Song: Noorondu nenapu (ನೂರೊಂದು ನೆನಪು), Movie: Bandhana ( ಬಂಧನ)

ಹಾಡು: ನೂರೊಂದು ನೆನಪು
ರಚನೆ: ಆರ್.‌ ಎನ್.‌ ಜಯಗೋಪಾಲ್‌
ಸಂಗೀತ: ಎಂ. ರಂಗರಾವ್‌
ಗಾಯನ: ಎಸ್.‌ ಪಿ. ಬಾಲಸುಬ್ರಮಣ್ಯಂ
ಚಲನಚಿತ್ರ: ಬಂಧನ

ನೂರೊಂದು ನೆನಪು, ಎದೆಯಾಳದಿಂದ
ಹಾಡಾಗಿ ಬಂತು, ಆನಂದದಿಂದ

ನೂರೊಂದು ನೆನಪು, ಎದೆಯಾಳದಿಂದ
ಹಾಡಾಗಿ ಬಂತು, ಆನಂದದಿಂದ{೨}

ಸಿಂಧೂರ ಬಿಂದು, ನಗಲಮ್ಮ ಎಂದೂ
ಎಂದೆಂದು ಇರಲಮ್ಮ ಈ ದಿವ್ಯ ಬಂಧ

ನೂರೊಂದು ನೆನಪು, ಎದೆಯಾಳದಿಂದ
ಹಾಡಾಗಿ ಬಂತು, ಆನಂದದಿಂದ

ಒಲವೆಂಬ ಲತೆಯು, ತಂದಂತ ಹೂವು
ಮುಡಿಯೇರೆ ನಲಿವು, ಮುಡಿಜಾರೆ ನೋವು

ಕೈಗೂಡಿದಾಗ ಕಂಡಂಥ ಕನಸು
ಅದೃಷ್ಟದಾಟ ತಂದಂಥ ಸೊಗಸು 


ಪ್ರೀತಿ ನಗುತಿರಲಿ, ಬಾಳು ಬೆಳಗಿರಲಿ(೨)
ನೀವೆಂದೂ ಇರಬೇಕು ಸಂತೋಷದಿಂದ

ನೂರೊಂದು ನೆನಪು, ಎದೆಯಾಳದಿಂದ
ಹಾಡಾಗಿ ಬಂತು, ಆನಂದದಿಂದ

ತುಟಿಮೇಲೆ ಬಂದಂಥ ಮಾತೊಂದೇ ಒಂದು
ಎದೆಯಲ್ಲಿ ಉಳಿದಿದ್ದು ಮುನ್ನೂರ ಒಂದು

ಮೂರು ಗಂಟಲ್ಲಿ ಈ ಬಾಳ ನಂಟು
ಕೇಳಿ ಪಡೆದಾಗ ಸಂತೋಷ ಉಂಟು

ನಿನ್ನ ಹರುಷದಲಿ, ನನ್ನ ಉಸಿರಿರಲಿ(೨)

ನನ್ನೆಲ್ಲ ಹಾರೈಕೆ ಈ ಹಾಡಿನಿಂದ

ನೂರೊಂದು ನೆನಪು, ಎದೆಯಾಳದಿಂದ
ಹಾಡಾಗಿ ಬಂತು, ಆನಂದದಿಂದ

ಸಿಂಧೂರ ಬಿಂದು, ನಗಲಮ್ಮ ಎಂದೂ
ಎಂದೆಂದು ಇರಲಮ್ಮ ಈ ದಿವ್ಯ ಬಂಧ

ನೂರೊಂದು ನೆನಪು, ಎದೆಯಾಳದಿಂದ
ಹಾಡಾಗಿ ಬಂತು, ಆನಂದದಿಂದ
ಆನಂದದಿಂದ, ಆನಂದದಿಂದ

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

Song: Onde ondu Aaseyu (ಒಂದೇ ಒಂದು ಆಸೆಯು), Seetharamu (ಸೀತಾರಾಮು)

Song: Maathu muride(ಮಾತು ಮುರಿದೆ‌), Movie: Ganda hendathi (ಗಂಡ-ಹೆಂಡತಿ)

Song: Jaaji mallige node (ಜಾಜಿ ಮಲ್ಲಿಗೆ ನೋಡೆ), Movie: Sevanthi sevanthi (ಸೇವಂತಿ ಸೇವಂತಿ)

Song: Ninninda dooragi iralarenu (ನಿನ್ನಿಂದ ದೂರಾಗಿ ಇರಲಾರೆನು), Movie: Siddartha (ಸಿದ್ದಾರ್ಥ)

Song: Preethi neenillade naanu hegirali (ಪ್ರೀತಿ ನೀನಿಲ್ಲದೆ ನಾನು ಹೇಗಿರಲಿ), Movie: Bhaava baamaida (ಭಾವ ಬಾಮೈದ)

Song: Enendu hesaridali(ಏನೆಂದು ಹೆಸರಿಡಲಿ), Movie: Anna bond (ಅಣ್ಣ ಬಾಂಡ್‌)

Song: Nodivalandava (ನೋಡಿವಳಂದವ), Movie: The Villain (ದಿ ವಿಲನ್)

Song: Ello jinugiruva neeru (ಎಲ್ಲೋ ಜಿನುಗಿರುವ ನೀರು‌), Movie: Just maath maathalli(ಜಸ್ಟ್‌ ಮಾತ್‌ ಮಾತಲ್ಲಿ)

Song: Kangalu vandane helide (ಕಂಗಳು ವಂದನೆ ಹೇಳಿದೆ), Movie: Mugiyada kathe (‌ಮುಗುಯದ ಕಥೆ)