿರಋಣಿಯು, ಜನುಮಾ ಪೂರಾ ಬಿಟ್ಟಿರಲು, ಆಗದು ದೂರ ತಿಳಿಸಿಕೊಡು, ಪ್ರೀತಿಯ ಸಾರ  

Song: Megharaajana raaga(ಮೇಘರಾಜನ ರಾಗ), Movie: Monsoon Raaga (ಮಾನ್ಸೂನ್‌ ರಾಗ)

ಹಾಡು: ಮೇಘರಾಜನ ರಾಗ ರಚನೆ: ಕೆ. ಕಲ್ಯಾಣ್ ಸಂಗೀತ:‌ ಜೆ. ಅನೂಪ್‌ ಸೀಳಿನ್ ಗಾಯನ:‌ ಅರವಿಂದ್‌ ವೇಣುಗೋಪಾಲ್ ಚಲನಚಿತ್ರ: ಮಾನ್ಸೂನ್‌ ರಾಗ ಮೇಘರಾಜನ ರಾಗ ಹನಿಗಳಾದಂತೆ ಧಮನಿ ಧಮನಿಯು ಸೇರಿ ದನಿಗಳಾದಂತೆ ಹೃದಯದೊಳಗೆ, ತೇರನೆಳೆದು ಪುಟಿಯಿತು ಕವಿತೆ ಮೇಘರಾಜನ ರಾಗ ಹನಿಗಳಾದಂತೆ ಮೌನಕೂ ನಾಚಿಕೆ, ಬಂತಿದೋ ಈಗ ಆಹ್ಲಾದಿಸು.. ಹೊಸಿಲನು ದಾಟಿದೆ, ಹೊಸತನ ಎಂಬುದು ಆಹ್ವಾನಿಸು.. ಮೇಘರಾಜನ ರಾಗ ಹನಿಗಳಾದಂತೆ ಧಮನಿ ಧಮನಿಯು ಸೇರಿ ದನಿಗಳಾದಂತೆ ದಿನಚರಿ ತಿಳಿಸದೇ, ಓಡಿದೆ ಸಮಯ ಹಿಂಬಾಲಿಸು.. ಮನಸಿನ ಗೆಳೆತನ, ಪ್ರೀತಿಗೆ ಒಡೆತನ ಬಾ ಆವರಿಸು.. ಮೇಘರಾಜನ ರಾಗ ಹನಿಗಳಾದಂತೆ ಧಮನಿ ಧಮನಿಯು ಸೇರಿ ದನಿಗಳಾದಂತೆ ಹೃದಯದೊಳಗೆ, ತೇರನೆಳೆದು ಪುಟಿಯಿತು ಕವಿತೆ

Song: Prayashaha (ಪ್ರಾಯಶಃ) Movie: Gaalipata 2 (ಗಾಳಿಪಟ- ೨)

ಹಾಡು: ಪ್ರಾಯಶಃ ರಚನೆ: ಯೋಗರಾಜ್‌ ಭಟ್ ಸಂಗೀತ:ಅರ್ಜುನ್‌ ಜನ್ಯ ಗಾಯನ:‌ ಸೋನು ನಿಗಂ ಚಲನಚಿತ್ರ: ಗಾಳಿಪಟ- ೨  ನಾವು ಬದುಕಿರಬಹುದು ಪ್ರಾಯಶಃ ,ಇಲ್ಲ ಕನಸಿರಬಹುದಿದು ಪ್ರಾಯಶಃ, ಎಲ್ಲ ಸರಿ ಇರಬಹುದು ಭಾಗಶಃ, ಇಲ್ಲ ಸೆರೆ ಇರಬಹುದಿದು ಮೂಲತಃ,ಜೀವಾ,  ವಿಲವಿಲ ಎನ್ನುತಲೇ ಒಲವನು ಹುಡುಕುತಿದೆ,  ಪ್ರಾಯಶಃ  ನಾವು ಬದುಕಿರಬಹುದು ಪ್ರಾಯಶಃ ,ಇಲ್ಲ ಕನಸಿರಬಹುದಿದು ಪ್ರಾಯಶಃ ಕಂಗಳೇ ಇಲ್ಲದ ಊರಲಿ ನಡೆದು(೨) ಕನ್ನಡಿ ಮಾರುವ ಕೆಲಸವ ಹಿಡಿದು ನಮ್ಮನು ನಾವೇ…. ನಮ್ಮನು ನಾವೇ ಕಾಣದೆ ಹೋಗಿ, ಎಲ್ಲಿಗೋ ಸಾಗಿ ನಾವು ಯಾರಿರಬಹುದೆಂದು, ಹುಡುಕಲು ಬಯಸುವೆವು ಪ್ರಾಯಶಃ  ನಾವು ಬದುಕಿರಬಹುದು ಪ್ರಾಯಶಃ ,ಇಲ್ಲ ಕನಸಿರಬಹುದಿದು ಪ್ರಾಯಶಃ ನಲಿವಿನ ಕ್ಷಣಗಳ ಕಾಯುತ ಕುಳಿತು(೨) ದಿನಗಳ ಕಳೆವೆವು ನಗುವುದೇ ಮರೆತು ನೆನ್ನೆಯ ಪಾಡು… ನೆನ್ನೆಯ ಪಾಡು, ಈ ದಿನ ಕಾಡಿ, ನಾಳೆಯೂ ಬಾಡಿ ನಮ್ಮ ಸಂಕಟವನೇ ನಾವು, ಸಂತಸ ಎನ್ನುವೆವು ಪ್ರಾಯಶಃ ನಾವು ಬದುಕಿರಬಹುದು ಪ್ರಾಯಶಃ ,ಇಲ್ಲ ಕನಸಿರಬಹುದಿದು ಪ್ರಾಯಶಃ  

Song: Nagabeda nagabeda ( ನಗಬೇಡ ನಗಬೇಡ) Movie: Badavara bandhu (ಬಡವರ ಬಂಧು)

ಹಾಡು: ನಗಬೇಡ ನಗಬೇಡ ರಚನೆ: ಚಿ. ಉದಯಶಂಕರ್ ಸಂಗೀತ: ಎಂ.ರಂಗರಾವ್ ಗಾಯನ:‌ಪಿ. ಬಿ. ಶ್ರೀನಿವಾಸ್ ಚಲನಚಿತ್ರ: ಬಡವರ ಬಂಧು  ನಗಬೇಡ, ನಗಬೇಡ, ನಗಬೇಡ ಅವನ ನೋಡುತಾ, ನೀನು ನಕ್ಕರೆ ಊರೇ ನಗುವುದು, ನೀನು ಬಿದ್ದರೆ {೨} ಒಂದೇ ದಿನದಲಿ ಬೀಜವು ಮೊಳೆತು ಹೆಮ್ಮರವಾಗುವುದೇ(೨) ಇಂದೇ ಜನಿಸಿದ ಕಂದನು ನಡೆದು ಮಾತನಾಡುವುದೇ ದಿನಗಳು ಕಳೆದಂತೆ, ಕಾಲವು ಬಂದಂತೆ(೨) ಎಲ್ಲಾ ಬೆಳೆಯುವುದು, ಹೊಸತನ ಮೂಡುವುದು ನಗಬೇಡ, ನಗಬೇಡ, ನಗಬೇಡ ಅವನ ನೋಡುತಾ, ನೀನು ನಕ್ಕರೆ ಊರೇ ನಗುವುದು, ನೀನು ಬಿದ್ದರೆ ಕಲಿಯುವುದಿನ್ನೂ ಸಾಗರದಂತಿದೆ ಕಲಿತವರಾರಿಲ್ಲಿ(೨) ಶತಮಾನಗಳೇ ಕಲಿತರೂ ಮುಗಿಯದು ವಿದ್ಯೆಗೆ ವಯಸ್ಸೆಲ್ಲಿ ಬಾಳಿನ ಅನುಕ್ಷಣವೂ, ಹೊಸ ಹೊಸ ಅನುಭವವು(೨) ಪಾಠವ ಕಲಿಸುವುದು, ನೀತಿಯ ತಿಳಿಸುವುದು ನಗಬೇಡ, ನಗಬೇಡ, ನಗಬೇಡ ಅವನ ನೋಡುತಾ, ನೀನು ನಕ್ಕರೆ ಊರೇ ನಗುವುದು, ನೀನು ಬಿದ್ದರೆ ಮುಂದಕೆ ಬರುವರ ಕಂಡರೆ ಕರುಬುವ ಮನುಜರು ದಾನವರು (೨) ಹೊಟ್ಟೆಯ ಕಿಚ್ಚಲಿ ತಾವೇ ಬೇಯುತ ನೋವಲಿ ನರಳುವರು ಸ್ನೇಹದಿ ಬಾಳಿದರೆ, ಸಂಯಮ ತೋರಿದರೆ(೨) ಶಾಂತಿಯ ನೀ ಪಡೆವೇ, ನೀನೂ ಸುಖ ಪಡೆವೆ ನಗಬೇಡ, ನಗಬೇಡ, ನಗಬೇಡ ಅವನ ನೋಡುತಾ, ನೀನು ನಕ್ಕರೆ ಊರೇ ನಗುವುದು, ನೀನು ಬಿದ್ದರೆ

Song: Salaam soldier(ಸಲಾಂ ಸೊಲ್ಜರ್), Movie: James (ಜೇಮ್ಸ್)

ಹಾಡು: ಸಲಾಂ ಸೊಲ್ಜರ್ ರಚನೆ: ಚೇತನ್‌ ಕುಮಾರ್ ಸಂಗೀತ: ಚರಣ್‌ ರಾಜ್ ಗಾಯನ:‌ ಸಂಜಿತ್‌ ಹೆಗ್ಡೆ, ಚರಣ್‌ ರಾಜ್ ಚಲನಚಿತ್ರ: ಜೇಮ್ಸ್ ರಣ ರಣ ರಣ ರಣಕಲಿಯೋ ಯುದ್ಧ ಭೂಮಿಗೇನೆ ಇವ ಕಳೆಯೋ ಧಗ ಧಗ ಧಗ ಧಗ ಉರಿಯೋ ಸೂರ್ಯನ್ನೇ ಸುಡೊ ಉಸಿರೋ‌ ರಣ ರಣ ಕಲಿ ರಣ ಕಲಿಯೋ ಇಡೀ ದೇಶವೇನೆ ನಿನ್ನ ಮನೆಯೋ ಧಢ ಧಢ ಧಢ ಧಢ ನಡೆಯೋ ನಿನ್ನ ತ್ಯಾಗಕ್ಕೆಂದೂ ನಾವು ಋಣಿಯೋ ಆ ಸಿಡಿಲು ಮಳೆಯೇ ಬಂದರೂ ಸಾಗರವೇ ಉಕ್ಕಿ ಹರಿದರೂ ಎದುರಾಳಿ ಎದುರಿಗೆ ನಿಂತರೂ ನೀ ಮುನ್ನುಗ್ಗಿ ದೇಶಾನ ಕಾಯುವೇ ಜನಗಣಮನ ಎದೆಯಲಿದೆ ಒಹೋ ಬಲಿದಾನಕೂನು ನೀನು ರೆಡಿ ಒಹೋ ಮಣ್ಣು ಕೂಡ ನಿನ್ನ ನೆನೆಯುತಿದೆ ಓಹೋ ಎಂದೆಂದೂ ನಿಂಗೆ ಜೈ ಹೋ…..ಜೈ ಹೋ ಓ ಸಲಾಂ, ಸೋಲ್ಜರ್‌, ನೀನಿದ್ರೆ ಇಲ್ಲ ಡೇಂಜರ್‌ ಸಲಾಂ, ಸೋಲ್ಜರ್‌, ನೀ ದೇಶಕೇನೆ ಪವರ್‌ ಸಲಾಂ, ಸೋಲ್ಜರ್‌, ನಿನ್‌ ಹೆಸರಲಿಹುದು ಫಾಯರ್‌ ಸಲಾಂ, ಸೋಲ್ಜರ್‌, ಎಂದೆಂದೂ ನೀನೆ ಸೇವ್ಯರ್‌ ಗಟ್ಟಿ ಗುಂಡಿಗೆ, ಓ ಶಿಸ್ತು ನಡಿಗೆ ದೇಶ ಕಾಯುವೆ ನೀ ಕೊನೆಯವರೆಗೆ ನಿನ್ನ ನಡುಕ ಆ ವೈರಿ ಪಡೆಗೆ ನಿನ್‌ ಎದೆಯಲ್ಲಿ ಭಯವಿಲ್ಲ ರಣರೋಚಕ ನಿನ್ನ ನೆರಳೇ ಧೈರ್ಯ ನಮಗೆ, ಕೇಳೋ ನಿನ್ನ ಹೆಸರೇ ಹೆಮ್ಮೆ ನಮಗೆ ನಿನ್ನ ಸೇವೆ ಶ್ರೇಷ್ಠ ನಮಗೆ ಗಡಿಯಲ್ಲಿ ಸಿಡಿದೇಳುವಾ ಸೈನಿಕ, ಹಾ! ಓ ದಿನ ದಿನವೂ ಹೋರಾಟ, ಬಂದೂಕಿನ ಒಡನಾಟ ಹೊಸ ಸಮರದ ಸೆಣಸಾಟ, ಓ ನೀನು ಧೈರ್ಯದ ಸಾಮ್ರಾಟ ಹೆತ್ತವರ ಬಿಟ್ಟಿರುವೇ, ಬಯಕೆಗಳ ತೊರೆದಿರುವೇ ಧೃಡವಾಗಿ ನಿಂತಿರುವೆ, ನೀ ದೇಶಕೆ ಮುಡಿಪಾಗೇ ಇರುವೇ ಸೋಲ್

Song: Na naguva modalene(ನಾ ನಗುವ ಮೊದಲೇನೆ), Movie: Manasare(ಮನಸಾರೆ)

ಹಾಡು: ನಾ ನಗುವ ಮೊದಲೇನೆ ರಚನೆ: ಯೋಗರಾಜ್‌ ಭಟ್ ಸಂಗೀತ: ಮನೋಮೂರ್ತಿ ಗಾಯನ:‌ ಶ್ರೇಯ ಘೋಶಾಲ್ ಚಲನಚಿತ್ರ: ಮನಸಾರೆ ‌ ನಾ, ನಗುವ ಮೊದಲೇನೆ ಮಿನುಗುತಿದೆ ಯಾಕೊ ಹೊಸ ಮುಗುಳುನಗೆ ನಾ, ನುಡಿವ ಮೊದಲೇನೆ ತೊದಲುತಿದೆ ಹೃದಯವಿದು ಒಳಗೊಳಗೇ ನಾ, ನಡೆವ ಮೊದಲೇನೆ ಎಳೆಯುತಿದೆ ದಾರಿಯಿದು ನಿನ್ನೆಡೆಗೆ ನಾ, ಅರಿವ ಮೊದಲೇನೆ ಉರಿಯುತಿದೆ ದೀಪವಿದು ನನ್ನೊಳಗೆ ಒಂದು ಬಾರಿ ಹೇಳು ಮೆಲ್ಲಗೆ ಯಾರು ಯಾರು ನೀ ನನಗೆ ನಾ, ನಗುವ ಮೊದಲೇನೆ ಮಿನುಗುತಿದೆ ಯಾಕೊ ಹೊಸ ಮುಗುಳುನಗೆ ತಿಳಿಸದೆ ನನಗೆ ಹುಡುಕಿದೆ ನಿನ್ನ, ನನ್ನಯ ಕಣ್ಣು ಸಿಹಿ ಸಂಕಟ ಸಾಕಾಗಿದೆ, ಮುಂದೇನು ಕಲಿತಿದೆ ಮನವು ಕುಣಿಯುವುದನ್ನು, ಕಂಡರೆ ನೀನು ನಾನು ನನ್ನ ಪಾಡಿಗಿರಲು, ಯಾಕೆ ಕಂಡೆ ನೀ ನನಗೆ ನಾ, ನಗುವ ಮೊದಲೇನೆ ಮಿನುಗುತಿದೆ ಯಾಕೊ ಹೊಸ ಮುಗುಳುನಗೆ ಕನವರಿಕೆಯಲಿ ನಿನ್ನಯ ಹೆಸರ ಕರೆಯಿತೆ ಹೃದಯ ನನಗೇತಕೆ ನನ್ನ ಮೇಲೆಯೇ ಈ ಸಂಶಯ ಬರಿ ಕನಸಿನಲೇ ಆಗುವೆ ಏಕೆ, ನನ್ನಯ ಇನಿಯ ಹೇಳು ಒಮ್ಮೆ ಹೇಳು ಇದುವೇ ಪ್ರೀತಿ ಎಂದು ನೀ ನನಗೆ ನಾ, ನಗುವ ಮೊದಲೇನೆ ಮಿನುಗುತಿದೆ ಯಾಕೊ ಹೊಸ ಮುಗುಳುನಗೆ ನಾ, ನುಡಿವ ಮೊದಲೇನೆ ತೊದಲುತಿದೆ ಹೃದಯವಿದು ಒಳಗೊಳಗೇ ನಾ, ನಡೆವ ಮೊದಲೇನೆ ಎಳೆಯುತಿದೆ ದಾರಿಯಿದು ನಿನ್ನೆಡೆಗೆ ನಾ, ಅರಿವ ಮೊದಲೇನೆ ಉರಿಯುತಿದೆ ದೀಪವಿದು ನನ್ನೊಳಗೆ ಒಂದು ಬಾರಿ ಹೇಳು ಮೆಲ್ಲಗೆ ಯಾರು ಯಾರು ನೀ ನನಗೆ

Song: Ello maleyagide endu (ಎಲ್ಲೋ ಮಳೆಯಾಗಿದೆ ಎಂದು), Movie: Manasaare (ಮನಸಾರೆ)

ಹಾಡು: ಎಲ್ಲೋ ಮಳೆಯಾಗಿದೆ ಎಂದು ರಚನೆ: ಜಯಂತ್‌ ಕಾಯ್ಕಿಣಿ ಸಂಗೀತ: ಮನೋಮೂರ್ತಿ ಗಾಯನ: ಸೋನು ನಿಗಮ್‌ ಚಲನಚಿತ್ರ: ಮನಸಾರೆ ಎಲ್ಲೋ ಮಳೆಯಾಗಿದೆ ಎಂದು, ತಂಗಾಳಿಯು ಹೇಳುತಿದೆ ಇಲ್ಲೇ ಒಲವಾಗಿದೆ ಎಂದು, ಕನಸೊಂದು ಬೀಳುತಿದೆ ವ್ಯಾಮೋಹವ ಕೇವಲ ಮಾತಿನಲಿ, ಹೇಳಲು ಬರಬಹುದೇ ನಿನ್ನ ನೋಡಿದ ಮೇಲೆಯೂ ಪ್ರೀತಿಯಲಿ, ಬೀಳದೆ ಇರಬಹುದೇ ಎಲ್ಲೋ ಮಳೆಯಾಗಿದೆ ಎಂದು, ತಂಗಾಳಿಯು ಹೇಳುತಿದೆ ಕಣ್ಣಲಿ ಮೂಡಿದೆ ಹನಿಗವನ, ಕಾಯಿಸಿ ನೀ ಕಾಡಿದರೆ ನೂತನ ಭಾವದ ಆಗಮನ, ನೀ ಬಿಡದೇ ನೋಡಿದರೇ ನಿನ್ನ ಧ್ಯಾನದಿ ನಿನ್ನದೆ ತೋಳಿನಲಿ, ಹೀಗೆಯೇ ಇರಬಹುದೇ ಈ ಧ್ಯಾನವ ಕಂಡರೆ ದೇವರಿಗೂ, ಕೋಪವು ಬರಬಹುದೇ ಎಲ್ಲೋ ಮಳೆಯಾಗಿದೆ ಎಂದು, ತಂಗಾಳಿಯು ಹೇಳುತಿದೆ ಇಲ್ಲೇ ಒಲವಾಗಿದೆ ಎಂದು, ಕನಸೊಂದು ಬೀಳುತಿದೆ ನೆನಪಿನ ಹೂಗಳ ಬೀಸಣಿಕೆ, ನೀ ಬರುವ ದಾರಿಯಲಿ ಓಡಿದೆ ದೂರಕೆ ಬೇಸರಿಕೆ, ನೀನಿರುವಾ ಊರಿನಲೀ ಅನುಮಾನವೇ ಇಲ್ಲದೆ ಕನಸಿನಲಿ, ಮೆಲ್ಲಗೆ ಬರಬಹುದೇ ಅಲೆಮಾರಿಯ ಹೃದಯದ ಡೇರೆಯಲಿ, ನೀನು ಇರಬಹುದೇ ಎಲ್ಲೋ ಮಳೆಯಾಗಿದೆ ಎಂದು, ತಂಗಾಳಿಯು ಹೇಳುತಿದೆ ಇಲ್ಲೇ ಒಲವಾಗಿದೆ ಎಂದು, ಕನಸೊಂದು ಬೀಳುತಿದೆ ವ್ಯಾಮೋಹವ ಕೇವಲ ಮಾತಿನಲಿ, ಹೇಳಲು ಬರಬಹುದೇ ನಿನ್ನ ನೋಡಿದ ಮೇಲೆಯೂ ಪ್ರೀತಿಯಲಿ, ಬೀಳದೆ ಇರಬಹುದೇ ಎಲ್ಲೋ ಮಳೆಯಾಗಿದೆ ಎಂದು, ತಂಗಾಳಿಯು ಹೇಳುತಿದೆ