ಪೋಸ್ಟ್‌ಗಳು

ಜನವರಿ, 2020 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

Song: Ello jinugiruva neeru (ಎಲ್ಲೋ ಜಿನುಗಿರುವ ನೀರು‌), Movie: Just maath maathalli(ಜಸ್ಟ್‌ ಮಾತ್‌ ಮಾತಲ್ಲಿ)

ಹಾಡು: ಎಲ್ಲೋ ಜಿನುಗಿರುವ ನೀರು ರಚನೆ: ಸುಧೀರ್ ಅತ್ತಾವರ್‌, ರಾಘವೇಂದ್ರ ಕಾಮತ್ ಸಂಗೀತ: ರಘು ದೀಕ್ಷಿತ್‌ ಗಾಯನ: ಶ್ರೇಯ ಘೋಶಾಲ್‌ ಚಲನಚಿತ್ರ: ಜಸ್ಟ್‌ ಮಾತ್‌ ಮಾತಲ್ಲಿ ಎಲ್ಲೋ ಜಿನುಗಿರುವ ನೀರು ಎಲ್ಲೋ ಝರಿಯಾಗಿ ಹರಿದು ಎಲ್ಲೋ ಸಾಗರವ ಸೇರೋ ಪ್ರೀತಿ ಏನಿದು ಎಲ್ಲೋ ರವಿ ಬರುವ ಸಮಯ ಎಲ್ಲೋ ಹೂ ಅರಳೋ ಸರಸ ಎಲ್ಲೋ ಚಿಲಿಪಿಲಿಯ ಭಾವವು ಮುಂಜಾನೆ ಮಂಜು ಹನಿ ಭೂಮೀಲಿ ತಂಪಾಗಿ ತೀಡಿರುವ ಪ್ರೇಮ ಕೆಂಪಾದ ಕಿರಣ ತುಸು ಹಾಯಾಗಿ ಭುವಿ ಮುತ್ತಿಟ್ಟ ಕಿವಿಗುಟ್ಟೊ ಪ್ರೇಮ ಪ್ರೇಮ ಓ ಅದು ಎಂಗಂತಂದ್ರೆ ಯೋಳಕ್‌ ಬರ್ತೈತೆ ಜಸ್ಟ್‌ ಮಾತ್‌ ಮಾತಲ್ಲಿ ಗೊತ್ತಿಲ್ದಂಗ್‌ ಮನಸ್ನಾಗ ಮೂಡ್ತೈತೆ ಬರಡಾದ್‌ ಬಾಳ್ಗೆ ಬಣ್ಣಾನ್‌ ಸುರ್ಸಿ ರಂಗನ್‌ ಚಲ್ತೈತೆ ಈ ಸುಖವನ್ನನುಭವ್ಸ್ದಿದ್ರೆ ಬದುಕು ವ್ಯರ್ಥ ಅನ್ಸ್ತೈತೆ ಬೆಳ್ಳಿ ಬೆಳಕನ್ನು ಹೀರಿ ಸೊಂಪಾಗಿ ಹೂಬಿರಿದು  ನಕ್ಕಂತ ನಗುವಲ್ಲಿ ಪ್ರೇಮ ಹಚ್ಚ ಹಸಿರನ್ನು ತೂರಿ ಕಂಪಾಗಿ ಹೂ ನಗಲು ಪರಿಮಳವೇ ಹೊನಲಾಗಿ ಪ್ರೇಮ ದಿನಬೆಳಗಿನಲಿ ಸವಿಗನಸುಗಳು ಚೀಕಾಡೊ ಒಲವಿದು ಪ್ರೇಮ ಹೊಸಲೋಕದಲಿ ಸವಿಭಾವಗಳು ನಲಿ ನಲಿಯುತ್ತ ಜಿಗಿದಿದೆ ಪ್ರೇಮ ಎಲ್ಲೋ ಜಿನುಗಿರುವ ನೀರು ಎಲ್ಲೋ ಝರಿಯಾಗಿ ಹರಿದು ಎಲ್ಲೋ ಸಾಗರವ ಸೇರೋ ಪ್ರೀತಿ ಏನಿದು ಎಲ್ಲೋ ರವಿ ಬರುವ ಸಮಯ ಎಲ್ಲೋ ಹೂ ಅರಳೋ ಸರಸ ಎಲ್ಲೋ ಚಿಲಿಪಿಲಿಯ ಭಾವವು ಮೋಹನ ಯಾರಿವ, ನನ್ನೀ ಮನ ಸೆಳೆದವ

Song: Haakida janivarava(ಹಾಕಿದ ಜನಿವಾರವ), Movie: Santha shishunala shariff(ಸಂತ ಶಿಶುನಾಳ ಷರೀಫ)

ಹಾಡು: ಹಾಕಿದ ಜನಿವಾರವ ರಚನೆ: ಸಂತ ಶಿಶುನಾಳ‌ ಷರೀಫ್ ಸಂಗೀತ: ಸಿ. ಅಶ್ವತ್ಥ್‌ ಗಾಯನ: ಶಿವಮೊಗ್ಗ ಸುಬ್ಬಣ್ಣ, ಬಿ.ಆರ್.‌ ಛಾಯಾ ಚಲನಚಿತ್ರ: ಸಂತ ಶಿಶುನಾಳ ಷರೀಫ ಹಾಕಿದ ಜನಿವಾರವ ಸದ್ಗುರುನಾಥ ಹಾಕಿದ ಜನಿವಾರವ{೨} ಹಾಕಿದ ಜನಿವಾರ ನೂಕಿದ ಭವಭಾರ(೨) ಲೋಕದ ಬ್ರಹ್ಮಜ್ನಾನ ನೀ ಪಡೆ ಎಂದು ಹಾಕಿದ ಜನಿವಾರವ ಸದ್ಗುರುನಾಥ ಹಾಕಿದ ಜನಿವಾರವ ಸಂಧ್ಯಾವಂದನೆ ಕಲಿಸಿ  ಆನಂದದ ಬಿಂದು ಮಧ್ಯದಿ ನಿಲ್ಲಿಸಿ{೨} ನಂದಿಸಿ ಮನಸನು ಆತ್ಮ ಜಲದಲಿ(೨) ಎಂದೆಂದಿಗೂ ಯಮದುಂದುಗವಳಿಯೆಂದು || ಹಾಕಿದ ಜನಿವಾರವ ಸದ್ಗುರುನಾಥ ಹಾಕಿದ ಜನಿವಾರವ ಶಿಶುನಾಳಧೀಶ ಗುರು ತನ್ನೊಡಲೊಳು ವಶವಾದ ಸೂತ್ರವನು{೨} ನಸುನಗುತಲಿ ತೆಗೆದಲ್ಲಿಯೆ ತೊಡಿಸಿದ ಉಸುರಿದ ಮಂತ್ರವ ಹೊಸಬನ ಮಾಡುತ || ಹಾಕಿದ ಜನಿವಾರವ ಸದ್ಗುರುನಾಥ ಹಾಕಿದ ಜನಿವಾರವ{೨}

Song: Yeno ide (ಏನೋ ಇದೆ), Movie: Psycho (ಸೈಕೋ)

ಹಾಡು: ಏನೋ ಇದೆ ರಚನೆ: ವಿ. ಮನೋಹರ್‌, ರಘು ದೀಕ್ಷಿತ್‌ ಸಂಗೀತ: ರಘು ದೀಕ್ಷಿತ್‌ ಗಾಯನ: ರಘು ದೀಕ್ಷಿತ್‌ ಚಲನಚಿತ್ರ: ಸೈಕೋ ಏನೋ ಇದೆ ಏನೋ ಇದೆ,ಈ ಪ್ರೀತಿಲಿ ಏನೋ ಇದೆ ಏನಿದೆ ಏನೇನಿದೆ,ಈ ಪ್ರೀತಿಲಿ ಇನ್ನೇನಿದೆ ಬಾಳಿನ ದೀಪವೇ ಇಂದು ಆರಿ ಹೋಗಿದೆ ನನ್ನಯ ನೆರಳೇ ನನ್ನ ಬಿಟ್ಟು ಹೋಗಿದೆ ಜೀವನ ಅಲ್ಲೋಲ ಕಲ್ಲೋಲವಾಗಿದೆ ಕರೆಯುವ ಕೊರಳೇ ಮೌನ ತಾಳಿದೆ ಏನಿದೆ, ಏನೋ ಇದೆ, ಈ ಪ್ರೀತಿಲಿ ಏನೋ ಇದೆ ಏನೋ ಇದೆ, ಏನೇನಿದೆ,ಈ ಪ್ರೀತಿಲಿ ಇನ್ನೇನಿದೆ ಓ ತನ್ನ ರಾಗವನ್ನೇ  ಹಾಡು ತೊರೆದಂತೆ ಭಾವದಲ್ಲಿ ಬರೆದ ಚಿತ್ರ ಹರಿದಂತೆ ಕನ್ನ ಹಾಕಿ ಹೃದಯವನ್ನೇ ಕೊರೆದಂತೆ ನನ್ನ ಶೋಕಗೀತೆ ನಾನೇ ಬರೆದಂತೆ ಪರಿತಾಪವೇ ಪ್ರೀತಿಯ ಫಲವೇ ಸರಿ ಉತ್ತರ ನೀಡು ನೀ ಒಲವೇ ಬೆಳದಿಂಗಳೇ, ಮರೆಯಾಗಿದೆ, ಮರೆಯಾಗಿದೆ ಆಕಾಶವೇ ಸುಳ್ಳಾಗಿದೆ, ಈ ಭೂಮಿಯು ಮುಳ್ಳಾಗಿದೆ ಏನೋ ಇದೆ, ಏನೇನಿದೆ,ಈ ಪ್ರೀತಿಲಿ ಇನ್ನೇನಿದೆ ಕಾಡುವಂಥ ನೂರು ನೋವು ಇರುಳಲ್ಲಿ ನಾಟಿದಂತೆ ಬಾಣವೊಂದು ಎದೆಯಲ್ಲಿ ನೀನೇ ಬೇಕು ಎಂಬ ನನ್ನ ಛಲದಲ್ಲಿ ಲೂಟಿಯಾಗಿ ಹೋದೆನಲ್ಲ ಒಲವಲ್ಲಿ ಇದು ಎಚ್ಚರವಿಲ್ಲದ ಕನಸೇ ಅಥವಾ ಇದು ಸಾವಿನ ತಿನಿಸೇ ನಿಜ ಬಣ್ಣವೇ, ಬಯಲಾಗಿದೆ, ಬಯಲಾಗಿದೆ ಆಕಾಶವೇ ಸುಳ್ಳಾಗಿದೆ, ಈ ಭೂಮಿಯು ಮುಳ್ಳಾಗಿದೆ ಬಾಳಿನ ದೀಪವೇ ಇಂದು ಆರಿ ಹೋಗಿದೆ ನನ್ನಯ ನೆರಳೇ ನನ್ನ ಬಿಟ್ಟು ಹೋಗಿದೆ ಜೀವನ ಅಲ್ಲೋಲ ಕಲ್ಲ

Song: Ee tanuvu ninnade, ಈ ತನುವು ನಿನ್ನದೇ(ನೀನೇ ಬೇಕು) , Movie: Psycho (ಸೈಕೋ)

ಹಾಡು: ಈ ತನುವು ನಿನ್ನದೇ(ನೀನೇ ಬೇಕು) ರಚನೆ: ವಿ. ಮನೋಹರ್‌, ರಘು ದೀಕ್ಷಿತ್‌ ಸಂಗೀತ: ರಘು ದೀಕ್ಷಿತ್‌ ಗಾಯನ: ರಘು ದೀಕ್ಷಿತ್‌ ಚಲನಚಿತ್ರ: ಸೈಕೋ ಈ ತನುವು ನಿನ್ನದೇ, ನಿನ್ನಾಣೆ ಈ ಮನವು ನಿನ್ನದೇ, ನಿನ್ನಾಣೆ  ಈ ಒಲವು ನಿನ್ನದೇ, ನಿನ್ನಾಣೆ ಈ ಉಸಿರು ನಿನ್ನದೇ, ನಿನ್ನಾಣೆ  ನೀನೇನೇ ಅಂದರೂ, ನೀ ನನ್ನ ಕೊಂದರು ಈ ಜೀವ ಹೋದರೂ, ಪ್ರೇಮಿ ನೀನೇ ನೀನೇ ಬೇಕು, ನೀನೇ ಬೇಕು ನೀನಿಲ್ಲದೇ, ಏನೀ ಬದುಕು  ನೀನೇ ಬೇಕು, ನೀನೇ ಬೇಕು ಈ ಬಾಳಿಗೆ, ನೀನೇ ಬೆಳಕು ಈ ತನುವು ನಿನ್ನದೇ, ನಿನ್ನಾಣೆ ಈ ಮನವು ನಿನ್ನದೇ, ನಿನ್ನಾಣೆ  ಈ ಹೃದಯ ನಿನ್ನದೇ, ನಿನ್ನಾಣೆ ಈ ಜನುಮ ನಿನ್ನದೇ, ನಿನ್ನಾಣೆ  ನೀ ಶಾಪ ಕೊಟ್ಟರೂ, ನಾ ನಾಶವಾದರೂ ನೂರಾರು ಜನ್ಮಕೂ, ಪ್ರೇಮಿ ನೀನೇ ನೀನೇ ಬೇಕು, ನೀನೇ ಬೇಕು ನೀನಿಲ್ಲದೇ, ಏನೀ ಬದುಕು ನೀನೇ ಬೇಕು, ನೀನೇ ಬೇಕು ನೀನಿಲ್ಲದೇ, ಯಾಕೀ ಬದುಕು ನಾ ನಿನ್ನನು, ನೋಡಿದ ಕೂಡಲೆ ಈ ಪ್ರೇಮವು ಮೂಡಿದೆ ನೀ ನನ್ನನು ಪ್ರೀತಿಯ ಮಾಡದೆ ಈ ಜೀವವು, ನಿಲ್ಲದೇ ಈ ರಕ್ತದ ಕಣಕಣದಿ, ನೀ ಬೆರೆತು ಹೋಗಿಹೆ ನನ್ನಾಣೆಗೂ ಎಂದಿಗೂ, ಪ್ರೇಮಿ ನೀನೇ ನೀನೇ ಬೇಕು, ನೀನೇ ಬೇಕು ನೀನಿಲ್ಲದೇ, ಏನೀ ಬದುಕು  ನೀನೇ ಬೇಕು, ನೀನೇ ಬೇಕು ನೀನಿಲ್ಲದೇ, ಏನೀ ಬದುಕು 

Song: Noorondu nenapu (ನೂರೊಂದು ನೆನಪು), Movie: Bandhana ( ಬಂಧನ)

ಹಾಡು: ನೂರೊಂದು ನೆನಪು ರಚನೆ: ಆರ್.‌ ಎನ್.‌ ಜಯಗೋಪಾಲ್‌ ಸಂಗೀತ: ಎಂ. ರಂಗರಾವ್‌ ಗಾಯನ: ಎಸ್.‌ ಪಿ. ಬಾಲಸುಬ್ರಮಣ್ಯಂ ಚಲನಚಿತ್ರ: ಬಂಧನ ನೂರೊಂದು ನೆನಪು, ಎದೆಯಾಳದಿಂದ ಹಾಡಾಗಿ ಬಂತು, ಆನಂದದಿಂದ ನೂರೊಂದು ನೆನಪು, ಎದೆಯಾಳದಿಂದ ಹಾಡಾಗಿ ಬಂತು, ಆನಂದದಿಂದ{೨} ಸಿಂಧೂರ ಬಿಂದು, ನಗಲಮ್ಮ ಎಂದೂ ಎಂದೆಂದು ಇರಲಮ್ಮ ಈ ದಿವ್ಯ ಬಂಧ ನೂರೊಂದು ನೆನಪು, ಎದೆಯಾಳದಿಂದ ಹಾಡಾಗಿ ಬಂತು, ಆನಂದದಿಂದ ಒಲವೆಂಬ ಲತೆಯು, ತಂದಂತ ಹೂವು ಮುಡಿಯೇರೆ ನಲಿವು, ಮುಡಿಜಾರೆ ನೋವು ಕೈಗೂಡಿದಾಗ ಕಂಡಂಥ ಕನಸು ಅದೃಷ್ಟದಾಟ ತಂದಂಥ ಸೊಗಸು  ಪ್ರೀತಿ ನಗುತಿರಲಿ, ಬಾಳು ಬೆಳಗಿರಲಿ(೨) ನೀವೆಂದೂ ಇರಬೇಕು ಸಂತೋಷದಿಂದ ನೂರೊಂದು ನೆನಪು, ಎದೆಯಾಳದಿಂದ ಹಾಡಾಗಿ ಬಂತು, ಆನಂದದಿಂದ ತುಟಿಮೇಲೆ ಬಂದಂಥ ಮಾತೊಂದೇ ಒಂದು ಎದೆಯಲ್ಲಿ ಉಳಿದಿದ್ದು ಮುನ್ನೂರ ಒಂದು ಮೂರು ಗಂಟಲ್ಲಿ ಈ ಬಾಳ ನಂಟು ಕೇಳಿ ಪಡೆದಾಗ ಸಂತೋಷ ಉಂಟು ನಿನ್ನ ಹರುಷದಲಿ, ನನ್ನ ಉಸಿರಿರಲಿ(೨) ನನ್ನೆಲ್ಲ ಹಾರೈಕೆ ಈ ಹಾಡಿನಿಂದ ನೂರೊಂದು ನೆನಪು, ಎದೆಯಾಳದಿಂದ ಹಾಡಾಗಿ ಬಂತು, ಆನಂದದಿಂದ ಸಿಂಧೂರ ಬಿಂದು, ನಗಲಮ್ಮ ಎಂದೂ ಎಂದೆಂದು ಇರಲಮ್ಮ ಈ ದಿವ್ಯ ಬಂಧ ನೂರೊಂದು ನೆನಪು, ಎದೆಯಾಳದಿಂದ ಹಾಡಾಗಿ ಬಂತು, ಆನಂದದಿಂದ ಆನಂದದಿಂದ, ಆನಂದದಿಂದ

Song: Badukina bannave (ಬದುಕಿನ ಬಣ್ಣವೇ‌), Movie: Tagaru (ಟಗರು)

ಹಾಡು: ಬದುಕಿನ ಬಣ್ಣವೇ ರಚನೆ: ಜಯಂತ್‌ ಕಾಯ್ಕಿಣಿ ಸಂಗೀತ: ಚರಣ್‌ ರಾಜ್‌ ಗಾಯನ: ಸಿದ್ಧಾರ್ಥ ಬೆಳ್ಮಣ್ಣು, ಸಂಜಿತ್‌ ಹೆಗ್ಡೆ, ಚರಣ್‌ ರಾಜ್ ಚಲನಚಿತ್ರ: ಟಗರು ಬದುಕಿನ ಬಣ್ಣವೇ ಬದಲಾದರೆ, ಅದು ಪ್ರೇಮವೇ ಬಡವನ ಕಣ್ಣಲೂ ಬೆಳಕಾದರೆ, ಅದು ಪ್ರೇಮವೇ ಕೊರಳಿದು ಕಂಪಿಸಿ ಬಿಗಿಯಾದರೆ, ಅದು ಪ್ರೇಮವೇ ತಿರುವಲಿ ದೇವರೇ ಎದುರಾದರೆ, ಅದು ಪ್ರೇಮವೇ ಗಾಳಿಯಲಿ, ಬೆಚ್ಚನೆ ಅಲೆಯಿದೆ ಹೃದಯಕೆ ಹೇಗೋ ದಾರಿ ಗೊತ್ತಾಗಿದೆ, ನಕ್ಷೆಯ ನೀಡದೆ ಬದುಕಿನ ಬಣ್ಣವೇ ಬದಲಾದರೆ, ಅದು ಪ್ರೇಮವೇ ಬಡವನ ಕಣ್ಣಲೂ ಬೆಳಕಾದರೆ, ಅದು ಪ್ರೇಮವೇ ತಲಿಪದ ಕರೆ ನೂರಾರಿವೆ ಬೆರಳಲೇ ಇದೆ ಸಂಭಾಷಣೆ ಕನಸಿಗೂ ಸಹ ಕಂದಾಯವೆ ವಿರಹವೇ ಕಿರು ಸಂಭಾವನೆ ಕಳೆದರೆ ನೀನು, ಉಳಿವೆನೇ ನಾನು ನೆಪವಿರದೆ ನಿನ್ನ, ಅಪಹರಿಸಿ ತಂದೆ ಉಪಕರಿಸು ಶಿಕ್ಷೆಯ ನೀಡದೆ ಬದುಕಿನ ಬಣ್ಣವೇ ಬದಲಾದರೆ, ಅದು ಪ್ರೇಮವೇ ಬಡವನ ಕಣ್ಣಲೂ ಬೆಳಕಾದರೆ, ಅದು ಪ್ರೇಮವೇ ಕೊರಳಿದು ಕಂಪಿಸಿ ಬಿಗಿಯಾದರೆ, ಅದು ಪ್ರೇಮವೇ ತಿರುವಲಿ ದೇವರೇ ಎದುರಾದರೆ, ಅದು ಪ್ರೇಮವೇ

Song: Narayana narayana (ನಾರಾಯಣ ನಾರಾಯಣ), Movie: Avane Srimannarayana (ಅವನೇ ಶ್ರೀಮನ್ನಾರಾಯಣ)

ಹಾಡು: ನಾರಾಯಣ ನಾರಾಯಣ ರಚನೆ: ನಾಗಾರ್ಜುನ್‌ ಶರ್ಮ ಸಂಗೀತ: ಚರಣ್‌ ರಾಜ್‌ ಗಾಯನ: ಅನುರಾಗ್‌ ಕುಲಕರ್ಣಿ, ಅನನ್ಯ ಭಟ್ ಚಲನಚಿತ್ರ: ಅವನೇ ಶ್ರೀಮನ್ನಾರಾಯಣ ಆಹಾ ಬಂದನು, ಭಗವಂತನ ವರ್ಷನು ಕಣ್ಣೀಗೆ ರೇಬ್ಯಾನು ಯಾಕಿನ್ನು ಜಗದೋದ್ಧಾರ, ಸುಕುಮಾರ ನಮಗೆಂದೇ ಬಂದ ಸರದಾರ ನಿನ್ನ ಒರಿಜಿನಲ್‌ ಮೊಗವ ನೋಡಣ ನಾರಾಯಣ, ನಾರಾಯಣ, ಶ್ರೀಮನ್ನಾರಾಯಣ ನಾರಾಯಣ(೨) ಶಂಖ ಚಕ್ರ ಗದೆ, ಹೇಳು ಸ್ವಾಮಿ ಎಲ್ಲಿದೆ. ಆಹಾ! ಶಂಖ ಚಕ್ರ ಗದೆ, ಹೇಳು ಸ್ವಾಮಿ ಎಲ್ಲಿದೆ ಕೈಜೋಡಿಸಿ ದೇವ್ರನ್ನ, ಡೌಟ್ಯಾಕೆ ಕೇಳಣ ಯಾಕಪ್ಪ ಬಂದೂಕು, ವೇರ್‌ ಈಸ್‌ ಯೋರ್‌ ಬಿಲ್ಲು ಬಾಣ ಕುಂಕುಮ, ಹಣೆಗೆ ತಾಕಿ ಆಗಿದೆ, ಜಯದ ತಿಲಕ ಹೊಳಿತಿದೆ, ಕಳೆಯಿದೆ ಚಾರ್ಮಿಂಗು ನಿನ್ನ ಮುಖ   ಜಗದೋದ್ಧಾರ, ಸುಕುಮಾರ ನೀನೇ ಎಲ್ಲಾ ಲೋಕದ ಪ್ರಕಾರ ನೀ ಬರುವ ಬಾಗಿಲಿಗೆ ತೋರಣ ನಾರಾಯಣ, ನಾರಾಯಣ, ಶ್ರೀಮನ್ನಾರಾಯಣ ನಾರಾಯಣ(೨) ಅಂದಾದ, ಬ್ಯೂಟಿಫುಲ್‌ ಲಕುಮೀಗೆ, ಶೀಸ್‌ ಸೋ ಕೂಲ್‌ ಜರುಗಿದೆ, ಒಲವಿನ ದೇಣಿಗೆ ಮನಸಾರೆ, ಓ ಮನಸಾರೆ ಮನಸಾರೆ ಧೃವತಾರೆ, ಓ ಧೃವತಾರೆ ಧೃವತಾರೆ ಬೆಳಕಾಗಿ, ಬಂದಿದೆ ಜೋಡಿಗೆ ರಾಜಮಾನದಿ ಕೇಳಿ ಬಂದಿದೆ ವೈಭೋಗದ ಗಾನ ಐಕ್ಯವಾಗಲಿ ವಾಕ್ಯವೆಲ್ಲ ಮಾಡಲು ಗುಣಗಾನ ಜಗದೋದ್ಧಾರ, ಸುಕುಮಾರ ಲಕುಮಿಯ ಸಿರಿ ಸರದಾರ ಸ್ವರ್ಗದಲೇ ಆಗಿಹುದು ಕಲ್ಯಾಣ ನಾರಾಯಣ, ನಾರಾಯಣ, ಶ್ರೀಮನ್ನ