Song: Prayashaha (ಪ್ರಾಯಶಃ) Movie: Gaalipata 2 (ಗಾಳಿಪಟ- ೨)
ಹಾಡು: ಪ್ರಾಯಶಃ ರಚನೆ: ಯೋಗರಾಜ್ ಭಟ್ ಸಂಗೀತ:ಅರ್ಜುನ್ ಜನ್ಯ ಗಾಯನ: ಸೋನು ನಿಗಂ ಚಲನಚಿತ್ರ: ಗಾಳಿಪಟ- ೨ ನಾವು ಬದುಕಿರಬಹುದು ಪ್ರಾಯಶಃ ,ಇಲ್ಲ ಕನಸಿರಬಹುದಿದು ಪ್ರಾಯಶಃ, ಎಲ್ಲ ಸರಿ ಇರಬಹುದು ಭಾಗಶಃ, ಇಲ್ಲ ಸೆರೆ ಇರಬಹುದಿದು ಮೂಲತಃ,ಜೀವಾ, ವಿಲವಿಲ ಎನ್ನುತಲೇ ಒಲವನು ಹುಡುಕುತಿದೆ, ಪ್ರಾಯಶಃ ನಾವು ಬದುಕಿರಬಹುದು ಪ್ರಾಯಶಃ ,ಇಲ್ಲ ಕನಸಿರಬಹುದಿದು ಪ್ರಾಯಶಃ ಕಂಗಳೇ ಇಲ್ಲದ ಊರಲಿ ನಡೆದು(೨) ಕನ್ನಡಿ ಮಾರುವ ಕೆಲಸವ ಹಿಡಿದು ನಮ್ಮನು ನಾವೇ…. ನಮ್ಮನು ನಾವೇ ಕಾಣದೆ ಹೋಗಿ, ಎಲ್ಲಿಗೋ ಸಾಗಿ ನಾವು ಯಾರಿರಬಹುದೆಂದು, ಹುಡುಕಲು ಬಯಸುವೆವು ಪ್ರಾಯಶಃ ನಾವು ಬದುಕಿರಬಹುದು ಪ್ರಾಯಶಃ ,ಇಲ್ಲ ಕನಸಿರಬಹುದಿದು ಪ್ರಾಯಶಃ ನಲಿವಿನ ಕ್ಷಣಗಳ ಕಾಯುತ ಕುಳಿತು(೨) ದಿನಗಳ ಕಳೆವೆವು ನಗುವುದೇ ಮರೆತು ನೆನ್ನೆಯ ಪಾಡು… ನೆನ್ನೆಯ ಪಾಡು, ಈ ದಿನ ಕಾಡಿ, ನಾಳೆಯೂ ಬಾಡಿ ನಮ್ಮ ಸಂಕಟವನೇ ನಾವು, ಸಂತಸ ಎನ್ನುವೆವು ಪ್ರಾಯಶಃ ನಾವು ಬದುಕಿರಬಹುದು ಪ್ರಾಯಶಃ ,ಇಲ್ಲ ಕನಸಿರಬಹುದಿದು ಪ್ರಾಯಶಃ