Song- Shrungarada hongemara(ಶೃಂಗಾರದ ಹೊಂಗೆಮರ), Movie: Panchatantra (ಪಂಚತಂತ್ರ)

ಹಾಡು: ಶೃಂಗಾರದ ಹೊಂಗೆಮರ
ರಚನೆ: ಯೋಗರಾಜ್‌ ಭಟ್‌
ಸಂಗೀತ: ವಿ. ಹರಿಕೃಷ್ಣ
ಗಾಯನ: ವಿಜಯ ಪ್ರಕಾಶ್‌
ಚಲನಚಿತ್ರ: ಪಂಚತಂತ್ರ

ಶೃಂಗಾರದ ಹೊಂಗೆಮರ ಹೂ ಬಿಟ್ಟಿದೆ
ನಾಚಿಕೆ ನಮ್ಮ ಜೊತೆ ಠೂ ಬಿಟ್ಟಿದೆ

ಕಳ್ಳಾಟಕೆ ಮಳ್ಳಮನ ಚೀ ಅಂದಿದೇ
ಚಲ್ಲಾಟಕೆ ಚಲುವು ಹೂಂ ಅಂದಿದೆ

ಇಬ್ಬರ ಕಾಮನೆ ನೂರು
ತುಟಿಗಾಯಕೆ ಕಾರಣ ಯಾರು

ಇದು ಗೊತ್ತಿಲ್ಲದ ರೋಮಾಂಚನ
ಹೋಗಿ ಬಂತು ಪ್ರಾಣ

ಶೃಂಗಾರದ ಹೊಂಗೆಮರ ಹೂ ಬಿಟ್ಟಿದೆ
ನಾಚಿಕೆ ನಮ್ಮ ಜೊತೆ ಠೂ ಬಿಟ್ಟಿದೆ

ಬೆನ್ನಿಗೆ ಬೆರಳು ಸೋಕಿ, ಕಣ್ಣೆರಡು ಕೇಳಿವೆ ಬಾಕಿ
ಇದು ತುಂಟ ಮೌನಾಚರಣೆಯು

ಸ್ಪರ್ಷವು ಕೇಳಲು ಕೊಂಚ, ಉಷ್ಣಾಂಶದ ಬೆಚ್ಚನೆ ಲಂಚ
ಶುರು ಜಂಟಿ ಕಾರ್ಯಾಚರಣೆಯು

ಗೊತ್ತಿದ್ದು ದಾರಿ ತಪ್ಪಿದಾಗ ಬೆವರಿನ ಹನಿಯು
ಹುಚ್ಚೆದ್ದು ಹಾಡು ಹೇಳಬಹುದೆ ಒಳಗಿನ ದನಿಯು

ಇದು ಆವೇಗದ ಆಲಿಂಗನ ಹೋಗಿ ಬಂತು ಪ್ರಾಣ

ಶೃಂಗಾರದ ಹೊಂಗೆಮರ ಹೂ ಬಿಟ್ಟಿದೆ
ನಾಚಿಕೆ ನಮ್ಮ ಜೊತೆ ಠೂ ಬಿಟ್ಟಿದೆ

ನಲ್ಮೆಯಲೆಲ್ಲವೂ ಚಂದ, ಮನ್ಮಥನ ಹಾವಳಿಯಿಂದ
ಬಚಾವಾದರೇನು ಸುಖವಿದೆ

ಬಿಚ್ಚಿದ ಕೂದಲ ಘನತೆ, ಅರೆಮುಚ್ಚಿದ ಕಂಗಳ ಕವಿತೆ
ಪ್ರಣಯಕೊಂದು ಬೇರೆ ಮುಖವಿದೆ

ಕಡುಮೋಹದಲ್ಲಿ ಗಡಿಯ ರೇಖೆಗೆಲ್ಲಿದೆ ಬೆಲೆಯು
ತಿಳಿಗೇಡಿಯಾಗದೇನೆ ಸಿಗದು ತೋಳಿಗೆ ನೆಲೆಯು

ರತಿ ರಂಗೇರಲು ಪ್ರತೀ ಕ್ಷಣ ಹೋಗಿ ಬಂತು ಪ್ರಾಣ

ಶೃಂಗಾರದ ಹೊಂಗೆಮರ ಹೂ ಬಿಟ್ಟಿದೆ
ನಾಚಿಕೆ ನಮ್ಮ ಜೊತೆ ಠೂ ಬಿಟ್ಟಿದೆ

ಕಳ್ಳಾಟಕೆ ಮಳ್ಳಮನ ಚೀ ಅಂದಿದೇ
ಚಲ್ಲಾಟಕೆ ಚಲುವು ಹೂಂ ಅಂದಿದೆ

ಇಬ್ಬರ ಕಾಮನೆ ನೂರು
ತುಟಿಗಾಯಕೆ ಕಾರಣ ಯಾರು

ಇದು ಗೊತ್ತಿಲ್ಲದ ರೋಮಾಂಚನ
ಹೋಗಿ ಬಂತು ಪ್ರಾಣ

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

Song: Onde ondu Aaseyu (ಒಂದೇ ಒಂದು ಆಸೆಯು), Seetharamu (ಸೀತಾರಾಮು)

Song: Maathu muride(ಮಾತು ಮುರಿದೆ‌), Movie: Ganda hendathi (ಗಂಡ-ಹೆಂಡತಿ)

Song: Jaaji mallige node (ಜಾಜಿ ಮಲ್ಲಿಗೆ ನೋಡೆ), Movie: Sevanthi sevanthi (ಸೇವಂತಿ ಸೇವಂತಿ)

Song: Ninninda dooragi iralarenu (ನಿನ್ನಿಂದ ದೂರಾಗಿ ಇರಲಾರೆನು), Movie: Siddartha (ಸಿದ್ದಾರ್ಥ)

Song: Preethi neenillade naanu hegirali (ಪ್ರೀತಿ ನೀನಿಲ್ಲದೆ ನಾನು ಹೇಗಿರಲಿ), Movie: Bhaava baamaida (ಭಾವ ಬಾಮೈದ)

Song: Enendu hesaridali(ಏನೆಂದು ಹೆಸರಿಡಲಿ), Movie: Anna bond (ಅಣ್ಣ ಬಾಂಡ್‌)

Song: Nodivalandava (ನೋಡಿವಳಂದವ), Movie: The Villain (ದಿ ವಿಲನ್)

Song: Ello jinugiruva neeru (ಎಲ್ಲೋ ಜಿನುಗಿರುವ ನೀರು‌), Movie: Just maath maathalli(ಜಸ್ಟ್‌ ಮಾತ್‌ ಮಾತಲ್ಲಿ)

Song: Kangalu vandane helide (ಕಂಗಳು ವಂದನೆ ಹೇಳಿದೆ), Movie: Mugiyada kathe (‌ಮುಗುಯದ ಕಥೆ)