Song: Elliruve (ಎಲ್ಲಿರುವೆ), Movie: Bayaludaari (ಬಯಲುದಾರಿ)

ಹಾಡು: ಎಲ್ಲಿರುವೆ
ರಚನೆ: ಚಿ. ಉದಯಶಂಕರ್
ಸಂಗೀತ: ರಾಜನ್‌ ನಾಗೇಂದ್ರ
ಗಾಯನ: ಎಸ್.‌ ಪಿ. ಬಾಲಸುಬ್ರಮಣ್ಯಂ
ಚಲನಚಿತ್ರ: ಬಯಲುದಾರಿ

ಎಲ್ಲಿರುವೆ, ಮನವ ಕಾಡುವ ರೂಪಸಿಯೇ 
ಬಯಕೆಯ, ಬಳ್ಳಿಯ, ನಗುವ ಹೂವಾದ ಪ್ರೇಯಸಿಯೇ
ಬಯಕೆಯ, ಬಳ್ಳಿಯ, ನಗುವ ಹೂವಾದ ಪ್ರೇಯಸಿ ನೀನು
ಎಲ್ಲಿರುವೇ, ಮನವ ಕಾಡುವ ರೂಪಸಿಯೇ

ತೇಲುವ ಈ ಮೋಡದ ಮೇಲೆ, ನೀ ನಿಂತ ಹಾಗಿದೆ
ನಗುನಗುತ, ನಲಿನಲಿದು, ನನ್ನ ಕೂಗಿದಂತಿದೆ

ಸೇರುವ ಬಾ ಆಗಸದಲ್ಲಿ, ಎಂದು ಹೇಳಿದಂತಿದೆ  
ತನುವೆಲ್ಲ, ಹಗುರಾಗಿ, ತೇಲಾಡುವಂತಿದೆ, ಆಡುವಂತಿದೆ, ಚಲುವೆ
ಎಲ್ಲಿರುವೆ, ಮನವ ಕಾಡುವ ರೂಪಸಿಯೇ 
ಬಯಕೆಯ, ಬಳ್ಳಿಯ, ನಗುವ ಹೂವಾದ ಪ್ರೇಯಸಿಯೇ
ಬಯಕೆಯ, ಬಳ್ಳಿಯ, ನಗುವ ಹೂವಾದ ಪ್ರೇಯಸಿ ನೀನು
ಎಲ್ಲಿರುವೇ, ಮನವ ಕಾಡುವ ರೂಪಸಿಯೇ

ಕಣ್ಣಲ್ಲೇ ಒಲವಿನ ಗೀತೆ, ನೀ ಹಾಡಿದಂತಿದೆ
ನಿನ್ನಾಸೆ, ಅತಿಯಾಗಿ, ತೂರಾಡುವಂತಿದೆ

ಹಗಲಲ್ಲೂ ಚಂದ್ರನ ಕಾಣೋ, ಭಾಗ್ಯ ನನ್ನದಾಗಿದೆ
ಚಂದ್ರಿಕೆಯ, ಚಲುವಿಂದ, ಬಾಳು ಭವ್ಯವಾಗಿದೆ, ಭವ್ಯವಾಗಿದೆ

ನಲ್ಲೆ ಎಲ್ಲಿರುವೆ, ಮನವ ಕಾಡುವ ರೂಪಸಿಯೇ 
ಬಯಕೆಯ, ಬಳ್ಳಿಯ, ನಗುವ ಹೂವಾದ ಪ್ರೇಯಸಿಯೇ
ಬಯಕೆಯ, ಬಳ್ಳಿಯ, ನಗುವ ಹೂವಾದ ಪ್ರೇಯಸಿ ನೀನು
ಎಲ್ಲಿರುವೇ, ಮನವ ಕಾಡುವ ರೂಪಸಿಯೇ
ಲಲಲ ಲಲಲ ಲಲಲಲ

ಆ ಹಾಹಾ ಹಾ ಹಾಹಾ ಆ ಹಾಹಾಹಾ

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

Song: Sada ninna kannali (ಸದಾ ನಿನ್ನ ಕಣ್ಣಲಿ), Movie: Bachchan (ಬಚ್ಚನ್-2013)

Song: Ninninda dooragi iralarenu (ನಿನ್ನಿಂದ ದೂರಾಗಿ ಇರಲಾರೆನು), Movie: Siddartha (ಸಿದ್ದಾರ್ಥ)

Song: Preethi neenillade naanu hegirali (ಪ್ರೀತಿ ನೀನಿಲ್ಲದೆ ನಾನು ಹೇಗಿರಲಿ), Movie: Bhaava baamaida (ಭಾವ ಬಾಮೈದ)

Song: Onde ondu Aaseyu (ಒಂದೇ ಒಂದು ಆಸೆಯು), Seetharamu (ಸೀತಾರಾಮು)

Song: Kangalu vandane helide (ಕಂಗಳು ವಂದನೆ ಹೇಳಿದೆ), Movie: Mugiyada kathe (‌ಮುಗುಯದ ಕಥೆ)

Song: Neenu neene illi naanu naane (ನೀನು ನೀನೇ ಇಲ್ಲಿ ನಾನು ನಾನೇ), Movie: Gadibidi ganda (ಗಡಿಬಿಡಿ ಗಂಡ)

Song: Jaaji mallige node (ಜಾಜಿ ಮಲ್ಲಿಗೆ ನೋಡೆ), Movie: Sevanthi sevanthi (ಸೇವಂತಿ ಸೇವಂತಿ)

Song: Kannige kaanuva(ಕಣ್ಣಿಗೆ ಕಾಣುವ ), Movie: Yarivanu(ಯಾರಿವನು)