ಪೋಸ್ಟ್‌ಗಳು

ಡಿಸೆಂಬರ್, 2019 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

Song: Nee yaaro naa ariyenu,(ನೀ ಯಾರೊ ನಾ ಅರಿಯೆನು),Movie: Beladingala baale(ಬೆಳದಿಂಗಳ ಬಾಲೆ)

ಹಾಡು: ನೀ ಯಾರೋ ನಾ ಅರಿಯೆನು ರಚನೆ: ದೊಡ್ಡರಂಗೇಗೌಡ ಸಂಗೀತ: ಗುಣಸಿಂಗ್‌ ಗಾಯನ: ಎಸ್.ಪಿ.ಬಾಲಸುಬ್ರಹ್ಮಣ್ಯಂ, ಚಂದ್ರಿಕಾ ಗುರುರಾಜ್ ಚಲನಚಿತ್ರ: ಬೆಳದಿಂಗಳ ಬಾಲೆ ನೀ ಯಾರೊ ನಾ ಅರಿಯೆನು ಎಂದೆಂದೂ ನಾ ತುಡಿವೆನು ನೀ ಎಲ್ಲೊ ನಾ ತಿಳಿಯೆನು ನಿನಗೆಂದೆ ನಾ ಮಿಡಿವೆನು ನಿನ್ನ ದನಿ ಕೇಳುತ ನೀ ಯಾರೊ ನಾ ಅರಿಯೆನು ನೀ ಯಾರೊ ನಾ ಅರಿಯೆನು ಎಂದೆಂದೂ ನಾ ತುಡಿವೆನು ನೀ ಎಲ್ಲೊ ನಾ ತಿಳಿಯೆನು ನಿನಗೆಂದೆ ನಾ ಮಿಡಿವೆನು ನಿನ್ನ ದನಿ ಕೇಳುತ ನೀ ಯಾರೊ ನಾ ಅರಿಯೆನು ಮುಂಜಾನೆ ಮಂಜೇನು ನೀನು ತೇಲಾಡೊ ಸಿರಿಹಂಸವೇನು{೨} ಇಂಪಾದ ರಾಗ, ತಂಪಾದ ಗಾಳಿ ನೀನಾಗೆ ನಾ ಬಂದೆನು(೨) ನೀ ಯಾರೊ ನಾ ಅರಿಯೆನು ಎಂದೆಂದೂ ನಾ ತುಡಿವೆನು ನೀ ಎಲ್ಲೊ ನಾ ತಿಳಿಯೆನು ನಿನಗೆಂದೆ ನಾ ಮಿಡಿವೆನು ನಿನ್ನ ದನಿ ಕೇಳುತ ನೀ ಯಾರೊ ನಾ ಅರಿಯೆನು ಈ ಸುಮಗಳಲಿ, ಆಹಾ ನೀನಿಹೆಯೇನು, ಆಹಾ ಆ ಮುಗಿಲಿನಲಿ, ಆಹಾ ನೀ ಅಡಗಿಹೆಯೇನು ಮುತ್ತು, ಹವಳ ನೀನೆ ಏನು  ಹಾಡೋ ಹಕ್ಕಿ ನೀನೇ ಏನು ಭುವಿಯೋ, ಬಾನೋ, ಕಾಡೋ, ಕಡಲೋ  ಸೊಬಗಿ ಎಲ್ಲಿರುವೆ ನೀ ಯಾರೊ ನಾ ಅರಿಯೆನು ಎಂದೆಂದೂ ನಾ ತುಡಿವೆನು ನೀ ಎಲ್ಲೊ ನಾ ತಿಳಿಯೆನು ನಿನಗೆಂದೆ ನಾ ಮಿಡಿವೆನು ನಿನ್ನ ದನಿ ಕೇಳುತ ನೀ ಯಾರೊ ನಾ ಅರಿಯೆನು ಹೊಂಬಿಸಿಲಿನಲಿ, ಆಹಾ ನೀ ನಗುತಿರಲು, ಆಹಾ ಇಂಚರಗಳಲಿ, ಆಹಾ ನೀ ನುಡಿದಿರಲು, ಆಹಾ ಮಿನ

Song: Nanna mele nanageega(ನನ್ನ ಮೇಲೆ ನನಗೀಗ), Movie: Kannadakkagi ondannu otti(ಕನ್ನಡಕ್ಕಾಗಿ ಒಂದನ್ನು ಒತ್ತಿ)

ಹಾಡು: ನನಮೇಲೆ ನನಗೀಗ ರಚನೆ: ಕುಶಾಲ್‌ ಸಂಗೀತ: ಅರ್ಜುನ್‌ ಜನ್ಯ ಗಾಯನ: ಸೋನು ನಿಗಮ್‌ ಚಲನಚಿತ್ರ: ಕನ್ನಡಕ್ಕಾಗಿ ಒಂದನ್ನು ಒತ್ತಿ ನನಮೇಲೆ ನನಗೀಗ ಅನುಮಾನ ಶುರುವಾಗಿದೆ ಬಡಪಾಯಿ ಎದೆಯಲ್ಲಿ ಒಲವೀಗ ಮನೆಮಾಡಿದೆ ಸನ್ನೆಯಲ್ಲಿ ಏನೇನೋ ಹೇಳುವಾಗ ಎಲ್ಲ ಮಾತು ನನ್ನಲ್ಲೆ ಬಾಕಿ ಈಗ ಸರಿಹೋಗುವ ಮುನ್ಸೂಚನೆ ಇತ್ತೀಚೆಗೆ ಸುಳಿದಾಡಿದೆ ನನಮೇಲೆ ನನಗೀಗ ಅನುಮಾನ ಶುರುವಾಗಿದೆ ಭೇಟಿಯಾದ ಜಾಗ ನಮ್ಮನ್ನೆ ಕಾಯುವಾಗ ಏಕಾಂತವೀಗ ನನ್ನ ಕಾಡಿದೆ ಒಂದೇ ಒಂದು ಮಾತು ನೀ ಚಂದವಾಗಿ ಆಡಿ ನನ್ನ ಧ್ಯಾನವೆಲ್ಲ ಲೂಟಿ ಮಾಡಿದೆ ಉಸಿರಿನ ಬಿಸಿಯು ತಗುಲಿದ ಮೇಲೆ ಹುಡುಗನ ಪಾಡು ಹೀಗಾಗಿದೆ ಪದ ಗೀಚುವ ಬೆರಳೆಲ್ಲವೂ ಪದವಿಲ್ಲದೆ ಪರದಾಡಿದೆ ಇನ್ನೇಕೆ ಕಾಲಹರಣ ದೂರಾನೇ ತುಂಬ ಕಠಿಣ ಕಣ್ಣಲ್ಲೆ ನೀಡು ಎಲ್ಲಾ ಸೂಚನೆ ಎಲ್ಲೇ ಹೋದರೂನು, ನೀ ಎಲ್ಲೇ ಬಂದರೂನು ನನಗೀಗ ನಿನ್ನದೊಂದೇ ಪ್ರಾರ್ಥನೆ ಜೀವದ ಭಾಷೆ ಹೇಳಲು ನನಗೆ ಜೀವವೆ ಹೋದ ಹಾಗಾಗಿದೆ ಅನುರಾಗದ ಅನುವಾದಕೆ ಸರಿಹೋಗುವ ಪದವೆಲ್ಲಿದೆ ನನಮೇಲೆ ನನಗೀಗ ಅನುಮಾನ ಶುರುವಾಗಿದೆ

Song: Yenammi yenammi(ಏನಮ್ಮಿ ಏನಮ್ಮಿ), Movie: Ayogya(ಅಯೋಗ್ಯ)

ಹಾಡು: ಏನಮ್ಮಿ ಏನಮ್ಮಿ ರಚನೆ: ಚೇತನ್‌ ಕುಮಾರ್‌ ಸಂಗೀತ: ಅರ್ಜುನ್‌ ಜನ್ಯ ಗಾಯಕರು: ವಿಜಯ ಪ್ರಕಾಶ್‌, ಪಾಲಕ್‌ ಮುಚ್ಚಾಲ್‌ ಚಲನಚಿತ್ರ: ಅಯೋಗ್ಯ ಏನಮ್ಮಿ ಏನಮ್ಮಿ ಯಾರಮ್ಮಿ ನೀನಮ್ಮಿ ಆಗೋಯ್ತು ನನ್ನ ಬಾಳು ಹೆಚ್ಚು-ಕಮ್ಮಿ ಹೆಚ್ಚು-ಕಮ್ಮಿ ಹೂಂ ಕಣ್ಲಾ ಹೂಂ ಕಣ್ಲಾ ನಂಗೂ ಹಂಗೇ ಆಯ್ತು ಕಣ್ಲಾ ಪ್ರೀತಿನೇ ಹಿಂಗೇ ಕಣ್ಲಾ ಸುಮ್ನೆ ಬಂದು ಮುತ್ತು ಕೊಡ್ಲಾ  ಬೆಳದಿಂಗ್ಳು ನೀನೇನಮ್ಮಿ, ಲಾಲಿನ ಹಾಡ್ಲೇನಮ್ಮಿ ಲಕ್ಷ್ಮಿ ಹಂಗ್‌ ಕಾಣ್ತೀಯಮ್ಮಿ, ದೃಷ್ಟಿನಾ ತೆಗಿಲೇನಮ್ಮಿ ಚನ್ಪಟ್ಣದ್‌ ಗೊಂಬೆಗೆ ಜೀವವು ಬರಲು ನಿನ್ನಂಗೆ ಕಾಣ್ತದೆ ನೋಡಮ್ಮಿ,  ನೀ ಮುದ್ದು ಕಮ್ಮಿ ಚಲುವಾಂತ ಚನ್ನಿಗ ಭೂಪತಿರಾಯ ನೀನೇನೆ ಸೊಬಗು ಹೂಂ ಕಣ್ಲಾ ನೀ ರಾಜಾ ಕಣ್ಲಾ ನಮ್‌ ಪ್ರೀತಿ ಬೆಲ್ಲ ಕಮ್ಮಿ ನಾವಿಬ್ರು ಯಾರಿಗ್‌ ಕಮ್ಮಿ ನೀ ನಕ್ರೆ ಚಂದ ಕಣ್ಲಾ ಈ ಜೀವ ನಿಂದೇ ಕಣ್ಲಾ ಬೀರಪ್ಪನ್‌ ಗುಡಿ ಮುಂದೆ ಹರಕೆಯ ಕಟ್ಟಿ ನಿನ್ನನ್ನೇ ಬೇಡಿದೆ ದಿಟ ಕಣ್ಲಾ ನನ್ನಾಣೆ ಕಣ್ಲಾ ಕಲ್ಲಿನ ಬಸವನು ಕಣ್ಣೊಡಿತಾನೆ ನೀನಂದ್ರೆ ಜಾತರೆ ಕೇಳಮ್ಮಿ ವೈಯ್ಯಾರಮ್ಮಿ ಕಾಲುಂಗ್ರ ಹಾಕ್ಲೇನಮ್ಮಿ ಹಣೆಬೊಟ್ಟು ಇಡ್ಲೇನಮ್ಮಿ ಏನಂದ್ರೂ ಜಾಸ್ತಿ ಕಣ್ಲಾ ನಿನ್‌ ಪ್ರೀತಿ ಆಸ್ತಿ ಕಣ್ಲಾ Any other kannada song lyrics that you would like to see here? Just ask for in the comments section bel

Song: Tunturu alli neera haadu, Movie: Amruthavarshini

ಹಾಡು: ತುಂತುರು ಅಲ್ಲಿ ನೀರ ಹಾಡು ರಚನೆ: ಕೆ. ಕಲ್ಯಾಣ್‌ ಸಂಗೀತ: ದೇವ ಗಾಯನ: ಕೆ. ಎಸ್.‌ ಚಿತ್ರ ಚಲನಚಿತ್ರ: ಅಮೃತವರ್ಷಿಣಿ ತುಂತುರು, ಅಲ್ಲಿ ನೀರ ಹಾಡು ಕಂಪನ, ಇಲ್ಲಿ ಪ್ರೀತಿ ಹಾಡು{೨} ಹಗಲಿರಲಿ ಇರುಳಿರಲಿ ನೀನಿರದೇ ಹೇಗಿರಲಿ ನನ್ನ ತುಂಬು ಹೃದಯ ನೀ ತುಂಬಿದೆ ನಿನ್ನ ಈ ತುಂಬು ಪ್ರೀತಿಯನು ಕಣ್ಣ ಹಾಡಂತೆ ಕಾಯುವೆನು ತುಂತುರು, ಅಲ್ಲಿ ನೀರ ಹಾಡು ಕಂಪನ, ಇಲ್ಲಿ ಪ್ರೀತಿ ಹಾಡು ಗಗನದ ಸೂರ್ಯ ಮನೆಮೇಲೆ ನೀ ನನ್ನ ಸೂರ್ಯ ಹಣೆಮೇಲೆ ಚಿಲಿಪಿಲಿ ಹಾಡು ಎಲೆಮೇಲೆ ನಿನ್ನ ಪ್ರೀತಿ ಹಾಡು ಎದೆಮೇಲೆ ಗಾಳಿ ಗಾಳಿ ತಂಪು ಗಾಳಿ ಊರ ತುಂಬ ಇದೆಯೊ ನಿನ್ನ ಹೆಸರ ಗಾಳಿಯೊಂದೆ ನನ್ನ ಉಸಿರಲ್ಲಿದೆಯೊ ನಮ್ಮ ಪ್ರೀತಿ ಬೆಳಗೋ ಇತಿಹಾಸವು ನಿನ್ನ ಸಹಚಾರವೇ ಚೈತ್ರ ಅಲ್ಲಿ ನನ ಇಂಚರ ಅಮರ ತುಂತುರು, ಅಲ್ಲಿ ನೀರ ಹಾಡು ಕಂಪನ, ಇಲ್ಲಿ ಪ್ರೀತಿ ಹಾಡು ಚಲುವನೆ ನಿನ್ನ ಮುಗುಳುನಗೆ ಹಗಲಲು ಶಶಿಯು ಬೇಡುವನು ರಸಿಕನೆ ನಿನ್ನ ರಸಿಕತೆಗೆ ಮದನನು ಮರುಗಿ ಸೊರಗುವನು ತಾಯಿ-ತಂದೆ ಎಲ್ಲಾ ನೀನೆ ಯಾಕೆ ಬೇರೆ ನಂಟು ಸಾಕು ಎಲ್ಲ ಸಿರಿಗಳ ಮೀರೋ ನಿನ್ನ ಪ್ರೀತಿ ಗಂಟು ಜಗವೆಲ್ಲ ಮಾದರಿ ಈ ಪ್ರೇಮವೇ ನನ್ನ ಎದೆಯಾಳೊ ಧಣಿ ನೀನೇ ನಿನ್ನ ಸಹಚಾರಿಣಿ ನಾನೇ ತುಂತುರು, ಅಲ್ಲಿ ನೀರ ಹಾಡು ಕಂಪನ, ಇಲ್ಲಿ ಪ್ರೀತಿ ಹಾಡು ಹಗಲಿರಲಿ ಇರುಳಿರಲಿ ನೀನಿರದೇ ಹೇಗಿರಲಿ ನನ್ನ ತುಂಬು ಹೃದಯ

Song: Neene modalu neene kone, Movie: Kiss

ಹಾಡು: ನೀನೆ ಮೊದಲು ನೀನೇ ಕೊನೆ ರಚನೆ: ಎ.ಪಿ. ಅರ್ಜುನ್‌ ಸಂಗೀತ: ವಿ. ಹರಿಕೃಷ್ಣ ಗಾಯನ: ಶ್ರೇಯ ಘೋಶಾಲ್‌ ಚಲನಚಿತ್ರ: ಕಿಸ್‌ ನೀನೆ ಮೊದಲು ನೀನೇ ಕೊನೆ ಬೇರೆ ಯಾರೂ ಬೇಡ ನನಗೆ ಉಸಿರು ಇರುವ ಕೊನೆಯವರೆಗೂ ಇರಲೆಬೇಕು, ನನ್ನ ಜೊತೆಗೆ ನನ್ನನ್ನು ಪ್ರೀತಿಸು ಒಂದು ಬಾರಿ ನಿನ್ನೆಲ್ಲ ಪ್ರೀತಿಯ ನನಗೆ ತೋರಿ ಆ ಏಳು ಜನ್ಮದ ಪ್ರೀತಿಗೆ ಇದು ಮೊದಲ ದಿವಸ ನೀನೆ ಮೊದಲು ನೀನೇ ಕೊನೆ ಬೇರೆ ಯಾರೂ ಬೇಡ ನನಗೆ ನೀನಿರುವುದು ನನಗೆ  ನಾನು ಇರುವುದು ನಿನಗೆ ನಮ್ಮಿಂದ ಇನ್ನು ಪ್ರೀತಿ ಬೆಳೆಯಲಿ ಆಕಾಶದ ತುದಿಗೆ ಕಡಲು ಇರುವುದು ಅಲೆಗೆ ಮಳೆಯು ಇರುವುದು ಇಳೆಗೆ ಎದೆಯಲ್ಲಿ ಇನ್ನು ಜೀವ ಉಳಿದಿದೆ ನಿನ್ನ ಒಲವಿನ ಕರೆಗೆ ಆಮಂತ್ರಿಸು ನನ್ನ, ನಿನ್ನ ಪ್ರೀತಿ ಅರಮನೆಗೆ ಕಾದಿರಲಿ ನನಗೊಂದು ಅಂಬಾರಿ ಮೆರವಣಿಗೆ ನಿನ್ನಿಂದಲೇ, ನಿನ್ನಿಂದಲೇ, ನಿನ್ನಿಂದಲೇ ಎಲ್ಲಾ ನಿನ್ನಿಂದಲೇ ಆ ಏಳು ಜನ್ಮದ ಪ್ರೀತಿಗೆ ಇದು ಮೊದಲ ದಿವಸ ಜೀವ ಹೋದರೂನು, ಈ ಜೀವಕೆ ಜೀವ ನೀನು ಸಾಕೆನ್ನುವಂತೆ ಪ್ರೀತಿಸಬೇಕು ಸಾಯುವವರೆಗೂ ನಾನು ಪ್ರತಿಯೊಂದು ಹೆಜ್ಜೆಯು ನನ್ನ,ನಿನ್ನ ಹತ್ತಿರ ತಂದು ಬಿಡಲಿ ನೀ ಎಲ್ಲೇ ಹೋದರು ನನ್ನ ಜೊತೆಗೆ ನಿನ್ನ ನೆರಳೇ ಬರಲಿ ಮನಸಾರೆ ನಿನ್ನನ್ನು ನಾ ಒಪ್ಪಿಕೊಂಡಿರುವೆ ನಿನ್ನನ್ನು ನೋಡುತ್ತ ನಾ ಮೌನಿಯಾಗಿರುವೆ ನಿನ್ನಿಂದಲೇ, ನಿನ್ನಿಂದಲೇ, ನಿನ್ನಿಂದಲೇ

50th post, Song: Nagu nagutha nali (ನಗುನಗುತ ನಲಿ), Movie: Bangarada manushya (ಬಂಗಾರದ ಮನುಷ್ಯ)

ಹಾಡು: ನಗುನಗುತ ನಲಿ ರಚನೆ: ಹುಣಸೂರು ಕೃಷ್ಣಮೂರ್ತಿ ಸಂಗೀತ: ಜಿ.ಕೆ. ವೆಂಕಟೇಶ್‌ ಗಾಯನ: ಪಿ. ಬಿ. ಶ್ರೀನಿವಾಸ್‌ ಚಲನಚಿತ್ರ: ಬಂಗಾರದ ಮನುಷ್ಯ ನಗುನಗುತ ನಲಿ ನಲಿ ಎಲ್ಲಾ ದೇವನ, ಕಲೆಯೆಂದೇ ನೀ ತಿಳಿ ಅದರಿಂದ ನೀ ಕಲಿ ನಗುನಗುತ ನಲಿ ನಲಿ, ಏನೇ ಆಗಲಿ ಜಗವಿದು ಜಾಣ, ಚಲುವಿನ ತಾಣ ಎಲ್ಲೆಲ್ಲೂ ರಸದೌತಣ, ನಿನಗೆಲ್ಲೆಲ್ಲೂ ರಸದೌತಣ ಲತೆಗಳು ಕುಣಿದಾಗ, ಹೂಗಳು ಬಿರಿದಾಗ ನಗುನಗುತ ನಲಿ ನಲಿ, ಏನೇ ಆಗಲಿ ತಾಯಿ ಒಡಲಿನ, ಕುಡಿಯಾಗಿ ಜೀವನ(೨) ಮೂಡಿ ಬಂದು ಚೇತನ, ತಾಳಲೆಂದು ಅನುದಿನ(೨) ಅವಳೆದೆ ಅನುರಾಗ, ಕುಡಿಯುತ ಬೆಳೆದಾಗ ನಗುನಗುತ ನಲಿ ನಲಿ, ಏನೇ ಆಗಲಿ ಗೆಳೆಯರ ಜತೆಯಲಿ ಕುಣಿಕುಣಿದು ಬೆಳೆಯುವ ಸೊಗಸಿನ ಕಾಲವಿದು{೨} ಮುಂದೆ ಯೌವನ, ಮದುವೆ ಬಂಧನ ಎಲ್ಲೆಲ್ಲೂ ಹೊಸಜೀವನ, ಆಹಾ! ಎಲ್ಲೆಲ್ಲೂ ಹೊಸಜೀವನ ಜತೆಯದು ದೊರೆತಾಗ, ಜತೆಯದು ದೊರೆತಾಗ, ಮೈಮನ ಮರೆತಾಗ ನಗುನಗುತ ನಲಿ ನಲಿ, ಏನೇ ಆಗಲಿ ಏರು ಪೇರಿನ, ಗತಿಯಲ್ಲಿ ಜೀವನ(೨) ಸಾಗಿ ಮಾಗಿ ಹಿರಿತನ ತಂದಿತಯ್ಯ ಮುದಿತನ ಸಾಗಿ ಮಾಗಿ ಹಿರಿತನ ತಂದಿತಯ್ಯ ಮುದಿತನ ಅದರೊಳು ಹೊಸದಾದ ರುಚಿಯಿದೆ ಸವಿಮೋದ ನಗುನಗುತ ನಲಿ ನಲಿ, ಏನೇ ಆಗಲಿ

Song: Jeeva veene, Movie: Hombisilu

ಹಾಡು: ಜೀವ ವೀಣೆ ರಚನೆ: ಗೀತಪ್ರಿಯ ಸಂಗೀತ: ರಾಜನ್-‌ ನಾಗೇಂದ್ರ ಗಾಯನ: ಎಸ್.‌ ಪಿ. ಬಾಲಸುಬ್ರಮಣ್ಯಂ, ಎಸ್.‌ ಜಾನಕಿ ಚಲನಚಿತ್ರ: ಹೊಂಬಿಸಿಲು ಜೀವ ವೀಣೆ ನೀಡು ಮಿಡಿತದ ಸಂಗೀತ ಭಾವಗೀತೆ ಬಾಳಿನೊಲುಮೆಯ ಸಂಕೇತ ಇಂದು ಮಿಲನದ ಸಂತೋಷ, ಶುಭಸಂತೋಷ ಶುಭಸಂದೇಶ, ಸಂದೇಶ, ಸಂದೇಶವು ಜೀವ ವೀಣೆ ನೀಡು ಮಿಡಿತದ ಸಂಗೀತ ಭಾವಗೀತೆ ಬಾಳಿನೊಲುಮೆಯ ಸಂಕೇತ ಮಿಡಿಯುವ ಮನಗಳು ಎರಡು, ಮಿಡಿತದ ರಾಗವು ಒಂದೇ ಮಿಂಚುವ, ಕಣ್ಣಂಚಿನ ಸಂಚು ಇಂದು ಒಂದೇ ತಪಿಸುವ ಹೃದಯಗಳೆರಡು ತಾಪದ ವೇಗವು ಒಂದೇ ಸೇರುವ ಶುಭಸಮಯದೇ, ವಿರಹ ಇರದು ಮುಂದೆ ಭಾವಗೀತೆ ಬಾಳಿನೊಲುಮೆಯ ಸಂಕೇತ ಜೀವ ವೀಣೆ ನೀಡು ಮಿಡಿತದ ಸಂಗೀತ ಒಲವಿನ ಬಯಕೆಯು ಅಂದು ಮಿಲನಮಹೋತ್ಸವವಿಂದು ರಚಿಸುವ, ನಾವನುದಿನ, ಮುದದ ಪ್ರೇಮಕವನ ಕನಸಿನ ರಾತ್ರಿಯು ಕಳೆದು ಬಂದಿರೆ ನೆನೆಸಿದ ಹಗಲು ಕಾಣುವ, ಹೊಂಬಿಸಿಲಿನ, ಸುಖದ ಸೂರ್ಯಕಿರಣ ಭಾವಗೀತೆ ಬಾಳಿನೊಲುಮೆಯ ಸಂಕೇತ ಜೀವ ವೀಣೆ ನೀಡು ಮಿಡಿತದ ಸಂಗೀತ ಇಂದು ಮಿಲನದ ಸಂತೋಷ, ಶುಭಸಂತೋಷ ಶುಭಸಂದೇಶ, ಸಂದೇಶ, ಸಂದೇಶವು ಜೀವ ವೀಣೆ ನೀಡು ಮಿಡಿತದ ಸಂಗೀತ ಭಾವಗೀತೆ ಬಾಳಿನೊಲುಮೆಯ ಸಂಕೇತ

Song: Nagutha nagutha, Movie: Parashuram

ಹಾಡು: ನಗುತ ನಗುತ ರಚನೆ: ಚಿ. ಉದಯಶಂಕರ್‌ ಸಂಗೀತ: ಹಂಸಲೇಖ ಗಾಯನ: ಡಾ. ರಾಜಕುಮಾರ್‌ ಚಲನಚಿತ್ರ: ಪರಶುರಾಮ ನಗುತ ನಗುತ, ಬಾಳು ನೀನು ನೂರು ವರುಷ ಎಂದೂ ಹೀಗೇ, ಇರಲಿ ಇರಲಿ ಹರುಷ ಹರುಷ ಬಾಳಿನ ದೀಪ ನಿನ್ನ ನಗು ದೇವರ ರೂಪ ನೀನೇ ಮಗು ನಗುತ ನಗುತ, ಬಾಳು ನೀನು ನೂರು ವರುಷ ಎಂದೂ ಹೀಗೇ, ಇರಲಿ ಇರಲಿ ಹರುಷ ಹರುಷ ಉಲ್ಲಾಸದ ಶುಭದಿನಕೆ ಸಂತೋಷವೇ ಉಡುಗೊರೆಯು ಹೂವು ನಕ್ಕಾಗ ತಾನೇ, ಅಂದ ಇರುವುದು,ದುಂಬಿ ಬರುವುದು ಚಂದ್ರ ನಕ್ಕಾಗ ತಾನೇ ಬೆಳಕು ಬರುವುದು, ಕಡಲು ಕುಣಿವುದು ಸೂರ್ಯನಾಡೋ ಜಾರೊ ಆಟ ಬಾನು ನಗಲೆಂದೇ ಬೀಸೊ ಗಾಳಿ, ತೂಗೊ ಪೈರು ಭೂಮಿ ನಗಲೆಂದೇ ದೇವೆರು ತಂದ ಸೃಷ್ಠಿಯ ಅಂದ ಎಲ್ಲರು ನಗಲೆಂದೇ ನಗುತ ನಗುತ, ಬಾಳು ನೀನು ನೂರು ವರುಷ ಎಂದೂ ಹೀಗೇ, ಇರಲಿ ಇರಲಿ ಹರುಷ ಹರುಷ ಆಕಾಶದಾಚೆ ಎಲ್ಲೋ ದೇವರಿಲ್ಲವೋ, ಹುಡುಕಬೇಡವೋ ಆ ಮಾಯಗಾರ ತಾನು, ಹಿರಿಯಲಿಲ್ಲವೋ, ಗುಡಿಯಲಿಲ್ಲವೋ ಪ್ರೀತಿಯಲ್ಲಿ ಸ್ನೇಹದಲ್ಲಿ ಇರುವನು ಒಂದಾಗಿ ತಂಪಿನಲ್ಲು ಕಂಪಿನಲ್ಲು ಬರುವನು ಹಿತವಾಗಿ ಸಂತಸದಲ್ಲಿ ಸಂಭ್ರಮದಲ್ಲಿ ಮಕ್ಕಳ ನಗುವಾಗಿ ನಗುತ ನಗುತ, ಬಾಳು ನೀನು ನೂರು ವರುಷ ಎಂದೂ ಹೀಗೇ, ಇರಲಿ ಇರಲಿ ಹರುಷ ಹರುಷ ಬಾಳಿನ ದೀಪ ನಿನ್ನ ನಗು ದೇವರ ರೂಪ ನೀನೇ ಮಗು ನಗುತ ನಗುತ, ಬಾಳು ನೀನು ನೂರು ವರುಷ ಎಂದೂ ಹೀಗೇ, ಇರಲಿ ಇರಲಿ ಹರುಷ ಹರುಷ ಉಲ್ಲಾಸದ ಶುಭದಿನಕೆ ಸಂತೋಷವೇ