Song: Saaluthillave (ಸಾಲುತಿಲ್ಲವೆ) , Movie: Kotigobba 2 (ಕೋಟಿಗೊಬ್ಬ 2)

ಹಾಡು: ಸಾಲುತಿಲ್ಲವೇ
ರಚನೆ: ವಿ.ನಾಗೇಂದ್ರ ಪ್ರಸಾದ್‌
ಸಂಗೀತ: ಡಿ. ಇಮ್ಮಾನ್‌
ಗಾಯನ: ಶ್ರೇಯಾ ಘೋಶಾಲ್‌
ಚಲನಚಿತ್ರ: ಕೋಟಿಗೊಬ್ಬ ೨


ಸಾಲುತಿಲ್ಲವೇ ಸಾಲುತಿಲ್ಲವೇ
ನಿನ್ನ ಹಾಗೆ ಮತ್ತು ಬೇರೆ ಇಲ್ಲವೇ
ಸಾಲುತಿಲ್ಲವೇ ಸಾಲುತಿಲ್ಲವೇ
ನಿನ್ನ ಹಾಗೆ ಮತ್ತು ಬೇರೆ ಇಲ್ಲವೇ


ಒಂದೆ ಸಮನೆ ನಿನ್ನ ನೋಡುತಿದ್ದ ಮೇಲೂ
ತುಂಬ ಸಲಿಗೆಯಿಂದ ಬೆರೆತು ಹೋದ ಮೇಲೂ


ಪಕ್ಕದಲ್ಲಿ ಕುಳಿತುಕೊಂಡು 
ನಿನ್ನ ಮೈಗೆ ಅಂಟಿಕೊಂಡು
ಉಸಿರು ಉಸಿರು ಬೆಸೆದ ಮೇಲೂ


ಸಾಲುತಿಲ್ಲವೇ ಸಾಲುತಿಲ್ಲವೇ
ನಿನ್ನ ಹಾಗೆ ಮತ್ತು ಬೇರೆ ಇಲ್ಲವೇ
ಸಾಲುತಿಲ್ಲವೇ ಸಾಲುತಿಲ್ಲವೇ
ನಿನ್ನ ಹಾಗೆ ಮತ್ತು ಬೇರೆ ಇಲ್ಲವೇ


ಮುಂಜಾನೆ ನನ್ನ ಪಾಲಿಗಂತೂ ಸಾಲೊಲ್ಲ
ಮುಸ್ಸಂಜೆ ತನಕ ಸನಿಹವಂತೂ ಸಾಲೊಲ್ಲ
ನನ್ನಾಸೆ ಅನಿಸಿಕೆ ನಾ ಹೇಳಲು
ನಿಘಂಟು ಪದಗಳೇ ಸಾಲೋದಿಲ್ಲ


ನಿನ್ನೊಲವ ಚಲುವ ಅಳೆವೆ ಕಣ್ಣು ಸಾಲೋದಿಲ್ಲ
ನನ್ನೊಲವ ಬರೆವೆ ಗಗನ ಹಾಳೆ ಸಾಲೋದಿಲ್ಲ


ಋತುಗಳೆಲ್ಲ ತಿರುಗಿ ಹೋಗಿ
ಸಮಯವೆಲ್ಲ ಸರಿದು ಹೋಗಿ
ಮೊದಲ ಭೇಟಿ ನೆನೆದ ಮೇಲೂ


ಸಾಲುತಿಲ್ಲವೇ ಸಾಲುತಿಲ್ಲವೇ
ನಿನ್ನ ಹಾಗೆ ಅಮಲು ಬೇರೆ ಇಲ್ಲವೇ


ನಿಸರ್ಗ ಹೇಳುತಿರುವ ಶಕುನ ಸಾಲೊಲ್ಲ
ಸಲ್ಲಾಪದಲ್ಲು ಇರುವ ಸುಖವು ಸಾಲೊಲ್ಲ
ಆಯಸ್ಸು ಹೆಚ್ಚಿಗೆ ಸಾಲೋದಿಲ್ಲ
ನೂರಾರು ಜನ್ಮವೂ ಸಾಲೋದಿಲ್ಲ


ನನ್ನೊಳಗೆ ಇರುವ ರಾಶಿ ಕನಸು ಸಾಲೋದಿಲ್ಲ
ನನಸಾಗಿಸೋಕೆ ದೈವಗಳು ಸಾಕಾಗೊಲ್ಲ


ಏಳು ಸ್ವರವು ಮುಗಿದಮೇಲು
ಕಾಡುವಂಥ ನನ್ನ ನಿನ್ನ
ಯುಗಳಗೀತೆ ಮುಗಿಯೋದಿಲ್ಲ


ಸಾಲುತಿಲ್ಲವೇ ಸಾಲುತಿಲ್ಲವೇ
ನಿನ್ನ ಹಾಗೆ ಅಮಲು ಬೇರೆ ಇಲ್ಲವೇ


ಶ್ವಾಸದಲ್ಲಿ ನೀನು, ವಾಸವಿದ್ದ ಮೇಲೂ
ನನ್ನ ಹೃದಯವನ್ನು, ಹಾಯಾಗಿ ಕದ್ದಮೇಲೂ


ಎರಡು ಹೃದಯ ಬೆರೆತ ಮೇಲೂ
ಹಾಡು ಮುಗಿದು ಹೋದ ಮೇಲೂ
ಮೌನ ತುಂಬಿ ಬಂದ ಮೇಲೂ


ಸಾಲುತಿಲ್ಲವೇ ಸಾಲುತಿಲ್ಲವೇ
ನಿನ್ನ ಹಾಗೆ ಮತ್ತು ಬೇರೆ ಇಲ್ಲವೇ



Any other kannada song lyrics that you would like to see here? Just ask for it in the comments section below

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

Song: Sada ninna kannali (ಸದಾ ನಿನ್ನ ಕಣ್ಣಲಿ), Movie: Bachchan (ಬಚ್ಚನ್-2013)

Song: Elliruve (ಎಲ್ಲಿರುವೆ), Movie: Bayaludaari (ಬಯಲುದಾರಿ)

Song: Preethi neenillade naanu hegirali (ಪ್ರೀತಿ ನೀನಿಲ್ಲದೆ ನಾನು ಹೇಗಿರಲಿ), Movie: Bhaava baamaida (ಭಾವ ಬಾಮೈದ)

Song: Ninninda dooragi iralarenu (ನಿನ್ನಿಂದ ದೂರಾಗಿ ಇರಲಾರೆನು), Movie: Siddartha (ಸಿದ್ದಾರ್ಥ)

Song: Onde ondu Aaseyu (ಒಂದೇ ಒಂದು ಆಸೆಯು), Seetharamu (ಸೀತಾರಾಮು)

Song: Kangalu vandane helide (ಕಂಗಳು ವಂದನೆ ಹೇಳಿದೆ), Movie: Mugiyada kathe (‌ಮುಗುಯದ ಕಥೆ)

Song: Neenu neene illi naanu naane (ನೀನು ನೀನೇ ಇಲ್ಲಿ ನಾನು ನಾನೇ), Movie: Gadibidi ganda (ಗಡಿಬಿಡಿ ಗಂಡ)

Song: Jaaji mallige node (ಜಾಜಿ ಮಲ್ಲಿಗೆ ನೋಡೆ), Movie: Sevanthi sevanthi (ಸೇವಂತಿ ಸೇವಂತಿ)

Song: Kannige kaanuva(ಕಣ್ಣಿಗೆ ಕಾಣುವ ), Movie: Yarivanu(ಯಾರಿವನು)