Song: Tanmayalaadenu, Movie: Paramathma

ಹಾಡು: ತನ್ಮಯಳಾದೆನು
ರಚನೆ: ಜಯಂತ ಕಾಯ್ಕಿಣಿ
ಸಂಗೀತ: ವಿ. ಹರಿಕೃಷ್ಣ
ಗಾಯನ: ಶ್ರೇಯ ಘೋಶಾಲ್‌
ಚಲನಚಿತ್ರ: ಪರಮಾತ್ಮ

ತನ್ಮಯಳಾದೆನು, ತಿಳಿಯುವ ಮುನ್ನವೇ
ಕಣ್ಮರೆಯಾಗಲೇ ಹೇಳು ಮರೆಯುವ ಮುನ್ನವೇ
ನಿನ್ನಲ್ಲೆ ಜೀವವನ್ನು, ಅಡವಿಟ್ಟು ಬಂದೆ ನಾನು
ಕಣ್ಮುಚ್ಚಿಯೇ ನಾನೋದಲೇ ಪುಟವೊಂದನೂ,
ಹರಿಯುವ ಮುನ್ನವೇ

ತನ್ಮಯಳಾದೆನು, ತಿಳಿಯುವ ಮುನ್ನವೇ
ಕಣ್ಮರೆಯಾಗಲೇ ಹೇಳು ಮರೆಯುವ ಮುನ್ನವೇ

ತಪ್ಪು ತಿಳಿಯಬೇಡ ನೀನು ಕನಸಿನಲ್ಲಿ ಕಂಡರೆ
ಬೇರೆ ಏನೋ ಹೇಳುವಾಗ, ಕಣ್ಣುತುಂಬಿ ಬಂದರೆ
ಈ ಮನಸಿಗೆ ಭಾಸವು, ಇಲ್ಲೇ ನೀನು ನನ್ನ ಕೂಗಿದಂತೆ
ಸಣ್ಣ ಸಲ್ಲಾಪವನ್ನು, ಒಂಟಿಯಾಗಿ ನಡೆಸುತ್ತ ನಾ ನಿಂತೆ

ಮನಸಲ್ಲೆ ಅಂದ ಮಾತು, 
ತಡವಾಗಿ ಕೇಳಿತೇನು
ಗೊತ್ತಿಲ್ಲದೇ ನಾ ಗೀಚಲೇ ಹೆಸರೊಂದನೂ
ಅಳಿಸುವ ಮುನ್ನವೇ

ತನ್ಮಯಳಾದೆನು, ತಿಳಿಯುವ ಮುನ್ನವೇ
ಕಣ್ಮರೆಯಾಗಲೇ ಹೇಳು ಮರೆಯುವ ಮುನ್ನವೇ

ಪ್ರತಿಸಲ ಬಾಗಿಲ ಸದ್ದಿಗೆ ಎದೆಯಲಿ ಸ್ಪಂದನ
ತೆರೆದರೆ ಬೀಸುವ ಗಾಳಿಯು ಹೇಳಿದೆ ಸಾಂತ್ವನ
ಓ ನನ್ನ ವಿರಹವು ನಿನ್ನಿಂದ ಇನ್ನೂ ಚೆಂದ
ವಿವರಿಸಲಾರೆ ಎಲ್ಲ ನಾ ದೂರದಿಂದ

ನೆನಪನ್ನು ರಾಶಿಹಾಕಿ
ಎಣಿಸುತ್ತ ಕೂರಲೇನು
ಕನ್ನಡಿಯಲಿ ನಾ ಹುಡುಕಲೇ ನಗುವೊಂದನೂ
ಒರೆಸುವ ಮುನ್ನವೇ

ತನ್ಮಯಳಾದೆನು, ತಿಳಿಯುವ ಮುನ್ನವೇ
ಕಣ್ಮರೆಯಾಗಲೇ ಹೇಳು ಮರೆಯುವ ಮುನ್ನವೇ



ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

Song: Sada ninna kannali (ಸದಾ ನಿನ್ನ ಕಣ್ಣಲಿ), Movie: Bachchan (ಬಚ್ಚನ್-2013)

Song: Ninninda dooragi iralarenu (ನಿನ್ನಿಂದ ದೂರಾಗಿ ಇರಲಾರೆನು), Movie: Siddartha (ಸಿದ್ದಾರ್ಥ)

Song: Preethi neenillade naanu hegirali (ಪ್ರೀತಿ ನೀನಿಲ್ಲದೆ ನಾನು ಹೇಗಿರಲಿ), Movie: Bhaava baamaida (ಭಾವ ಬಾಮೈದ)

Song: Elliruve (ಎಲ್ಲಿರುವೆ), Movie: Bayaludaari (ಬಯಲುದಾರಿ)

Song: Maathu muride(ಮಾತು ಮುರಿದೆ‌), Movie: Ganda hendathi (ಗಂಡ-ಹೆಂಡತಿ)

Song: Onde ondu Aaseyu (ಒಂದೇ ಒಂದು ಆಸೆಯು), Seetharamu (ಸೀತಾರಾಮು)

Song: Kangalu vandane helide (ಕಂಗಳು ವಂದನೆ ಹೇಳಿದೆ), Movie: Mugiyada kathe (‌ಮುಗುಯದ ಕಥೆ)

Song: Jaaji mallige node (ಜಾಜಿ ಮಲ್ಲಿಗೆ ನೋಡೆ), Movie: Sevanthi sevanthi (ಸೇವಂತಿ ಸೇವಂತಿ)

Song: Prema chandrama (ಪ್ರೇಮ ಚಂದ್ರಮ), Movie: Yajamana (ಯಜಮಾನ)