Kannada Naadina Veera ramaniya (Obavva)

ಹಾಡು: ಕನ್ನಡ ನಾಡಿನ ವೀರರಮಣಿಯ
ರಚನೆ: ಚಿ. ಉದಯಶಂಕರ್‌
ಸಂಗೀತ: ವಿಜಯಭಾಸ್ಕರ್‌
ಗಾಯನ: ಪಿ.ಬಿ.ಶ್ರೀನಿವಾಸ್‌
ಚಲನಚಿತ್ರ: ನಾಗರಹಾವು

ಕನ್ನಡ ನಾಡಿನ ವೀರರಮಣಿಯ
ಗಂಡುಭೂಮಿಯ ವೀರ ನಾರಿಯ
ಚರಿತೆಯ ನಾನು ಹಾಡುವೆ{೨)
ಚಿತ್ರದುರ್ಗದ ಕಲ್ಲಿನ ಕೋಟೆ,
ಸಿಡಿಲಿಗು ಬೆಚ್ಚದ ಉಕ್ಕಿನ ಕೋಟೆ{೨}
ಮದಿಸಿದ ಕರಿಯ ಮದವಡಗಿಸಿದ,
ಮದಕರಿನಾಯಕರಾಳಿದ ಕೋಟೆ
ಪುಣ್ಯಭೂಮಿಯು ಈ ಬೀಡು,
ಸಿದ್ಧರು ಹರಸಿದ ಸಿರಿನಾಡು.
ಕನ್ನಡ ನಾಡಿನ ವೀರರಮಣಿಯ
ಗಂಡುಭೂಮಿಯ ವೀರ ನಾರಿಯ
ಚರಿತೆಯ ನಾನು ಹಾಡುವೆ
ವೀರಮದಕರಿ ಆಳುತಲಿರಲು,
ಹೈದರಾಲಿಯು ಯುದ್ಧಕೆ ಬರಲು
ಕೋಟೆಜನಗಳ ರಕ್ಷಿಸುತಿರಲು,
ಸತತ ದಾಳಿಯು ವ್ಯರ್ಥವಾಗಲು
ವೈರಿ ಚಿಂತೆಯಲಿ ಬಸವಳಿದ,
ದಾರಿ ಕಾಣದೆ ಮಂಕಾದ
ಕನ್ನಡ ನಾಡಿನ ವೀರರಮಣಿಯ
ಗಂಡುಭೂಮಿಯ ವೀರ ನಾರಿಯ
ಚರಿತೆಯ ನಾನು ಹಾಡುವೆ
ಗೂಢಚಾರರು ಅಲೆದು ಬಂದರು,
ಹೈದರಾಲಿಗೆ ವಿಷಯ ತಂದರು
ಚಿತ್ರದುರ್ಗದ ಕೋಟೆಯಲಿ,
ವಾಯುವ್ಯ ದಿಕ್ಕಿನೆಡೆ ನೋಡು ಎಂದರು
ಕಳ್ಳಗಂಡಿಯ ತೋರಿದರು,
ಲಗ್ಗೆ ಹತ್ತಲು ಹೇಳಿದರು
ಕನ್ನಡ ನಾಡಿನ ವೀರರಮಣಿಯ
ಗಂಡುಭೂಮಿಯ ವೀರ ನಾರಿಯ
ಚರಿತೆಯ ನಾನು ಹಾಡುವೆ
ಕೈಗೆ ಸಿಕ್ಕಿದ ಒನಕೆ ಹಿಡಿದಳು,
ವೀರಗಚ್ಚೆಯ ಹಾಕಿ ನಿಂದಳು
ದುರ್ಗೆಯನ್ನು ಮನದಲ್ಲಿ ನೆನೆದಳು,
ಕಾಳಿಯಂತೆ ಬಲಿಗಾಗಿ ಕಾದಳು
ಯಾರವಳು, ಯಾರವಳು,
ವೀರವನಿತೆ ಆ ಓಬವ್ವ!
ದುರ್ಗವು ಮರೆಯದ ಓಬವ್ವ
ಕನ್ನಡ ನಾಡಿನ ವೀರರಮಣಿಯ
ಗಂಡುಭೂಮಿಯ ವೀರ ನಾರಿಯ
ಚರಿತೆಯ ನಾನು ಹಾಡುವೆ
ತೆವಳುತ ಒಳಗೆ ಬರುತಿರೆ ವೈರಿ,
ಒನಕೆಯ ಬೀಸಿ ಕೊಂದಳು ನಾರಿ
ಸತ್ತವನನ್ನು ಎಳೆದು ಹಾಕುತ,
ಮತ್ತೆ ನಿಂತಳು ಹಲ್ಲು ಮಸೆಯುತ
ವೈರಿ ರುಂಡ ಚಂಡಾಡಿದಳು,
ರಕುತದ ಕೋಡಿ ಹರಿಸಿದಳು.
ಕನ್ನಡ ನಾಡಿನ ವೀರರಮಣಿಯ
ಗಂಡುಭೂಮಿಯ ವೀರ ನಾರಿಯ
ಚರಿತೆಯ ನಾನು ಹಾಡುವೆ
ಸತಿಯ ಹುಡುಕುತ ಕಾವಲಿನವನು,
ಗುಪ್ತದ್ವಾರದ ಬಳಿಗೆ ಬಂದನು
ಮಾತುಹೊರಡದೆ ಬೆಚ್ಚಿನಿಂತನು,
ಹೆಣದ ರಾಶಿಯ ಬಳಿಯೆ ಕಂಡನು
ರಣಚಂಡಿ ಅವತಾರವನು,
ಕೋಟೆ ಸಲಹಿದ ತಾಯಿಯನು.
ರಣಕಹಳೆಯನು ಊದುತಲಿರಲು,
ಸಾಗರದಂತೆ ಸೈನ್ಯ ನುಗ್ಗಲು
ವೈರಿಪಡೆಯು ನಿಶ್ಶೇಷವಾಗಲು,
ಕಾಳಗದಲ್ಲಿ ಜಯವನು ತರಲು,
ಅಮರಳಾದಳು ಓಬವ್ವ,
ಚಿತ್ರದುರ್ಗದ ಓಬವ್ವ

Any other kannada song lyrics that you would like to see here? Just ask for it in the comments section below

ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

Song: Onde ondu Aaseyu (ಒಂದೇ ಒಂದು ಆಸೆಯು), Seetharamu (ಸೀತಾರಾಮು)

Song: Enendu hesaridali(ಏನೆಂದು ಹೆಸರಿಡಲಿ), Movie: Anna bond (ಅಣ್ಣ ಬಾಂಡ್‌)

Song: Ello jinugiruva neeru (ಎಲ್ಲೋ ಜಿನುಗಿರುವ ನೀರು‌), Movie: Just maath maathalli(ಜಸ್ಟ್‌ ಮಾತ್‌ ಮಾತಲ್ಲಿ)

Song: Hesaru poorthi helade, Movie: Paramathma

Song: Maathu muride(ಮಾತು ಮುರಿದೆ‌), Movie: Ganda hendathi (ಗಂಡ-ಹೆಂಡತಿ)

Song: Dehavendare O manuja(ದೇಹವೆಂದರೆ ಓ ಮನುಜ), Movie: Janumada jodi ( ಜನುಮದ ಜೋಡಿ)

Song: Preethi neenillade naanu hegirali (ಪ್ರೀತಿ ನೀನಿಲ್ಲದೆ ನಾನು ಹೇಗಿರಲಿ), Movie: Bhaava baamaida (ಭಾವ ಬಾಮೈದ)

Song: Nodivalandava (ನೋಡಿವಳಂದವ), Movie: The Villain (ದಿ ವಿಲನ್)

Song: Jaaji mallige node (ಜಾಜಿ ಮಲ್ಲಿಗೆ ನೋಡೆ), Movie: Sevanthi sevanthi (ಸೇವಂತಿ ಸೇವಂತಿ)