ಪೋಸ್ಟ್‌ಗಳು

ನವೆಂಬರ್, 2020 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

Song: Marali manasaagide(ಮರಳಿ ಮನಸಾಗಿದೆ), Movie: Gentleman(ಜೆಂಟಲ್ಮನ್‌)

‌ಹಾಡು: ಮರಳಿ ಮನಸಾಗಿದೆ ರಚನೆ: ನಾಗಾರ್ಜುನ್‌ ಶರ್ಮ, ಕಿನ್ನಲ್‌ ರಾಜ್ ಸಂಗೀತ: ಬಿ. ಅಜನೀಶ್‌ ಲೋಕನಾಥ್ ಗಾಯನ:‌ ಸಂಜಿತ್‌ ಹೆಗಡೆ, ಸಿ.ಆರ್.‌ ಬಾಬಿ ಚಲನಚಿತ್ರ: ಜೆಂಟಲ್ಮನ್‌   ಎನ್ನಾನಾ...ನಾ ನಾ….ಹ್ಮ‌ ಮ್…. ಮರಳಿ ಮನಸಾಗಿದೆ, ಸಾಗಿದೆ ನಿನ್ನಾ ಹೃದಯಕೆ ಪಯಣ ಶುರುವಾಗಿದೆ, ಕೋರಿದೆ ಪ್ರೀತಿ ಕಾಣಿಕೆ  ಮತ್ತೆ ಮತ್ತೆ ಮನಸು ಶರಣಾದ ಹಾಗಿದೆ  ಕಿರುಬೆರಳು ಬಯಸಿದೆ ಸಲುಗೆ ಇರಬೇಕು ಜೊತೆಯಾಗಿ ನಿನ್ನಲಿ, ನಾ   ಮಿಂಚುತ್ತಿದೆ, ಮಿಂಚುತ್ತಿದೆ, ನಿನ್ನಿಂದ ಕನಸೆಲ್ಲ ಹೆಚ್ಚುತ್ತಿದೆ ಮಿಂಚುತ್ತಿದೆ, ಇಗೋ ಮಿಂಚುತ್ತಿದೆ, ಹೃದಯಕ್ಕೆ ಬಿರುಸಾಗಿ ಬಂತು ಕಣೇ   ಮರಳಿ ಮನಸಾಗಿದೆ ಸಾಗಿದೆ ನಿನ್ನಾ ಹೃದಯಕೆ  ಪಯಣ ಶುರುವಾಗಿದೆ ಕೋರಿದೆ ಪ್ರೀತಿ ಕಾಣಿಕೆ    ಸಂಭ್ರಮ, ದುಪ್ಪಟ್ಟು ಆದಂತಿದೆ  ನೀನೊಂಥರ ನಯನಾದ್ಬುತ, ಹಾಯ್‌ ಆಗಮ, ಉಸಿರೊಂದು ಉಸಿರಾಗಿದೆ ತಪ್ಪಾದರೆ ಬಚ್ಚಾಯಿಸು ಪ್ರೀತೀಲಿ ಗುರಾಯಿಸು   ಹಗಲೇ ಹಗೆಯಾದ ಈ ಜೀವಕೆ ಬೆಳಕು ನೀನಾಗಿಹೇ ಬದುಕು ಕುರುಡಾದ ಈ ಮೋಸಕೆ ಉಸಿರು ನೀನಾಗಿಹೇ   ಮತ್ತೆ ಮತ್ತೆ ಮನಸು ಶರಣಾದ ಹಾಗಿದೆ  ಕಿರುಬೆರಳು ಬಯಸಿದೆ ಸಲುಗೆ ಇರಬೇಕು ಜೊತೆಯಾಗಿ ನಿನ್ನಲಿ, ನಾ   ಮಿಂಚುತ್ತಿದೆ, ಮಿಂಚುತ್ತಿದೆ, ನಿನ್ನಿಂದ ಕನಸೆಲ್ಲ ಹೆಚ್ಚುತ್ತಿದೆ ಮಿಂಚುತ್ತಿದೆ, ಇಗೋ ಮಿಂಚುತ್ತಿದೆ, ಹೃದಯಕ್ಕೆ ಬಿರುಸಾಗಿ ಬಂತು ಕಣೇ                          

Song: Jenina holeyo (ಜೇನಿನ ಹೊಳೆಯೋ), Movie: Chalisuva modagalu (ಚಲಿಸುವ ಮೋಡಗಳು)

ಹಾಡು: ಜೇನಿನ ಹೊಳೆಯೋ ರಚನೆ: ಚಿ. ಉದಯಶಂಕರ್ ಸಂಗೀತ: ರಾಜನ್‌ ನಾಗೇಂದ್ರ ಗಾಯನ: ಡಾ. ರಾಜ್‌ಕುಮಾರ್‌ ಚಲನಚಿತ್ರ: ಚಲಿಸುವ ಮೋಡಗಳು     ಜೇನಿನ ಹೊಳೆಯೋ, ಹಾಲಿನ ಮಳೆಯೋ ಸುಧೆಯೋ ಕನ್ನಡ ಸವಿನುಡಿಯು{೨} ವಾಣಿಯ ವೀಣೆಯ ಸ್ವರಮಾಧುರ್ಯವೋ ಸುಮಧುರ ಸುಂದರ ನುಡಿಯು, ಆಹಾ   ಜೇನಿನ ಹೊಳೆಯೋ, ಹಾಲಿನ ಮಳೆಯೋ ಸುಧೆಯೋ ಕನ್ನಡ ಸವಿನುಡಿಯು   ಕವಿನುಡಿ ಕೋಗಿಲೆ ಹಾಡಿದ ಹಾಗೆ ದ ಪ ದ... ರಿ ಸ ರಿ…. ದ ಪಪ ದ ಸ ರಿ ದ ಸ ಸವಿನುಡಿ ತಣ್ಣನೆ ಗಾಳಿಯ ಹಾಗೆ   ಕವಿನುಡಿ ಕೋಗಿಲೆ ಹಾಡಿದ ಹಾಗೆ, ಸವಿನುಡಿ ತಣ್ಣನೆ ಗಾಳಿಯ ಹಾಗೆ ಒಲವಿನ ಮಾತುಗಳಾಡುತಲಿರಲು, ಮಲ್ಲಿಗೆ ಹೂಗಳು ಅರಳಿದ ಹಾಗೆ   ಮಕ್ಕಳು ನುಡಿದರೆ ಸಕ್ಕರೆಯಂತೆ, ಅಕ್ಕರೆ ನುಡಿಗಳು ಮುತ್ತುಗಳಂತೆ ಪ್ರೀತಿಯ, ನೀತಿಯ ಮಾತುಗಳೆಲ್ಲ ಸುಮಧುರ ಸುಂದರ ನುಡಿಯು   ಜೇನಿನ ಹೊಳೆಯೋ, ಹಾಲಿನ ಮಳೆಯೋ ಸುಧೆಯೋ ಕನ್ನಡ ಸವಿನುಡಿಯು   ಆ ಹಾ ಹಾ ಹಾ ಹಾ….ಆ ಹಾಹಾಹಾ ಆ ಹಾಹಾಹಾ... ಆ ಹಾ ಹಾ, ಅಆಅಆ   ಕುಮಾರವ್ಯಾಸನ ಕಾವ್ಯದ ಚಂದ, ಕವಿ ಸರ್ವಜ್ಞನ ಪದಗಳ ಅಂದ (೨) ದಾಸರು ಶರಣರು ನಾಡಿಗೆ ನೀಡಿದ ಭಕ್ತಿಯ ಗೀತೆಗಳ ಪರಮಾನಂದ   ರನ್ನನು ರಚಿಸಿದ ಹೊನ್ನಿನ ನುಡಿಯು, ಪಂಪನು ಹಾಡಿದ ಚಿನ್ನದ ನುಡಿಯು ಕನ್ನಡ ತಾಯಿಯು, ನೀಡಿದ ವರವು, ಸುಮಧುರ ಸುಂದರ ನುಡಿಯು, ಆಹಾ   ಜೇನಿನ ಹೊಳೆಯೋ, ಹಾಲಿನ ಮಳೆಯೋ ಸುಧೆಯೋ ಕನ್ನಡ ಸವಿನುಡಿಯು ಆಹಾ! ವಾಣಿಯ ವೀಣೆಯ ಸ್ವರಮಾಧುರ್ಯವೋ ಸುಮಧುರ ಸುಂದರ ನುಡಿಯು, ಆಹಾ   ಜೇನಿನ ಹೊಳೆಯೋ, ಹಾಲಿನ

Song: Deepavali deepavali (ದೀಪಾವಳಿ ದೀಪಾವಳಿ), Movie: Muddina maava (ಮುದ್ದಿನ ಮಾವ)

ಹಾಡು: ದೀ ಪಾವಳಿ ದೀಪಾವಳಿ ರಚನೆ: ಹಂಸಲೇಖ ಸಂಗೀತ: ಎಸ್‌ ಪಿ. ಬಾಲಸುಬ್ರಹ್ಮಣ್ಯಂ ಗಾಯನ: ಡಾ. ರಾಜ್‌ಕುಮಾರ್‌, ಎಸ್.‌ ಪಿ. ಬಾಲಸುಬ್ರಹ್ಮಣ್ಯಂ ಚಲನಚಿತ್ರ: ಮುದ್ದಿನ ಮಾವ   ದೀಪಾವಳಿ ದೀಪಾವಳಿ,ಗೋವಿಂದ ಲೀಲಾವಳಿ ಅಳಿಯ ಮಗನಾದನು,ಮಾವ ಮಗುವಾದನು{೨}   ಏ ತಾನತಂದಾನ ತಂದಾನತಾನ ತಾನತಂದಾನ ನಾ ತಾನತಂದಾನ ತಂದಾನತಾನ ತಾನತಂದಾನ ನಾ   ಹೆತ್ತೋರ ಆಸೆಯ ಮನ್ನಣೆ ಮಾಡಿ, ಕೊಟ್ಟೋರ ಹೆಣ್ಣನು ಮುದ್ದಾಗಿ ನೋಡಿ ಇದ್ದಾಗ ಹೋಳಿಗೆ ತಿನ್ನುತ ಹಾಡಿ, ಕಣ್ಣಲ್ಲಿ ಕಂಬನಿ ಮುತ್ತಾಗಿ ಮಾಡಿ   ಸಲಹೋ ಅಳಿಮಯ್ಯ ರಾಮನಿಗು ಮೇಲು, ಪ್ರೀತಿ ಕೊಟ್ಟೋನಿಗೆ ಕಟ್ಟಬೇಕು ಕಾಲು ಚಂದನ ಮೆತ್ತಿ ಮಲ್ಲಿಗೆ ಸುತ್ತಿ, ಮನೆ ಮಗನಿಗೆ ಆರತಿ ಎತ್ತಿ ಬಾಳು ಬನವಾಯಿತು, ಇರುಳು ಬೆಳಕಾಯಿತು   ದೀಪಾವಳಿ ದೀಪಾವಳಿ, ಗೋವಿಂದ ಲೀಲಾವಳಿ ಅಳಿಯ ಮಗನಾದನು, ಮಾವ ಮಗುವಾದನು   ಏ ತಾನತಂದಾನ ತಂದಾನತಾನ ತಾನತಂದಾನ ನಾ ಓ ತಾನತಂದಾನ ತಂದಾನತಾನ ತಾನತಂದಾನ ನಾ{೨}   ಮಾವಯ್ಯ ನೀನೆಂದೂ ನಮಗೆ ಜೀವ,ಮನದ ತುಂಬ ನಿನ್ನ ಬಳ್ಳಿಯದೆ ಹೂವ ಅಪ್ಪಯ್ಯ ನಾ ನಿನ್ನ ಋಣದ ಮೇಲೆ, ಮನಸೆ ಹೂವ ಮಾಡಿ ಹಾಕುವೆನು ಮಾಲೆ   ನೆನಕೆ ಹರಕೆಯೆಲ್ಲ ದೇವರಿಗೆ ಹೇಳಿ, ನಗುತ ಹೀಗೇ ನೀವು ನೂರು ಕಾಲ ಬಾಳಿ ಹಬ್ಬದ ದೀಪ, ಗಂಧದ ಧೂಪ, ಮನೆ ಹಿರಿಯರೆ ದೇವರ ರೂಪ ಬಾಳು ಬನವಾಯಿತು, ಇರುಳು ಬೆಳಕಾಯಿತು   ದೀಪಾವಳಿ ದೀಪಾವಳಿ, ಗೋವಿಂದ ಲೀಲಾವಳಿ ಅಳಿಯ ಮಗನಾದನು, ಮಾವ ಮಗುವಾದನು   ಏ ತಾನತಂದಾನ ತಂದಾನತಾನ ತಾನತಂದಾನ ನಾ ಓ ತಾನತಂದಾ

Song: Deepadinda deepava (ದೀಪದಿಂದ ದೀಪವ), Movie: Nanjundi (ನಂಜುಂಡಿ)

ಹಾಡು: ದೀಪದಿಂದ ದೀಪವ ರಚನೆ: ಹಂಸಲೇಖ ಸಂಗೀತ: ಹಂಸಲೇಖ ಗಾಯನ: ಮಧು ಬಾಲಕೃಷ್ಣ, ನಂದಿತ ಚಲನಚಿತ್ರ: ನಂಜುಂಡಿ   ದೀಪದಿಂದ ದೀಪವ….ಹಚ್ಚಬೇಕು ಮಾನವ ಪ್ರೀತಿಯಿಂದ ಪ್ರೀತಿ ಹಂಚಿರೋ    ದೀಪದಿಂದ ದೀಪವ, ಹಚ್ಚಬೇಕು ಮಾನವ ಪ್ರೀತಿಯಿಂದ ಪ್ರೀತಿ ಹಂಚಲು ಮನಸಿನಿಂದ ಮನಸನು, ಬೆಳಗಬೇಕು ಮಾನವ ಮೇಲು-ಕೀಳು ಭೇದ ನಿಲ್ಲಲು   ಭೇದವಿಲ್ಲ ಬೆಂಕಿಗೆ,ದ್ವೇಷವಿಲ್ಲ ಬೆಳಕಿಗೆ ನೀ ತಿಳಿಯೋ...ನೀ ತಿಳಿಯೋ   ದೀಪದಿಂದ ದೀಪವ, ಹಚ್ಚಬೇಕು ಮಾನವ ಪ್ರೀತಿಯಿಂದ ಪ್ರೀತಿ ಹಂಚಲು   ಹೋ, ಹೋಹೋಹೋ, ಹೋಒಒಒ ಓ ಹೊಹೋಹೋಹೋ ಹೊಒಓಓ ಹೊಓಓ ಓಓಓ{೨}   ಆಸೆ ಹಿಂದೆ ದುಃಖ ಎಂದರು, ರಾತ್ರಿ ಹಿಂದೆ ಹಗಲು ಎಂದರು ದ್ವೇಷವೆಂದೂ ಹೊರೆ ಎಂದರು, ಹಬ್ಬವದಕೆ ಹೆಗಲು ಎಂದರು   ಎರಡು ಮುಖದ ನಮ್ಮ ಜನುಮದ ವೇಷಾವಳಿ ತೆಗೆದು ಹಾಲ್ಬೆಳಕ ಕುಡಿವುದೇ, ದೀಪಾವಳಿ   ದೀಪದಿಂದ ದೀಪವ, ಹಚ್ಚಬೇಕು ಮಾನವ ಪ್ರೀತಿಯಿಂದ ಪ್ರೀತಿ ಹಂಚಲು ಭೇದವಿಲ್ಲ ಬೆಂಕಿಗೆ,ದ್ವೇಷವಿಲ್ಲ ಬೆಳಕಿಗೆ ನೀ ತಿಳಿಯೋ...ನೀ ತಿಳಿಯೋ ದೀಪದಿಂದ ದೀಪವ, ಹಚ್ಚಬೇಕು ಮಾನವ ಪ್ರೀತಿಯಿಂದ ಪ್ರೀತಿ ಹಂಚಲು   ಮಣ್ಣಿನಿಂದ ಹಣತೆಯಾದರೆ, ಬೀಜದಿಂದ ಎಣ್ಣೆಯಾಯಿತು ಅರಳೆಯಿಂದ ಬತ್ತಿಯಾದರೆ, ಸುಡುವ ಬೆಂಕಿ ಜ್ಯೋತಿಯಾಯಿತು   ನಂದಿಸುವುದು ತುಂಬ ಸುಲಭವೋ, ಹೇ ಮಾನವ ಆನಂದಿಸುವುದು ತುಂಬ ಕಠಿಣವೋ, ಹೇ ದಾನವ   ದೀಪದಿಂದ ದೀಪವ, ಹಚ್ಚಬೇಕು ಮಾನವ ಪ್ರೀತಿಯಿಂದ ಪ್ರೀತಿ ಹಂಚಲು ಭೇದವಿಲ್ಲ ಬೆಂಕಿಗೆ,ದ್ವೇಷವಿಲ್ಲ ಬೆಳಕಿಗೆ ನೀ ತಿಳಿಯೋ...ನೀ ತಿಳ

Song: Karunaada thaayi (ಕರುನಾಡ ತಾಯಿ), Movie: Naanu nanna hendthi (ನಾನು ನನ್ನ ಹೆಂಡ್ತಿ)

ಹಾಡು: ಕರುನಾಡ ತಾಯಿ ರಚನೆ: ಹಂಸಲೇಖ ಸಂಗೀತ: ಶಂಕರ್-ಗಣೇಶ್‌ ಗಾಯನ: ಎಸ್.‌ ಪಿ. ಬಾಲಸುಬ್ರಹ್ಮಣ್ಯಂ ಚಲನಚಿತ್ರ: ನಾನು ನನ್ನ ಹೆಂಡ್ತಿ   ಲ ಲಾಲ ಲಾಲ ... ಲ ಲಾ ಲಾ ಲ ಲಾ   ಕರುನಾಡ ತಾಯಿ ಸದಾ ಚಿನ್ಮಯಿ(೨) ಈ ಪುಣ್ಯ ಭೂಮಿ, ನಮ್ಮ ದೇವಾಲಯ ಪ್ರೇಮಾಲಯ ಈ ದೇವಾಲಯ ಕರುನಾಡ ತಾಯಿ ಸದಾ ಚಿನ್ಮಯಿ(೨)   ವೀರ ಧೀರರಾಳಿದ ನಾಡು ನಿನ್ನದು ಶಾಂತಿ ಮಂತ್ರ ಪಾಡಿದ ಬೀಡು ನಿನ್ನದು ವರ ಸಾಧು ಸಂತರ ನೆಲೆ ನಿನ್ನದು ಮಹಾ ಶಿಲ್ಪಕಾರರ ಕಲೆ ನಿನ್ನದು ಸಂಗೀತ, ಸಾಹಿತ್ಯ ಸೆಲೆ ನಿನ್ನದು   ಕರುನಾಡ ತಾಯಿ ಸದಾ ಚಿನ್ಮಯಿ(೨) ಈ ಪುಣ್ಯ ಭೂಮಿ, ನಮ್ಮ ದೇವಾಲಯ ಪ್ರೇಮಾಲಯ ಈ ದೇವಾಲಯ ಕರುನಾಡ ತಾಯಿ ಸದಾ ಚಿನ್ಮಯಿ(೨)   ಜೀವ ತಂತಿ ಮೀಟುವ ಸ್ನೇಹ ನಮ್ಮದು ಎಲ್ಲ ಒಂದೇ ಎನ್ನುವ ಔದಾರ್ಯ ನಮ್ಮದು ಸೌಂದರ್ಯ ಸೀಮೆಯ ಗುಡಿ ನಮ್ಮದು ಮಾಧುರ್ಯ ತುಂಬಿದ ನುಡಿ ನಮ್ಮದು ಕಸ್ತೂರಿ ಕನ್ನಡದ ಸವಿ ನಮ್ಮದು   ರೋಮ ರೋಮಗಳು ನಿಂತವು ತಾಯೆ ಚೆಲುವ ಕನ್ನಡದೊಳೇನಿದು ಮಾಯೆ ಮುಗಿಲೇ ಕಡಲೆ ಸಿಡಿಲೆ ಕೇಳಿರಿ(೨) ತನುವು ಮನವು ಧನವು ಎಲ್ಲ ಕನ್ನಡ(೨) ಆಅಅಆ... ಆಅಆಆಆ   ಕರುನಾಡ ತಾಯಿ ಸದಾ ಚಿನ್ಮಯಿ(೨) ಈ ಪುಣ್ಯ ಭೂಮಿ ನಮ್ಮ ದೇವಾಲಯ ಪ್ರೇಮಾಲಯ ಈ ದೇವಾಲಯ ಕರುನಾಡ ತಾಯಿ ಸದಾ ಚಿನ್ಮಯಿ(೨)      

Song: Kannadave nammamma (ಕನ್ನಡವೇ ನಮ್ಮಮ್ಮ), Movie: Mojugaara Sogasugaara (ಮೋಜುಗಾರ ಸೊಗಸುಗಾರ)

ಹಾಡು: ಕನ್ನಡವೇ ನಮ್ಮಮ್ಮ ರಚನೆ: ಹಂಸಲೇಖ ಸಂಗೀತ: ಹಂಸಲೇಖ ಗಾಯನ: ಡಾ.ವಿಷ್ಣುವರ್ಧನ್‌ ಚಲನಚಿತ್ರ: ಮೋಜುಗಾರ ಸೊಗಸುಗಾರ   ಕನ್ನಡದ ಸಿದ್ದ, ಹಾಡೋದಕ್ಕೆ ಎದ್ದ ಕನ್ನಡಕ್ಕೆ ಇವನು ಸಾಯೋದಕ್ಕು ಸಿದ್ಧ    ಕನ್ನಡವೇ ನಮ್ಮಮ್ಮ, ಅವಳಿಗೆ ಕೈ ಮುಗಿಯಮ್ಮ ಮಾತಾಡೋ ದೇವರಿವಳು, ನಮ್ಮ ಕಾಪಾಡೋ ಗುರು ಇವಳು ಕನ್ನಡವೇ ನಮ್ಮಮ್ಮ, ಅವಳಿಗೆ ಕೈ ಮುಗಿಯಮ್ಮ ನಲಿದಾಡೋ ನೀರಿವಳು, ನಾ ಉಸಿರಾಡೋ ಕಾಡಿವಳು   ಬರೆಯೋರ ತವರೂರು, ಕಡೆಯೋರ ಹಿರಿಯೂರು ನಟಿಸೋರ ನವಿಲೂರು, ನುಡಿಸೋರ ಮೈಸೂರು   ಕೂಡಿದರೆ ಕಾಣುವುದು, ಎದೆ ತುಂಬ ಹಾಡಾಗುವುದು ಮಧುರ ಮಧುರ ಇದು ಅಮರ ಅಮರ ಇದು   ಕನ್ನಡವೇ ನಮ್ಮಮ್ಮ, ಅವಳಿಗೆ ಕೈ ಮುಗಿಯಮ್ಮ ಮಾತಾಡೋ ದೇವರಿವಳು, ನಮ್ಮ ಕಾಪಾಡೋ ಗುರು ಇವಳು   ಈ ಭಾಷೆ ಕಲಿಯೋದು, ಅಹ! ಬೆಣ್ಣೆನ ತಿಂದಂತೆ ನಮ್ಮ ಭಾಷೆ ಬರೆಯೋಕೆ, ಹಾ! ಕಲಿಸೋರೆ ಬೇಡಂತೆ   ಹಾಡಿದರೆ, ತಿಳಿಯುವುದು, ಮೈತುಂಬಾ ಓಡಾಡುವುದು ಸರಳ ಸರಳ ಇದು ವಿರಳ ವಿರಳ ಇದು   ಕನ್ನಡವೇ ನಮ್ಮಮ್ಮ, ಅವಳಿಗೆ ಕೈ ಮುಗಿಯಮ್ಮ ಮಾತಾಡೋ ದೇವರಿವಳು, ನಮ್ಮ ಕಾಪಾಡೋ ಗುರು ಇವಳು   ಅಭಿಮಾನ ಹಾಲಂತೆ (ಹಾಲಂತೆ), ದುರಭಿಮಾನ ವಿಷವಂತೆ ಸಹಿಸೋರು ನಾವಂತೆ(ನಾವಂತೆ), ನಿರಭಿಮಾನ ಬೇಡಂತೆ   ಕನ್ನಡತಿ ಆಜ್ನೆ ಇದು, ಅವಳೆದೆಯಾ, ಹಾಡು ಇದು ಅವಳ ಬಯಕೆ ಇದು ನಮಗೆ ಹರಕೆ ಇದು ಕನ್ನಡವೇ ನಮ್ಮಮ್ಮ, ಅವಳಿಗೆ ಕೈ ಮುಗಿಯಮ್ಮ ಮಾತಾಡೋ ದೇವರಿವಳು, ನಮ್ಮ ಕಾಪಾಡೋ ಗುರು ಇವಳು   ಕನ್ನಡವೇ ನಮ್ಮಮ್ಮ, ಅವಳಿಗೆ ಕೈ ಮುಗಿಯಮ್ಮ

Song: Loka Maya bazaru (ಲೋಕ ಮಾಯಾಬಜ಼ಾರು), Movie: Maya Bazar 2016 (ಮಾಯಾಬಜ಼ಾರ್‌ ೨೦೧೬)

ಹಾಡು: ಲೋಕ ಮಾಯಾಬಜ಼ಾರು  ರಚನೆ: ಯೋಗರಾಜ್‌ ಭಟ್ ಸಂಗೀತ: ಮಿಧುನ್‌ ಮುಕುಂದನ್ ಗಾಯನ: ಎಸ್.‌ ಪಿ. ಬಾಲಸುಬ್ರಹ್ಮಣ್ಯಂ ಚಲನಚಿತ್ರ: ಮಾಯಾಬಜ಼ಾರ್‌ ೨೦೧೬   ತಾರಾ ತಿಗಡಿ ಪಾತಾಳ್‌ಗರಡಿ ತಳಕು ಬಳಕು ಬೆಳ್ಳಂಬೆಳಕು ಲಕಲಕ ಲಕಲಕ ಲೋಕ ನಮ್ದು ಮಾಯಾಬಜ಼ಾರು     ಬಣ್ಣದ ಬಾಳು ಬೆಣ್ಣೆ ಮಾತು ನೀರಿನ ಮ್ಯಾಲೆ ದೋಣಿ ತೂತು ಸುಳ್ಳಿನ ಸಂತೆಯಲ್ಲಿ ಸತ್ಯ ಡುಮ್ಕಿಡಮಾರು   ಭಗವಂತಂಗೆ ಕೆಳಗೆ ಕರೆದು ಬುದ್ಧಿ ಹೇಳೋಣ ನಾಳೆ ಇಂದ ನಾವೇ ದೇವರಾಗಿ ಬಿಡೋಣ ಯಾವ್ದು ಹೆಂಗಾನ ಹಾಳಾಗೋಗ್ಲಿ ಕಾಸು ಮಾಡೋಣ   ಅನ್ಕೊಂಡಿದ್ದೆಲ್ಲ, ಯಾವತ್ತೂ ಆಗಲ್ಲ ಬಂದಂಗೆ ಬದುಕೋಕೆ ಇಲ್ಲಿ ಯಾರೂ ರೆಡಿ ಇಲ್ಲ ಲೈಫಲ್ಲೇನಾದ್ರೂ, ಕಿತ್ತು ದಬ್ಬಾಕು ಆಗಿಲ್ಲ ಅಂದ್ರೆ ಹೇಳು ಲೋಕ ಚೂರೂ ಸರಿ ಇಲ್ಲ   ದುಡ್ಡು ಎಂಬುದು ದಡ್ಡರ ರೋಗ ಆರು ಮೂರಡಿ ಅಂತಿಮ ಜಾಗ   ಆದರೂ, ಹೆಂಗಾದರೂ ಒಂದೊಳ್ಳೆ ಸೈಟು ಬುಕ್ಕು ಮಾಡೋಣ   ನಿಮಗೂ ಗೊತ್ತು ನಮಗೂ ಗೊತ್ತು ಕಾಲ ಎಂದೋ ಕುಲಗೆಟ್ಟೋಯ್ತು ಲಕ್ಕಿ ಆಫರ್‌ ಲೋಕ ನಮ್ದು ಮಾಯಾಬಜ಼ಾರು   ಬಣ್ಣದ ಬಾಳು ಬೆಣ್ಣೆ ಮಾತು ನೀರಿನ ಮ್ಯಾಲೆ ದೋಣಿ ತೂತು ಸುಳ್ಳಿನ ಸಂತೆಯಲ್ಲಿ ಸತ್ಯ ಡುಮ್ಕಿಡಮಾರು   ಭಗವಂತಂಗೆ ಬುದ್ಧಿ ಇಲ್ಲ ನಾವೇನ್‌ ಮಾಡೋಣ ನಾಳೆ ಇಂದ ನಾವೇ ದೇವರಾಗಿ ಬಿಡೋಣ ಯಾವ್ದು ಹೆಂಗಾನ ಹಾಳಾಗೋಗ್ಲಿ ಕಾಸು ಮಾಡೋಣ